AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಇಂದಿನ ರಾಶಿಭವಿಷ್ಯ, ನಿಮಗೆ ಏನೂ ಗೊತ್ತಾಗದೇ ಎಲ್ಲವೂ ನಡೆಯುತ್ತದೆ ಎಂಬ ಕೋಪ ಇರಬಹುದು

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದಿನ ರಾಶಿಭವಿಷ್ಯ, ನಿಮಗೆ ಏನೂ ಗೊತ್ತಾಗದೇ ಎಲ್ಲವೂ ನಡೆಯುತ್ತದೆ ಎಂಬ ಕೋಪ ಇರಬಹುದು
ಇಂದಿನ ರಾಶಿಭವಿಷ್ಯImage Credit source: istock
Rakesh Nayak Manchi
|

Updated on: Jun 21, 2023 | 12:15 AM

Share

ಗೆಳೆಯರೇ ನಮಸ್ತೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿಯುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪುಷ್ಯ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ.

ಮೇಷ: ಮಹಿಳೆಯರ ವಿರೋಧವನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಅನಿರೀಕ್ಷಿತ ಮಾತುಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಆಯಾಸದಿಂದ‌‌ ಇಂದು ಸುಖವಾದ ನಿದ್ರೆಯನ್ನು ಮಾಡುವಿರಿ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಹೊರಗಿನವರ ಜೊತೆ ಬೆರೆಯಲು ಇಷ್ಟಪಡುವಿದಲ್ಲ. ಮಕ್ಕಳಿಂದ ಉಂಟಾದ ಲಾಭವನ್ನು ನೀವು ಕೆಟ್ಟ ಕೆಲಸಗಳಿಗೆ ಬಳಸಬಹುದು. ಊಹೆಯಲ್ಲಿ ದಿನ ಕಳೆಯುವುದನ್ನು ಕಡುಮೆ ಮಾಡಿ. ನೆಮ್ಮದಿಗೆ ಬೇರೆ ದಾರಿಯನ್ನು ಕಂಡುಕೊಳ್ಳಲಿದ್ದೀರಿ. ಅತಿಥಿಗಳಿಗೆ ಯೋಗ್ಯ ಸತ್ಕಾರವನ್ನು ಮಾಡಲಿದ್ದೀರಿ. ಅಶುಭವಾದ ಸಂಗತಿಯನ್ನು ಇಂದು ತರಲು ಹೋಗಬೇಡಿ.

ವೃಷಭ: ಹಣವನ್ನು ನೀವು ಎಂದಿನಂತೆ ಖರ್ಚು ಮಾಡಬಾರದು. ನಿಮ್ಮ ಬೆಂಬಲಕ್ಕೆ ನಿಲ್ಲುವವರು ಯಾರು ಎಂಬ ಕುತೂಹಲವಿದ್ದರೂ ಸಣ್ಣ ಸುಳಿವು ಸಿಗಲಿದೆ. ನಿಮ್ಮ‌ ಮೇಲಿನ ಅಪವಾದವನ್ನು ನೀವು ಕಳೆದುಕೊಳ್ಳಲು ಹೆಚ್ಚು ಮಾತನಾಡುವಿರಿ. ಧಾರ್ಮಿಕ ನಾಯಕರ ಜೊತೆ ನೀವು ಮಾತನಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಉನ್ನತ ಸ್ಥಾನಕ್ಕೆ ಹೋಗಲು ಬೇಕಾದ ಅರ್ಹತೆ ಇದ್ದರೂ ನೀವು ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಸಂಗಾತಿಯ ಮನೋಭಾವವನ್ನು ತಿಳಿಯಲು ನೀವು ಕೆಲವು ತಂತ್ರವನ್ನು ಬಳಸುವಿರಿ. ಅಸಹಾಯಕತೆ ಎಂದು ಮನಸಿಗೆ ಅನ್ನಿಸಬಹುದು.

ಮಿಥುನ: ಮನೆಯವರ ಜೊತೆ ಭವಿಷ್ಯದ ಚಿಂತನೆಯನ್ನು ಮಾಡಬಹುದು. ಕೆಲವು ಕಾಲದ ಚಿಂತನೆಯು ಇಂದು ನಿಮ್ಮಿಂದ ದೂರವಾಗಬಹುದು. ರಾಜಕೀಯವಾಗಿ ನೀವು ಹೊಸ‌ದಾರಿಯನ್ನು ಪ್ರಸಿದ್ಧರಾಗಲು ಆಯ್ಕೆ ಮಾಡಿಕೊಳ್ಳಬಹುದು. ಸ್ನೇಹಿತರ ಜೊತೆಗಿನ ಓಡಾಟವು ಕೆಲವು ಅನುಮಾನವನ್ನು ಸೃಷ್ಟಿಸುವುದು. ನಿಮ್ಮ ಮಾತು ಜವಾಬ್ದಾರಿಯುತವಾದ ಸ್ಥಾನದ‌‌ ಮಾತಾಗಿರಲಿ. ಸಣ್ಣ ವಿಚಾರಗಳಿಗೆ ಕೋಪವು ಸಹಜವಾಗಿ ಬಂದರೂ ಅದನ್ನು ಹಿಡಿದಿಟ್ಟುಕೊಳ್ಳಬೇಕಾದೀತು. ಕಳೆದು ಹೋದಮೇಲೆ‌ ಅದನ್ನು ಚಿಂತಿಸಿ ಉಪಯೋಗವಿಲ್ಲ‌. ನಿಮಗೆ ಏನೂ ಗೊತ್ತಾಗದೇ ಎಲ್ಲವೂ ನಡೆಯುತ್ತದೆ ಎಂಬ ಕೋಪ ಇರಬಹುದು.

ಕರ್ಕಾಟಕ: ಅಧಿಕವಾದ ಸಂಪತ್ತನ್ನು ಗಳಿಸಬೇಕು ಎನ್ನುವ ಹಂಬಲವಿದ್ದರೂ ಅದನ್ನು ಪಡೆಯಲು ದಾರಿ ಸುಲಭವಿಲ್ಲ ಎಂದು ಅನ್ನಿಸಬಹುದು. ನಿಮ್ಮ ಮನಸ್ಸನ್ನು‌ ನಕಾರತ್ಮಕ ಚಿಂತನೆಯಿಂದ ಹೊರಗೆಳೆಯಲು ಬಹಳ ಕಷ್ಟವಾದೀತು. ಹಳೆಯ ಸ್ನೇಹಿತೆಯ ನೆನಪು ಮರುಕಳಿಸಬಹುದು. ಇಂದಿನ ಖರ್ಚು ನಿಮ್ಮ ಆದಾಯವನ್ನು ಹೆಚ್ಚು ಮಾಡಲು ಬೇಕಾದ ಫಲವನ್ನು ಕೊಟ್ಟೀತು. ಎಲ್ಲರ ಜೊತೆ ವಸ್ತುವನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನಿಮಗೆ ಬೇಕಾದ ವಸ್ತುವು ಸರಿಯಾದ ಸಮಯಕ್ಕೆ ಬಂದೊದಗದು. ತಾಳ್ಮೆಯನ್ನು ಕಳೆದುಕೊಳ್ಳಬಹುದು ಇಂದು.

-ಲೋಹಿತಶರ್ಮಾ ಇಡುವಾಣಿ

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್