Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2023 | 12:45 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:19 ರಿಂದ 01:48ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:51 ರಿಂದ ಮಧ್ಯಾಹ್ನ 12:19ರ ವರೆಗೆ.

ಧನು ರಾಶಿ : ಯಾರಾದರೂ ನಿಮ್ಮನ್ನು ಚೇಡಿಸಬಹುದು. ವಾಹನ ಖರೀದಿಗೆ ಗೊಂದಲದ‌ ಮನಸ್ಸು ಬೇಡ. ವೃತ್ತಿಯನ್ನೇ ಬದಲಾಯಿಸುವ ಆಸೆ ಬರಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ. ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರುವುದು. ಸಿಟ್ಟಿನಿಂದ ಕೂಗಾಡುವಿರಿ. ಸಹೋದರನ ಕಡೆಯಿಂದ ಸಹಾಯವನ್ನು ಅಪೇಕ್ಷಿಸುವಿರಿ. ನಿಮ್ಮ ಕಾರ್ಯಕ್ಕೆ ಧನಸಹಾಯವನ್ನು ಸಾಲವಾಗಿ ಪಡೆಯುವಿರಿ. ವ್ಯವಹಾರದ ಅಭಿವೃದ್ಧಿಗೆ ವಿದೇಶದ ಸಂಪರ್ಕವು ಬೆಳೆಯಬಹುದು. ನೀವೇ ಇಲ್ಲದ ಕಲ್ಪನೆಯನ್ನು ಮಾಡಿಕೊಂಡು ನಿಮ್ಮವರನ್ನು ದೂರಮಾಡಿಕೊಳ್ಳುವಿರಿ. ಸಜ್ಜನರ ಸಹವಾಸವು ನಿಮಗೆ ಸಂತೋಷವಾಗುವುದು. ಯಾರೂ ಮಾತೂ ನಿಮಗೆ ಪಥ್ಯವಾಗದು.

ಮಕರ ರಾಶಿ : ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ದುಸ್ಸ್ವಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಹೊಸ ಉದ್ಯೋಗಕ್ಕೆ ನಿಮ್ಮ‌ ಮನಸ್ಸು ತೆರದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ನಿಮಗೆ ಬಾರದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಇಂದು ನಿಮ್ಮಿಂದ ಕುಟುಂಬವು ಸಂತೋಷಗೊಳ್ಳುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಚಿಂತೆಗೊಳ್ಳುವಿರಿ. ದುಂದುವೆಚ್ಚವನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುವಿರಿ. ಸಹೋದ್ಯೋಗಿಗಳು ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಹೆಚ್ಚು ಹೇಳಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಏಕಾಂತವು ಬೇಸರ ತರಿಸಿದ್ದು ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ. ಶಿವಸ್ತೋತ್ರವನ್ನು ಮಾಡಿ.

ಕುಂಭ ರಾಶಿ : ಸ್ತ್ರೀಯರಿಗೆ ಕೃಷಿಯ ಬಗ್ಗೆ ಆಸಕ್ತಿ ಬರಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ‌ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಕಛೇರಿಯ ಒತ್ತಡವನ್ನು ಮನೆಯವರೆಗೂ ತರುವುದು ಬೇಡ. ಇಂದಿನ ಆದಾಯದಿಂದ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವಿರಿ. ನೀವು ಪರಿಚಿತರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ವರ್ತಿಸಿ. ಪ್ರೀತಿಯ ವಿಚಾರದಲ್ಲಿ ಇಂದು ಬೇಸರವಾಗಬಹುದು. ನಿಮಗೆ ಅಗೌರವ ತೋರಬಹುದು. ಸಹೋದ್ಯೋಗಿಗಳ ಕಾರ್ಯದಿಂದ ನೀವು ಕೋಪಗೊಳ್ಳುವಿರಿ. ತಪ್ಪು ನಿರ್ಧಾರವನ್ನು ತೆಗೆದುಕೊಂಡು ಪಶ್ಚಾತ್ತಾಪಪಡಬೇಕಾದೀತು.

ಮೀನ ರಾಶಿ : ನಿಮ್ಮದಾದ ಸ್ವತಂತ್ರ ಆದಾಯವನ್ನು ಇಟ್ಟುಕೊಳ್ಳಿ. ಖಾಸಗಿ ವೃತ್ತಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಾತನಾಡುವಿರಿ. ಶತ್ರುಗಳಿಗೆ ನೀವೇ ಕೇಂದ್ರಬಿಂದು ಆಗಿರಬಹುದು. ನಿಮ್ಮ ಲೆಕ್ಕಾಚಾರವು ತಪ್ಪಾಗಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ನಿಮಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು. ಅಧ್ಯಾತ್ಮದಲ್ಲಿ ಹೆಚ್ಚು ಮನಸ್ಸು ಇರುವುದು. ನಿಮ್ಮ ವ್ಯಾಪಾರದಿಂದ ಅಧಿಕ ಲಾಭವು ಸಿಗುವುದು. ಅಧಿಕಾರಿ ವರ್ಗದವರ ಕಣ್ಣು ನಿಮ್ಮ ಮೇಲೆ ಇರಲಿದೆ. ಇಂದು ಯಾವ ವಾಗ್ವಾದಗಳಿಗೂ ಅವಕಾಶಶನ್ನು ಕೊಡಬೇಡಿ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ಅದನ್ನು ಮನಸ್ಸಿಗೆ ತೆಗೆದುಕೊಳ್ಳುವುದು ಬೇಡ. ದೀರ್ಘಾವಧಿಯ ಹೂಡಿಕೆಯಿಂದ ನಿಮಗೆ ಲಾಭವಾಗುವುದು. ಹನುಮಾನ್ ಚಾಲೀಸ್ ಪಠಣ ಮಾಡಿ.

-ಲೋಹಿತಶರ್ಮಾ – 8762924271 (what’s app only)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್