Horoscope 30 Nov: ದಿನಭವಿಷ್ಯ, ನೇರ ನುಡಿಯು ಈ ರಾಶಿಯವರಿಗೆ ಉಚಿತವಲ್ಲ. ಮಾತನ್ನು ಆಡಬೇಕಾದ ಸಂದರ್ಭದಲ್ಲಿ ಆಡಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್ 30 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆಗೆ. ರಾಹು ಕಾಲ ಮಧ್ಯಾಹ್ನ 12:21 ರಿಂದ 01:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:06 ಗಂಟೆ 09:31 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:21ರ ವರೆಗೆ.
ಮೇಷ ರಾಶಿ: ನಿಮ್ಮ ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದೋ ಕೆಲಸವನ್ನು ಮಾಡಿಕೊಡಬೇಕಾಗುವುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಅಚಾತುರ್ಯದಿಂದ ತಪ್ಪನ್ನು ಮಾಡಿ, ಪಶ್ಚಾತ್ತಾಪ ಪಡುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಕುಟುಂಬದ ಸದಸ್ಯರ ಪ್ರೀತಿಯು ಸಿಕ್ಕಿ ಹರ್ಷಿಸುವಿರಿ. ಆಕಸ್ಮಿಕ ವಾರ್ತೆಯಿಂದ ಉದ್ವೇಗಕ್ಕೆ ಒಳಗಾಗುವಿರಿ. ಸುಖ ಜೀವನದ ನಿರೀಕ್ಷೆಯಲ್ಲಿಯೇ ದಿನವನ್ನು ಕಳೆಯುವಿರಿ. ಇಂದಿನ ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತೂ ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ. ವಾತ ರೋಗವು ಕಾಣಿಸಿಕೊಂಡೀತು.
ವೃಷಭ ರಾಶಿ: ಸಾಮಾಜಿಕ ಕಾರ್ಯವನ್ನು ಮಾಡಲು ಒತ್ತಡವು ಬರಬಹುದು. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಇನ್ನೊಬ್ಬರನ್ನು ಸರಿ ಮಾಡಲು ಹೋಗಿ ನೀವೇ ಹಾಳಾಗಬಹುದು. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂದಿದ್ದರೂ ಆಗದು. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ನೀವು ಯಶಸ್ಸನ್ನು ಕಾಯ್ದುಕೊಳ್ಳುವಿರಿ. ತಾಯಿಯು ನಿಮಗೆ ಹಿತವಚನವನ್ನು ಹೇಳುವರು.
ಮಿಥುನ ರಾಶಿ: ಸಂಗಾತಿಯ ಉಡುಗೊರೆಯು ನಿಮಗೆ ಹಿಡಿಸುವುದು. ಜಾಣ್ಮೆಯ ಹೆಜ್ಜೆಯನ್ನು ನೀವು ಇಡಬೇಕಾದೀತು. ಮನೆಯ ಕುಂದು ಕೊರತೆಗಳನ್ನು ವಿಚಾರಿಸುವ ಸಮಯ ನಿಮಗೆ ಸಿಗದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು. ಸಗಟು ವ್ಯವಹಾರವು ನಿಂದು ಕಷ್ಟವಾಗಬಹುದು. ಸಕಾಲಕ್ಕೆ ಭೋಜನವು ನಿಮಗೆ ಮಾಡಲು ಸಾಧ್ಯವಾಗದೇ ಇದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ನಿಮಗೆ ಅಭದ್ರತೆಯು ಕಾಡಬಹುದು. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋದನೆಯು ನಿಮಗೆ ಖುಷಿ ಕೊಡುವುದು. ಸಾಹಿತ್ಯಾಸಕ್ತರಿಗೆ ಅವಕಾಶಗಳು ಬರಬಹುದು. ಆರೋಗ್ಯದ ವ್ಯತ್ಯಯಸಲ್ಲಿಯೂ ನೀವು ಉತ್ಸಾಹದಿಂದ ಮಾಡುವ ಕೆಲಸಕ್ಕೆ ಪ್ರಶಂಸೆ ಮಾಡುವರು.
ಕಟಕ ರಾಶಿ: ನಿಮ್ಮ ಇಂದಿನ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಯಾರ ಸಹಾಯವನ್ನು ಪಡೆದರೂ ನಿಮಗೆ ಸಮಾಧಾನ ಇರದು. ಯಾವುದನ್ನೂ ಒಪ್ಪಿಕೊಳ್ಳುವ ಮೊದಲು ನಿಮಗೆ ನಾಲ್ಕು ಬಾರಿ ಯೋಚಿಸಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಇಂದಿನ ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ಜವಾಬ್ದಾರಿಯಿಂದ ಜಾರಿಕೊಳ್ಳುವ ಯೋಚನೆ ಮಾಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ನಿಮ್ಮ ವಸ್ತುಗಳ ಉಪಯೋಗವನ್ನು ನೀವು ಬಹಳ ನಿರ್ಲಕ್ಷ್ಯದಿಂದ ಮಾಡುವಿರಿ. ಸರಳವಾಗಿ ಮಾತನಾಡುವುದು ನಿಮಗೆ ಬಾರದು. ಸಂಕೀರ್ಣ ಕಾರ್ಯವನ್ನು ಸರಳ ಮಾಡಿಕೊಳ್ಳುವಿರಿ. ಹೊಸ ಕೆಲಸಕ್ಕೆ ಸೇರಲು ನಿಮ್ಮಲ್ಲಿ ಬಹಳ ಉತ್ಸಾಹವು ಇರುವುದು.
ಸಿಂಹ ರಾಶಿ: ಚರಾಸ್ತಿಯಲ್ಲಿ ನಿಮಗೆ ಸಿಗಬೇಕಾದ ಪಾಲು ಸರಿಯಾಗಿ ಸಿಗದು. ನ್ಯಾಯಾಲಯದ ಮೊರೆ ಹೋಗುವಿರಿ. ಗೃಹೋದ್ಯಮದಲ್ಲಿ ನೀವು ಲಾಭವನ್ನು ಗಳಿಸುವಿರಿ. ಸಣ್ಣ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಯಾರ ಮೇಲಾದರೂ ಮುನಿಸು ತಾತ್ಕಾಲಿಕವಾಗಿ ಇರುವುದು. ಸ್ತ್ರೀಯರಿಂದ ನಿಮಗೆ ಸಂತೋಷವು ಸಿಗುವುದು. ಉಡುಗೊರೆಯನ್ನು ಪಡೆಯಲು ನೀವು ನಿರಾಕರಿಸುವಿರಿ. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡುವುದು ನಿಮಗೆ ಬೇಸರವಾಗಬಹುದು.
ಕನ್ಯಾ ರಾಶಿ: ಹಣಕಾಸಿನ ವಿಷಯಕ್ಕೆ ಅಜಾಗರೂಕತೆ ಹೆಚ್ಚು ತೋರುವುದು. ಭೂಮಿಯ ಖರೀದಿಸಲು ಬಹಳ ಆತುರವಿರುವುದು. ಇಂದಿನ ನಿಮ್ಮ ಕಾರ್ಯದಲ್ಲಿ ಪೂರ್ಣ ಜಯವು ಸಿಗದೇ ಹೋಗುವುದು. ಜಾಣ್ಮೆಯಿಂದ ವ್ಯವಹರಿಸಿದರೆ ಲಾಭವಾಗಬಹುದು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ. ಆದಷ್ಟು ಒಬ್ಬರಾದರೂ ಸುಮ್ಮನಿದ್ದರೆ ಕಲಹವು ಶಾಂತವಾಗುವುದು. ನಿಮ್ಮ ಆಲೋಚನೆಯನ್ನು ಕೆಲವಷ್ಟಕ್ಕೆ ಸೀಮಿತಗೊಳಿಸಿಕೊಳ್ಳುವಿರಿ. ಉತ್ತಮ ವಸ್ತುಗಳು ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ. ಮನೆಯ ಶುಭ ಕಾರ್ಯಗಳಿಗೆ ನಿಮ್ಮಿಂದ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳ ಕಾರ್ಯದ ವೇಗವನ್ನು ನೀವು ಹೆಚ್ಚಿಸುವಿರಿ. ನಿಮ್ಮ ಮೇಲೆ ಯಾರದ್ದಾದರೂ ಪ್ರಭಾವವು ಉಂಟಾಗುವುದು.
ತುಲಾ ರಾಶಿ: ಕೃತಕ ಮನಸ್ಸು ನಿಮಗೆ ಚೆನ್ನಾಗಿ ಕಾಣಿಸದು. ಸಣ್ಣ ಯಶಸ್ಸೂ ನಿಮ್ಮ ಉತ್ಸಾಹವನ್ನು ಇಮ್ಮಡಿ ಮಾಡೀತು. ನಿಮ್ಮ ಬಗ್ಗೆಯೇ ನೀವು ಕೊಚ್ಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೋಬ್ಬರಿಗೆ ಹೇರುವುದು ಬೇಡ. ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಿರಿ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಮನೆಯಲ್ಲಿ ನಿಮಗೆ ಕಳ್ಳತನದ ಭಯವು ಇರುವುದು. ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ಸ್ವಲ್ಪಮಟ್ಟಿಗೆ ನಷ್ಟವಾಗುವುದು.
ವೃಶ್ಚಿಕ ರಾಶಿ: ಅಪರಿಚಿತರು ನಿಮಗೆ ಸಲಹೆಯನ್ನು ಕೊಡಬಹುದು. ಯಾರನ್ನೋ ನಂಬುವ ಸ್ಥಿತಿಯನ್ನು ನೀವು ಕಳೆದುಕೊಳ್ಳಬಹುದು. ಶತ್ರುಗಳಿಗೆ ಕಡಿವಾಣ ಹಾಕಲು ನೀವು ಹಣವನ್ನು ಖರ್ಚು ಮಾಡುವಿರಿ. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಮಿತ್ರರ ಸ್ವಭಾವವನ್ನು ನೀವು ಇಂದು ತಿಳಿದುಕೊಳ್ಳುವಿರಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು. ಸೌಹಾರ್ದ ಭಾವದಿಂದ ನೀವು ಎಲ್ಲರ ಜೊತೆ ವ್ಯವಹರಿಸುವಿರಿ. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು. ಇನ್ನೊಬ್ಬರ ಆದಾಯಕ್ಕೆ ಕುತ್ತು ತರುವುದು ಸರಿಯಲ್ಲ.
ಧನು ರಾಶಿ: ಹೇಳಿದ್ದಷ್ಟನ್ನೇ ಮಾಡುವ ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಉದ್ಯೋಗವು ಎಣಿಸಿಕೊಂಡಷ್ಟು ಸರಳವಾಗಿ ಇರದು. ಆರ್ಥಿಕತೆಯು ನಿಮ್ಮ ಕೈ ಮೀರಿ, ಖರ್ಚುಮಾಡಬೇಕಾದೀತು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗುವುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮೊದಲು ಆರ್ಥಿಕ ಲಾಭವನ್ನು ನಿರೀಕ್ಷಿಸದೇ ಕಾರ್ಯವನ್ನು ಆರಂಭಿಸಿ. ಆದುದರ ಬಗ್ಗೆ ಆಲೋಚಿಸಿ ಪ್ರಯೋಜನವಿಲ್ಲ. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವರು. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡಾಡುವುದು. ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗದು. ಗೊಂದಲು ಹೆಚ್ಚಿರುವುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ಸಮಾರಂಭದಲ್ಲಿ ಆಪ್ತರ ಭೇಟಿಯಾಗಲಿದೆ. ಹಳೆಯ ಗೆಳತಿಯು ಭೇಟಿಯಾಗಲಿದೆ.
ಮಕರ ರಾಶಿ: ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಸಿಗಲಿದೆ. ತಮ್ಮದೇ ಸಣ್ಣ ಉದ್ಯಮದಿಂದ ಸ್ತ್ರೀಯರು ಹಣವನ್ನು ಗಳಿಸಬಹುದು. ಭೂಮಿಯ ವಿಚಾರವು ಇತ್ಯರ್ಥವಾಗಿ ಮನಸ್ಸಿಗೆ ಸಮಾಧಾನವಾಗಲಿದೆ. ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಒಮ್ಮನಸ್ಸು ಬರುವುದು ಕಷ್ಟವಾಗುವುದು. ಖಾಸಗಿ ಸಂಸ್ಥೆಯು ನಿಮ್ಮ ಕಾರ್ಯಕ್ಕೆ ಉನ್ನತ ಸ್ಥಾನವನ್ನು ಕೊಡುವುದು. ಯಾರಿಂದಲೂ ನಿರೀಕ್ಷಿಸುವುದು ಬೇಡ. ಪ್ರಯೋಜನವಾಗದು. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಚೆನ್ನಾಗಿರದು. ಸಣ್ಣ ವಿಚಾರಗಳಿಂದ ಸಂಗಾತಿಯ ನಡುವೆ ವೈಮನಸ್ಯ ಉಂಟಾಗುವುದು.
ಕುಂಭ ರಾಶಿ: ನೇರ ನುಡಿಯು ನಿಮಗೆ ಉಚಿತವಲ್ಲ. ಮಾತನ್ನು ಆಡಬೇಕಾದ ಸಂದರ್ಭದಲ್ಲಿ ಆಡಿ. ಎಲ್ಲದಕ್ಕೂ ಮಾತನಾಡುವುದು ಬೇಡ. ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಬಂಧುಗಳಿಂದ ಕೆಲಸವು ಹಾಳಾಗಬಹುದು. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ಘಟನೆಯಿಂದ ನಿಮಗೆ ಬಹಳ ಬೇಸರ ತರಿಸಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ಮುಂಗೋಪವವನ್ನು ನೀವೇ ಬಲವಂತವಾಗಿ ಕಡಿಮೆ ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ವ್ಯವಹಾರವು ಎಂದಿಗಿಂತ ಹೆಚ್ಚು ಚೆನ್ನಾಗಿ ಆಗಲಿದೆ. ಹೂಡಕೆಯ ಹಣದಲ್ಲಿ ತೊಡಕಾಗಬಹುದು. ಸರ್ಕಾರದಿಂದ ಬರುವ ಹಣವು ಬಾರದು.
ಮೀನ ರಾಶಿ: ಇಂದು ಹೊಸ ಉದ್ಯಮದ ಬಗ್ಗೆ ಚಿಂತಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವಿರಿ. ರೋಗವು ಹೆಚ್ಚಾಗುವ ಸಾಧ್ಯತೆ ಇದೆ. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ದೇಹಾಯಾಸದಿಂದ ಕಷ್ಟವಾಗಲಿದೆ. ಇಂದು ನೀವು ದೇವರ ಆರಾಧನೆಯಲ್ಲಿ ಮಗ್ನರಾಗುವಿರಿ. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ. ರಕ್ಷಣಾವಿಭಾಗದ ಮುಖ್ಯಸ್ಥರಾಗುವ ಸಾಧ್ಯತೆ ಇದೆ. ಉದ್ಯಮದಲ್ಲಿ ಆದಾಯವನ್ನು ಹೆಚ್ಚಿಸಲು ನೌಕರರ ಜೊತೆ ಮಾತನಾಡುವಿರಿ. ಮನೆಯ ಕಾರ್ಯವನ್ನು ಸರಿದೂಗಿಸುವು ನಿಮಗೆ ಕಷ್ಟ ಎನಿಸಬಹುದು. ಕಟ್ಟಡವನ್ನು ನಿರ್ಮಾಣದವರಿಗೆ ದೊಡ್ಡ ಯೋಜನೆ ಸಿಗಲಿದೆ. ತಾಳ್ಮೆಯ ಅವಶ್ಯಕತೆ ಹೆಚ್ಚು ಕಾಣಿಸುವುದು.
-ಲೋಹಿತಶರ್ಮಾ – 8762924271 (what’s app only)
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ