Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 2ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 2ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 2ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಬೇಗ ಹಾಗೂ ಸಿಕ್ಕಾಪಟ್ಟೆ ಹಣ ಮಾಡಿಬಿಡಬೇಕು ಎಂದು ನಿಮ್ಮಲ್ಲಿ ಕೆಲವರಿಗೆ ಅನಿಸುವುದಕ್ಕೆ ಶುರುವಾಗುತ್ತದೆ. ಇನ್ನು ನಿಮಗೆ ರೂಢಿ ಇದೆಯೋ ಅಥವಾ ಇದುವರೆಗೂ ಆ ರೀತಿ ಮಾಡಿದ್ದೀರೋ ಇಲ್ಲವೋ ಈ ದಿನವಂತೂ ಜೂಜು, ಪಂಥ ಇಂಥದ್ದನ್ನು ಕಟ್ಟಿ ಹಣ ಕಳೆದುಕೊಳ್ಳಲಿದ್ದೀರಿ. ನೀವು ಒಂದು ವೇಳೆ ಸ್ವಂತ ಹಣ ಇಲ್ಲ ಎಂದು ಅಲವತ್ತುಕೊಂಡರೂ ಸಾಲ ಕೊಟ್ಟಾದರೂ ನಿಮ್ಮಿಂದ ಜೂಜಾಡಿಸಲಿದ್ದಾರೆ ಎಚ್ಚರ. ವಾಹನವನ್ನು ಪಾರ್ಕಿಂಗ್ ಮಾಡುವಾಗ ಮೈತುಂಬ ಕಣ್ಣಾಗಿರಲಿ. ನೀವು ದಂಡ ಕಟ್ಟಬೇಕಾದ ಸನ್ನಿವೇಶ ಎದುರಾಗಲಿದೆ. ಹೊಸದಾಗಿ ಮನೆ ಕಟ್ಟುತ್ತಿರುವವರಿಗೆ ಬ್ಯಾಂಕಿನಿಂದ ಬರಬೇಕಾದ ಹಣದಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗಬಹುದು. ಆ ಕಾರಣದಿಂದ ಕಾನೂನನ್ನು ಮೀರಿ ಅದನ್ನು ಅಲಾಟ್ ಮಾಡಿಸಿಕೊಳ್ಳಲು ಹೋಗಬೇಡಿ. ನೀವು ಯಾರಿಂದಾದರೂ ಕೊಟೇಶನ್ ಪಡೆದುಕೊಳ್ಳಬೇಕು ಎಂದಾದರೂ ಸರಿ, ಬಾಯಿ ಮಾತಿನಲ್ಲಿ ಬೇಡ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ತಂದೆಯು ನೀಡಿದಂಥ ಸಲಹೆ ಅಥವಾ ಎಚ್ಚರಿಕೆಯ ಮಾತುಗಳಿಂದ ನೀವು ಕೆಲವು ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಇನ್ನು ನಿಮಗೆ ಏನಾದರೂ ಹಣಕಾಸಿನ ವಿಚಾರದಲ್ಲಿ ಖರ್ಚು ಕೈ ಮೀರಿ ಹೋಗುತ್ತಿದೆ ಎಂದೇನಾದರೂ ಆತಂಕ ಇದ್ದಲ್ಲಿ ಅದು ಈ ದಿನ ನಿವಾರಣೆಯಾಗಲಿದೆ. ಒಂದು ನೀವು ಯಾವಾಗಲೋ ಸಾಲ ಎಂದು ಕೊಟ್ಟಿದ್ದನ್ನು ಸಾಲ ಪಡೆದವರು ಹಿಂತಿರುಗಿಸುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಹೂಡಿಕೆ ಮಾಡಿ ಅದು ನಷ್ಟದಲ್ಲಿದೆ ಎಂಬ ಕಾರಣಕ್ಕೆ ಬಹುತೇಕ ಮರೆತೇ ಹೋಗಿದ್ದಂತಹ ಇನ್ವೆಸ್ಟ್ ಮೆಂಟ್ ಒಂದು ನೀವು ಅಂದುಕೊಂಡಂತೆ ಅಸಲಿಗಾದರೂ ಅಥವಾ ಅಸಲಿಗೆ ಸ್ವಲ್ಪ ಕಡಿಮೆಯಾದರೂ ಮೊತ್ತ ಸಿಗುವ ಸಾಧ್ಯತೆಗಳಿವೆ. ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಯಾರೂ ನಿರೀಕ್ಷಿಸದ ರೀತಿ ವರ್ತಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಬಹಳ ಸಮಯದಿಂದ ಗುರಿ ಎಂದು ಹಾಕಿಕೊಂಡಿದ್ದ ವಿಚಾರ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬರಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಅವರು ನಿಮ್ಮ ಬಗ್ಗೆ ಹಾಗೆ ಹೇಳಿದರಂತೆ, ಇನ್ನೊಬ್ಬರು ಹೀಗೆ ಹೇಳಿದರಂತೆ ಎಂದು ಕೆಲವರು ನಿಮ್ಮ ಬಳಿಯೇ ಬಂದು ಹೇಳಲಿದ್ದಾರೆ. ಆದರೆ ನಿಮಗೆ ಗೊತ್ತಿರಬೇಕಾದ್ದು ಏನೆಂದರೆ, ನಕ್ಕು ಸುಮ್ಮನಾಗುವಂತಹ ಗಾಸಿಪ್ ಗಳು ನಿಮ್ಮ ಬಗ್ಗೆ ಹರಿದಾಡುತ್ತಿದ್ದಲ್ಲಿ ಈ ದಿನ ಸುಮ್ಮನಿರುವುದು ಒಳ್ಳೆಯದು. ಅದಕ್ಕೆ ನೀವು ಪ್ರತಿಕ್ರಿಯಿಸಲು ಹೋದರೆ ವರ್ಚಸ್ಸಿಗೆ ಪೆಟ್ಟು ಬೀಳುವಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಯಾರದೋ ಒತ್ತಡಕ್ಕೆ ಮಣಿದು, ನಿಮಗೆ ಬೇಡದ ಕೆಲವು ವಸ್ತುಗಳನ್ನು ಖರೀದಿ ಮಾಡಿ, ಸಾಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನೀವು ಏನನ್ನೇ ಖರೀದಿ ಮಾಡುವ ಮೊದಲಿಗೆ ಕುಟುಂಬಸ್ಥರ ಜೊತೆಗೆ ಅಥವಾ ಸಂಗಾತಿಯ ಜೊತೆಗೆ ಮಾತನಾಡಿ, ಆ ನಂತರ ನಿರ್ಧಾರವನ್ನು ಮಾಡಿದರೆ ಒಳ್ಳೆಯದು. ನಿಮಗೆ ಏನಾದರೂ ವೇಗವಾಗಿ ವಾಹನವನ್ನು ಓಡಿಸುವಂತಹ ರೂಢಿ ಇದ್ದಲ್ಲಿ ಈ ದಿನ ಸಣ್ಣ ಪುಟ್ಟದಾದರೂ ಅಪಘಾತ, ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಜಾಗ್ರತೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಹೊಸ ಸ್ಥಳಗಳಿಗೆ ತೆರಳಬೇಕಾಗಬಹುದು. ಅದು ಕೂಡ ಕೆಲಸ ಅಥವಾ ವೃತ್ತಿ ಸಲುವಾಗಿಯೇ ಹೋಗಬೇಕಾಗುತ್ತದೆ. ಅಂದ ಹಾಗೆ ನಿಮಗೆ ಯಾವ ಕೆಲಸದಲ್ಲಿ ಪರಿಣತಿ ಇದೆಯೋ ಅದಕ್ಕೆ ತುಂಬಾ ಬೇಡಿಕೆ ಹೆಚ್ಚಾಗಲಿದೆ. ಹೊಸದಾಗಿ ಯಾರಾದರೂ ದೊಡ್ಡಮಟ್ಟದ ಆರ್ಡರ್ ಅಥವಾ ಕಾಂಟ್ರಾಕ್ಟ್ ತೆಗೆದುಕೊಂಡು ಬಂದರೆ ತಕ್ಷಣಕ್ಕೆ ಒಪ್ಪಿಕೊಳ್ಳಲು ಹೋಗಬೇಡಿ. ಸ್ವಲ್ಪ ಸಮಯ ತೆಗೆದುಕೊಂಡು ಆ ನಂತರ ನಾಲ್ಕು ಜನರನ್ನು ವಿಚಾರಿಸಿ ಆಮೇಲೆ ಒಪ್ಪಿಕೊಳ್ಳುವುದು ನಿಮಗೆ ಲಾಭಕರ. ಯಾರಾದರೂ ಈ ದಿನ ನಿಮ್ಮನ್ನು ವಿಪರೀತ ಹೊಗಳುತ್ತಿದ್ದಾರೆ ಎಂದ ಕ್ಷಣ ನೀವು ಪಿಗ್ಗಿ ಬಿಡಬೇಡಿ, ಏಕೆಂದರೆ ನಿಮ್ಮಿಂದ ಆಗಬೇಕಾದ ದೊಡ್ಡ ಮೊತ್ತದ ಕೆಲಸವನ್ನು ತುಂಬಾ ಕಡಿಮೆ ಮೊತ್ತಕ್ಕೆ ಮಾಡಿಸಿಕೊಳ್ಳಬಹುದು ಜಾಗ್ರತೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ಎಲೆಕ್ಟ್ರಿಕಲ್ ವಾಹನವನ್ನು ಖರೀದಿಸುವ ಅಥವಾ ಬುಕ್ ಮಾಡುವ ಯೋಗ ಇದೆ. ಒಟ್ಟಿನಲ್ಲಿ ಹಲವು ಶುಭ ಬೆಳವಣಿಗೆಗಳನ್ನು ಈ ದಿನ ಕಾಣಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನೀವು ಯಾರ ಜತೆಗೆ ಮಾತನಾಡುತ್ತಿದ್ದೀರಿ, ಅವರ ಮನಸ್ಥಿತಿ, ಆಲೋಚನೆ ಹೇಗಿದೆ ಅನ್ನೋದನ್ನು ಸರಿಯಾಗಿ ಅಂದಾಜು ಮಾಡಿ, ಆ ನಂತರ ಪದಬಳಕೆ ಹೇಗಿರಬೇಕು ಎಂಬುದನ್ನು ತೀರ್ಮಾನ ಕೈಗೊಳ್ಳಿ. ನಿಮಗೆ ಗೊತ್ತಿರಬೇಕಾದ್ದು ಏನೆಂದರೆ, ನಾನು ಮಾಡಿದ್ಧು ಅನ್ನೋದಕ್ಕೂ ನಾನೇ ಮಾಡಿದ್ದು ಎನ್ನುವುದಕ್ಕೂ ಬಹಳ ವ್ಯತ್ಯಾಸ ಇದೆ. ಈ ವ್ಯತ್ಯಾಸವನ್ನು ತಿಳಿದುಕೊಂಡು ಮಾತನಾಡುವುದು ಬಹಳ ಮುಖ್ಯವಾಗುತ್ತದೆ. ಈ ದಿನ ನಿಮ್ಮನ್ನು ಉದ್ಯೋಗ ಸ್ಥಳದಲ್ಲಿ ಅಹಂಕಾರಿ ಎಂದು ಅಂದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆ ಕಾರಣದಿಂದ ನಿಮ್ಮ ಮೇಲಧಿಕಾರಿಗಳು ಅಥವಾ ನೀವು ಯಾರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿರಲ್ಲ, ಅಂಥವರಿಗೆ ಬರೀ ಫೋನ್ ಮೂಲಕ ಮಾತನಾಡುವ ಬದಲು ಇಮೇಲ್ ಕಳಿಸುವುದು ಒಳ್ಳೆಯದು. ಈ ದಿನ ಯಾವುದೇ ಮುಖ್ಯ ಕೆಲಸಗಳಿಗೆ ಮನೆಯಿಂದ ಹೊರಡುವ ಮೊದಲಿಗೆ ಭೂವರಾಹ ಸ್ವಾಮಿ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮಗೆ ಆತ್ಮವಿಶ್ವಾಸ ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನೀವೇನಾದರೂ ನಾನಾಯಿತು ನನ್ನ ಪಾಡಾಯಿತು ಎಂದು ಈ ದಿನ ಇದ್ದರೂ ಹಲವು ಅವಕಾಶಗಳು ನಿಮಗೆ ತೆರೆದುಕೊಳ್ಳಲಿವೆ. ಈ ಹಿಂದೆ ನೀವು ಯಾವಾಗಲೋ ಕೆಲಸ ಮಾಡಿಕೊಟ್ಟು, ಸ್ವತಃ ನೀವೇ ಮರೆತು ಹೋದರೂ ನಿಮ್ಮ ಕೆಲಸವನ್ನು ಮೆಚ್ಚಿಕೊಂಡು ಈಗ ಆರ್ಡರ್ ನೀಡಬಹುದು. ಹಣಕಾಸಿನ ವಿಚಾರವನ್ನು ಮುಂಚಿತವಾಗಿಯೇ ಮಾತನಾಡಿಕೊಳ್ಳುವುದು ಮರೆಯಬೇಡಿ. ಇನ್ನು ವ್ಯವಹಾರ, ಉದ್ಯಮದಲ್ಲಿ ಇರುವಂತಹವರು ವ್ಯಾಪಾರ ವಿಸ್ತರಣೆಗಾಗಿ ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡಲಿದ್ದೀರಿ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಭವಿಷ್ಯದಲ್ಲಿ ಅತ್ಯುತ್ತಮ ಅವಕಾಶಗಳು ದೊರೆಯಲಿವೆ ಎಂಬ ಸುಳಿವು ಸಿಗಲಿದೆ. ಸೋದರ ಸಂಬಂಧಿಗಳು ನಿಮಗೆ ಸಲಹೆ ಏನಾದರೂ ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮಾನಸಿಕವಾಗಿ ಗಟ್ಟಿಯಾಗಿ ಇರುವುದು ನಿಮಗೆ ಈ ದಿನ ಸವಾಲಾಗಿ ಪರಿಣಮಿಸಲಿದೆ. ಏಕೆಂದರೆ ಹಳೆ ಪ್ರೇಮ ವಿಚಾರಗಳು ನಿಮ್ಮನ್ನು ವಿಪರೀತ ಕಾಡಲಿವೆ. ನಿಮಗೆ ಫೋನ್ ಮಾಡಿ ಬೆದರಿಕೆ ಹಾಕುವ ಸಾಧ್ಯತೆಗಳು ಸಹ ಇವೆ. ಇಂಥ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದು ನಿಮ್ಮ ಕೈಯಲ್ಲಿ ಇದೆ. ಸಣ್ಣ-ಪುಟ್ಟ ಸುಳ್ಳುಗಳು ಎಂದು ಸಹ ಹೇಳುವುದಕ್ಕೆ ಹೋಗಬೇಡಿ. ಯಾರಿಗೂ ಅತಿಯಾದ ಸಲುಗೆ ಕೊಡುವುದಕ್ಕೆ ಹೋಗಬೇಡಿ. ಹಳೆ ನೆನಪುಗಳನ್ನು ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಸಿಕ್ಕಿ ಹಾಕಿಕೊಳ್ಳಬೇಡಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಒಂದು ವೇಳೆ ಇದ್ದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆಗಳಿವೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಸಂಗಾತಿ ಜೊತೆಗೆ ಇದೇ ವಿಚಾರವಾಗಿ ಮನಸ್ತಾಪ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಯಾವುದೇ ಮುಖ್ಯ ವಿಚಾರದ ಮೇಲೆ ಮನೆಯಿಂದ ಹೊರಡುವ ಮೊದಲು ಒಮ್ಮೆ ಮನಸ್ಸಿನಲ್ಲಿ ಈಶ್ವರನನ್ನು ಸ್ಮರಿಸಿಕೊಳ್ಳಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ನಿರ್ವಹಣಾ ಕೌಶಲ ತುಂಬ ಚೆನ್ನಾಗಿ ಇರಲಿದೆ. ಅದೇ ಕಾರಣಕ್ಕೆ ಈ ದಿನ ನೀವು ಪಟ್ಟು ಹಿಡಿದು ಕೆಲಸಗಳನ್ನು ಮಾಡಿಸಲಿದ್ದೀರಿ. ಅದು ಯಾವುದೇ ಕಾರ್ಯ ಇರಬಹುದು ಅಥವಾ ಸರ್ಕಾರಕ್ಕೆ ಸಂಬಂಧಪಟ್ಟಂತಹ ವಿಚಾರಗಳಿರಬಹುದು, ನೀವು ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ, ಗಡುವಿನ ತನಕ ಕಾಯುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರಿಗೆ ಮಕ್ಕಳ ಶಿಕ್ಷಣದ ವಿಚಾರಕ್ಕೆ ಸ್ವಲ್ಪಮಟ್ಟಿಗೆ ಆತಂಕಕ್ಕೆ ಕಾರಣ ಆಗಬಹುದು. ಈಗ ಹೋಗುತ್ತಿರುವ ಶಿಕ್ಷಣ ಸಂಸ್ಥೆಯಿಂದ ಬದಲಾವಣೆ ಮಾಡುವುದಕ್ಕೆ ತುಂಬಾ ಗಟ್ಟಿಯಾಗಿ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದನ್ನು ಹೊರತುಪಡಿಸಿದರೆ ಯಾರು ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಅಂತಹವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಮನೆಯಿಂದ ಹೊರಡುವ ಮೊದಲಿಗೆ ಮನಸ್ಸಿನಲ್ಲಿ ದಕ್ಷಿಣಾ ಮೂರ್ತಿಯನ್ನು ಸ್ಮರಿಸಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಎಲ್ಲವನ್ನೂ ಎಲ್ಲರನ್ನೂ ನೀವು ಹಚ್ಚಿಕೊಳ್ಳುತ್ತಿದ್ದೀರಿ ವಿನಾ ಇತರರಿಗೆ ನಿಮ್ಮ ಬಗ್ಗೆ ಅಂಥ ಭಾವನೆ ಇಲ್ಲ ಎಂದೆನಿಸಲಿದೆ. ಇನ್ನು ಈ ಹಿಂದೆ ನೀವೇ ಆಡಿದಂಥ ಮಾತುಗಳನ್ನು ಎತ್ತಾಡಿ, ಮನಸ್ಸಿಗೆ ನೋವು ಮಾಡುವವರ ಸಂಖ್ಯೆ ಈ ದಿನ ಜಾಸ್ತಿ ಇರಲಿದೆ. ನಿಮಗೆ ಸಂಬಂಧವೇ ಪಡದಂತಹ ವಿಚಾರವೊಂದಕ್ಕೆ ನೀವಾಗಿಯೇ ಹೋಗಿ ತಗುಲಿ ಹಾಕಿಕೊಳ್ಳಲಿದ್ದೀರಿ. ಅತ್ಯುತ್ಸಾಹದಿಂದ ಯಾರಿಗೂ ಗಡುವನ್ನು ನೀಡಿ, ಮಾತು ನೀಡಲು ಹೋಗಬೇಡಿ. ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತಹವರು ಆರ್ಥಿಕ ವಿಚಾರದ ಬಗ್ಗೆ ಚರ್ಚೆ ಮಾಡದಿರುವುದು ಕ್ಷೇಮ. ಇಲ್ಲದಿದ್ದಲ್ಲಿ ಅವಮಾನದ ಪಾಲಾಗುತ್ತೀರಿ. ವರ್ಗಾವಣೆಗಾಗಿ ಪ್ರಯತ್ನ ಮಾಡುತ್ತಿರುವವರು ಸಾಧ್ಯವಾದಷ್ಟು ಈ ದಿನ ಸುಮ್ಮನಿರುವುದು ಉತ್ತಮ. ಒಂದು ವೇಳೆ ಪ್ರಯತ್ನ ಪಟ್ಟಲ್ಲಿ ನಿಮಗೆ ಬೇಡದಿರುವ ಸ್ಥಳಕ್ಕೆ ವರ್ಗಾವಣೆ ಮಾಡಿಬಿಡುವ ಸಾಧ್ಯತೆಗಳಿವೆ ಎಚ್ಚರಿಕೆ.
ಲೇಖನ- ಎನ್.ಕೆ.ಸ್ವಾತಿ