Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

2023 ಏಪ್ರಿಲ್​ 1 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: ndtv.in
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 01, 2023 | 5:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 1 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತಿ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ : ಧೃತಿ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 09:33 ರಿಂದ 11:05ರ ವರೆಗೆ, ಯಮಘಂಡ ಕಾಲ 02:08 ರಿಂದ 03:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:29ರಿಂದ 08 :01ರ ವರೆಗೆ.

ಮೇಷ: ಇಂದು ನಿಮ್ಮ ವ್ಯಾಪಾರ, ವಹಿವಾಟುಗಳು ಸಮಾಧಾನವನ್ನು ತರಬಹುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ. ಮನೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸುವಿರಿ. ನಿಮ್ಮನ್ನು ವಿರೋಧಿಸುವ ವ್ಯಕ್ತಿಗಳು ಹುಟ್ಟಿಕೊಳ್ಳಬಹುದು. ಆರ್ಥಿಕತೆಯ ಸುಧಾರಣೆಗೆ ನಿಮ್ಮದೇ ಯೋಜನೆಗಳನ್ನು ಹಾಕಿಕೊಳ್ಳುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ನೆಮ್ಮದಿಯ ಕೊರತೆ ಕಾಣಿಸಬಹುದು. ಬಂಧುಗಳ ಜೊತೆ ದುಃಖವನ್ನು ಹಂಚಿಕೊಳ್ಳುವಿರಿ.

ವೃಷಭ: ನೀವು ಮಾಡುವ ವೃತ್ತಿಯು ನಿಮಗೆ ಯಶಸ್ಸನ್ನು ಕೊಡಬಹುದು. ಅನಿರೀಕ್ಷಿತ ತಿರುವುಗಳು ಗೊಂದಲವನ್ನು ಉಂಟುಮಾಡೀತು. ನಿಮ್ಮ ಗೆಳೆತನವು ಖುಷಿ ಕೊಡುವುದು‌. ಅತಿಯಾದ ಆಲೋಚನೆಗಳು ಮಾನಸಿಕ ನೆಮ್ಮದಿಯನ್ನು ದೂರಮಾಡಲಿವೆ. ಅತಿಯಾದ ಸಲುಗೆ ನಿಮಗೆ ಅಸಹ್ಯವಾದೀತು.‌ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವ ಆಲೋಚನೆಯನ್ನು ಮಾಡುವಿರಿ. ಆರ್ಥಿಕವಾಗಿ ಸ್ವಲ್ಪ ಗಟ್ಟಿಯಾಗಬಹುದಾಗಿದೆ. ಕೃಷಿಯ ಕುರಿತು ಆಸಕ್ತಿ ಬರಲಿದೆ.

ಮಿಥುನ: ನಿಮ್ಮ ದಾಂಪತ್ಯದಲ್ಲಿ ಸುಖವಿರಲಿದೆ. ಮಕ್ಕಳ ಜೊತೆ ಪತಿ ಪತ್ನಿಯರಿಬ್ಬರೂ ಕಾಲವನ್ನು ಕಳೆಯುವಿರಿ. ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಕಾರಾತ್ಮಕ ಭಾವನೆಗಳಿಗೆ ಅವಕಾಶವನ್ನು ಕೊಡಬೇಡಿ. ನಿಮ್ಮ ಶತ್ರುಗಳನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ವ್ಯಕ್ತಿತ್ವದ ಪರೀಕ್ಷೆ ಆಗಲಿದೆ. ಸಜ್ಜನರ ಸಹವಾಸವು ನಿಮಗೆ ಸಿಗಬಹುದು. ಉತ್ತಮ ಮಾರ್ಗದರ್ಶನವನ್ನು ಪಡೆಯುವಿರಿ. ಸ್ವತಂತ್ರವಾಗಿ ಆಲೋಚನೆಗಳನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿ ತೃಪ್ತಿ ಇರಲಿದೆ.

ಕಟಕ: ಇಂದು ನೀವು ಬಹಳ ಚಾತುರ್ಯದಿಂದ ಕೆಲಸವನ್ನು ಮಾಡುವಿರಿ. ಆರೋಗ್ಯದ ವಿಚಾರದಲ್ಲಿ ಆತುರರಾಗುವುದು ಬೇಡ. ದುಪ್ಪಟ್ಟು ವ್ಯಯಿಸುವ ಸನ್ನಿವೇಶಗಳು ಬರಬಹುದು. ಉದ್ವೇಗದಿಂದ ಕೆಲವೊಂದು ಸಮಸ್ಯೆಗಳನ್ನು ತಂದುಕೊಳ್ಳುವಿರಿ. ನ್ಯಾಯಾಲಯದಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ‌. ಸಂಬಂಧಗಳ ವಿಚಾರದಲ್ಲಿ ನೀವು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ಇಷ್ಟ ಪಟ್ಟು ಮಾಡುವ ಕೆಲಸವು ಸಂತೋಷವನ್ನು ಕೊಡಲಿದೆ. ಸಮಯವಿದೆ ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ.