Horoscope: ದಿನಭವಿಷ್ಯ, ಶತ್ರುಗಳಿಗೆ ಕಡಿವಾಣ ಹಾಕಲು ನೀವು ಹಣವನ್ನು ಖರ್ಚು ಮಾಡುವಿರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಶತ್ರುಗಳಿಗೆ ಕಡಿವಾಣ ಹಾಕಲು ನೀವು ಹಣವನ್ನು ಖರ್ಚು ಮಾಡುವಿರಿ
ರಾಶಿ ಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:21 ರಿಂದ 01:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:06 ಗಂಟೆ 09:31 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:21ರ ವರೆಗೆ.

ಸಿಂಹ ರಾಶಿ : ಚರಾಸ್ತಿಯಲ್ಲಿ ನಿಮಗೆ ಸಿಗಬೇಕಾದ ಪಾಲು ಸರಿಯಾಗಿ ಸಿಗದು. ನ್ಯಾಯಾಲಯದ ಮೊರೆ ಹೋಗುವಿರಿ. ಗೃಹೋದ್ಯಮದಲ್ಲಿ ನೀವು ಲಾಭವನ್ನು ಗಳಿಸುವಿರಿ. ಸಣ್ಣ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಯಾರ ಮೇಲಾದರೂ ಮುನಿಸು ತಾತ್ಕಾಲಿಕವಾಗಿ ಇರುವುದು. ಸ್ತ್ರೀಯರಿಂದ ನಿಮಗೆ ಸಂತೋಷವು ಸಿಗುವುದು. ಉಡುಗೊರೆಯನ್ನು ಪಡೆಯಲು ನೀವು ನಿರಾಕರಿಸುವಿರಿ. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡುವುದು ನಿಮಗೆ ಬೇಸರವಾಗಬಹುದು.

ಕನ್ಯಾ ರಾಶಿ : ಹಣಕಾಸಿನ ವಿಷಯಕ್ಕೆ ಅಜಾಗರೂಕತೆ ಹೆಚ್ಚು ತೋರುವುದು. ‌ಭೂಮಿಯ ಖರೀದಿಸಲು ಬಹಳ ಆತುರವಿರುವುದು. ಇಂದಿನ ನಿಮ್ಮ ಕಾರ್ಯದಲ್ಲಿ ಪೂರ್ಣ ಜಯವು ಸಿಗದೇ ಹೋಗುವುದು. ಜಾಣ್ಮೆಯಿಂದ ವ್ಯವಹರಿಸಿದರೆ ಲಾಭವಾಗಬಹುದು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ. ಆದಷ್ಟು ಒಬ್ಬರಾದರೂ ಸುಮ್ಮನಿದ್ದರೆ ಕಲಹವು ಶಾಂತವಾಗುವುದು. ನಿಮ್ಮ ಆಲೋಚನೆಯನ್ನು ಕೆಲವಷ್ಟಕ್ಕೆ ಸೀಮಿತಗೊಳಿಸಿಕೊಳ್ಳುವಿರಿ. ಉತ್ತಮ ವಸ್ತುಗಳು ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.‌ ಮನೆಯ ಶುಭ ಕಾರ್ಯಗಳಿಗೆ ನಿಮ್ಮಿಂದ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳ ಕಾರ್ಯದ ವೇಗವನ್ನು ನೀವು ಹೆಚ್ಚಿಸುವಿರಿ. ನಿಮ್ಮ ಮೇಲೆ‌ ಯಾರದ್ದಾದರೂ ಪ್ರಭಾವವು ಉಂಟಾಗುವುದು.

ತುಲಾ ರಾಶಿ : ಕೃತಕ ಮನಸ್ಸು ನಿಮಗೆ ಚೆನ್ನಾಗಿ ಕಾಣಿಸದು. ಸಣ್ಣ ಯಶಸ್ಸೂ ನಿಮ್ಮ‌ ಉತ್ಸಾಹವನ್ನು ಇಮ್ಮಡಿ ಮಾಡೀತು. ನಿಮ್ಮ ಬಗ್ಗೆಯೇ ನೀವು ಕೊಚ್ಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೋಬ್ಬರಿಗೆ ಹೇರುವುದು ಬೇಡ. ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಿರಿ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಮನೆಯಲ್ಲಿ ನಿಮಗೆ ಕಳ್ಳತನದ ಭಯವು ಇರುವುದು. ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ಸ್ವಲ್ಪಮಟ್ಟಿಗೆ ನಷ್ಟವಾಗುವುದು.

ವೃಶ್ಚಿಕ ರಾಶಿ : ಅಪರಿಚಿತರು ನಿಮಗೆ ಸಲಹೆಯನ್ನು ಕೊಡಬಹುದು. ಯಾರನ್ನೋ ನಂಬುವ ಸ್ಥಿತಿಯನ್ನು ನೀವು ಕಳೆದುಕೊಳ್ಳಬಹುದು. ಶತ್ರುಗಳಿಗೆ ಕಡಿವಾಣ ಹಾಕಲು ನೀವು ಹಣವನ್ನು ಖರ್ಚು ಮಾಡುವಿರಿ. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಮಿತ್ರರ ಸ್ವಭಾವವನ್ನು ನೀವು ಇಂದು ತಿಳಿದುಕೊಳ್ಳುವಿರಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು. ಸೌಹಾರ್ದ ಭಾವದಿಂದ ನೀವು ಎಲ್ಲರ ಜೊತೆ ವ್ಯವಹರಿಸುವಿರಿ. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು. ಇನ್ನೊಬ್ಬರ ಆದಾಯಕ್ಕೆ ಕುತ್ತು ತರುವುದು ಸರಿಯಲ್ಲ.