Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 1ರ ದಿನಭವಿಷ್ಯ 

|

Updated on: Apr 01, 2023 | 5:15 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 1ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 1ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Image Credit source: parenting.firstcry.com
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 1ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ಕೈಗೊಳ್ಳುವ ತೀರ್ಮಾನದ ಬಗ್ಗೆ ಪರ- ವಿರೋಧಗಳು ಕೇಳಿಬರಲಿವೆ. ಒಂದು ವೇಳೆ ಇನ್ನಷ್ಟು ಸಮಯ ಮುಂದೂಡುವುದಕ್ಕೆ ಸಾಧ್ಯ ಎಂದಾದಲ್ಲಿ ಮುಂದಕ್ಕೆ ಹಾಕಿ. ಇನ್ನು ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವವರಿಗೆ ದೊಡ್ಡ ಮಟ್ಟದ ಹಣ ಬರುವಂಥ ಅವಕಾಶವೊಂದು ತೆರೆದುಕೊಳ್ಳಲಿದೆ. ನಿಮ್ಮ ಶ್ರಮಕ್ಕೆ ನಿರೀಕ್ಷೆಗೂ ಮೀರಿದಂಥ ಲಾಭ ದೊರೆಯುವ ಸಾಧ‌್ಯತೆಗಳಿವೆ. ಕೃಷಿಕರು ಮನೆಗೆ ರಾಸುಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಬರಬೇಕಾದ ಹಣಕ್ಕೆ ಗಟ್ಟಿಯಾದ ಪ್ರಯತ್ನ ಮಾಡಿದರೆ ದೊರೆಯಲಿದೆ. ಊಟ- ತಿಂಡಿ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ಆಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅಲರ್ಜಿ ಇರುವಂಥವರ ಅಂಥದ್ದನ್ನು ಸೇವಿಸದೇ ಇರುವುದು ಉತ್ತಮ. ನೇರವಂತಿಕೆಯಿಂದ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿ, ನಿಮಗೆ ಇಷ್ಟವಿಲ್ಲದ ಸಂಗತಿ ಇದ್ದಲ್ಲಿ ಅದರಲ್ಲಿ ಭಾಗವಹಿಸಬೇಡಿ, ನಿಮ್ಮ ಅಭಿಪ್ರಾಯವನ್ನು ಸಹ ಹೇಳಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಬಿಡುವಿಲ್ಲದಷ್ಟು ಕೆಲಸಗಳು ನಿಮ್ಮ ಮೈ ಮೇಲೆ ಬರಲಿವೆ. ನೀವು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದಿದ್ದ ವಸ್ತುಗಳನ್ನು ಈ ದಿನ ಕೊಳ್ಳುವಂಥ ಸಾಧ್ಯತೆಗಳಿವೆ. ಪ್ರಭಾವಿಗಳ ಪರಿಚಯ ಆಗಲಿದೆ. ಈ ಹಿಂದೆ ನೀವು ಕಷ್ಟಪಟ್ಟು ಬೆಳೆಸಿಕೊಂಡಿದ್ದ ಸಾಮರ್ಥ್ಯ, ಪರಿಚಯ ಈಗ ನಿಮಗೆ ಉಪಯೋಗಕ್ಕೆ ಆಗಲಿದೆ. ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡಲಿಕ್ಕೆ ಆಗದೆ ಗ್ಯಾಸ್ಟ್ರಿಕ್ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಒಂದೆರಡು ದಿನದಲ್ಲಿ ಮುಗಿದುಹೋಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಮೇಲ್ನೋಟಕ್ಕೆ ಕಾಣುವಂಥ ಸನ್ನಿವೇಶವನ್ನು ನೆಚ್ಚಿಕೊಂಡು ಈ ದಿನ ಏನನ್ನೂ ಒಪ್ಪಿಕೊಳ್ಳಬೇಡಿ. ಸಂಕೋಚದಿಂದ ಒಂದು ವೇಳೆ ಒಪ್ಪಿಕೊಂಡಲ್ಲಿ ಹಣ- ಸಮಯ ವ್ಯರ್ಥ ಆಗಲಿದೆ. ಈ ಹಿಂದೆ ನೀವು ನಿರ್ಧಾರ ಮಾಡಿದಂಥ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ಸು ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಆದ್ದರಿಂದ ನಿಮ್ಮ ಅನುಕೂಲ- ಅಗತ್ಯವನ್ನು ಗಮನಿಸಿ, ಯಾವುದನ್ನೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಆಯಾ ದಿನದ ಆದಾಯ ಆ ದಿನಕ್ಕೆ ಎಂಬಂತೆ ಬದುಕುತ್ತಿರುವವರು ಹಣದ ಮೂಲ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತೀರಿ. ವಿವಾಹ ವಯಸ್ಕ ಮಕ್ಕಳಿಗಾಗಿ ಮದುವೆಗೆ ಪ್ರಯತ್ನಿಸುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ದೊರೆಯುವ ಸಾಧ್ಯತೆ ಇದೆ. ಮನೆಯಲ್ಲಿ ದೇವತಾರಾಧನೆಗಳನ್ನು ಮಾಡುವುದಕ್ಕೆ ಕುಟುಂಬದ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ವಾಹನಗಳ ಖರೀದಿಗಾಗಿ ಪ್ರಯತ್ನಿಸಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಫೈನಾನ್ಷಿಯಲ್ ಅಡ್ವೈಸರ್ ಗಳಿಗೆ  ಆದಾಯ ಮೂಲಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣದ ವಿಚಾರವು ಆದ್ಯತೆ ಪಡೆಯಲಿದೆ. ನಿಮ್ಮಿಂದ ಸಾಧ್ಯವಾದಲ್ಲಿ ಈ ದಿನ ಲಕ್ಷ್ಮೀ ಹಯಗ್ರೀವ ದೇವರ ಆರಾಧನೆಯನ್ನು ಮಾಡಿ. ರಾಜಕಾರಣದಲ್ಲಿ ಇರುವವರಿಗೆ ಕಠಿಣವಾದ ಹೊಣೆಯೊಂದನ್ನು ವಹಿಸುವ ಸಾಧ್ಯತೆ ಇದೆ. ಹೋಟೆಲ್ ಉಸ್ಯಮಿಗಳು ವಿಸ್ತರಣೆಗಾಗಿ ಹೊಸ ಹೂಡಿಕೆ ಮಾಡುವ ಕುರಿತು ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸೈಟು ಖರೀದಿ ಅಥವಾ ಮಾರಾಟ ವಿಚಾರದಲ್ಲಿ ಈ ವರೆಗೆ ಏನಾದರೂ ಗೊಂದಲ ಇದ್ದಲ್ಲಿ ಅದು ನಿವಾರಣೆ ಆಗಲಿದೆ. ಸ್ವಂತ ವ್ಯವಹಾರ- ವ್ಯಾಪಾರ ಮಾಡುತ್ತಿರುವವರು ಗೋಡೌನ್ ನಿರ್ಮಾಣಕ್ಕೆ ಹಣ ವೆಚ್ಚ ಮಾಡಬಹುದು. ಅಥವಾ ಈಗಿರುವುದಕ್ಕಿಂತ ದೊಡ್ಡದನ್ನು ಬಾಡಿಗೆಗೆ ತೆಗೆದುಕೊಳ್ಳಲಿಕ್ಕೆ ಮನಸ್ಸು ಮಾಡಲಿದ್ದೀರಿ. ಹೂವು ಅಥವಾ ಹಣ್ಣು ವ್ಯಾಪಾರಿಗಳಿಗೆ ಲಾಭದ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಸಣ್ಣ ಮಟ್ಟದಲ್ಲಿಯಾದರೂ ಉಳಿತಾಯ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದಲ್ಲಿ ಈ ದಿನ ಬಹು ಸಮಯ ಹೋಗಲಿದೆ. ಮುಖ್ಯ ದಾಖಲೆ- ಪತ್ರಗಳ ಸಹಿತ ತೆರಳಿ, ನಿಮ್ಮ ವ್ಯವಹಾರವನ್ನು ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ದೈವಾನುಗ್ರಹ ನಿಮ್ಮ ಮೇಲೆ ಇರಲಿದೆ. ಆದ್ದರಿಂದ ನಿಮಗೆ ಸತ್ಯ ಎಂದು ಗೊತ್ತಿದ್ದು, ಅನುಭವಿಗಳು- ಪರಿಣತರು ಖಾತ್ರಿ ಮಾಡಿದ ಸಂಗತಿಗಳ ಬಗ್ಗೆ ನಿಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಡಿ. ನಾಲಗೆ ಮೇಲೆ, ಅಂದರೆ ಊಟ- ತಿಂಡಿ ವಿಚಾರದಲ್ಲಿ ನಿಯಂತ್ರಣ ಇರಿಸಿಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಪೊಲೀಸ್ ಠಾಣೆ ಕೆಲಸಗಳು, ಕೋರ್ಟ್- ಕಚೇರಿ ವ್ಯವಹಾರಗಳು ಇದ್ದಲ್ಲಿ ಸರಾಗವಾಗಿ ನಡೆಯಲಿದೆ. ನಿಮ್ಮ ಸುತ್ತ- ಮುತ್ತ ಆಗುತ್ತಿರುವ ಬೆಳವಣಿಗೆಗಳ ಮೇಲೆ ಕಣ್ಣು ತೆರೆದಿಟ್ಟಿರಿ. ಭವಿಷ್ಯದಲ್ಲಿ ನಡೆಯಲಿರುವ ಬೆಳವಣಿಗೆಗಳ ಬಗ್ಗೆ ಸೂಚನೆ ದೊರೆಯಲಿದೆ. ಉಳಿತಾಯ ಮಾಡಿದ್ದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಿಂತೆಗೆಯಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಮೇಲಧಿಕಾರಿಗಳಿಂದ ಮಾನಸಿಕ ಕಿರುಕುಳ ಅನುಭವಕ್ಕೆ ಬರಲಿದೆ.

ಲೇಖನ- ಎನ್‌.ಕೆ.ಸ್ವಾತಿ