Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 3ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 3ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 3ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಆಗಬೇಕಾದ ಕೆಲಸಗಳು ಕೊನೆ ಕ್ಷಣದ ತನಕ ಆತಂಕ ಸೃಷ್ಟಿಸಿ, ಮುಕ್ತಾಯ ಕಾಣುತ್ತವೆ. ಆದರೆ ಯಾವುದೇ ಕಾರಣಕ್ಕೂ ಉತ್ಸಾಹವನ್ನು ಕಳೆದುಕೊಳ್ಳಬೇಡಿ. ಎದುರಿಗಿರುವ ವ್ಯಕ್ತಿಯು ಆಡುವ ಮಾತು, ಬಳಸುವ ಪದಗಳ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಸಂವಹನ ಮಾಡುವಾಗ ಪೂರಕ ಪುರಾವೆಗಳು ಇಲ್ಲದಂತೆ ಯಾವುದೇ ಕೆಲಸವನ್ನು ಬರೀ ಮಾತಿನಲ್ಲಿ ಒಪ್ಪಿಕೊಳ್ಳದಿರಿ. ಸಾಲ ಬಾಧೆಯಿರುವವರಿಗೆ ಅದರಿಂದ ನಿರಾಳ ಆಗುವಂಥ ಮಾರ್ಗಗಳು ಗೋಚರ ಆಗುತ್ತವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಧೈರ್ಯ, ನಂಬಿಕೆ ಹಾಗೂ ಭರವಸೆ ಈ ದಿನ ಕೈ ಹಿಡಿಯಲಿವೆ. ಅಚಾನಕ್ ಆಗಿ ನಾನಾ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳಲಿವೆ. ಯಾರು ಇಷ್ಟು ಸಮಯ ನಿಮ್ಮ ಬಗ್ಗೆ ತಾತ್ಸಾರದಿಂದ ನೋಡುತ್ತಿದ್ದರೋ ಅವರಿಗೆ ಬೆರಗು ಮೂಡುವಂತೆ ಬೆಳವಣಿಗೆಯನ್ನು ಕಾಣಲಿದ್ದೀರಿ. ಕಾರು ಅಥವಾ ಸ್ಕೂಟರ್- ಬೈಕ್ ಖರೀದಿಗಾಗಿ ಮುಂಗಡ ಪಾವತಿಸುವ ಸಾಧ್ಯತೆ ಇದೆ. ಕೆಲವರು ಸೆಕೆಂಡ್ ಹ್ಯಾಂಡ್ ವಾಹನವನ್ನಾದರೂ ಖರೀದಿಸುವ ಅವಕಾಶಗಳಿವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಪ್ರಮುಖವಾದ ಬೆಳವಣಿಗೆ ಕಂಡುಬರಲಿದೆ. ಸಂಬಂಧಿಕರು, ಸ್ನೇಹಿತರು ನಿಮಗೆ ನೆರವು ನೀಡುವ ಸಾಧ್ಯತೆಗಳಿವೆ. ಇತರರು ನಿಮ್ಮ ಬಳಿ ಗುಟ್ಟು ಎಂದು ಹೇಳಿದ್ದರ ರಹಸ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಚಿನ್ನಾಭರಣಗಳ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವಂಥ ಸನ್ನಿವೇಶ ಎದುರಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಊರವರ ಮದುವೆಗೆಲ್ಲ ನನ್ನದೇ ಪೌರೋಹಿತ್ಯ ಎನ್ನುವ ಹಾಗೆ ನಿಮ್ಮ ಹೆಚ್ಚುಗಾರಿಕೆಯನ್ನು ಹೇಳಿಕೊಂಡು, ನಯಾಪೈಸೆ ಲಾಭ- ವಯಕ್ತಿಕವಾಗಿ ಉಪಯೋಗವೇ ಆಗದ ಕೆಲಸಗಳನ್ನು ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇಂದಿನ ಕೆಲಸದ ಒತ್ತಡದ ಮಧ್ಯೆ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಸಹ ಕಷ್ಟ ಆಗಲಿದೆ. ದೈವಾನುಗ್ರಹದಿಂದ ನೀವು ಈಗಾಗಲೇ ಕೊಟ್ಟಿರುವ ಹಣವೊಂದು ವಾಪಸ್ ಬರುವುದಕ್ಕೆ ಸಾಧ್ಯತೆ ಇದ್ದು, ಅದಕ್ಕಾಗಿ ನೀವು ಬಹಳ ಗಟ್ಟಿಯಾದ ಪ್ರಯತ್ನವನ್ನೇ ಮಾಡಬೇಕು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇತರರ ಬಗ್ಗೆ ನೀವು ತೋರಿಸುವ ಅಂತಃಕರಣ, ಮಮಕಾರ, ಪ್ರೀತಿ ಇಂಥವು ಹಲವು ಪಟ್ಟುಗಳು ಅಧಿಕವಾಗಿ ನಿಮ್ಮ ಬಳಿಗೆ ಹಿಂತಿರುಗಲಿವೆ. ಸ್ನೇಹಿತರು ಯಾವುದಾದರೂ ಉದ್ಯೋಗ, ಪ್ರಾಜೆಕ್ಟ್ ಅಥವಾ ಬೇರೇನೇ ಹೊಸ ವಿಚಾರಗಳನ್ನು ಹೇಳಿದರೂ ಆ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ. ಇನ್ನು ವಿದೇಶಕ್ಕೆ ತೆರಳಬೇಕು ಎಂದಿರುವವರಿಗೆ ಸ್ವಲ್ಪ ಮಟ್ಟಿಗೆ ನಿರಾಸೆ ಕಾಡುವಂಥ ಸಾಧ್ಯತೆ ಇದೆ. ಇತರರ ಕಾರಣಕ್ಕೆ ಕುಟುಂಬ ಸದಸ್ಯರ ಜತೆಗೆ ಜಗಳವೋ ಮಾತು ಬಿಡುವುದೋ ಇಂಥದ್ದನ್ನು ಮಾಡಬೇಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮವಾದ ಬೆಳವಣಿಗೆಗಳು ಗಮನಕ್ಕೆ ಬರಲಿವೆ. ಮನೆಯ ಹಿರಿಯರ ಸಲಹೆ ಅಥವಾ ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ. ಬ್ಯಾಂಕ್ ವ್ಯವಹಾರಗಳನ್ನು ಮಾಡುವಾಗ ಕಾಗದ- ಪತ್ರ ಹಾಗೂ ಸಹಿಗಳು ಸರಿಯಾಗಿವೆಯೇ ಎಂದು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿ. ಈ ದಿನ ನಿಮ್ಮ ಆತ್ಮಸ್ಥೈರ್ಯ ದೊಡ್ಡ ಮಟ್ಟದಲ್ಲಿ ಕೈ ಹಿಡಿಯಲಿದೆ. ನಿಮ್ಮದು ತಪ್ಪಿಲ್ಲ ಎಂದಾದಲ್ಲಿ ಯಾವುದೇ ವಿಚಾರವನ್ನು ಮಂಡಿಸುವುದಕ್ಕೆ ಹಿಂದಕ್ಕೆ ಹೆಜ್ಜೆ ಇಡಬೇಡಿ. ಹೊಸ ಕಲಿಕೆಗೆ ದಾರಿ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಈ ಹಿಂದೆ ಯಾವಾಗಲೋ ಮಾಡಿ, ನೀವೇ ಮರೆತುಹೋಗಿದ್ದ ಕೆಲಸದ ಫಲಿತಾಂಶ ಎಂಬಂತೆ ಮೆಚ್ಚುಗೆಯ ಮಾತುಗಳು ಹಾಗೂ ಅವಕಾಶಗಳು ದೊರೆಯಲಿಕ್ಕೆ ದಾರಿ ಆಗಲಿದೆ. ಸ್ವಂತ ಮನೆ ಕಟ್ಟುತ್ತಿರುವವರಿಗೆ ಹಣಕಾಸಿನ ಸಮಸ್ಯೆಗಳು ಕಾಣಿಸಿಕೊಂಡಿದ್ದಲ್ಲಿ ಅದು ನಿವಾರಣೆ ಆಗಲಿದೆ. ಇತರರ ಕಷ್ಟಗಳಿಗೆ ಸ್ಪಂದಿಸಿ, ನೆರವಿನ ಹಸ್ತವನ್ನು ಚಾಚಲಿದ್ದೀರಿ. ರುಚಿಯೇ ಇರಬಹುದು, ಮಾತೇ ಇರಬಹುದು; ನಾಲಗೆಯ ಮೇಲೆ ಹತೋಟಿ ಸಾಧಿಸುವುದು ಮುಖ್ಯ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ಸ್ವಂತ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಿದ್ದೀರಿ. ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದ ನೀವು ಇದೀಗ ನಾಲ್ಕೂ ಕಡೆಯ ಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ. ವಿದ್ಯಾರ್ಥಿಗಳ ಮೇಲೆ ಅಪವಾದ ಬರುವ ಸಾಧ್ಯತೆ ಇದೆ, ಎಚ್ಚರಿಕೆ ಬೇಕು. ಮಹಿಳೆಯರಿಗೆ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಯಾರದೋ ಸಮಸ್ಯೆಗೆ ನೀವೇ ತಲೆ ಕೊಡುವಂಥ ಸ್ಥಿತಿ ಉದ್ಭವಿಸಲಿದೆ. ಸುಖಾಸುಮ್ಮನೆ ಆಕ್ಷೇಪಗಳು, ನಿಮ್ಮ ಬಗ್ಗೆ ಸಲ್ಲದ ಸಂದೇಹದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಿಡುವೇ ದೊರೆಯದಷ್ಟು ಕೆಲಸಗಳು ಮೈ ಮೇಲೆ ಬೀಳಲಿವೆ. ಕಣ್ಣಿನ ಪೊರೆ, ಕೆಂಪಾಗುವುದು, ನೀರು ಸೋರುವುದು ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಒಂದಲ್ಲ ಒಂದು ಸಮಸ್ಯೆಯನ್ನು ನೀವು ಎದುರಿಸಲಿದ್ದೀರಿ. ದೂರದ ಸಂಬಂಧಿಕರು ಕಾರ್ಯ ನಿಮಿತ್ತ ನಿಮ್ಮನ್ನು ಭೇಟಿ ಆಗುವ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ
Published On - 12:18 am, Sat, 3 June 23