Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 20ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ 
ಸಾಂದರ್ಭಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 20ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ದಿನ ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ನಿಮ್ಮಿಂದ ಏಕಾಗ್ರತೆ ಸಾಧ್ಯವೇ ಇಲ್ಲ ಎಂಬುದು ಖಾತ್ರಿ ಆದ ಮೇಲೆ ಅದನ್ನು ಬೇರೆಯವರಿಗೆ ವಹಿಸಿ ಕೊಡುವುದು ಉತ್ತಮ. ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಖರ್ಚಿನ ಪ್ರಮಾಣ ಹೆಚ್ಚಾಗಲಿದೆ. ಇದಕ್ಕಾಗಿ ನೀವು ಸಾಲವನ್ನು ಮಾಡಬೇಕಾಗುತ್ತದೆ. ನಿಮಗೆ ಮಾಹಿತಿಯೇ ಇಲ್ಲದ ವಿಚಾರಗಳ ಬಗ್ಗೆ ಯಾವುದೇ ಅಭಿಪ್ರಾಯವನ್ನು ಹೇಳುವುದಕ್ಕೆ ಹೋಗಬೇಡಿ. ಯಾವುದೋ ಉತ್ಸಾಹದಲ್ಲಿ ನೀವು ಆಡಿದ ಮಾತುಗಳೇ ಸಮಸ್ಯೆಗಳಾಗಿ ಕಾಡುವ ಸಾಧ್ಯತೆ ಇದೆ. ರಾತ್ರಿ ವೇಳೆ ಒಂಟಿಯಾಗಿ ಸಂಚಾರ ಮಾಡುವಂಥವರು ಮಾಮೂಲಿ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರುವುದು ಅಗತ್ಯ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ವಿಪರೀತ ಶ್ರದ್ಧೆ ಇಟ್ಟು, ಸಮಯ ಕೊಟ್ಟು ಮಾಡಿದಂತಹ ಕೆಲಸದ ಶ್ರೇಯ ಯಾರದೋ ಪಾಲಾಗಲಿದೆ. ಕುಟುಂಬದೊಳಗೆ ತಲೆಯೆತ್ತುವಂತಹ ಖರ್ಚುಗಳನ್ನು ನಿಭಾಯಿಸುವುದಕ್ಕೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಮೇಲುನೋಟಕ್ಕೆ ಬಹಳ ಸಲೀಸು, ಕೊನೆ ಕ್ಷಣದಲ್ಲಿ ಅಥವಾ ಅಲ್ಪ ಸಮಯದಲ್ಲೇ ಇದನ್ನು ಮುಗಿಸಬಹುದು ಎಂದು ನೀವು ಅಂದುಕೊಂಡಿದ್ದು ಉಲ್ಟಾ ಆಗಬಹುದು. ಆದ್ದರಿಂದ ಯಾವುದೇ ಕೆಲಸವನ್ನು ಕೊನೆ ಕ್ಷಣದ ತನಕ ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಸ್ನೇಹಿತರು ನಿಮ್ಮ ಬಳಿ ಸಾಲ ಕೇಳಿಕೊಂಡು ಬರಬಹುದು. ಅವರಿಗೆ ಕೊಡುವುದೋ ಅಥವಾ ಇಲ್ಲ ಎಂದು ಹೇಳುವುದೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಗೊಂದಲ ಏರ್ಪಡಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂತಾನದ ನಿರೀಕ್ಷೆಯಲ್ಲಿ ಇರುವಂತಹವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಸ್ನೇಹಿತರ ಮೂಲಕ ಸಹಾಯ ದೊರೆಯಲಿದೆ. ಇತರರ ಮೇಲೆ ಸವಾಲು ಹಾಕಿ ನೀವು ತೆಗೆದುಕೊಂಡಂತಹ ಕೆಲಸ ಕಾರ್ಯಗಳಲ್ಲಿ ಅದ್ಭುತವಾದ ಯಶಸ್ಸನ್ನು ಪಡೆಯಲಿದ್ದೀರಿ. ವಿದೇಶಗಳಲ್ಲಿ ವಾಸ್ತವ್ಯ ಹೂಡಲು ಪ್ರಯತ್ನ ಮಾಡುತ್ತಿರುವವರಿಗೆ ಹಲವು ಬಗೆಯಲ್ಲಿ ಅನುಕೂಲ ಒದಗಿ ಬರಲಿದೆ. ನೀವು ಈಗಾಗಲೇ ಕೆಲಸ ಮಾಡಿಕೊಟ್ಟಾಗಿದೆ ಅದರಿಂದ ಇನ್ನೂ ಹಣ ಬಂದಿಲ್ಲ ಎಂದಾದಲ್ಲಿ ಈ ದಿನ ಪ್ರಯತ್ನ ಪಡಿ, ಹೀಗೆ ಮಾಡುವುದರಿಂದ ಹಣ ವಸೂಲಿ ಆಗುವ ಸಾಧ್ಯತೆಗಳು ಹೆಚ್ಚಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ಅಥವಾ ನೀವು ಆಡಿಯೇ ಇರದ ಮಾತಿಗೆ ಸಂಬಂಧಿಸಿದಂತೆ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ಸಾಧ್ಯತೆಗಳಿವೆ ಜಾಗ್ರತೆ. ಇತರ ಮೂದಲಿಕೆ ಅಥವಾ ಹೀಯಾಳಿಕೆಯನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ನಿಮ್ಮನ್ನು ಸಿಟ್ಟಿಗೆ ಎಬ್ಬಿಸಬೇಕು ಎಂಬ ಉದ್ದೇಶದಿಂದಲೇ ಕೆಲವರು ಪ್ರಯತ್ನ ಮಾಡಲಿದ್ದಾರೆ. ಯಾರು ಸಾರ್ವಜನಿಕ ಜೀವನದಲ್ಲಿ ಇದ್ದೀರೋ ಅಂತಹವರು ಮಾಧ್ಯಮಗಳ ಜೊತೆ ಮಾತುಕತೆ ಆಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಪದ ಬಳಕೆಯನ್ನು ಮಾಡಿ. ಹೊಸಬರ ಜೊತೆಗೆ ಯಾವುದೇ ಹಣಕಾಸಿನ ವ್ಯವಹಾರ ಅಥವಾ ಹೂಡಿಕೆಗೆ ಸಂಬಂಧಪಟ್ಟಂತಹ ಮಾತುಕತೆಯನ್ನು ಆಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಎದುರು ನಿಂತು ಮಾತನಾಡುವವರ ಉದ್ದೇಶ ಏನಿದೆ ಎಂಬುದನ್ನು ಬಹಳ ಬೇಗ ಗ್ರಹಿಸಲಿದ್ದೀರಿ. ಇದರಿಂದಾಗಿ ನಿಮ್ಮನ್ನು ದಾರಿ ತಪ್ಪಿಸುವುದಕ್ಕೋ ಅಥವಾ ತಮಗೆ ಬೇಕಾದಂತೆ ಲಾಭ ಮಾಡಿಕೊಳ್ಳುವುದಕ್ಕೋ ಇತರರಿಗೆ ಸಾಧ್ಯವಾಗುವುದಿಲ್ಲ. ಇಷ್ಟು ಸಮಯ ನಿಮ್ಮ ಜೊತೆಯಲ್ಲಿ ಇದ್ದುಕೊಂಡು, ಚೆನ್ನಾಗಿಯೇ ಮಾತನಾಡುತ್ತಾ ನಿಮಗೆ ಕೇಡನ್ನು ಬಯಸುತ್ತಾ ಇದ್ದವರು ಯಾರು ಎಂಬುದು ಈ ದಿನ ನಿಮಗೆ ತಿಳಿದು ಬರಲಿದೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಾ ಇರುವಂತಹವರಿಗೆ ತುಂಬಾ ಹೆಚ್ಚಿನ ಮಟ್ಟದ ಲಾಭ ಪಡೆಯುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಯಾರು ಅಡುಗೆ ಕಾಂಟ್ರಾಕ್ಟ್ ಗಳನ್ನು ಮಾಡಿಸುತ್ತಿದ್ದೀರೋ ಅಂಥವರು ಇದರ ಜೊತೆಗೆ ಹೊಸ ವ್ಯವಹಾರವನ್ನು ಶುರು ಮಾಡುವ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕಡಿಮೆ ಮೊತ್ತಕ್ಕೆ ಯಾವುದಾದರೂ ಭೂಮಿ, ವಾಹನ ಅಥವಾ ಇನ್ಯಾವುದೇ ವಸ್ತು ಸಿಗುತ್ತದೆ ಎಂಬ ಕಾರಣಕ್ಕಾಗಿ ಆಸೆಗೆ ಬಿದ್ದು, ಸಾಲ ಮಾಡಿಯಾದರೂ ಹಣ ಹೋಗುವುದಕ್ಕೆ ಮುಂದಾಗಬೇಡಿ. ನೀವು ಯಾರ ಜೊತೆಗೆ ವ್ಯವಹಾರ ಮಾಡುತ್ತಿರುವಿರೋ ಅವರು ಮೇಲುನೋಟಕ್ಕೆ ಕಾಣುವಷ್ಟು ನಂಬಿಕೆಗೆ ಅರ್ಹವಾದ ವ್ಯಕ್ತಿ ಆಗಿರುವುದಿಲ್ಲ. ಅಂಥವರನ್ನು ನಂಬಿಕೊಂಡು ಸಾಲ ಕೊಡಿಸುವುದಕ್ಕೆ ಜಾಮೀನಾಗಿ ನಿಲ್ಲುವುದಕ್ಕಂತೂ ಹೋಗಲೇಬೇಡಿ. ತಂದೆ- ತಾಯಿ ಅಥವಾ ಸಂಗಾತಿ ನೀಡುವಂತಹ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಡುವ ಮುನ್ನ ಶಿವನನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ನೀವು ಆಕ್ರಮಣಕಾರಿಯಾದಂತಹ ಆಲೋಚನೆಯೊಂದಿಗೆ ಇತರರ ಜೊತೆ ವರ್ತಿಸಲಿದ್ದೀರಿ. ಈ ಹಿಂದೆ ನಡೆದ ಘಟನೆಗಳನ್ನು ಇಂದಿನ ಪರಿಸ್ಥಿತಿಯೊಂದಿಗೆ ಹೋಲಿಸಿ ಕೊಳ್ಳುವುದರಿಂದ ಇಂತಹದ್ದೊಂದು ವರ್ತನೆ ನಿಮ್ಮಲ್ಲಿ ಕಾಣಿಸಿಕೊಳ್ಳಲಿದೆ. ಯಾವುದೇ ವ್ಯವಹಾರ, ವಿಚಾರ, ವಿಷಯಗಳಲ್ಲಿ ಆತುರ ಮಾಡುವುದಕ್ಕೆ ಹೋಗಬೇಡಿ. ಭವಿಷ್ಯಕ್ಕೆ ಸಂಬಂಧಿಸಿದಂತೆ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕು ಎಂಬ ಪರಿಸ್ಥಿತಿ ಇದ್ದರೂ ಈ ದಿನದ ಮಟ್ಟಿಗೆ ಮುಂದಕ್ಕೆ ಹಾಕುವುದು ಉತ್ತಮ. ತೀರಾ ಅನಿವಾರ್ಯ ಎಂದಾದಲ್ಲಿ ನಿಮ್ಮ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಆ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ವಿದ್ಯೆ, ಬುದ್ಧಿ, ಆಲೋಚನೆ, ತಿಳಿವಳಿಕೆ ಈ ಯಾವುದೂ ಈ ದಿನ ನಿಮಗೆ ಸಹಾಯಕ್ಕೆ ಬಾರದೇ ಇರಬಹುದು. ಏಕೆಂದರೆ ಈ ದಿನ ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವಂತಹ ಕೆಲವು ಬೆಳವಣಿಗೆಗಳು ಆಗಲಿವೆ. ನಿಮ್ಮ ಬಳಿ ಇರುವಂತಹ ಹಣ ಎಷ್ಟು? ಹಾಗೂ ಎಷ್ಟು ಮೊತ್ತವನ್ನು ನೀವು ಹೊಂದಿಸಬಲ್ಲಿರಿ ಎಂಬುದನ್ನು ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡು, ಆ ನಂತರ ಇತರರಿಗೆ ಮಾತು ಕೊಡಿ. ನವ ವಿವಾಹಿತರಿಗೆ ಮನಸ್ತಾಪ ಅಥವಾ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ಒಂದು ವೇಳೆ ಇಂಥ ಪರಿಸ್ಥಿತಿ ಎದುರಾದಲ್ಲಿ ಹಳೆಯ ಘಟನೆಗಳನ್ನು ಮತ್ತೆ ಎಳೆದು ತಂದು, ಇನ್ನಷ್ಟು ರಾಡಿ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನಿಮ್ಮಲ್ಲಿ ಒಂದು ಬಗೆಯ ಅಸಹನೆ ಕಾಡಲಿದೆ. ಯಾವುದೇ ಕೆಲಸಗಳು ನಿರೀಕ್ಷಿತ ಮಟ್ಟಕ್ಕೆ ಆಗುತ್ತಿಲ್ಲ ಎಂಬುದು ನಿಮ್ಮ ಮನಸ್ಸಿನೊಳಗೆ ಗಟ್ಟಿಯಾಗಿ ಕೂತುಕೊಳ್ಳಲಿದೆ. ಇದೇ ಕಾರಣಕ್ಕೆ ಬಹಳ ಸಿಟ್ಟು ಸಹ ಬರುತ್ತದೆ. ಇಂಥದ್ದೇ ಸನ್ನಿವೇಶದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜೊತೆಗೆ ತೀರಾ ಕಟುವಾಗಿ ಮಾತನಾಡಿ, ನಿಮ್ಮ ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ. ಆದ್ದರಿಂದ ಈ ದಿನ ಸಾಧ್ಯವಾದಷ್ಟು ತಾಳ್ಮೆ, ಸಂಯಮದಿಂದ ಇದ್ದರೆ ಒಳ್ಳೆಯದು. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿರುವವರಿಗೆ ನಾನಾ ಬಗೆಯಲ್ಲಿ ಅಡ್ಡಿ ಆತಂಕಗಳು ಕಾಡಲಿವೆ. ಇಂಥ ಸನ್ನಿವೇಶ ಎದುರಾದಲ್ಲಿ ದುರ್ಗಾದೇವಿಯನ್ನು ಸ್ಮರಿಸಿ, ಆರಾಧಿಸಿ.

ಲೇಖನ- ಎನ್‌.ಕೆ.ಸ್ವಾತಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ