Kannada News Horoscope daily horoscope based on numerology predictions of June 20 according to number of birth dates as per numerology in kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 20ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 20ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 20ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮೈಗ್ರೇನ್ ಅಥವಾ ಹಲ್ಲುನೋವು ಈಗಾಗಲೇ ಕಾಡುತ್ತಿದ್ದಲ್ಲಿ ಅಥವಾ ಈ ಹಿಂದೆ ಕಾಡುತ್ತಿದ್ದಲ್ಲಿ ಉಲ್ಬಣ ಆಗುವಂಥ ಸಾಧ್ಯತೆಗಳಿವೆ. ಇತರರ ಸಲಹೆಗಳನ್ನು ಪಾಲಿಸುವ ಮುನ್ನ ಪರಿಣಾಮಗಳ ಬಗ್ಗೆ ಆಲೋಚಿಸಿ. ಇನ್ನು ವೃತ್ತಿಪರರು, ಹವ್ಯಾಸಿ ಫೋಟೋಗ್ರಾಫರ್ ಗಳಿಗೆ ಉತ್ತಮ ಸಂಸ್ಥೆಗಳಿಂದ ಆಫರ್ ಗಳು ಹುಡುಕಿಕೊಂಡು ಬರಲಿವೆ. ಮಹಿಳೆಯರು ಗರ್ಭ ದರಿಸಿದ್ದಲ್ಲಿ ಔಷಧ ಬದಲಾವಣೆ ಮಾಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ.
ಹೊಸ ಸೈಟು ಅಥವಾ ಮನೆ ಖರೀದಿ ಬಗ್ಗೆ ಕುಟುಂಬದಲ್ಲಿ ಚರ್ಚೆ ಆಗಲಿದೆ. ಮನೆ ದೇವರ ಸ್ಮರಣೆ ಮಾಡಿದಲ್ಲಿ ನಿಮ್ಮ ನಿರ್ಧಾರಗಳಲ್ಲಿ ಗೊಂದಲಗಳು ಏರ್ಪಡುವಂತಿದ್ದಲ್ಲಿ ಪರಿಹಾರ ಸಿಗಲಿದೆ. ಪುಷ್ಕಳವಾದ ಊಟ- ತಿಂಡಿ ದೊರೆಯುವಂಥ ಕಾರ್ಯಕ್ರಮಗಳಲ್ಲಿ ಭಾಗೀ ಆಗಲಿದ್ದೀರಿ. ವಾಹನಗಳನ್ನು ಖರೀದಿ ಮಾಡುವಂತೆ ಆಪ್ತರು- ಸ್ನೇಹಿತರಿಂದ ಸಲಹೆಗಳು ಬರಲಿವೆ. ಇದಕ್ಕಾಗಿ ಸಾಲ ಪಡೆಯುವ ಬಗ್ಗೆಯೂ ಆಲೋಚಿಸಲಿದ್ದೀರಿ.
ಕಾರು ಅಥವಾ ಸ್ಕೂಟರ್ ಖರೀದಿ ಮಾಡುವಂಥ ಯೋಗ ಇದೆ. ಇನ್ನು ಸ್ತ್ರೀಯರಾಗಿದ್ದಲ್ಲಿ ಪುರುಷರೆಡೆಗೆ ಹಾಗೂ ಪುರುಷರಾಗಿದ್ದಲ್ಲಿ ಸ್ತ್ರೀಯರ ಕಡೆಗೆ ಆಕರ್ಷಿತರಾಗುವಂಥ ದಿನ ಇದು. ಪರಿಚಯವನ್ನು ಸ್ನೇಹಕ್ಕೆ, ಅಲ್ಲಿಂದ ಪ್ರೇಮಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆಗಳು ಹೆಚ್ಚಿವೆ. ಸೆಮಿನಾರ್ ಗಳಲ್ಲಿ ಭಾಗೀ ಆಗುತ್ತಿದ್ದಲ್ಲಿ ಅಥವಾ ಯಾವುದಾದರೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗೀ ಆಗುತ್ತಿದ್ದಲ್ಲಿ ಈ ಸಾಧ್ಯತೆಗಳು ಜಾಸ್ತಿ ಇವೆ. ಲೇಖಕರು, ಮಾಧ್ಯಮಗಳಲ್ಲಿ ಇರುವವರು, ಮ್ಯಾಜಿಷಿಯನ್ ಗಳಿಗೆ ದೂರ ಪ್ರಯಾಣದ ಯೋಗ ಹೆಚ್ಚಿದೆ.
ಕಾನೂನು ವಿಚಾರಕ್ಕೆ ಸಂಬಂಧಿಸಿದ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ಕೆಲವು ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗಸ್ಥರು, ಅದರಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಮಶೀನ್ ಲರ್ನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ರಂಗಭೂಮಿ, ಸ್ಟ್ಯಾಂಡ್ ಅಪ್ ಕಾಮಿಡಿ, ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯಗಳು ಕಾಡಬಹುದು. ಥೈರಾಯ್ಡ್ ಸಮಸ್ಯೆ ಈಗಾಗಲೇ ಇದೆ ಎಂದಾದಲ್ಲಿ ಅದು ಉಲ್ಬಣಗೊಳ್ಳಬಹುದು. ಸೂಕ್ತ ವೈದ್ಯೋಪಚಾರಗಳನ್ನು ಮಾಡಿಕೊಳ್ಳುವ ಕಡೆಗೆ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ. ದೇಹವನ್ನು ತಂಪಾಗಿ ಇರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿ.
ಈ ದಿನ ಸೂರ್ಯದೇವರ ಆರಾಧನೆ ಮಾಡಿದರೆ ಉತ್ತಮ. ಈ ಹಿಂದೆ ನೀವು ನೆರವು ನೀಡಿದಂಥ ವ್ಯಕ್ತಿಯಿಂದ ನಿಮಗೆ ಅನುಕೂಲ ಒದಗಿ ಬರಲಿದೆ. ಅನಿರೀಕ್ಷಿತವಾಗಿ ಹಣ ಬರಬಹುದು. ಆಹಾರ- ನೀರಿನ ವಿಚಾರದಲ್ಲಿ ಮಾತ್ರ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ಮುಖ್ಯವಾದ ಕಾಗದ- ಪತ್ರಗಳನ್ನು ನೋಡಿಕೊಳ್ಳುವಂಥವರು ಎಚ್ಚರಿಕೆಯಿಂದ ಇರಬೇಕು. ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗುವಂಥ ವೃತ್ತಿಯಲ್ಲಿ ಇರುವವರು ಸಾಮಾನ್ಯಕ್ಕಿಂತ ಹೆಚ್ಚು ಲಕ್ಷ್ಯ ವಹಿಸಿ.
ನಿಮ್ಮ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಾಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಪ್ರತಿಷ್ಠಿತ ಸಂಸ್ಥೆಗಳ ಜತೆಗೆ ಒಪ್ಪಂದಗಳು ಏರ್ಪಡುವಂಥ ಸಾಧ್ಯತೆ ಇದೆ. ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಒತ್ತಡಗಳು ಕಂಡುಬರಲಿದೆ. ಗಡುವಿನೊಳಗೆ ಕೆಲಸ ಮುಗಿಸುವ ಕಡೆಗೆ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ. ಇತರರ ಮೇಲೆ ಸಂಪೂರ್ಣ ಅವಲಂಬನೆ ಒಳ್ಳೆಯದಲ್ಲ.
ನಾನು ಅನಿಸಿದ್ದನ್ನು ಹೇಳುತ್ತೇನೆ ಎಂದು ಈ ದಿನ ಆಲೋಚಿಸುವುದೇ ತಪ್ಪು. ಆದ್ದರಿಂದ ನೀವು ಹೇಳುವ ವಿಚಾರವನ್ನು ನಯವಾಗಿ ದಾಟಿಸುವುದಕ್ಕೆ ಪ್ರಯತ್ನಿಸಿ. ನಿಮ್ಮ ಧ್ವನಿ ಹಾಗೂ ವಿಚಾರ ಎರಡೂ ಒಂದೇ ರೀತಿಯಲ್ಲಿ ಕೇಳಿಸುವಂತೆ ನೋಡಿಕೊಳ್ಳಿ. ಇಲ್ಲದಿದ್ದಲ್ಲಿ ನಿಮ್ಮನ್ನು ಅಹಂಕಾರಿ ಎಂದು ಅಂದುಕೊಳ್ಳುವ ಸಾಧ್ಯತೆ ಇದೆ. ಹೆಣ್ಣುಮಕ್ಕಳು ಚಿನ್ನಾಭರಣ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ನೀವು ಅಂದುಕೊಳ್ಳದ ರೀತಿಯಲ್ಲಿ ಹಣಕಾಸಿನ ಹರಿವು ನಿಮ್ಮ ಪಾಲಿಗೆ ಇರಲಿದೆ.
ನಿಮಗೆ ಬೇಕೆಂತಲೇ ಕೆಲವರು ಸಿಟ್ಟು ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದೆನಿಸುತ್ತದೆ. ನಿಮ್ಮ ಸಾಮರ್ಥ್ಯ ಹಾಗೂ ಈ ಹಿಂದೆ ನೀವು ಮಾಡಿದ ಸಾಧನೆ ಏನು ಎಂಬ ಪ್ರಶ್ನೆಗಳನ್ನು ಎದುರಿಸಲಿದ್ದೀರಿ. ಯುವತಿಯರಿಗೆ ಇಷ್ಟವಿಲ್ಲದ ಸಂಬಂಧವೊಂದನ್ನು ಮದುವೆಗೆ ಒಪ್ಪಿಕೊಳ್ಳಬೇಕು ಎಂಬ ಒತ್ತಡ ಸೃಷ್ಟಿ ಆಗಲಿದೆ. ನಿಮ್ಮ ಪರವಾಗಿ ಮಾತನಾಡುವವರು ಯಾರು ಇರದೆ ಒಂದಿಷ್ಟು ಬೇಸರ ಆಗುವಂಥ ಸಾಧ್ಯತೆ ಇದೆ. ಶೈಕ್ಷಣಿಕ ವಿಚಾರದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ನಡೆಯಲಿವೆ.