AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: istock
ಗಂಗಾಧರ​ ಬ. ಸಾಬೋಜಿ
|

Updated on: Apr 15, 2023 | 6:00 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 15 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಾಧ್ಯ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 09:26 – 10:59ರ ವರೆಗೆ, ಯಮಘಂಡ ಕಾಲ 02:06 – 03:39ರ ವರೆಗೆ, ಗುಳಿಕ ಕಾಲ 06:20 – 07:53 ರವರೆಗೆ.

ಸಿಂಹ: ಕಳ್ಳರ ಭೀತಿಯು ಕಾಡಬಹುದು. ಮೋಸ ಹೋಗಲೂಬಹುದು. ಅನಾರೋಗ್ಯಕ್ಕೆ ಕಾರಣವು ಸಿಗದೇ ವಿವಿಧ ಔಷಧಗಳನ್ನು ಮಾಡುವಿರಿ. ನಿಮಗೆ ಇತ್ತಿಚೆಗೆ ಸಣ್ಣ ಸಣ್ಣ ಕ್ಲೇಶಗಳು ಆಗುತ್ತಿದ್ದು ಅದನ್ನು ತಿಳಿದುಕೊಳ್ಳಲು ಜ್ಯೋತಿಷಿಗಳ ಭೇಟಿ ಮಾಡಿ ಕೂಲಂಕಷವಾಗಿ ತಿಳಿದುಕೊಳ್ಳಿ. ಪ್ರಣಯಪ್ರಸಂಗದಲ್ಲಿ ಆಕಸ್ಮಿಕ ತಿರುವು ನಿಮಗೆ ಸಂತೋಷವನ್ನು ತೆಬಹುದು. ಮನಸ್ಸು, ಬುದ್ಧಿಗಳನ್ನು ನಿಶ್ಚಲಗೊಳಿಸಿ. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ. ಅಷ್ಟಮದಲ್ಲಿರುವ ಸೂರ್ಯನಿಂದ ಜ್ವರಾದಿಗಳು ಬರಬಹುದು. ಔಷಧೋಪವಾರದಿಂದ ಅದು ನಿವಾರಯಾಗಲಿದೆ‌.

ಕನ್ಯಾ: ಇಬ್ಬರ ನಡುವಿನ ಕಲಹದಲ್ಲಿ ತುಪ್ಪವನ್ನು ಸುರಿಯುವ ಕೆಲಸಕ್ಕೆ ಹೋಗಬೇಡಿ. ಹತ್ತಿಕೊಂಡ ಬೆಂಕಿ ಆರುವತನಕ ಕಾಯಬೇಕು. ಕಾಲವು ಕೂಡಿಬಂದಾಗ ಎಲ್ಲವೂ ತನ್ನಿಂದ ತಾನೇ ಆಗುತ್ತದೆ. ನಿಮ್ಮ ಪ್ರಯತ್ನದಿಂದಲೇ ಎಲ್ಲವೂ ಸಿದ್ಧಿಸಬೇಕು ಎನ್ನುವುದು ಮೂರ್ಖತನ. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಅವರ ಸಹಾಯ ಮುಂದೊಂದುದಿನ ಬೇಕಾದೀತು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿ. ಮಕ್ಕಳಿಂದ ಸಂತೋಷವು ಸಿಗಲಿದೆ. ಗುರುಗಳನ್ನು ಭೇಟಿಯಾಗಲಿದ್ದೀರಿ. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ. ಅಷ್ಟಮದ ರಾಹುವು ಶಾರೀರಿಕ ದೋಷಗಳನ್ನು ಹೊರಹಾಕುವನು.

ತುಲಾ: ಇಂದಿನ ನಿಮ್ಮ ನಡೆ ಬಹಳ ಗೌಪ್ಯವಾಗಿದ್ದು ನಿಮ್ಮ ಹೆಜ್ಜೆಯನ್ನು ಯಾರೂ ಗುರುತಿಸಲಾರರು. ಕೃಷಿಯು ನಿಮಗೆ ಹಿಡಿಸದ ಕೆಲಸವಾದರೂ ಅದನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದೀತು. ಪುಣ್ಯನದಿಗಳ ಸಂಗಮಸ್ಥಳಕ್ಕೆ ಹೋಗಿ ಸ್ನಾನ ಮಾಡಿ ಬನ್ನಿ. ಸರ್ಕಾರಿ ಉದ್ಯೋಗಿಗಳಿಗೆ ಬಹಳ ದಿನಗಳ ಅನಂತರ ಶುಭವಾರ್ತೆಯು ಬರಲಿದೆ. ಮುಖದಲ್ಲಿ ಮಂದಹಾಸ ಶರೀರದಲ್ಲಿ ಉತ್ಸಾಹ ಹೆಚ್ಚಾಗುವ ಸುದ್ದಿಯು ಇದಾಗಲಿದೆ‌‌‌. ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ. ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ನಿಮ್ಮದನ್ನು ಕಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ. ಶುಕ್ರನು ಅಷ್ಟಮದಲ್ಲಿ ತನ್ನ ಗೃಹದಲ್ಲಿ ಇದ್ದು ಸ್ತ್ರೀಯರ ಕಾರಣಕ್ಕೆ ಅಥವಾ ಸ್ತ್ರೀಸಂಬಂಧದ ವಿಚಾರಕ್ಕೆ ಹಣವನ್ನು ನಷ್ಟ ಮಾಡಿಸುವನು.

ವೃಶ್ಚಿಕ: ಸಮಯವನ್ನು ಮಾಡಿಕೊಂಡು ತಂದೆ ಹಾಗೂ ತಾಯಿಯರನ್ನು ಭೇಟಿಯಾಗಿ ಬನ್ನಿ. ಅವರ ಮಾತುಗಳು ನಿಮಗೆ ಸಂಕಟವನ್ನು ತಂದರೂ ಅವರ ಮನಸ್ಸು ಹಗುರಾಗುವುದು. ನಿಯಮಿತ ಕಾರ್ಯಗಳನ್ನು ಮಾಡುತ್ತ ಸಂತೋಷವಾಗಿ ಇರುವಿರಿ. ನೀವು ಆಡಲಿರುವ ಮಾತುಗಳು ಪರ್ವತದಷ್ಟು ಇದ್ದರೂ ಕೇಳಿಸಿಕೊಳ್ಳುವ ಮನಸ್ಸಿನ, ಕಿವಿಯ ಕೊರತೆ ಕಾಣಿಸಲಿದೆ. ಅವಕಾಶಗಳನ್ನು ಬಿಟ್ಟುಕೊಡುವುದು ಔದಾರ್ಯವಲ್ಲ, ಆಲಸ್ಯವಾಗುವುದು. ಸ್ವರಾಶ್ಯಧಿಪತಿಯು ಅಷ್ಟಮದಲ್ಲಿದ್ದು ಸಣ್ಣ ಪುಟ್ಟ ಗಾಯಗಳನ್ನು ಮಾಡಿಸುವನು.