Horoscope: ಬಂಧುಗಳ ಬಗ್ಗೆ ಅಸಮಾಧಾನ, ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಬಂಧುಗಳ ಬಗ್ಗೆ ಅಸಮಾಧಾನ, ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ
ಪ್ರಾತಿನಿಧಿಕ ಚಿತ್ರ
Follow us
|

Updated on: Nov 19, 2023 | 12:15 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್: ಋತು, ವೃಶ್ಚಿಕ: ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಭಾನು ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವೃದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 04:34 ರಿಂದ 05:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:18 ರಿಂದ 01:43ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ.

ಸಿಂಹ ರಾಶಿ: ಗೌಪ್ಯ ವಿಚಾರಗಳನ್ನು ನಿಮಗೆ ಅರಿವಿಲ್ಲದೆ ಹೊರಹಾಕುವಿರಿ. ಬಂಧುಗಳ ಬಗ್ಗೆ ಅಸಮಾಧಾನ ಇರುವುದು. ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ. ರಾಜಕೀಯ ಪ್ರೇರಿತದಿಂದ ನಿಮ್ಮ ಬಗ್ಗೆ ಸುಳ್ಳು ಸುದ್ದಿಗಳು ಬರಬಹುದು. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಏಕಾಂಗಿ ಎಂಬ ಭಾವವು ನಿಮ್ಮನ್ನು ಅತಿಯಾಗಿ ಕಾಡಬಹುದು.‌ ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ನಿದ್ರೆ ಇಲ್ಲದೇ ಇಂದಿನ ಎಲ್ಲ ಕಾರ್ಯವೂ ಅಸ್ತವ್ಯಸ್ತವಾಗುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿ: ಚಾಲಕರು ಆದಾಯವನ್ನು ಹೆಚ್ಚಿಸಿಕೊಳ್ಳುವರು. ನಿರುದ್ಯೋಗದ ಚಿಂತೆ ದೂರವಾಗುವ ಲಕ್ಷಣವಿರಲಿದೆ. ಸ್ತ್ರೀಯರು ಸಂಗಾತಿಯ ಜೊತೆ ಮನಸ್ತಾಪವನ್ನು ಮಾಡಿಕೊಳ್ಳುವರು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಕ್ರಮಬದ್ಧ ಮಾಡಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಮಾನಸಿಕ ಆಯಾಸದಿಂದ ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಬಹುದು.

ತುಲಾ ರಾಶಿ: ಮನೆಯ ನಿರ್ಮಾಣಕ್ಕೆ ಯಾರಿಂದಲಾದರೂ ಆತಂಕವು ಬರಬಹುದು. ಮನೆಯಲ್ಲಿ ಸಮಾರಂಭದ ವಾತಾವರಣವು ಇರುವುದು. ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ನಿಮ್ಮ ಘನತೆಗೆ ಧಕ್ಕೆ ಬರುವುದು. ಸಮಯಪಾಲನೆಗೆ ಪ್ರಶಂಸೆಯು ಸಿಗುವುದು. ನೀವು ಕಾರ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳುವುದು ಕ್ಷೇಮ.‌ ಇಲ್ಲವಾದರೆ ಎಲ್ಲವೂ ನಿಮ್ಮ ಬುಡಕ್ಕೇ ಬರುವುದು. ಸ್ನೇಹಿತರ ಜೊತೆ ಸುತ್ತಾಟವನ್ನು ಅನಿವಾರ್ಯವಾಗಿ ಮಾಡುವಿರಿ. ಪ್ರೀತಿಯನ್ನು ತಿಳಿಸುವುದು ವಿಳಂಬವಾಗುವುದು. ನಿಮ್ಮ ಸ್ಥಾನವನ್ನು ಬೇರೆಯವರು ಆಕ್ರಮಿಸಿಕೊಳ್ಳುವರು. ಎಲ್ಲರನ್ನೂ ತೂಗಿಸುವುದು ಕಷ್ಟವಾದೀತು.

ವೃಶ್ಚಿಕ ರಾಶಿ: ನಿಮಗೆ ಸಿಕ್ಕ ಅಧಿಕಾರವನ್ನು ಕೇವಲವಾಗಿ ಕಾಣುವುದು ಬೇಡ. ನಿಮ್ಮ ಬಗ್ಗೆ ಅಪರಿತರು ಮೂರನೇ ವ್ಯಕ್ತಿಯಿಂದ ತಿಳಿದುಕೊಳ್ಳುವರು. ಉದ್ಯಮದಲ್ಲಿ ಚಿಂತಿತ ಲಾಭ ಕಾಣದೇ ಮನಸ್ಸು ಕುಗ್ಗಬಹುದು. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಯಾವುದೋ ಗುಂಗಿನಲ್ಲಿ ಇಂದಿನ ಕೆಲಸವನ್ನೆಲ್ಲ ಹಾಳುಮಾಡಿಕೊಳ್ಳುವಿರಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು. ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಖಷಿಯನ್ನು ಕೊಡುವುದು. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಕೆಲಸದ ದೊಡ್ಡ ಪಟ್ಟಿಯೇ ಇದ್ದರೂ ಬೇಗ ಮುಗಿಯುವ ಕೆಲಸವನ್ನು ಮೊದಲು ಮಾಡಿ.

ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ