Horoscope: ದಿನಭವಿಷ್ಯ, ಈ ರಾಶಿಯವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುವುದು

| Updated By: ವಿವೇಕ ಬಿರಾದಾರ

Updated on: Nov 28, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುವುದು
ರಾಶಿಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:10 ರಿಂದ 04:35ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:31 ಗಂಟೆ 10:56 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 12:20 ರಿಂದ 01 :45ರ ವರೆಗೆ.

ಸಿಂಹ ರಾಶಿ: ಅನಿರೀಕ್ಷಿತವಾಗಿ ಯಾವುದೋ ಕಾರ್ಯದಲ್ಲಿ ಸಿಕ್ಕಿಕೊಳ್ಳುವಿರಿ. ಅಧ್ಯಾತ್ಮದಲ್ಲಿ ಆಸಕ್ತಿಯು ಹೆಚ್ಚಾಗಿರುವುದು. ಶತ್ರುಗಳು ಸಂಧಾನಕ್ಕೆ ಬರುವ ಸಾಧ್ಯತೆ ಇದೆ. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಸಾಲವನ್ನು ತೀರಿಸುವಷ್ಟು ಹಣವು ಆಗತ್ತದೋ ಇಲ್ಲವೋ ಎಂಬ ಭೀತಿ ಕಾಡುವುದು. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಪರಿಚಿತರ ಸ್ವತ್ತನ್ನು ಅಪಹರಿಸುವಿರಿ. ಭವಿಷ್ಯದ ಜೀವನದ ಬಗ್ಗೆ ಭಯವು ಇರುವುದು. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು.

ಕನ್ಯಾ ರಾಶಿ: ಬಂಧುಗಳಿಂದ ಸಾಲಬಾಧೆಯು ಕಾಣಿಸಿಕೊಂಡೀತು. ಆಸ್ತಿಯ ವಿಚಾರವಾಗಿ ನೆರಮನೆಯವರ ಜೊತೆ ಕಲಹವು ಪುನಃ ಆರಂಭವಾಗಬಹುದು. ಇಂದು ಧೈರ್ಯದ ಕಾರ್ಯದಲ್ಲಿ ಮುನ್ನಡೆಯಲು ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗುವುದು. ನೇರವಾದ ಮಾತಿನಿಂದ ನಿಮಗೇ ನೋವಾಗುವುದು. ದುರ್ಜನರಿಂದ ದೂರವಿರಬೇಕಾಗಬಹುದು. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರದು. ತಾಯಿಯ ಜೊತೆ ವಾಗ್ವಾದಕ್ಕೆ ನಿಲ್ಲುವುದು ಬೇಡ.

ತುಲಾ ರಾಶಿ: ಮಂಗಲ ಕಾರ್ಯವನ್ನು ಮನೆಯಲ್ಲಿ ಮಾಡುವಿರಿ. ಸಾರ್ವಜನಿಕವಾಗಿ ಸಿಗುವ ಮನ್ನಣೆಯನ್ನು ವಿರೋಧಿಸುವರು. ನಿಮ್ಮ ಹಳೆಯ ವಸ್ತುಗಳನ್ನು ಹೊರಹಾಕಿ ಸಮಾಧಾನಪಟ್ಟುಕೊಳ್ಳುವಿರಿ. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಹಣಕಾಸಿನ ಮೌಲ್ಯವನ್ನು ಇಂದು ತಿಳಿದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶಪ್ರಯಾಣದಿಂದ ಖುಷಿಯು ಇರಲಿದೆ. ನೌಕರರು ನಿಮಗೆ ಪೂರಕವಾಗಿ ಇರುವರು. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವರು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ.

ವೃಶ್ಚಿಕ ರಾಶಿ: ಮಕ್ಕಳ ಆರೋಗ್ಯವನ್ನು ಸುಧಾರಿಸಲು ನೀವು ಬಹಳ ಓಡಾಟ ಮಾಡುವಿರಿ. ವ್ಯಾಪರದಲ್ಲಿ ಸಣ್ಣ ಬದಲಾವಣೆಯನ್ನು ತಂದುಕೊಳ್ಳುವಿರಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಶತ್ರುಬಾಧೆಯಿಂದ ಮನೆಯಲ್ಲಿಯೇ ಕಲಹದ ವಾತಾವರಣವು ಇರುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಸಾಮಾಜಿಕ ಗೌರವದಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರುವುದು. ಸಂಪಾದನೆಯ ಕಡೆ ಅಧಿಕ ಗಮನ ಇರಲಿದ್ದು ಕುಟುಂಬದ ಬಗ್ಗೆ ನೀವು ಒಮ್ಮನಸ್ಸು ಇರದು.

-ಲೋಹಿತಶರ್ಮಾ – 8762924271 (what’s app only)