Horoscope 2 April: ದಿನಭವಿಷ್ಯ; ಈ ರಾಶಿಯವರು ಇಂದು ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ, ಎಚ್ಚರ..

| Updated By: Rakesh Nayak Manchi

Updated on: Apr 02, 2024 | 12:00 AM

Rashi Bhavishya: 2024 ಏಪ್ರಿಲ್​​ 02 ಮಂಗಳವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 2 April: ದಿನಭವಿಷ್ಯ; ಈ ರಾಶಿಯವರು ಇಂದು ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ, ಎಚ್ಚರ..
ರಾಶಿಭವಿಷ್ಯ
Image Credit source: freepik
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಪರಿಘ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:32 ರಿಂದ 11:04ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:36 ರಿಂದ 02:08ರ ವರೆಗೆ.

ಮೇಷ ರಾಶಿ: ನಿಮ್ಮನ್ನು ನೀವು ಬದಲಿಸಿಕೊಂಡವರಂತೆ ವರ್ತಿಸುವಿರಿ. ಆಕಸ್ಮಿಕವಾಗಿ ಬರಬೇಕಾದ ಹಣವು ನಿಮ್ಮ ಕೈಸೇರುವುದು. ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ ಕೆಲಸ ಮಾಡುವಾಗ ಸರಿಯಾದ ಕಾಗದದ ಕೆಲಸವನ್ನು ಮಾಡಿ. ದಾಂಪತ್ಯದಲ್ಲಿ ಬರುವ ಭಿನ್ನಾಭಿಪ್ರಾಯವು ಮಕ್ಕಳ ಮೇಲೆ‌ ಪರಿಣಾಮ ಬೀರಬಹುದು. ಕುಟುಂಬದ ಆಪ್ತರ ಆರೋಗ್ಯದ ಬಗ್ಗೆ ಕಾಳಜಿ ಇರುವುದು. ಇಂದು ವ್ಯಾಪಾರಿಗಳಿಗೆ ಒತ್ತಡ ಉಂಟಾಗಬಹುದು. ವ್ಯವಹಾರದಲ್ಲಿ ಸಹನೆಯಿಂದ ವರ್ತಿಸಿ ಲಾಭ ಮಾಡಿಕೊಳ್ಳುವಿರಿ. ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಅಳತೆ ಮೀರಿ ವರ್ತಿಸುವುದು ಬೇಡ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ.

ವೃಷಭ ರಾಶಿ: ನಿಮ್ಮ ಸ್ಥಾನ ಮಾನದ ಬಗ್ಗೆ ಆತಂಕವಿರುವುದು. ಸಮಾಜದಿಂದ ಗೌರವ ಬರಲಿ ಎಂಬ ಆಸೆ ಇರುವುದು. ಇಂದು ವ್ಯಾಪಾರವು ಗಳಿಕೆಯ ಕಡೆ ಮುಖ ಮಾಡಬಹುದು. ಇಂದು ನೀವು ಮತ್ತು ನಿಮ್ಮ ಸಂಗಾತಿಯು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ಕುಟುಂಬದಲ್ಲಿ ದೀರ್ಘಕಾಲದವರೆಗೆ ಯಾವುದೇ ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದರೆ, ಇಂದು ಅದು ಕೊನೆಗೊಳ್ಳಬಹುದು. ಮಕ್ಕಳಿಗೆ ಬೇಕಾದುದನ್ನು ಕೊಡಿಸಿ ಸಂತೋಷ ಲಪಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಪಕ್ವತೆಯು ಕಾಣುತ್ತದೆ. ಶತ್ರುಗಳಿಂದ ಉದ್ಯಮಕ್ಕೆ ತೊಂದರೆ ಆಗಬಹುದು. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ನೂತನ ಗೃಹನಿರ್ಮಾಣಕ್ಕೆ ಸಂಗಾತಿಗೆ ಒತ್ತಡವನ್ನು ತರುವಿರಿ.

ಮಿಥುನ ರಾಶಿ: ಇಂದು ನೀವು ಸ್ವಂತ ವಾಹನದಲ್ಲಿ ಓಡಾಟ ಮಾಡುವುದು ಬೇಡ. ಮಕ್ಕಳು ಓದುವುದರಿಂದ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುತ್ತದೆ. ಇನ್ನೊಬ್ಬರನ್ನು ಕಂಡು ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಯಾರಾದರೂ ಬಂಧುಗಳಲ್ಲಿ ಸಾಲವನ್ನು ಕೇಳುವ ಮನಸ್ಸಾಗುವುದು. ನಿಮ್ಮ ಬೆಲೆಬಾಳುವ ವಸ್ತುಗಳನ್ನು ಸಹ ಚೆನ್ನಾಗಿ ನೋಡಿಕೊಳ್ಳಿ. ಆರ್ಥಿಕತೆಯ ಬಗ್ಗೆ ಕೆಲಸ ಮಾಡುವವರಿಗೆ ಇದು ಬಿಡುವಿಲ್ಲದ ದಿನವಾಗಬಹುದು. ಕೆಲಸದ ನಿಮಿತ್ತ ನೀವು ಇಂದು ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಪ್ರಗತಿಗೆ ಅವಶ್ಯಕವಾದ ಮಾರ್ಗಗಳನ್ನು ತೆರೆಯಬಹುದು. ನೀವು ಉತ್ತಮ ವ್ಯವಹಾರದಿಂದ ಯಶಸ್ವಿಯಾಗುತ್ತೀರಿ. ಕಾಲಹರಣಕ್ಕಾಗಿ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಸಮಯೋಚಿತ ಸ್ಪಂದ‌ನೆಯಿಂದ ಗೌರವ ಸಿಗುವುದು. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು.

ಕರ್ಕ ರಾಶಿ: ಇಂದು ನಿಮ್ಮ ಅಭಿರುಚಿಯ ವ್ಯಕ್ತಿಗಳು ಸಿಗಬಹುದು. ಆಧ್ಯಾತ್ಮಿಕಕ್ಕೆ ಹೆಚ್ಚು ಸಮಯವನ್ನು ಕೊಡಲಾಗದು. ಆಧಾರವನ್ನು ಇಟ್ಟುಕೊಳ್ಳದೇ ಆರೋಪ ಮಾಡುವುದು ಸರಿಯಾಗದು. ನಿಮ್ಮ ಮನಸ್ಸಿನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಏನಾದರೂ ಗೊಂದಲವಿರಬಹುದು. ಯಾವುದೋ ಅವಘಡದ ಸೂಚನೆಯಿಂದ ನೀವು ಹೆದರುವಿರಿ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡೀತು. ನಿಮ್ಮ ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ, ನಿಮ್ಮ ಸಂಗಾತಿಯ ನಿಮ್ಮ ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ಕಛೇರಿ ಹಾಗೂ ಕುಟುಂಬದ ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು. ಒಂದೇ ತಕ್ಕಡಿಯಲ್ಲಿ ಎಲ್ಲರನ್ನೂ ತೂಗಲಾಗದು.

ಸಿಂಹ ರಾಶಿ: ಇಂದು ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರಾಬಲ್ಯವನ್ನು ಉಳಿಸಿಕೊಂಡಿದ್ದು ತೋರುವುದು. ನಿಮ್ಮ ಗುರಿಯನ್ನು ಬದಲಿಸಲು ಪ್ರಯತ್ನಿಸಬಹುದು. ಇಂದು ವ್ಯಾಪಾರ ಚಟುವಟಿಕೆಗಳಲ್ಲಿ ಕಠಿಣ ಪರಿಶ್ರಮದ ಅವಶ್ಯಕತೆ ಇರುತ್ತದೆ. ಅನೇಕ ಸಮಸ್ಯೆಗಳು ಏಕಕಾಲದಲ್ಲಿ ಉದ್ಭವಿಸಿ, ದಿಗ್ಭ್ರಾಂತರಾಗಬಹುದು. ಇಂದು ಆರೋಗ್ಯ ವಿಷಯಗಳಲ್ಲಿ ಅಪಾಯಗಳು ಮತ್ತು ಅಜಾಗರೂಕತೆಯಿಂದ ದೂರವಿರಬೇಕು. ವ್ಯವಹಾರದಲ್ಲಿ ನೀವು ಸ್ಪರ್ಧಿಗಳ ಬಗ್ಗೆ ತಿಳಿಯಿರಿ. ಹಣಕಾಸಿನ ವಿಷಯಗಳಲ್ಲಿ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ಬಹಳ ದಿನಗಳಿಂದ ಇದ್ದ ಅನಾಥ ಭಯವನ್ನು ನೀವು ದೂರಮಾಡಿಕೊಳ್ಳುವಿರಿ.

ಕನ್ಯಾ ರಾಶಿ: ನಿಮ್ಮ ಆತ್ಮಸಾಕ್ಷಿಯನ್ನು ಮೀರಿ ಯಾವ ಕಾರ್ಯವನ್ನು ಮಾಡಲು ಹೆದರುವಿರಿ. ನಿಮ್ಮ ಅಜಾಗರೂಕತೆಯಿಂದ ನಿಕಟ ಸಂಬಂಧಿಯ ಜೊತೆ ಬಂಧವು ಕೆಡುವುದು. ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವ ವರ್ತಿಸುವುದು ಅಗತ್ಯ. ಹಿರಿಯರ ಬಗ್ಗೆ ಗೌರವ ಕಡಿಮೆಯಾಗುವುದು. ಇಂದು ನಿಮ್ಮ ಪ್ರಭಾವವು ಹೆಚ್ಚಾಗಿರುವುದು ಎಂದುಕೊಂಡಿದ್ದರೆ ಅದು ಸುಳ್ಳಾಗಬಹುದು. ನಿಮಗೆ ಬಂಧುಗಳ ಬೆಂಬಲವು ಯೋಜಿತ ಕಾರ್ಯಕ್ಕೆ ಸಿಗಲಿದೆ. ನಿಮ್ಮ ಇಂದಿನ ಗಳಿಕೆಯಿಂದ ಸಂತೋಷವಾಗುತ್ತದೆ. ನೀವು ತಾಳ್ಮೆಯಿಂದಿರಿ ಮತ್ತು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ನೌಕರರ ವಿಚಾರಕ್ಕೆ ಬೇಸರವಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ.

ತುಲಾ ರಾಶಿ: ನಿಮ್ಮ ಸ್ಥಿರಾಸ್ತಿಯ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಬಹುದು. ಇರುವುದನ್ನು ಬಿಟ್ಟು ಇರುವೆ ಬಿಟ್ಟಕೊಂಡಂತೆ ಎನಿಸಬಹುದು. ಯಾವುದರ ಬಗ್ಗೆ ಟೀಕೆ ಮಾಡುವಾಗ ಎಚ್ಚರಿಕೆ ಇರಲಿ. ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಯೋಜನೆಗಳನ್ನು ಬಹಿರಂಗಪಡಿಸಿ ಹಾಳುಮಾಡಿಕೊಳ್ಳುವುದು ಬೇಡ. ವ್ಯಾಪಾರ ಕ್ಷೇತ್ರದಲ್ಲಿ ತ್ವರಿತ ಚಟುವಟಿಕೆಗಳು ಇರುವುದು. ನಿಮ್ಮ ಕ್ರಿಯಾಶೀಲತೆಯಿಂದ ಪ್ರಶಂಸೆಯು ಸಿಗಲಿದೆ. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚು ಚಿಂತೆ ಮಾಡಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕೆಲವು ಯೋಜನೆಗಳನ್ನು ಸಹ ಮಾಡಬಹುದು. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ.

ವೃಶ್ಚಿಕ ರಾಶಿ: ನಿಮಗೆ ಇಷ್ಟವಾಗದ ಸಂಗತಿಗಳಿದ್ದರೆ ಅದರ ಬಗ್ಗೆ ಯೋಚನೆ ಬೇಡ. ಮನೆಯ ಬದಲಾವಣೆಯು ನಿಮಗೆ ಬೇಸರ ತಂದೀತು. ದೈವಾನುಕೂಲಕ್ಕೆ ಕಾಯುವುದು ಬೇಡ. ನಿಮ್ಮ ಕಾರ್ಯವನ್ನು ಆರಂಭಿಸಿ. ನಿಕಟ ಸಂಬಂಧಿಗಳ ಜೊತೆ ಆಸ್ತಿಯ ಕಲಹವಾಗಬಹುದು. ಇಂದು ನೀವು ವ್ಯವಹಾರದಲ್ಲಿ ನಿರತರಾಗಿ, ಬೇಕಾದ ಸಂಪತ್ತನ್ನು ಪಡೆಯಿರಿ. ದೇಹಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು ನಿಮಗೆ ಸರಿಹೊಂದುವುದು. ಇಂದು ನೀವು ದಿನದ ಕೊನೆಯಲ್ಲಿ ಸುವಾರ್ತೆಯನ್ನು ನಿರೀಕ್ಷಿಸಬಹುದು. ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗಬಹುದು. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ.‌ ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ.

ಧನು ರಾಶಿ: ನಿಮಗೆ ಇಂದು ಕೆಲವು ಪ್ರಮುಖ ವ್ಯಕ್ತಿಗಳ ಜೊತೆ ಸಂವಹನ ಮಾಡುವ ಅವಕಾಶಗಳು ಸಿಗುವುದು. ನಿಮ್ಮ ಗೌರವವನ್ನು ಮಾತಿನಿಂದ ಪಡೆದುಕೊಳ್ಳುವಿರಿ. ಪ್ರಮುಖ ಕೆಲಸ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮತ್ತೆ ಮತ್ತೆ ಚಿಂತಿಸಿ. ನಿಮ್ಮ ಸಣ್ಣ ತಪ್ಪು ಕೂಡ ವ್ಯವಸ್ಥೆಗೆ ತೊಂದರೆ ಉಂಟುಮಾಡಬಹುದು. ವ್ಯವಹಾರದಲ್ಲಿ ನೀವು ಮಾಡಿದ ನೀತಿಗಳನ್ನು ಸಾಧ್ಯವಾದಷ್ಟು ಬೇಗ ಬದಲಾಯಿಸಿ. ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ತಂತ್ರಜ್ಞಾನದ ಬಗ್ಗೆ ಮಾಹಿತಿ ಕಡಿಮೆ‌ ಇರುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಗುಣಮುಖವಾಗುವ ಆರೋಗ್ಯದಿಂದ ಸಮಾಧಾನ‌ ಸಿಗಲಿದೆ.

ಮಕರ ರಾಶಿ: ನೀವು ಇಂದು ಭಿನ್ನವಾಗಿಯೂ ಸುಂದರವಾಗಿಯೂ ಕಾಣಿಸಿಕೊಳ್ಳುವಿರಿ.  ಯಾರದೋ ಕಾರಣಕ್ಕೆ ನಿಮ್ಮಲ್ಲಿ ಉತ್ಸಾಹ ಬರುವುದು. ನಿಮ್ಮ ಭಾವನಾತ್ಮಕತೆ ಮತ್ತು ಉದಾರತೆಯ ಲಾಭವನ್ನು ಪಡೆದುಕೊಳ್ಳುವರು. ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುವುದು ಅನಿವಾರ್ಯವಾಗಬಹುದು. ದಾಂಪತ್ಯದಲ್ಲಿ ಸೌಹಾರ್ದ ಮಾತುಕತೆಗಳು ಇರುವುದು. ನಿಮ್ಮ ಪ್ರಭಾವವೂ ಇಂದು ಇತರರ ಮೇಲೆ ಹೆಚ್ಚಾಗಿರಲಿದೆ. ಕುಟುಂಬದಲ್ಲಿಯೂ ನೀವು ಗೌರವವನ್ನು ಪಡೆಯುವಿರಿ. ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಯಸಿದರೆ ಸಾಮಾಜಿಕ ಸಂಸ್ಥೆಗೆ ಸೇರಬಹುದು. ಭೂಮಿಯ ಮೇಲೆ ಹೂಡಿಕೆ‌ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ.

ಕುಂಭ ರಾಶಿ: ಇಂದು ನೀವು ರಾಜಕೀಯದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ತೋರಿಸುವಿರಿ. ಕೆಲವು ಉತ್ತಮ ಅವಕಾಶಗಳನ್ನು ಬಿಟ್ಟಕೊಳ್ಳುವುದು ಬೇಡ. ಪರಿಚಿತರಿಂದ ಪಡೆದ ಹಣವನ್ನು ಅವರಿಗೆ ಮರಳಿ ನೀಡುವಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ನಾನಾ ಕಾರ್ಯಗಳಿಂದ ಒತ್ತಡವಿದ್ದು ಇದರಿಂದ ಉದ್ವಿಗ್ನತೆ ಇರುತ್ತದೆ. ನೀವು ವಿರುದ್ಧ ಲಿಂಗಿಗಳ ಬೆಂಬಲವನ್ನು ಪಡೆಯುತ್ತೀರಿ. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಇನ್ನೊಬ್ಬರ ಮೇಲೆ ನಿಮಗರ ಪಶ್ಚಾತ್ತಾಪ‌ಭಾವ ಬರುವುದು. ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ. ಕೆಲವು ವಿಚಾರಕ್ಕೆ ತೀರ್ಮಾನವನ್ನು ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಬಲವಾದ ನೋವನ್ನು ಪಡೆಯಬೇಕಾದೀತು.

ಮೀನ ರಾಶಿ: ಇಂದು ನಿಮಲ್ಲಿ ಸಕಾರಾತ್ಮಕ ಮನೋಭಾವವು ಇರುವುದು. ನಿಮಗಾಗಿ‌ ಸಿಕ್ಕ ಅಲ್ಪ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಿರಿ. ಬಂಧುಗಳ ಜೊತೆ ಸಂಬಂಧವು ಚೆನ್ನಾಗಿರುವುದು. ಸಹೋದರರಿಂದ ಸಹಾಯ ಪಡೆಯುವಿರಿ. ಮಕ್ಕಳು ನಿಮ್ಮ ವಿರುದ್ಧ ದಿಕ್ಕಿನ ಕಡೆ ಇರುವರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ