Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 19ರ ದಿನಭವಿಷ್ಯ 

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2023 | 1:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 19ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 19ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 19ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಂಬಂಧಿಕರು ಸ್ನೇಹಿತರ ಮನೆಯ ಶುಭ ಸಮಾರಂಭಗಳಲ್ಲಿ ಭಾಗಿ ಆಗುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಕೆಲವರು ಹೊಸ ಕಾರು ಅಥವಾ ದ್ವಿಚಕ್ರ ವಾಹನ ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ಪಾವತಿಸುವ ಸಾಧ್ಯತೆ ಇದೆ. ನಿಮಗೆ ಒಂದು ವೇಳೆ ಹಣಕಾಸಿನ ಕೊರತೆ ಎದುರಾದಲ್ಲಿ ಸ್ನೇಹಿತರು ಸಹಾಯ ಮಾಡಲಿದ್ದಾರೆ. ನಿಮಗೆ ಹಾಗೂ ಕುಟುಂಬ ಸದಸ್ಯರ ಹೊಸ ಬಟ್ಟೆ ಖರೀದಿಗಾಗಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ನೇರಾ ನೇರ ಮಾತುಗಳಿಂದ ವ್ಯವಹಾರಗಳಲ್ಲಿ ಲಾಭವಾಗಲಿದೆ. ಇನ್ನು ಸ್ನೇಹಿತರ ಜೊತೆಗೂಡಿ ಮನರಂಜನಾ ಕಾರ್ಯಕ್ರಮಗಳಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮಗೆ ಸರಿ ಎಂದು ಎನಿಸಿದ ಕೆಲಸಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ಅದೃಷ್ಟ ನಿಮ್ಮ ಪಾಲಿಗೆ ಇರಲಿದೆ. ಅದು ನಿಮಗೆ ಆಗುವಂತಹ ನಷ್ಟವನ್ನು ತಪ್ಪಿಸಲೂ ಬಹುದು ಅಥವಾ ಆದಾಯವನ್ನು ಜಾಸ್ತಿ ಮಾಡಲೂ ಬಹುದು. ಯಾರನ್ನಾದರೂ ಭೇಟಿ ಮಾಡುವಂತಹ ಯೋಜನೆ ಇದ್ದಲ್ಲಿ ಸಮಯಕ್ಕೆ ಸರಿಯಾಗಿ ಇರುವುದಕ್ಕೆ ಪ್ರಯತ್ನಿಸಿ. ನಿಮ್ಮಲ್ಲಿ ಕೆಲವರು ಈ ದಿನ ಮನೆಗೆ ದೊಡ್ಡ ಅಳತೆಯ ಟಿವಿ, ಪ್ರೊಜೆಕ್ಟರ್ ಅಥವಾ ಹೋಮ್ ಥಿಯೇಟರ್ ಸಿಸ್ಟಮ್ ತರುವಂತಹ ಸಾಧ್ಯತೆ ಇದೆ. ಯಾವ ಕೆಲಸ ಅಥವಾ ವಿಚಾರ ಸಲೀಸಾಗಿ ಆಗಬಹುದು ಎಂದು ನೀವು ಭಾವಿಸಿರುತ್ತೀರೋ ಆ ವಿಚಾರಕ್ಕೆ ವಿಪರೀತ ಮಾತು, ವಾದ- ವಾಗ್ವಾದಗಳು ನಡೆಯಲಿವೆ. ಈ ದಿನ ಸಾಕುಪ್ರಾಣಿಗಳಿಂದ ಸ್ವಲ್ಪಮಟ್ಟಿಗೆ ದೂರ ಇರುವುದು ಒಳ್ಳೆಯದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹೆಚ್ಚುತ್ತಿರುವ ಖರ್ಚು ಹಾಗೂ ವೆಚ್ಚ ನಿಮ್ಮನ್ನು ಆತಂಕಕ್ಕೆ ಗುರಿ ಮಾಡಲಿದೆ. ನಿಮಗೆ ಅರಿವಿಲ್ಲದಂತೆಯೂ ಅಥವಾ ಯಾವುದೋ ಉತ್ಸಾಹದಲ್ಲಿ ಒಪ್ಪಿಕೊಂಡ ಕೆಲಸವು ಬಹಳ ಕಷ್ಟ ಎಂಬುದು ಆ ನಂತರ ಅರಿವಿಗೆ ಬರಲಿದೆ. ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಮಾಡುತ್ತಿರುವಂತಹವರಿಗೆ ಆದಾಯದಲ್ಲಿನ ಇಳಿಕೆ ಆತಂಕಕ್ಕೆ ಕಾರಣ ಆಗಲಿದೆ. ಹಣಕಾಸಿನ ವಿಚಾರಕ್ಕೆ ನಿಮಗೆ ನೆರವು ನೀಡುವುದಾಗಿ ಹೇಳಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಅರ್ಧದಷ್ಟು ಮುಗಿಸಿ ಆಗಿದೆ ಎಂಬಂತಹ ಕೆಲಸಗಳನ್ನು ಮತ್ತೆ ಮೊದಲಿಂದ ಆರಂಭಿಸಬೇಕಾದ ಸನ್ನಿವೇಶಗಳು ಎದುರಾಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ನೀವು ರುಚಿಕಟ್ಟಾದ ಊಟ ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ಮನೆ ಜಮೀನು ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಕೆಲವು ಕೆಲಸಗಳು ನೀವು ಅಂದುಕೊಂಡಿದ್ದಕ್ಕಿಂತ ಬಹಳ ವೇಗವಾಗಿ ನಡೆದು ಹೋಗಲಿವೆ. ನಿಮಗೆ ಬಹಳ ಮುಖ್ಯ ಎನಿಸಿದ ಕೆಲಸಗಳನ್ನು ಸಾಧ್ಯವಾದಷ್ಟೂ ನೀವೇ ಮಾಡುವುದಕ್ಕೆ ಪ್ರಯತ್ನಿಸಿ. ನಿಮ್ಮಲ್ಲಿ ಕೆಲವರಿಗೆ ಈ ದಿನ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡುವಂತಹ ಯೋಗ ಇದೆ. ಇನ್ನೂ ಪೂರ್ತಿಯಾಗದ ಅಥವಾ ರಹಸ್ಯಗಳನ್ನು ಒಳಗೊಂಡ ವಿಚಾರಗಳನ್ನು ಯಾರ ಜೊತೆಗೂ ಈ ದಿನ ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ಯಾವುದೇ ಕೆಲಸವನ್ನು ಸರಳವಾಗಿ ತೆಗೆದುಕೊಳ್ಳಬೇಡಿ. ನಿಮ್ಮಲ್ಲಿ ಯಾರು ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿ ಇರುವಿರೋ ಅಂತಹವರಿಗೆ ಅಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಬಹಳ ಮುಖ್ಯವಾದ ಕಾಗದಪತ್ರಗಳು ಅಥವಾ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯ ದಿನಗಳಿಗಿಂತ ಇರಬೇಕಾದ ಎಚ್ಚರಿಕೆಗಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ. ನೀವು ಬಳಸುವಂತಹ ಮೊಬೈಲ್ ಫೋನ್, ಗ್ಯಾಜೆಟ್ ಗಳು ಅಥವಾ ಲ್ಯಾಪ್ ಟಾಪ್ ಅನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಈಗಾಗಲೇ ಮುಗಿದು ಹೋಗಿದೆ ಅದರ ಪ್ರಾಮುಖ್ಯ ಏನೂ ಇಲ್ಲ ಎಂದು ನೀವು ಅಂದುಕೊಂಡಿದ್ದ ವಿಚಾರಗಳಿಗೆ ವಿಪರೀತ ಆದ್ಯತೆ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರು ಅಥವಾ ಸಂಬಂಧಿಕರ ಮೂಲಕವಾಗಿ ಒಳ್ಳೆಯ ರೆಫರೆನ್ಸ್ ದೊರೆಯಲಿದೆ. ತುಂಬಾ ಕಡಿಮೆ ಮೊತ್ತಕ್ಕೆ ನೀವು ನಿರೀಕ್ಷೆ ಕೂಡಾ ಮಾಡದಂತಹ ಒಳ್ಳೆ ಗುಣಮಟ್ಟದ ವಸ್ತುಗಳು ಈ ದಿನ ನಿಮ್ಮ ಪಾಲಿಗೆ ದೊರೆಯಲಿವೆ. ಯಾರು ಆಸ್ತಿ ಮಾರಾಟದಲ್ಲಿ ತೊಡಗಿರುವಿರೋ ಅಂತಹವರಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ನಿಮ್ಮ ಮನೆಯ ಹತ್ತಿರ ಇದ್ದಲ್ಲಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನವನ್ನು ಪಡೆದುಕೊಳ್ಳಿ, ಇದರಿಂದಾಗಿ ನಿಮ್ಮ ಹಲವು ಸಮಸ್ಯೆಗಳು ನಿವಾರಣೆ ಆಗಲಿವೆ. ಯಾರು ರಾಜಕಾರಣದಲ್ಲಿ ಇರುತ್ತೀರೋ ಅಂತಹವರಿಗೆ ಬಹಳ ಸವಳದಂತಹ ಜವಾಬ್ದಾರಿಗಳು ಹೆಗಲೇರಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ದೇವತಾ ಆರಾಧನೆ, ತೀರ್ಥಕ್ಷೇತ್ರಗಳಿಗೆ ಪ್ರವಾಸ ತೆರಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ನೀವು ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರ ಅಥವಾ ತೀರ್ಮಾನಗಳನ್ನು ಬದಲಿಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ. ಹಣಕಾಸಿನ ವಿಚಾರಕ್ಕೆ ಇತರರನ್ನು ಅವಲಂಬಿಸುವುದು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಲಿದೆ. ಈ ದಿನ ಯಾವುದಕ್ಕೂ ಇತರರ ವೈಯಕ್ತಿಕ ವಿಚಾರಗಳನ್ನು ಚರ್ಚಿಸುವುದಕ್ಕೆ ಹೋಗಬೇಡಿ. ನಿಮ್ಮ ಎದುರು ನಗುತ್ತಾ ಮಾತನಾಡಿ, ನಿಮ್ಮ ಪರವಾಗಿ ಇರುವಂತೆ ಕಾಣುವವರೇ ಸಮಸ್ಯೆಗಳನ್ನು ತಂದಿಡಲಿದ್ದಾರೆ. ಯಾರು ತಮ್ಮ ಮನೆಯಿಂದ ದೂರ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವಿರೋ ಅಂತಹವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರಿಕೆಯಿಂದ ಇರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾವುದಾದರೂ ಕೆಲಸ ಅಥವಾ ವಿಷಯ ಅಥವಾ ಪ್ರಯತ್ನಗಳು ನಿಧಾನ ಆಗುತ್ತಿವೆ ಎಂದು ನಿಮಗೆ ಅನಿಸಿದರೆ ಅದು ಬೇಗ ಮುಗಿಯುವಂತೆ ಒತ್ತಡ ಹಾಕುವುದಕ್ಕೆ ಹೋಗಬೇಡಿ. ನಿಮ್ಮ ಸಾಮರ್ಥ್ಯದ ಬಗ್ಗೆ ಕೆಲವರು ಗೇಲಿ ಮಾಡುತ್ತಾ ಸಿಟ್ಟು ಬರಿಸುವುದಕ್ಕೆ ಪ್ರಯತ್ನಿಸಲಿದ್ದಾರೆ. ಅಂತಹ ಯಾವ ಮಾತುಗಳಿಗೂ ಪ್ರತಿಕ್ರಿಯಿಸುವುದಕ್ಕೆ ಹೋಗಬೇಡಿ. ಹೊಸಬರ ಜೊತೆಗೆ ನಿಮ್ಮ ಅಂತರಂಗದ ವಿಷಯಗಳನ್ನು ಹಂಚಿಕೊಳ್ಳಬೇಡಿ. ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಂಥವರು ಸಾಮಾನ್ಯ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರುವುದು ಉತ್ತಮ. ಈ ದಿನ ಮಸಾಲೆಯುಕ್ತ ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರ ಇರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಹಲವರು ನಿಮ್ಮ ಮೇಲೆ ಅವಲಂಬನೆ ಆಗುವುದರಿಂದ ನೀವು ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚು ವೇಗವಾಗಿ ಇರಬೇಕಾಗುತ್ತದೆ. ಸಣ್ಣಪುಟ್ಟ ನಿರ್ಲಕ್ಷ್ಯಗಳು ಸಹ ನಿಮ್ಮ ತಲೆಗೆ ಸುತ್ತಿಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲಾ ಕೆಲಸಗಳ ಬಗ್ಗೆಯೂ ನಿಮಗೆ ಮಾಹಿತಿ ಇದ್ದರೆ ಒಳ್ಳೆಯದು. ಕುಟುಂಬದಲ್ಲಿ ತಂದೆ, ತಾಯಿಯ ಜೊತೆಗೆ ಸಣ್ಣಪುಟ್ಟ ವಿಚಾರಕ್ಕಾದರೂ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾರು ಅಥವಾ ದ್ವಿಚಕ್ರ ವಾಹನ ಯಾವುದೇ ಆಗಲಿ ಈ ದಿನ ನೀವು ಚಾಲನೆ ಮಾಡದಿರುವುದು ಉತ್ತಮ. ಅನಿವಾರ್ಯ ಎಂದಾದಲ್ಲಿ ಸಾಧ್ಯವಾದಷ್ಟು ನಿಧಾನವಾಗಿ ಓಡಿಸಿ. ರಾತ್ರಿ ವೇಳೆ ಓಡಿಸುವುದಂತೂ ಕಡ್ಡಾಯವಾಗಿ ಬೇಡ.

ಲೇಖನ- ಎನ್‌.ಕೆ.ಸ್ವಾತಿ