Horoscope: ರಾಶಿಭವಿಷ್ಯ, ಈ ರಾಶಿಯವರು ತಮ್ಮ ಅನುಕೂಲತೆಗೆ ತಕ್ಕಂತೆ ಕೆಲಸವನ್ನು ಮುಂದುವರಿಸಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ತಮ್ಮ ಅನುಕೂಲತೆಗೆ ತಕ್ಕಂತೆ ಕೆಲಸವನ್ನು ಮುಂದುವರಿಸಿ
ಇಂದಿನ ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Oct 11, 2023 | 12:15 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 11) ರಾಶಿ ಭವಿಷ್ಯದಲ್ಲಿ (Horoscope) ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:19 ರಿಂದ 01:48ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:51 ರಿಂದ ಮಧ್ಯಾಹ್ನ 12:19ರ ವರೆಗೆ.

ಮೇಷ ರಾಶಿ: ನಿಮ್ಮ ನಿರೀಕ್ಷಿತ ಸಮಯವು ಸಮೀಪಿಸುತ್ತಿರುವಂತೆ ನಿಮಗೆ ಅನ್ನಿಸುವುದು. ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಒಳಗೆ ನೋವನ್ನು ಇಟ್ಟುಕೊಂಡು ಶಾಂತರೀತಿಯಲ್ಲಿ ಇರುವಂತೆ ತೋರುವಿರಿ. ವಿವಾಹಯೋಗವು ಬಂದರೂ ಅದನ್ನು ನೀವು ಸ್ವೀಕರಿಸುವ ರೀತಿ ಭಿನ್ನವಾಗಿ ಇರಲಿದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಕಾರ್ಮಿಕ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸದೇ ಗುಟ್ಟಾಗಿ ಇಟ್ಟುಕೊಳ್ಳುವಿರಿ. ಸಂಗಾತಿಗೆ ಸುಳ್ಳು ಹೇಳಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಪಕ್ಷಪಾತದಿಂದ ನಿಮಗೇ ತೊಂದರೆ ಎದುರಾದೀತು. ವೃತ್ತಿಯ ಕೆಲಸಗಳ ನಡುವೆ ಕುಟುಂಬವು ಮರೆಯಾಗಬಹುದು.

ವೃಷಭ ರಾಶಿ: ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದಿಸಬೇಕು ಎನ್ನುವ ಹಂಬಲವು ಇರುವುದು. ನಿಮ್ಮ ಬಗ್ಗೆಯೇ ನೀವು ಕೊರಗುವುದು ಬೇಡ. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇರದು. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನವು ಫಲಿಸುವುದು. ಸಿಗದಿರುವುದರ ಬಗ್ಗೆ ಆಸೆಯನ್ನು ಬಿಡುವಿರಿ. ಅಪರಿಚಿತರ ಒಡನಾಟ ಹೆಚ್ಚು ಶ್ರೇಯಸ್ಕರವಲ್ಲ. ನಿಮ್ಮ ಅನುಕೂಲತೆಗೆ ತಕ್ಕಂತೆ ಕೆಲಸವನ್ನು ಮುಂದುವರಿಸಿ. ಯಾರಾದರೂ ಬಂದು ನಿಮ್ಮ ಬಳಿ ಕೆಲಸ ಮಾಡಿಕೊಡಲು ಕೇಳಬಹುದು. ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಿ. ಇನ್ನೊಬ್ಬರಿಗೆ ವಿರೋಧವಾಗುವ ಮಾತುಗಳನ್ನು ಆಡುವುದು ಬೇಡ.

ಮಿಥುನ ರಾಶಿ: ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಕಳೆದುಕೊಂಡ ವಸ್ತುವಿನ ಬಗ್ಗೆ ವ್ಯಾಮೋಹ ಹೋಗದು. ಸಂಗಾತಿಗೆ ಇಂದು ಸಂತೋಷವನ್ನು ಕೊಡುವಿರಿ. ಕಾರ್ಯದ ಒತ್ತಡವಿರುವ ಕಾರಣ ಸಮಯದ ಅಭಾವ ಎನಿಸಬಹುದು. ನೀವು ಹಿರಿಯರ ಜೊತೆ ಸಣ್ಣ ವಿಚಾರಕ್ಕೂ ವಾಗ್ವಾದಕ್ಕೆ ಇಳಿಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳುವಿರಿ. ತಂದೆಯ ವಿಚಾರದಲ್ಲಿ ನಿಮಗಿರುವ ಅಸಮಾಧಾನವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ಮನಸ್ಸು ಹಗುರಾಗುವುದು.

ಕಟಕ ರಾಶಿ: ಆಪ್ತರ ಮಾತಿಗೆ ಯಾವ ಬೆಲೆಯನ್ನೂ ನೀವು ಕೊಡುವುದಿಲ್ಲ. ಸಭೆಯಲ್ಲಿ ನಿಮಗೆ ಗೌರವವು ಸಿಗುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ‌ ಮಾಡದು. ನಿಮ್ಮನ್ನು ಇಷ್ಟವಿಲ್ಲದ ಕಡೆ ವರ್ಗಾವಣೆ ಮಾಡುವ ತೀರ್ಮಾನವಾಗಬಹುದು. ಉದ್ಯೋಗದ ಸ್ಥಳದಲ್ಲಿ ಕಹಿ‌ ಅನುಭವವಾದೀತು. ಯಾರದೋ ತಪ್ಪಿನಿಂದ ನಿಮಗೆ ದೋಷವು ಅಂಟಿಕೊಂಡಿದ್ದು ತಿಳಿದುಬರುವುದು. ದುರಭ್ಯಾಸದಿಂದ ಆರ್ಥಿಕ ನಷ್ಟವಾಗುತ್ತದೆ. ಅವಕಾಶಗಳಿಂದ ನೀವು ವಂಚಿತರಾಗುವಿರಿ. ಕುಟುಂಬದ ನಡವಳಿಕೆಯು ನಿಮಗೆ ಅರ್ಥವಾಗದೇ ಹೋದೀತು. ಅಪರಿಚಿತರ ಜೊತೆ ವ್ಯವಹಾರವನ್ನು ಮಾಡುವಾಗ ನಿಮ್ಮ ಗುಟ್ಟನ್ನು ಬಿಟ್ಟಕೊಡಬೇಡಿ. ಮನೆಯಲ್ಲಿ ಅತಿಥಿ ಸತ್ಕಾರವು ಸಂಭ್ರಮದಿಂದ ನಡೆಯುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್