Horoscope 26 Nov: ದಿನಭವಿಷ್ಯ, ಈ ರಾಶಿಯವರಿಗೆ ಪ್ರೇಮದಲ್ಲಿ ಹಿನ್ನಡೆ, ತಾಳ್ಮೆ ಕಳೆದುಕೊಳ್ಳಬೇಡಿ

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 26 Nov: ದಿನಭವಿಷ್ಯ, ಈ ರಾಶಿಯವರಿಗೆ ಪ್ರೇಮದಲ್ಲಿ ಹಿನ್ನಡೆ, ತಾಳ್ಮೆ ಕಳೆದುಕೊಳ್ಳಬೇಡಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 26, 2023 | 12:02 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 26 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 04:35 ರಿಂದ 05:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:20 ರಿಂದ 01:45ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:10 ರಿಂದ 04:35ರ ವರೆಗೆ.

ಮೇಷ ರಾಶಿ: ಇಷ್ಟಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವಿರಿ. ಸ್ನೇಹಿತರ ಬಗ್ಗೆ ನಿಮ್ಮ ಅಭಿಪ್ರಾಯವು ಬದಲಾಗುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ಯಾರದೋ ವಿಚಾರಕ್ಕೆ ನೀವು ಮೂಗು ಹಾಕಿ‌ ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಮಕ್ಕಳ‌ ವಿವಾಹ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಶತ್ರುಗಳ ಉಪಟಳ ಕಡಿಮೆ ಮಾಡಿಕೊಂಡು ನಿಮ್ಮ‌ಕಡೆ ಏಕಾಗ್ರವಾಗಿ ಇರಿ. ಕೆಲವು ಸಂಗತಿಗಳನ್ನು ಮನಸ್ಸು ಬಿಚ್ಚಿ ಮಾತನಾಡಿ.

ವೃಷಭ ರಾಶಿ: ನಿಮ್ಮ ಮನೋವೇಗವನ್ನು ನಿಯಂತ್ರಿಸಲು ಏನಾದರೂ ಕ್ರಮವನ್ನು ತೆಗೆದುಕೊಳ್ಳುವಿರಿ. ಅನುಭವವು ಸುಳ್ಳಾದಂತೆ ಕಾಣಿಸುವುದು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿ ಇರಲಿ. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಂಡು ಸಮಾಧಾನ ಪಡುವಿರಿ. ತುರ್ತು ಅವಶ್ಯಕತೆ ಇರುವುದು. ಇನ್ನೊಬ್ಬರ ಯೋಜನೆಯನ್ನು ನಿಮ್ಮದೆಂದು ಸಾಧಿಸುವಿರಿ.‌ ಭೀತಿಯಿಂದ ನೀವು ಕೆಲವನ್ನು ಮಾಡದೇ ಇರುವಿರಿ. ಇರುವುದರಲ್ಲಿ ನೆಮ್ಮದಿಯನ್ನು ಕಾಣುವುದು ಮುಖ್ಯವಾದೀತು. ಮನಸ್ಸಿನ ಚಾಂಚಲತ್ಯವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ಭಿನ್ನಾಭಿಪ್ರಾಯಗಳು ಇರಲಿವೆ.

ಮಿಥುನ ರಾಶಿ: ಮರೆವು ಅಧಿಕವಾಗಿರುವುದು. ಪ್ರೀತಿಯಲ್ಲಿ ಉಂಟಾದ ಸಮಸ್ಯೆಯನ್ನು ಮಾತನಾಡಿ ಸರಿಮಾಡಿಕೊಳ್ಳುವಿರಿ. ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ಒಬ್ಬರೇ ನೋವನ್ನು ಅನುಭವಿಸುವುದು ಅಭ್ಯಾಸವಾಗಿಹೋಗಿದೆ. ಸರಿಯಾದ ಸಮಯಕ್ಕೆ ಉತ್ತಮ ವೈದ್ಯರ ಸಲಹೆಯನ್ನು ಪಡೆಯಿರಿ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಆಲೋಚಿಸುವಿರಿ. ಸಾಧಿಸುವ ಛಲವನ್ನು ಯಾವುದಾರೂ ಘಟನೆ ನಿಮ್ಮನ್ನು ಎಚ್ಚರಿಸೀತು.

ಕಟಕ ರಾಶಿ: ಅಪಮಾನವು ನಿಮ್ಮ ದೊಡ್ಡ ಶತ್ರುವಿನಂತೆ‌ ಕಾಣಿಸುವುದು. ನೆಮ್ಮದಿಯಿಂದ ಇರಲು ನಿಮಗೆ ಕಷ್ಟವಾಗುವುದು. ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ವೈದ್ಯರಿಗೆ ಪ್ರಶಂಸೆಯ ದಿನ.‌ ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿಯು ಇರುವುದು. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಳ್ಳುವಿರಿ. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌ ನಿಮ್ಮ ರಹಸ್ಯವನ್ನು ನೀವು ಗೊತ್ತಿಲ್ಲದೇ ಬೇರೆಯವರ ಜೊತೆ ಹಂಚಿಕೊಳ್ಳುವಿರಿ. ಅಸಾಂವಿಧಾನಿಕ ವಿಚಾರದ ಬಗ್ಗೆ ನಿಮಗೆ ಕುತೂಹಲವು ಹೆಚ್ಚಾಗಿ ಇರುವುದು. ಸಮಯಕ್ಕೆ ಬೆಲೆಯನ್ನು ಕೊಡುವುದು ಉತ್ತಮ.

ಸಿಂಹ ರಾಶಿ: ಮಾತಿಗೆ ತಪ್ಪುವ ಸಾಧ್ಯತೆ ಇದೆ. ಬೇಕಾದ ವಸ್ತುವೇ ನಿಮ್ಮಿಂದ ಕಣ್ಮರೆಯಾದೀತು. ವಿರಾಮ ಮನಃಸ್ಥಿಯಲ್ಲಿ ಇರುವ ನಿಮಗೆ ಕೆಲಸವು ಬರಬಹುದು. ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ‌ ಸ್ನೇಹವನ್ನು ಬೆಳೆಸಿಕೊಳ್ಳುವಿರಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ವಿದೇಶದ ಪ್ರಯಾಣಕ್ಕೆ ಆಯಾಸವು ಆಯಾಸವು ಅಡ್ಡಿಬರಬಹುದು. ದೇಹವನ್ನು ದಂಡಿಸುವ ಅನಿವಾರ್ಯತೆ ಇರಲಿದೆ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ಮನೋರಂಜನೆಗೆ ಸಮಯವನ್ನು ಹೊಂದಿಸಿಕೊಳ್ಳುವಿರಿ. ಕಷ್ಟವೆಂದು ಸಿಕ್ಕ ಕೆಲಸವನ್ನು ಬಿಡುವಿರಿ. ಯಾರಿಗಾದರೂ ಏನಾದರೂ ಹೇಳಬೇಕೆಂದಿದ್ದರೆ ನೇರವಾಗಿ ಹೇಳಿ.

ಕನ್ಯಾ ರಾಶಿ: ಸಂಗಾತಿಯ ಸಲಹೆಯಿಂದ‌ ತೊಂದರೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಬೇಸರವನ್ನು ಜಾಣ್ಮೆಯಿಂದ ದೂರ ಮಾಡಿಕೊಳ್ಳುವಿರಿ. ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುವುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಅಧಿಕಲಾಭವೂ ಆಗದು. ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವನ್ನು ಬಳಿಯಬಹುದು. ಬೆನ್ನಿನ ನೋವು ನಿಮ್ಮ ಕಾರ್ಯಗಳ‌ ಏಕಾಗ್ರತೆಯನ್ನು ಕೆಡಿಸೀತು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಹೆಬ್ಬಯಕೆ ಬೇಡ. ಮೋಜಿಗಾಗಿ ಹಣವನ್ನು ಖರ್ಚು ಮಾಡಬೇಕಾದೀತು. ಕೂಡಿಟ್ಟ ಹಣವನ್ನು ನೀವು ಬಿಡಿಸಿಕೊಳ್ಳುವ ಅನಿವಾರ್ಯತೆಯು ಬಂದೀತು.

ತುಲಾ ರಾಶಿ: ದಾಂಪತ್ಯದ ವಿರಸವನ್ನು ನೀವೇ ಖುದ್ದಾಗಿ ಬಗೆಹರಿಸಿಕೊಳ್ಳುವುದು ಸೂಕ್ತ. ಭೂಮಿಗೆ ಸಂಬಂಧಿಸಿದ ವಿವಾದವು ಮತ್ತೆ ಹೆಚ್ಚಾದೀತು. ಇಂದು ನೀವು ತೋರಿಕೆಗೆ ಬಹಳ ಶಾಂತರಂತೆ ಕಂಡರೂ ಒಳಗೇ ಜ್ವಾಲಗ್ನಿಯಂತೆ ಉರಿಯುತ್ತಿರುವಿರಿ. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಅತಿಯಾದ ಒತ್ತಡವು ನಿಮ್ಮ ದಕ್ಷತೆಯನ್ನು ಕಡಿಮೆ‌ ಮಾಡುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸುವುದು. ನಿಮ್ಮ ಉತ್ತಮ ಹವ್ಯಾಸವು ಪ್ರಯೋಜನಕ್ಕೆ ಬಂದೀತು. ಇಂದು ಖರೀದಿಸಿದ ಹೊಸ ವಸ್ತುಗಳು ನಿಮಗೆ ಬಹಳ ಖುಷಿಯನ್ನು ಕೊಡುವುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸಿರುವುದು ಮನಸ್ಸನ್ನು ಹಿಗ್ಗಿಸಿರುವುದು. ಯಾರೋ ಆಡಿದ ನಕಾರಾತ್ಮಕ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ.

ವೃಶ್ಚಿಕ ರಾಶಿ: ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಸ್ತಬ್ಧ ಮಾಡಬಹುದು. ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊರಬೇಕಾದೀತು. ಮೇಲಿಂದ ಮೇಲೆ‌ ಬೀಳವ ಘಾತದಿಂದ ಮನಸ್ಸು ದುರ್ಬಲವಾಗಬಹುದು. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಯಾರನ್ನೋ ನಂಬಿ‌ ಹಣಕಾಸಿನ ವ್ಯವಹಾರವನ್ನು ಮಾಡುವಿರಿ. ತೊಂದರೆಯಾದೀತು. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ. ಬಂಧುಗಳ ಮಾತಿಂದ ಸಿಟ್ಟಾದರೂ ತೋರಿಸಲು ಹೋಗುವುದಿಲ್ಲ. ಕೃಷಿಯ ಕಾರ್ಯದಲ್ಲಿ ಉತ್ಸಾಹವು ಇರದು.

ಧನು ರಾಶಿ: ತಂದೆಯ ಮಾತು ಕಿರಿಕಿರಿ‌ ಎನಿಸಬಹುದು. ನಿಮ್ಮ ಇಂದಿನ ಪ್ರಯಾಣವು ಯಶಸ್ವಿಯಾಗಿದೇಹೋದೀತು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು. ಆಹಾರದ ಮಾರಾಟದಿಂದ ಲಾಭ ಸಿಗುವುದು. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು‌‌. ಕಛೇರಿಯಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗಲಿದೆ‌. ಮನೆ ಕೆಲಸಕ್ಕೆ ಆಲಸ್ಯವು ಇರುವುದು. ಸಮಾರಂಭದಲ್ಲಿ ಅನಿರೀಕ್ಷಿತ ಗೌರವವು ನಿಮಗೆ ಪ್ರಾಪ್ತವಾಗುವುದು. ನಿಮ್ಮ‌ ನಿಷ್ಠೆಯು ಎಂದಿನಂತೆ ಇರಲಿದೆ.

ಮಕರ ರಾಶಿ: ಗೌರವವನ್ನು ಕೊಟ್ಟು ಅದನ್ನು ಪಡೆಯುವುದು ಸೂಕ್ತ. ನಿಮ್ಮೆದುರೇ ನಿಮ್ಮ‌ ಬಗ್ಗೆ ಮಾತನಾಡಬಹುದು. ಉದ್ಯೋಗದ ಸ್ಥಳದಲ್ಲಿ ಉತ್ಸಾಹವು ಹೆಚ್ಚಿರಲಿದೆ. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ಪತ್ರವ್ಯವಹಾರವು ಸಂಪೂರ್ಣ ಪ್ರಾಮಾಣಿಕವಾಗಿ ಇರದು ಎಂಬುದು ಗಮನದಲ್ಲಿ ಇರಲಿ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ. ಇವತ್ತಿಗೆ ತುರ್ತಾಗಿ ಬೇಕಾದುದನ್ನು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸವನ್ನು ಮಾಡಬೇಕಾದೀತು. ಮಾತಿನಿಂದ ಎಲ್ಲರನ್ನೂ ಗೆಲ್ಲುವಿರಿ.

ಕುಂಭ ರಾಶಿ: ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ನೆರೆಹೊರೆಯವರ ವಿಚಾರದಲ್ಲಿ ಸಣ್ಣ ಅಸಮಾಧಾನ ಇರಲಿದೆ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ಯಾರಿಂದಲೂ ಆರ್ಥಿಕ ಸಹಾಯವು ಸಿಗದೇ ಕಷ್ಟವಾದೀತು. ನಿಮ್ಮ ಕೆಲಸವೇ ನಿಮ್ಮ ತಿಳಿಸಲಿ. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದು. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಸ್ತಿಕೆ ಬೇಡ. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಇಂದು ಭೀತಿಯು ಇರಲಿದ್ದು ಮನೆಯನ್ನು ಬಿಟ್ಟು ಹೋಗಲಾರಿರಿ. ಎಲ್ಲಿಗೂ ಹೋಗಲು ಮನಸ್ಸಾಗದು. ಶುಭಾವಾರ್ತೆಯಿಂದ ಖುಷಿ ಇರುವುದು. ದೂರದಲ್ಲಿರುವ ಮಕ್ಕಳನ್ನು ಕಾಣಲು ಹೋಗುವಿರಿ.

ಮೀನ ರಾಶಿ: ಹಣಕಾಸಿನ ವಿಚಾರದಲ್ಲಿ ಅಸಮಾಧನಾ ಇರಲಿದ್ದು, ಇದರಕ್ಕಾಗಿ ಮನೆಯಲ್ಲಿ ಕಲಹವಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ವಿಚಲಿತವಗಲಿದೆ. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ಮಕ್ಕಳ‌ ವಿವಾಹದ ವಿಚಾರವನ್ನು ಎಲ್ಲಿಯೂ ಪ್ರಸ್ತಾ‌ಪ ಮಾಡುವುದು ಬೇಡ. ಪ್ರಯಾಣದಲ್ಲಿ ಜಾಗರೂಕತೆ ಇರಲಿ. ನಿಮಗೆ ಇಂದು ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗಿದ್ದು ದೂರದ ಊರಿನಿಂದ ನೋಡಲು ಹೋಗುವಿರಿ. ಪ್ರೇಮವು ಯಾರಿಂದಲೋ ಬಹಿರಂಗವಾಗುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ನಿಮ್ಮ ಮಾತಿನಿಂದ ತಾಯಿಗೆ ಬೇಸರವಾಗಲಿದೆ.

ಲೋಹಿತಶರ್ಮಾ – 8762924271 (what’s app only)

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್