Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 15ರ ದಿನಭವಿಷ್ಯ

|

Updated on: Apr 15, 2023 | 5:25 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 15ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 15ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 15ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಒಂದಲ್ಲಾ ಒಂದು ವಿಷಯಕ್ಕೆ ಮನಸ್ತಾಪವನ್ನು ಮಾಡಿಕೊಳ್ಳಲಿದ್ದೀರಿ. ಇತರರ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ದೇವತಾಕಾರ್ಯಗಳಿಗೆ ನಿಮ್ಮಿಂದ ದೇಣಿಗೆ ಮತ್ತ್ಯಾವುದಾದರೂ ನೆರವು ಕೇಳಿಕೊಂಡು ಬರಬಹುದು. ನಿಮ್ಮಿಂದ ಸಾಧ್ಯವಾದಲ್ಲಿ ಖಂಡಿತಾ ನೆರವಾಗಿ. ಇದು ಆ ದೇವರ ಸೇವೆ ಮಾಡುವುದಕ್ಕೆ ನಿಮಗೆ ದೊರೆಯುವ ಅವಕಾಶ ಆಗಿರಲಿದೆ. ಬೇಕೆಂತಲೇ ಕೆಲವರು ತಪ್ಪು ಅಭಿಪ್ರಾಯ ಮೂಡಿಸುವಂಥ ಪ್ರಯತ್ನ ಮಾಡಲಿದ್ದಾರೆ. ಅದನ್ನು ಹೋಗಲಾಡಿಸುವುದು ಹೇಗೆ ಎಂಬ ಬಗ್ಗೆ ಆಲೋಚಿಸಿ, ಅದನ್ನು ಬಿಟ್ಟು ಕೂಗಾಟ- ಕಿರುಚಾಟ ಮಾಡಿದಲ್ಲಿ ನೀವೇ ಸಮಸ್ಯೆ ಮಾಡಿಕೊಂಡಂತೆ ಆಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಣಕಾಸಿನ ವಿಚಾರಕ್ಕೆ ಪ್ರಾಶಸ್ತ್ಯ ಹೆಚ್ಚಾಗಲಿದೆ. ಸ್ವಂತ ವ್ಯವಹಾರ ಮಾಡುವಂಥವರು ವೆಚ್ಚ ಕಡಿಮೆ ಮಾಡಿಕೊಳ್ಳುವ ಬಗ್ಗೆ ಯೋಜನೆಗಳನ್ನು ರೂಪಿಸಲಿದ್ದೀರಿ. ಜಿಎಸ್ ಟಿ, ಆದಾಯ ತೆರಿಗೆಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಕಳೆದುಹೋಗಿ, ಆತಂಕದ ಕ್ಷಣಗಳನ್ನು ಎದುರಿಸಲಿದ್ದೀರಿ. ಇತರರಿಗೆ ಯಾವುದಾದರೂ ಕೆಲಸ ಒಪ್ಪಿಸುವ ಮೊದಲಿಗೆ ಅವರಿಂದ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಕೇಳಿ, ತಿಳಿದುಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಇತರರ ದೃಷ್ಟಿಯಲ್ಲಿ ನಿಮ್ಮ ಕೆಲಸ ಬಲು ಸಲೀಸು ಅಂತಲೋ ಅಥವಾ ಈಗ ಎಷ್ಟು ಮಂದಿ ಕೆಲಸ ಮಾಡುತ್ತೀದ್ದೀರೋ ಅದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಜನರಿದ್ದರೂ ಸಹ ಕೆಲಸ ಮುಗಿಯುತ್ತದೆ ಅಂತಲೋ ಭಾವನೆ ಮೂಡುತ್ತದೆ. ಇದನ್ನು ನಿಮ್ಮೆದುರೇ ಹೇಳಿಯೂ ಹೇಳ್ತಾರೆ. ನಿಮ್ಮ ಶ್ರಮಕ್ಕೆ, ಪ್ರಯತ್ನಕ್ಕೆ ಬೆಲೆಯೇ ಸಿಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳಲಿದ್ದೀರಿ. ದೀರ್ಘಾವಧಿ ಯೋಜನೆಗಳನ್ನು ರೂಪಿಸುವುದಕ್ಕೆ ಮುಂಚೆ ಅಥವಾ ಅನುಷ್ಠಾನಕ್ಕೆ ತರುವ ಮುಂಚೆ ನಿಮ್ಮಿಂದ ಶಿಸ್ತುಪಾಲನೆ ಸಾಧ್ಯವೇ ಎಂಬ ಬಗ್ಗೆ ಆಲೋಚನೆಯನ್ನು ಮಾಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಕೈಯಲ್ಲಿ ಹಣವಿಲ್ಲದ ಪಕ್ಷದಲ್ಲಿ ಮುಂದೆ ಬರುವ ಆದಾಯವೋ ಅಥವಾ ಸಾಲವನ್ನು ನೆಚ್ಚಿಕೊಂಡು ಬೇರೆಯವರಿಗೆ ಮಾತು ನೀಡುವುದಕ್ಕೆ ಹೋಗದಿರಿ. ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗುವಂಥ ಯೋಗ ಇದೆ. ಇಷ್ಟು ಸಮಯ ಯಾವುದನ್ನು ನೀವು ವೃಥಾ ಹೂಡಿಕೆ ಆಯಿತು ಎಂದುಕೊಂಡಿದ್ದಿರೋ ಅದರಲ್ಲಿ ಲಾಭ ಬರುವುದಕ್ಕೆ ಶುರು ಆಗಲಿದೆ ಅಥವಾ ಅದು ಲಾಭದಾಯಕ ಬೆಲೆಗೆ ಮಾರಾಟ ಆಗಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕಾರು ಅಥವಾ ನಿಮ್ ವೃತ್ತಿಗೆ ಅಗತ್ಯವಾದ ಸಲಕರಣೆಗಳು ಖರೀದಿ ಮಾಡಲಿದ್ದೀರಿ. ಪ್ರಚಾರದ ಸಲುವಾಗಿ ಒಂದಿಷ್ಟು ಮೊತ್ತವನ್ನು ಖರ್ಚು ಮಾಡುವಂಥ ಯೋಗ ಇದೆ. ಇತರರಿಗೆ ಬೆರಗು ಮೂಡುವಂಥ ಕೆಲಸ ಮಾಡಲಿದ್ದೀರಿ. ಎಲ್ಲ ಸಮಯದಲ್ಲೂ ನೇರವಂತಿಕೆ ಕೆಲಸಕ್ಕೆ ಬರುವುದಿಲ್ಲ. ಹೇಳುವ ವಿಚಾರ ಸರಿಯೇ ಇರಬಹುದು, ಅದರಿಂದ ಲಾಭವೇ ಆಗಬಹುದು. ಆದರೆ ಹೇಗೆ ಎದುರಿಗಿರುವವರಿಗೆ ದಾಟಿಸುತ್ತೀರಿ ಎಂಬುದು ಬಹಳ ಮುಖ್ಯವಾದ ಸಂಗತಿ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾರದೋ ಉದ್ಧಾರ ನಾನು ಮಾಡಿಬಿಡ್ತೀನಿ ಎಂಬ ಭ್ರಮೆ ಬೇಡ. ಇತರರ ಆತ್ಮಗೌರವಕ್ಕೆ ಚ್ಯುತಿ ಆಗುವಂಥ ಮಾತುಗಳನ್ನು ಆಡಬೇಡಿ. ಇದರಿಂದ ನಿಮ್ಮದೇ ಕೆಲಸಕ್ಕೆ ಪೆಟ್ಟು ಬೀಳಬಹುದು. ಇನ್ನು ಪೂರ್ತಿ ಮಾಹಿತಿ ಇಲ್ಲದ ಹೊರತು ಯಾವುದೇ ವಸ್ತುವಿನ ಬೆಲೆಯನ್ನು ಹೇಳಲಿಕ್ಕೆ ಹೋಗದಿರಿ. ಸೆಕೆಂಡ್ ಹ್ಯಾಂಡ್ ವಾಹನವನ್ನು ಕೊಳ್ಳುವಂಥ ಯೋಗ ಇದೆ. ಮನೆಯಲ್ಲಿ ಕೆಲವು ಸಣ್ಣ- ಪುಟ್ಟ ದುರಸ್ತಿಗಳನ್ನು ಮಾಡಿಸಿಕೊಳ್ಳಲು ವಿಚಾರಣೆ ಮಾಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಶಾಶ್ವತವಾದ ಆದಾಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಿದ್ದೀರಿ. ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ, ಮೆಚ್ಚುಗೆ ದೊರೆಯಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಚಿಂತೆ ಕಾಡಲಿದೆ. ಹೆಚ್ಚಿನ ಖರ್ಚು ಮಾಡಲಿದ್ದೀರಿ. ನಿಮ್ಮ ನಿರ್ಧಾರದ ಬಗ್ಗೆ ಇತರರು ಅನುಮಾನ ವ್ಯಕ್ತಪಡಿಸಲಿದ್ದಾರೆ. ಒಂದು ವೇಳೆ ನಿಮ್ಮೆದುರೇ ಈ ಮಾತನ್ನು ಹೇಳಿದಲ್ಲಿ ಮನಸ್ಸಿಗೆ ಬೇಸರ ಪಟ್ಟುಕೊಳ್ಳದಿರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ತಂದೆ- ತಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ನಿಮಗೆ ಸಂಬಂಧಪಡದ ವಿಚಾರಗಳಿಗೆ ತಲೆ ಹಾಕದಿರುವುರು ಉತ್ತಮ. ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ನೀವು ಹೆಚ್ಚಿನ ಓಡಾಟ ನಡೆಸಲಿದ್ದೀರಿ. ಯುವತಿಯರು ವಿವಾಹ ವಯಸ್ಕರಾಗಿದ್ದಲ್ಲಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದಲ್ಲಿ ಏಳ್ಗೆ ಸಾಧ್ಯತೆಗಳು ಹೆಚ್ಚಾಗಿವೆ. ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು.

ಲೇಖನ- ಎನ್‌.ಕೆ.ಸ್ವಾತಿ