Horoscope: ಈ ರಾಶಿಯವರು ಅನ್ಯರ ಮಾತಿನಿಂದ ನಿಮ್ಮ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರು ಅನ್ಯರ ಮಾತಿನಿಂದ ನಿಮ್ಮ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ
ರಾಶಿ ಭವಿಷ್ಯ
Follow us
| Edited By: Kiran Hanumant Madar

Updated on: Nov 20, 2023 | 12:45 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಧ್ರುವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:02 ರಿಂದ 09:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:18ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ.

ಧನು ರಾಶಿ : ವಿವಾಹಕ್ಕೆ ಕೆಲವು ತಡೆಗಳು ಬರಬಹುದು. ವಿದೇಶ ಪ್ರಯಾಣದ ಸಿದ್ಧತೆಯಲ್ಲಿ ಇರುವಿರಿ.‌ ರಾಜಕೀಯವು ನಿಮ್ಮ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ. ಇಂದು ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜಿಸುವಿರಿ‌. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಒಪ್ಪಿಗೆ ಸಿಗದು. ಇನ್ನೊಬ್ಬರ‌ ನೋವಿಗೆ ಸ್ಪಂದಿಸುವ ನಿಮ್ಮ ಗುಣದಿಂದ ಪ್ರೀತಿ ಹುಟ್ಟಿಕೊಳ್ಳಬಹುದು.

ಮಕರ ರಾಶಿ : ಅನ್ಯರ ಮಾತಿನಿಂದ ನಿಮ್ಮ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ. ಸುಖಕ್ಕೆ ನಾನಾ ಮಾರ್ಗಗಳು ತೆರೆಯಬಹುದು. ಇಂದು ನೀವು ಮನೆಯ ಹಿರಿಯರಿಗೆ ಗೌರವ ತರುವ ಕಾರ್ಯವನ್ನು ಮಾಡುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಕಾನೂನಿನ ಪಾಠವನ್ನು ಹಿರಿಯರು ಮಾಡುವರು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ನೂತನ ವಾಹನದ‌ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ಹಿತಶತ್ರು ನಿಮ್ಮ‌ ಪತನವನ್ನೇ ನಿರೀಕ್ಷಿಸುತ್ತ ಕುಳಿತಿರುವರು.‌ ವೈವಾಹಿಕ ಜೀವನ ಆರಂಭದ ದಿನಗಳಲ್ಲಿ ಸಂತೋಷವೇ ಇರುವುದು. ಎಲ್ಲ ಸಂದರ್ಭವು ಒಂದೇ ರೀತಿಯಲ್ಲಿ ಇರದು. ನಕಾರಾತ್ಮಕತೆ ಹೆಚ್ಚು ಕೆಲಸ ಮಾಡೀತು.

ಕುಂಭ ರಾಶಿ : ನೆಮ್ಮದಿಯಿಂದ ಇರಲಿದ್ದು ಏನನ್ನಾದರೂ ಅಸಂಗತವಾದುದನ್ನು ಆಲೋಚಿಸುವಿರಿ. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ. ಮಾತನ್ನು ಕಡಿಮೆ ಮಾಡುವಿರಿ. ನಿಮ್ಮ‌ ದೂರಾಲೋಚನೆಯು ವಾಸ್ತವಕ್ಕೆ ಹತ್ತಿರವಾಗಿ ಇರದು.

ಮೀನ ರಾಶಿ : ಅತಿಯಾದ ಕೋಪವು ಇಂದು ಸಹಜವಾಗಿ ಬರುವುದು. ಆದಷ್ಟು ಸುಮ್ಮನೆ ಇರುವುದು ಒಳ್ಳೆಯದು. ಕೋಪದ ಎಂದು ಬಂದಾಗ ಎದ್ದು ಹೋಗಿ. ಇಂದು ನಿಮ್ಮ ವ್ಯಾಪಾರದಲ್ಲಿ ಕಠಿಣ ಶ್ರಮವಿದ್ದೂ ಕಡಿಮೆ ಲಾಭವನ್ನು ಪಡೆಯುವಿರಿ. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.‌ ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವುವ ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ.

-ಲೋಹಿತಶರ್ಮಾ – 8762924271 (what’s app only)

ತಾಜಾ ಸುದ್ದಿ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್