ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 25ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮನಸ್ಸಿನಲ್ಲಿ ಇರುವಂಥ ಪ್ರೀತಿ- ಪ್ರೇಮದ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿವೆ. ವೃತ್ತಿನಿರತರು ಬಂಡವಾಳದ ಕೊರತೆಯಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕೆ ಪ್ರಯತ್ನಿಸಲಿದ್ದೀರಿ. ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೈ ಹಾಕಬೇಕು ಎಂದಿದ್ದಲ್ಲಿ ಏಕಾಗ್ರತೆಯನ್ನು ಸಾಧಿಸುವುದಕ್ಕೆ ಸಾಧ್ಯವಾ ಎಂಬ ಬಗ್ಗೆ ನಿಮ್ಮನ್ನು ನೀವೇ ಕೇಳಿಕೊಳ್ಳುವುದು ಮುಖ್ಯವಾಗುತ್ತದೆ. ದೂರದ ಊರು ಅಥವಾ ದೇಶದಲ್ಲಿ ಹೂಡಿಕೆ ಮಾಡಿದವರಿಗೆ ಅದನ್ನು ಹಿಂತೆಗೆದುಕೊಂಡು ಬೇರೆ ಕಡೆ ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಬರಲಿದೆ. ಈಗಾಗಲೇ ಮದುವೆ ನಿಶ್ಚಯ ಆಗಿದ್ದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಆಗುತ್ತದೆ.
ಸ್ವಂತ ವಿಚಾರದಲ್ಲಿ ಯಾರಾದರೂ ಸಲಹೆ ನೀಡಿದಲ್ಲಿ ಅದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಹಾಗೂ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ. ಜಮೀನು- ಆಸ್ತಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವಂಥ ಸೂಚನೆ ದೊರೆಯಲಿದೆ. ಹೊಸದಾಗಿ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಹಣಕಾಸಿನ ಮೂಲ ದೊರೆಯಲಿದೆ. ಸಂಗಾತಿಯ ಜತೆಗೆ ಉತ್ತಮ ಸಮಯ ಕಳೆಯುವುದಕ್ಕೆ ಅವಕಾಶಗಳಿವೆ. ನವದಂಪತಿಗೆ ಹಿಲ್ ಸ್ಟೇಷನ್ ಗೆ ತೆರಳುವಂಥ ಯೋಗ ಇದ್ದು, ಅದರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಸೈಟು- ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಐಟಿ- ಬಿಪಿಒ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿದೇಶಕ್ಕೆ ಪ್ರಾಜೆಕ್ಟ್ ಗೆ ತೆರಳುವಂಥದ್ದರ ಬಗ್ಗೆ ಸುಳಿವು ದೊರೆಯಲಿದೆ. ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬರಲಿದೆ. ದ್ವಿಚಕ್ರ ವಾಹನ ಓಡಿಸುವಂಥವರು ಈ ದಿನ ಮಾಮೂಲಿಗಿಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಂದೆ- ತಾಯಿಯ ಆರೋಗ್ಯ ವಿಚಾರವು ಆತಂಕಕ್ಕೆ ಕಾರಣ ಆಗಬಹುದು. ಇನ್ಷೂರೆನ್ಸ್ ಮಾಡಿಸುವುದಕ್ಕೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗಬಹುದು. ಹಾಲಿನ ಪದಾರ್ಥಗಳ ಸೇವನೆಯಿಂದ ಅಲರ್ಜಿ ಇರುವವರು ಅದರಿಂದ ದೂರ ಇರುವುದು ಉತ್ತಮ.
ಬದಲಾದ ಪರಿಸ್ಥಿತಿಯಲ್ಲಿ ನಿಮಗಿರುವ ಪರಿಣತಿಗೆ ಬೇಡಿಕೆ ಹೆಚ್ಚಾಗಬಹುದು. ಮೇಲಧಿಕಾರಿಗಳ ಜತೆಗೆ ಮಾತುಕತೆ ನಡೆಯುವಾಗ ಭವಿಷ್ಯದಲ್ಲಿ ದೊರೆಯಬಹುದಾದ ಸ್ಥಾನ-ಮಾನಗಳ ಬಗ್ಗೆ ಸೂಚನೆ ದೊರೆಯಲಿದೆ. ವೇತನ ಹೆಚ್ಚಳ ವಿಚಾರವಾಗಿ ನೀವೇ ಪ್ರಸ್ತಾವ ಮಾಡುವ ಚಿಂತನೆ ಮಾಡಲಿದ್ದೀರಿ. ಅಧ್ಯಾತ್ಮ ಚಿಂತನೆ, ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿಕೆಯಿಂದ ನೆಮ್ಮದಿ ದೊರೆಯಲಿದೆ. ಪ್ರಯಾಣಕ್ಕೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ವಿವಾಹಿತರಿಗೆ ಸಂಗಾತಿ ಕಡೆಯಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ದೊರೆಯಲಿದೆ. ವ್ಯವಹಾರ- ವ್ಯಾಪಾರ ವೃದ್ಧಿ ಮಾಡಿಕೊಳ್ಳುವ ಉದ್ದೇಶ ಇರುವವರಿಗೆ ಬ್ಯಾಂಕ್ ನಲ್ಲಿ ಸಾಲ ದೊರೆಯುವ ಸಾಧ್ಯತೆಗಳು ಕಾಣುತ್ತವೆ.
ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆಗಳಿವೆ. ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುವಂತಿದ್ದರೆ ಖರ್ಚಿನ ಮೇಲೆ ನಿಗಾ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಭಾವನಾತ್ಮಕ ಸಂಗತಿಗಳನ್ನು ತುಂಬ ಎಚ್ಚರಿಕೆಯಿಂದ ನಿರ್ವಹಿಸುವ ಕಡೆಗೆ ಗಮನ ನೀಡಿ. ಎಲೆಕ್ಟ್ರಿಕಲ್ ಸ್ಕೂಟರ್ ಅಥವಾ ಕಾರು ಖರೀದಿ ಬಗ್ಗೆ ಸ್ನೇಹಿತರು- ಕುಟುಂಬಸ್ಥರ ಜತೆಗೆ ಮಾತುಕತೆ ಆಗುವಂಥ ಸಾಧ್ಯತೆಗಳಿವೆ. ಕುಟುಂಬ ಸದಸ್ಯರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಣೆ ಎಲ್ಲಿ ಮಾಡುವುದು ಎಂಬ ಬಗ್ಗೆ ಸಿದ್ಧತೆ ನಡೆಸಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿಯನ್ನು ಮಾಡುವಂಥ ಯೋಗವಿದ್ದು, ಸಂಬಂಧಿಕರ ಮನೆಗೆ ಆಹ್ವಾನ ಬರಲಿದೆ.
ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡಬೇಡಿ. ಮಾರ್ಕೆಟಿಂಗ್ ವಿಭಾಗದಲ್ಲಿ ಇರುವವರಿಗೆ ಗುರಿ ತಲುಪುವುದು ಬಹಳ ಕಷ್ಟವಾಗಿ ಮಾರ್ಪಡಲಿದೆ. ನಿಮ್ಮದಲ್ಲದ ವಸ್ತುಗಳಿಗೆ ಆಸೆ ಪಡಬೇಡಿ. ಸಣ್ಣ ತಪ್ಪು ಎಂದುಕೊಂಡು ನೀವು ಈ ಹಿಂದೆ ಮಾಡಿದ್ದು ಇದೀಗ ಕುತ್ತಿಗೆಗೆ ಬರಲಿದೆ. ಸೋದರ ಸಂಬಂಧಿಗಳು ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಿಕೊಂಡು, ಸಹಾಯ ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಹೌದು ಎಂದರೂ ತೊಂದರೆ, ಇಲ್ಲ ಅಂದರೆ ಸಂಬಂಧಕ್ಕೆ ಪೆಟ್ಟು ಬೀಳಬಹುದು ಎಂಬ ಸನ್ನಿವೇಶ ಎದುರಾಗಬಹುದು. ಬ್ಯಾಂಕಿಂಗ್ ವ್ಯವಹಾರಗಳು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು. ಸರಿಯಾದ ದಾಖಲೆ ಪತ್ರಗಳ ಜತೆಗೆ ವ್ಯವಹರಿಸಿ.
ನಿಮ್ಮ ಅನುಭವದ ವ್ಯಾಪ್ತಿಯಲ್ಲಿ ಮಾಡಬಹುದಾದ ಕೆಲಸ, ತುಂಬ ಸಲೀಸಾಗಿ ಮುಗಿಯುತ್ತದೆ ಎಂದುಕೊಂಡಿದ್ದು ಬಹಳ ಸಮಯ ಹಿಡಿಸುವಂಥ ಸಾಧ್ಯತೆಗಳು ಗೋಚರಿಸುತ್ತವೆ. ನಿಮ್ಮ ಪಾಲಿಗೆ ಬರಬಹುದು ಎಂದುಕೊಂಡಿದ್ದ ಮೊತ್ತವು ಕೈ ಸೇರುವುದಿಲ್ಲ ಎಂದೆನಿಸಲಿದೆ. ಈ ದಿನ ಯಾವುದೇ ಮುಖ್ಯ ನಿರ್ಧಾರಗಳು ಮಾಡದಿರುವುದು ಉತ್ತಮ. ಒಂದು ವೇಳೆ ಅನಿವಾರ್ಯ ಎಂದಿದ್ದಲ್ಲಿ ಮನೆ ದೇವರ ಸ್ಮರಣೆಯನ್ನು ಮಾಡುವುದು ಉತ್ತಮ. ಇದರಿಂದ ಸರಿಯಾದ ತೀರ್ಮಾನವನ್ನು ಮಾಡುವುದಕ್ಕೆ ಪ್ರೇರಣೆ ದೊರೆಯಲಿದೆ. ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಈಗಾಗಲೇ ಕಾಡುತ್ತಿದ್ದಲ್ಲಿ ಅದು ಉಲ್ಬಣ ಆಗಲಿದೆ.
ನೀವು ಸಲಹೆ ಕೊಟ್ಟರೆ ಕೇಳಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳದಿರಿ. ಇದರಿಂದ ನಿಮ್ಮ ಮನಸಿಗೆ ಬೇಸರ ಆಗಬಹುದು. ಹೇಳುವುದಷ್ಟೇ ನಿಮ್ಮ ಕರ್ತವ್ಯ ಅಥವಾ ಜವಾಬ್ದಾರಿ. ಅಲ್ಲಿಗೆ ಮುಗಿಯಿತು. ಅದಕ್ಕಿಂತ ಮುಂದೆ ಏನನ್ನೂ ಅಪೇಕ್ಷಿಸಬೇಡಿ. ಚಿನ್ನದ ಚೀಟಿ ಹಾಕಿಕೊಂಡಿದ್ದಲ್ಲಿ ಅದರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡು, ಯಾವಾಗ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಸರಿಯಾಗಿ ಮಾತನಾಡಿಕೊಳ್ಳುವುದು ಉತ್ತಮ. ಹೆಣ್ಣುಮಕ್ಕಳು ಇರುವವರು ಅವರ ಆರೋಗ್ಯ ಮತ್ತು ಶಿಕ್ಷಣದ ಕಡೆಗೆ ಹೆಚ್ಚಿನ ಲಕ್ಷ್ಯ ಮಾಡಬೇಕಾಗುತ್ತದೆ. ಸಂಗಾತಿಯ ಕೆಲವು ಮಾತಿನಿಂದ ಮನಸ್ಸಿಗೆ ಬೇಸರ ಆಗಬಹುದು. ಬಳಸುವ ಪದಗಳ ಬಗ್ಗೆ ನಿಗಾ ಇರಲಿ.
ಸಿನಿಮಾ ರಂಗದಲ್ಲಿ ಇರುವವರು ನಿಮ್ಮ ಪಾಲಿಗೆ ಬರುವ ಅವಕಾಶಗಳ ಬಗ್ಗೆ ತಕ್ಷಣ ಸ್ಪಂದಿಸುವುದು ಮುಖ್ಯವಾಗುತ್ತದೆ. ಆಲೋಚಿಸಿದ ನಂತರ ಹೇಳ್ತೀನಿ, ಸಮಯ ತೆಗೆದುಕೊಂಡು ಹೇಳ್ತೀನಿ ಎಂದಲ್ಲಿ ಅವಕಾಶ ಕಳೆದುಕೊಳ್ಳಲಿದ್ದೀರಿ. ಎನ್ ಜಿಒಗಳಿಗಾಗಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಮೊದಲ ಬಾರಿಗೆ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ಈ ಬಗ್ಗೆ ಕುಟುಂಬ ಸದಸ್ಯರ ಜತೆಗೆ ಚರ್ಚೆ ನಡೆಸಲಿದ್ದೀರಿ. ಇದಕ್ಕಾಗಿ ನೀವು ಲೆಕ್ಕ ಹಾಕಿಟ್ಟುಕೊಂಡ ಬಜೆಟ್ ಗಿಂತ ಹೆಚ್ಚು ಖರ್ಚಾಗಲಿದೆ.