ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 11 ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವವರಿಗೆ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ನಿಮ್ಮ ಬಳಿ ಇರುವಂತಹ ಬಜೆಟ್ ಒಳಗೆ ತುಂಬಾ ಅದ್ಭುತವಾಗಿದ್ದನ್ನು ಸಾಧಿಸಿ ತೋರಿಸಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನಗಳು ಅಥವಾ ವಸ್ತುಗಳ ವ್ಯವಹಾರವನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣವು ಹೆಚ್ಚಳ ಆಗಲಿದೆ. ಇಷ್ಟು ಸಮಯ ಹೇಳಬೇಕು ಅಂದುಕೊಂಡು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ವಿಚಾರ ಒಂದನ್ನು ಈ ದಿನ ಹೇಳಲಿದ್ದೀರಿ. ಇದರಿಂದ ಸಮಾಧಾನವಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕ ಕೆಲವು ರೆಫರೆನ್ಸ್ ದೊರೆಯಲಿದೆ.
ಬಡ್ತಿ ಅಥವಾ ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಇದಕ್ಕೆ ಸಂಬಂಧ ಪಟ್ಟಂತಹ ಶುಭ ಸುದ್ದಿ ಕಿವಿಗೆ ಬೀಳಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪ್ರಾಮುಖ್ಯ ಹೆಚ್ಚಳವಾಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಸೂಕ್ತ ಸಂಬಂಧಗಳನ್ನು ಹುಡುಕುತ್ತಿರುವವರಿಗೆ ಸಂಬಂಧಿಗಳು ನೆರವಿಗೆ ಬರಲಿದ್ದಾರೆ. ಮಕ್ಕಳ ಶಿಕ್ಷಣದ ವಿಚಾರವಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಜಮೀನು, ಸೈಟಿಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಶತ್ರುತ್ವ ಸಾಧಿಸುತ್ತಿರುವವರಿಗೆ ಈ ದಿನ ಭಾರೀ ಹಿನ್ನಡೆ ಆಗಲಿದೆ.
ಈ ದಿನ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವಂತಹವರು ಬಹಳ ಎಚ್ಚರಿಕೆಯಿಂದ ಇರಬೇಕು. ಸಣ್ಣ- ಪುಟ್ಟ ವಿಚಾರಗಳಿಗೂ ವೈಮನಸ್ಯ, ಅಭಿಪ್ರಾಯ ಭೇದಗಳು ಸೃಷ್ಟಿಯಾಗಲಿವೆ. ಆಪ್ತರೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ದೊಡ್ಡ ತೊಂದರೆ ಸಿಕ್ಕಿ ಬೀಳಲಿದ್ದೀರಿ. ಯಾವುದೇ ವಿಚಾರದಲ್ಲೂ ಸಂಪೂರ್ಣ ಮಾಹಿತಿ ಪಡೆಯುವ ತನಕ ಅಂತಿಮ ನಿರ್ಧಾರಕ್ಕೆ ಬರಬೇಡಿ. ಕಡಿಮೆ ಮೊತ್ತಕ್ಕೆ ಸಿಗುತ್ತಿದೆ ಅಂತಲೋ ಅಥವಾ ಹಣವನ್ನು ನಿಧಾನಕ್ಕೆ ಪಾವತಿಸಬಹುದು ಎಂಬ ಕಾರಣದಿಂದಲೋ ನಿಮಗೆ ಅಗತ್ಯವಿಲ್ಲದಿದ್ದರೂ ವಸ್ತುವನ್ನು ಖರೀದಿಸುವ ಸಾಧ್ಯತೆಗಳಿವೆ. ಯಾರು ಕ್ರೆಡಿಟ್ ಕಾರ್ಡ್ ಅನ್ನು ಬಳಸುವಂಥವರು ಖರ್ಚಿನ ಮೇಲೆ ನಿಗಾ ಇರಿಸಿಕೊಳ್ಳಿ.
ನೀವು ಬಹಳ ನಿರೀಕ್ಷೆಯೊಂದಿಗೆ ಆರಂಭಿಸಿದ ಕೆಲಸ ಒಂದನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಈ ದಿನ ನೀವೇನಾದರೂ ಸ್ನೇಹಿತರ ಜೊತೆಗೆ ಪ್ರಯಾಣ ಮಾಡುತ್ತಿದ್ದೀರಿ ಅಂತಾದಲ್ಲಿ ಸಾಮಾನ್ಯ ದಿನಗಳಿಗಿಂತ ಬಹಳ ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ. ಅದರಲ್ಲೂ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೀರಿ ಅಂತಾದರೆ ಇನ್ನೂ ಹೆಚ್ಚು ಜಾಗ್ರತೆಯನ್ನು ವಹಿಸಿ. ರಾತ್ರಿ ಪ್ರಯಾಣವಂತೂ ಸರ್ವತಾ ಕೂಡದು. ಯಾರು ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಇಂಥದ್ದನ್ನು ಹೆಚ್ಚಿಗೆ ಬಳಸುತ್ತೀರೋ ಅಂಥವರಿಗೆ ಕಣ್ ತಪ್ಪಿನಿಂದ ನಷ್ಟವಾಗುವ ಸಾಧ್ಯತೆಗಳಿವೆ. ಈ ದಿನ ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣವನ್ನು ಮಾಡಿ.
ಮಕ್ಕಳ ಸಲುವಾಗಿ ಹೂಡಿಕೆ ಮಾಡುವ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಿದ್ದೀರಿ. ನೀವು ಈಗಾಗಲೇ ಕೆಲಸ ಮಾಡಿದ್ದೀರಿ, ಆದರೆ ಹಣ ಬರುವುದು ಬಾಕಿ ಇದೆ ಅಂತಾದಲ್ಲಿ ಈ ದಿನ ಪ್ರಯತ್ನ ಪಡಿ. ಅದು ಬರುವ ಸಾಧ್ಯತೆ ಹೆಚ್ಚಿದೆ. ಮಹಿಳೆಯರು ಈ ಹಿಂದೆ ಕೆಲಸ ಮಾಡುತ್ತಿದ್ದಿರಿ, ಅದಾದ ನಂತರ ಸ್ವಲ್ಪ ದೀರ್ಘವಾದಂತಹ ಬ್ರೇಕ್ ತೆಗೆದುಕೊಂಡಿದ್ದೀರಿ. ಇದೀಗ ಮತ್ತೆ ಕೆಲಸವನ್ನು ಹುಡುಕುತ್ತಿದ್ದೀರಿ ಎಂದಾದರೆ ಈ ದಿನ ಪ್ರಯತ್ನಪಟ್ಟರೆ ಉದ್ಯೋಗ ದೊರೆಯುವ ಅವಕಾಶಗಳು ಹೆಚ್ಚಿವೆ. ಸ್ವಂತ ವ್ಯಾಪಾರ, ವ್ಯವಹಾರ ಅಥವಾ ಉದ್ಯಮಗಳನ್ನು ಮಾಡುತ್ತಿರುವವರು ವಿಸ್ತರಣೆಗಾಗಿ ಪ್ರಯತ್ನ ಪಡುತ್ತೀರಿ ಎಂದಾದರೆ ಈ ದಿನ ಪ್ರಯತ್ನಪಟ್ಟಲ್ಲಿ ಯಶಸ್ಸು ದೊರೆಯಲಿದೆ.
ಸಾಮಾಜಿಕವಾಗಿ ನಿಮ್ಮ ಸ್ಥಾನ- ಮಾನ ಹೆಚ್ಚಾಗುವಂತಹ ಸಾಧ್ಯತೆಗಳಿವೆ. ಬಹಳ ಹಿಂದಿನಿಂದ ಮನೆಗೆ ತರಬೇಕು ಅಂದುಕೊಂಡಿದ್ದ ವಸ್ತುಗಳನ್ನು ಈಗ ತರಲಿದ್ದೀರಿ. ನವದಂಪತಿ ಇದ್ದಲ್ಲಿ ಪ್ರಯಾಣಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಅದರಲ್ಲೂ ವಿದೇಶಗಳಿಗೆ ತರಡುವಂತಹ ಯೋಗ ಇದೆ. ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಸಂತಾನಕ್ಕಾಗಿ ಬಹಳ ಸಮಯದಿಂದ ಪ್ರಯತ್ನ ಪಡುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಮೂಲಕ ಸಂತಾನಕ್ಕಾಗಿ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ಸ್ಥಳದ ಬಗ್ಗೆ ಮಾಹಿತಿ ದೊರೆಯಲಿದೆ.
ಈ ದಿನ ಮೌನವಾಗಿದ್ದಷ್ಟೂ ಉತ್ತಮ. ನಿಮಗೆ ಸಂಬಂಧ ಪಡೆದಂತಹ ವಿಚಾರದಲ್ಲಿ ವಿಪರೀತ ಆಸಕ್ತಿ ತೋರಿಸುವುದಕ್ಕೆ ಹೋಗಬೇಡಿ. ಯಾರು ನಿಮ್ಮ ಸ್ವಂತ ಊರಿನಿಂದ ಹೊರಗೆ ಕೆಲಸ ಮಾಡುವಂಥವರು ಇದ್ದೀರೋ ಅಂಥವರಿಗೆ ಅಪವಾದಗಳು ಬರಲಿವೆ. ಇದರಲ್ಲಿ ನಿಮ್ಮದೇನು ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ಈಗಾಗಲೇ ಮದುವೆ ನಿಶ್ಚಯ ಆಗಿದೆ ಎಂಬಂತಹವರು ಈ ದಿನ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಈ ಸಂಬಂಧ ಮುರಿದು ಹೋಗುವಂತಹ ಸಾಧ್ಯತೆಗಳು ಜಾಸ್ತಿ ಇದ್ದು, ಅದಕ್ಕಾಗಿ ಕೆಲವರು ಚಾಡಿ ಹೇಳುವಂತಹ ಸನ್ನಿವೇಶಗಳು ಕಾಣಿಸುತ್ತೇವೆ.
ನಿಮಗೆ ಬೇಕಾಗಿರುವುದೇನು ಅಥವಾ ಬೇಡವಾಗಿರುವುದೇನು ಎಂಬುದರ ಬಗ್ಗೆ ಸ್ಪಷ್ಟತೆಯೇ ಸಿಗದಂತೆ ಆಗುತ್ತದೆ. ಸಂಬಂಧಿಗಳ ಎದುರು ನಿಮಗೆ ಅವಮಾನ ಆಗುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾದಂತಹ ಸನ್ನಿವೇಶ ಸೃಷ್ಟಿಯಾಗಲಿದೆ. ಬಹಳ ನಂಬಿಕೆ ತಿಳಿಸಿದಂಥ ವ್ಯಕ್ತಿಗಳೇ ನಿಮ್ಮ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಲಿದ್ದಾರೆ. ಯಾವುದೇ ಕಾರಣಕ್ಕೂ ಷೇರು ಮಾರುಕಟ್ಟೆಯಲ್ಲೋ ಅಥವಾ ಹೊಸ ಉದ್ಯಮ, ವ್ಯಾಪಾರದಲ್ಲೂ ಹಣ ಹೂಡಿಕೆ ಮಾಡುವುದಕ್ಕೆ ಈ ದಿನ ಮುಂದಾಗಬೇಡಿ. ಹೊಸದಾಗಿ ಪರಿಚಯವಾದಂತಹ ವ್ಯಕ್ತಿಗಳ ಜೊತೆಗೆ ಸಂಸಾರಕ್ಕೆ ಸಂಬಂಧಪಟ್ಟದ್ದು ಅಥವಾ ನಿಮ್ಮ ಅಂತರಂಗದ ವಿಚಾರಗಳನ್ನು ಹಂಚಿಕೊಳ್ಳಲು ಹೋಗಬೇಡಿ.
ಮನೆಯಲ್ಲಿನ ಹಿರಿಯರ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ತೀವ್ರ ಆತಂಕಕ್ಕೆ ಗುರಿ ಮಾಡಲಿವೆ. ಸಂಬಂಧಿಕರಲ್ಲಿ ಕೆಲವರು ನಿಮ್ಮ ಬಗ್ಗೆ ವದಂತಿಗಳನ್ನು, ಅದರಲ್ಲೂ ತಪ್ಪಾದ ಅರ್ಥ ಬರುವಂತಹ ವದಂತಿಗಳನ್ನು ಹರಡುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ಖರ್ಚು ನಿಮ್ಮ ಕೈ ಮೀರಿ ಹೋಗಲಿದ್ದು ಅದನ್ನು ನಿಭಾಯಿಸುವುದು ಹೇಗೆ ಎಂಬುದು ತಿಳಿಯದೆ ಕಂಗಾಲಾಗಲಿದ್ದೀರಿ. ಉದ್ಯೋಗ ಸ್ಥಳದಲ್ಲೂ ಒತ್ತಡದ ವಾತಾವರಣ ಇರಲಿದೆ. ಈ ಹಿಂದೆ ನೀವಾಗಿಯೇ ಒಪ್ಪಿಕೊಂಡ ಕೆಲಸ ಒಂದನ್ನು ಒತ್ತಡದ ಮಧ್ಯೆ ಮರೆತು ಹೋಗಿ, ಅದು ಈ ದಿನ ನಿಮ್ಮ ಕುತ್ತಿಗೆಗೆ ಬರುವಂತಹ ಅವಕಾಶಗಳು ಜಾಸ್ತಿ ಇವೆ. ಸೂರ್ಯನಾರಾಯಣನ ಆರಾಧನೆಯನ್ನು ಮಾಡಿದಲ್ಲಿ ಈ ದಿನ ನಿಮ್ಮ ಬಹುತೇಕ ಸಮಸ್ಯೆಗಳು ಅಲ್ಪ ಪ್ರಮಾಣದಲ್ಲೇ ಶಮನವಾಗಲಿವೆ.