Horoscope: ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಧ್ರುವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:02 ರಿಂದ 09:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:18ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ.
ಸಿಂಹ ರಾಶಿ : ಮನಸ್ಸಿನ ಚಾಂಚಲ್ಯದಿಂದ ನಿಮಗೆ ಕಷ್ಟವಾದೀತು. ನೆರೆಹೊರೆಯವರ ಜೊತೆ ಹರಟೆಯು ಅಧಿಕವಾಗಿರುವುದು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ನಿಯಮ ಪಾಲನೆಯಲ್ಲಿ ತಪ್ಪಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ನಿಮ್ಮ ಸಂಶೋಧನೆಗೆ ನಿರ್ದಿಷ್ಟ ಗುರಿಯ ಅವಶ್ಯಕತೆ ಇರಲಿದೆ. ಆಸ್ತಿಯ ವಿಚಾರವಾಗಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗುವುದು. ಗಂಭೀರ ಚರ್ಚೆಯಲ್ಲಿ ನಿಮ್ಮ ತಮಾಷೆಯು ಸಭೆಯ ಗಾಂಭೀರ್ಯವನ್ನು ಕೆಡಿಸುವುದು.
ಕನ್ಯಾ ರಾಶಿ : ಯಾರನ್ನೂ ವಿನಾಕಾರಣ ದೂರುವುದು ಬೇಡ. ನಿಮ್ಮ ಮೇಲೆ ದ್ವೇಷಭಾವವು ಬರಬಹುದು. ವ್ಯವಹಾರದಲ್ಲಿ ಬೇರೆ ಸಂಬಂಧವನ್ನು ತರುವುದು ಬೇಡ. ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ ಮಾಡಿಸುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಬಂಧುಗಳ ಮನೆಯ ಸಮಾರಂಭಕ್ಕೆ ಹೋಗಲಿದ್ದೀರಿ. ದಾಂಪತ್ಯದಲ್ಲಿ ವಾಗ್ವಾದವೇ ಇಂದಿನ ಕಾರ್ಯಗಳಿಗೆ ತೊಂದರೆಯಾದೀತು. ಕಬ್ಬಿಣದ ವ್ಯಾಪಾರದಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸಬಹುದು.
ತುಲಾ ರಾಶಿ : ವ್ಯಾಪಾರದಲ್ಲಿ ಹಣದ ಆಗಮನವು ಇದ್ದರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಮನಸ್ಸಿನ ನೆಮ್ಮದಿಗೆ ಎಲ್ಲಿಗಾದರೂ ಒಂಟಿಯಾಗಿ ಹೋಗುವಿರಿ. ಇಂದು ಕೌಶಲ್ಯದ ಕಾರ್ಯಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ದಾಂಪತ್ಯದ ಗುಟ್ಟನ್ನು ಹೊರಗೆ ಹಾಕುವುದು ಬೇಡ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮನಸ್ಸು ಸ್ವಸ್ಥವಾಗಿ ಇರದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಮಾತನ್ನು ಕೇಳಬೇಕಾದೀತು.
ವೃಶ್ಚಿಕ ರಾಶಿ : ಪೂರ್ಣ ಮನಸ್ಸಿನಿಂದ ನಿಮ್ಮ ಎಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಿದರೂ ಅಂದುಕೊಂಡಷ್ಟು ಜಯವು ಸಿಗದು. ಒಡಹುಟ್ಟಿದವರ ಜೊತೆಗಿನ ನಿಮ್ಮ ವ್ಯವಹಾರಕ್ಕೆ ಮತ್ತೊಬ್ಬರು ಪ್ರವೇಶಿಸಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಸಹೋದರಿಯರ ಜೊತೆ ವಾಗ್ವಾದವನ್ನು ಮಾಡುವಿರಿ. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕಡಲ ಸಮಯವನ್ನು ತೆಗೆದುಕೊಂಡಿತು. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆಡುವುದಿಲ್ಲ. ಹಣದ ಉಳಿತಾಯಕ್ಕೆ ಉಪಾಯದ ಅಗತ್ಯವು ಕಾಣಿಸಿಕೊಳ್ಳುವುದು. ಉದ್ಯೋಗದ ಕೆಲವು ರಹಸ್ಯಗಳನ್ನು ನೀವು ಇಂದು ತಿಳಿದುಕೊಳ್ಳುವಿರಿ.