Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹದಿನೈದು ದಿನದ ಅಂತರದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ; ಏನು ಇದರ ಪರಿಣಾಮ?

ಇದೇ ಅಕ್ಟೋಬರ್ 14ನೇ ತಾರೀಕಿನಂದು ಸೂರ್ಯಗ್ರಹಣ ಇದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆ ಕಾರಣದಿಂದಾಗಿ ಗ್ರಹಣದ ಸೂತಕ ಆಚರಣೆ ಇರುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 8 ಗಂಟೆಗೆ ಗ್ರಹಣ ಸ್ಪರ್ಶ. ಇದು ಪೂರ್ಣ ಗ್ರಹಣವಾಗಿದ್ದು, ಪಾಶ್ವಾತ್ಯ ರಾಷ್ಟ್ರಗಳಿಗೆ ಗೋಚರ ಇರುತ್ತದೆ. ಪುರಾಣಗಳ ಉಲ್ಲೇಖದ ಪ್ರಕಾರ, ಮಹಾಭಾರತ ಯುದ್ಧ, ರಾಮಾಯಣದಲ್ಲಿ ಖರದೂಷಣರ ವಧೆಯಿಂದ ರಾವಣನ ಅಂತ್ಯದವರೆಗೆ ನಡೆದದ್ದು ಈ ಗ್ರಹಣ ಪರಿಣಾಮ. ಸಾಲದ್ದಕ್ಕೆ ಅಕ್ಟೋಬರ್ 28-29ರಂದು ಖಂಡಗ್ರಾಸ ಚಂದ್ರ ಗ್ರಹಣವೂ ಬರುವುದು.

ಹದಿನೈದು ದಿನದ ಅಂತರದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ; ಏನು ಇದರ ಪರಿಣಾಮ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 11, 2023 | 2:54 PM

ಇದೇ ಅಕ್ಟೋಬರ್ 14ನೇ ತಾರೀಕಿನಂದು ಸೂರ್ಯಗ್ರಹಣ ಇದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆ ಕಾರಣದಿಂದಾಗಿ ಗ್ರಹಣದ ಸೂತಕ ಆಚರಣೆ ಇರುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 8 ಗಂಟೆಗೆ ಗ್ರಹಣ ಸ್ಪರ್ಶ. ಇದು ಪೂರ್ಣ ಗ್ರಹಣವಾಗಿದ್ದು, ಪಾಶ್ವಾತ್ಯ ರಾಷ್ಟ್ರಗಳಿಗೆ ಗೋಚರ ಇರುತ್ತದೆ. ಪುರಾಣಗಳ ಉಲ್ಲೇಖದ ಪ್ರಕಾರ, ಮಹಾಭಾರತ ಯುದ್ಧ, ರಾಮಾಯಣದಲ್ಲಿ ಖರದೂಷಣರ ವಧೆಯಿಂದ ರಾವಣನ ಅಂತ್ಯದವರೆಗೆ ನಡೆದದ್ದು ಈ ಗ್ರಹಣ ಪರಿಣಾಮ. ಸಾಲದ್ದಕ್ಕೆ ಅಕ್ಟೋಬರ್ 28-29ರಂದು ಖಂಡಗ್ರಾಸ ಚಂದ್ರ ಗ್ರಹಣವೂ ಬರುವುದು. ಇದೊಂದು ಅವಾಂತರದ ಸೂಚನೆ ಎಂದೇ ಹೇಳಬೇಕಾಗುತ್ತದೆ. ನಮಗೆ ಹಿಂದಿನ ಘಟನೆಗಳು ಮುಂದಿನ ದಿನದ ಅವಾಂತರಗಳ ಬಗ್ಗೆ ಹೇಳಲು ಸಾಕ್ಷಿಯಾಗುತ್ತದೆ. ಇದನ್ನು ಪುಷ್ಟೀಕರಿಸಲು ಡಿಸೆಂಬರ್ ನಲ್ಲಿ ಗುರು- ಕುಜರ ಪರಿವರ್ತನಾ ಯೋಗ, ಭೃಗು (ಶುಕ್ರ)- ಅಂಗಾರಕ (ಕುಜ) ಯುತಿ ಧನು ರಾಶಿಯಲ್ಲಿ ಆಗುತ್ತದೆ. ಅದಕ್ಕೆ ಸರಿಯಾಗಿ ಭಾರತವೂ ಸೇರಿದಂತೆ ಜಗತ್ತಿನಾಧ್ಯಂತ ನಡೆಯುವ ಜನಾಂಗೀಯ ಕಲಹಗಳು, ಸನಾತನ ವಿರೋಧಿ ಚಟುವಟಿಕೆಗಳು, ದುಷ್ಟರನ್ನು ವೈಭವೀಕರಿಸುವ ಪ್ರಕ್ರಿಯೆಗಳೆಲ್ಲ ಪೂರ್ವಭಾವಿಯಾಗಿ ಶುರುವಾಗಿದೆ.

ಗ್ರಹಣಗಳು ಹೇಗೆ ಉಂಟಾಗುತ್ತದೆ ಎಂಬ ವಿವರಣೆ ಅಗತ್ಯವಿಲ್ಲ. ಯಾಕೆಂದರೆ ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಈ ಗ್ರಹಣದಲ್ಲಿ ರವಿಯು ಮೇಲ್ನೋಟಕ್ಕೆ ಕೇತು ಯುತಿಯಲ್ಲಿ ಇರೋದಿಲ್ಲ. ಆದರೆ ಅಪಸವ್ಯ ಗ್ರಹರಾದ ರಾಹು- ಕೇತುಗಳು ಇನ್ನೇನು ಕೆಲ ಗಂಟೆಗಳಲ್ಲಿ ಮೀನ- ಕನ್ಯಾಗಳಲ್ಲಿ ಉದಯವಾಗುವ ಸ್ಥಿತಿ. ರಾಹು ಮೇಷದಲ್ಲಿ, ಕೇತು ತುಲಾರಾಶಿಯಲ್ಲಿ 0.50° (ಡಿಗ್ರಿ)ಯಲ್ಲೂ ಸದ್ಯ ಇದ್ದಾರೆ. ರವಿಯು ಕನ್ಯಾದಲ್ಲಿ 26.41(ಡಿಗ್ರಿ), ಚಂದ್ರನು ಕನ್ಯಾರಾಶಿಯಲ್ಲಿ 23.44(ಡಿಗ್ರಿ)ಯಲ್ಲೂ ಇರುತ್ತಾರೆ.

ಸುಮಾರು 17(ಡಿಗ್ರಿ) ಒಳಗಿನ ಅಂತರದಲ್ಲಿ ಗ್ರಹರಿದ್ದರೆ ಅದು ಗ್ರಹಣವಾಗುತ್ತದೆ. ಇಲ್ಲಿ ತೀರಾ ಸನಿಹ ಸ್ಥಿತಿಯಲ್ಲಿ ಇದ್ದಾರೆ. ಅಂದರೆ ಅಮೆರಿಕಾ, ಬ್ರೆಜಿಲ್ ಇತ್ಯಾದಿ ದೇಶಗಳ ಆಂಗಲ್​​​ಗಳಿಗೆ ಈ ಸ್ಥಿತಿಯು ಪೂರ್ಣ ಗ್ರಹಣ ಸ್ಥಿತಿಯಾಗುತ್ತದೆ. ಗ್ರಹಣ ಎಂದರೆ ರವಿ- ಚಂದ್ರರು ಮಲಿನವಾಗುತ್ತಾರೆ ಎಂದರ್ಥವಲ್ಲ. ರವಿಗೂ ಚಂದ್ರನಿಗೂ, ರಾಹು ಕೇತು ಬಿಂದುಗಳಿಗೂ ಕೋಟಿ ಮೈಲುಗಳ ಅಂತರವಿದೆ. ಆದರೆ ರವಿಯ ಕಿರಣಗಳು ಗ್ರಹಣ ಕಾಲದಲ್ಲಿ ಕೆಲ ಭಾಗದ ಭೂಮಿಗೆ ಸ್ಪರ್ಶ ಆಗುವುದಿಲ್ಲ.

ಸತತ ನವಗ್ರಹರ ಕಿರಣಗಳು ಭೂ ಸ್ಪರ್ಶ ಆಗುತ್ತಿರಲೇ ಬೇಕು. ಒಂದು ಕ್ಷಣವೂ ಆಗದಿದ್ದಾಗ ಅದು ದುಷ್ಪರಿಣಾಮ ಬೀರುತ್ತದೆ. ಅಮಾವಾಸ್ಯೆಯಂದೇ ಸೂರ್ಯಗ್ರಹಣ ಬರುವುದು. ಇದು ಮನುಷ್ಯನಿಗೆ ಆಗುವಾಗ ಮಾನಸಿಕ ಖಿನ್ನತೆಯೂ ಭೂಮಿಗೆ ಆಗುವಾಗ ಪರಿಭ್ರಮಣೆಯಲ್ಲಿ ಅಸಮತೋಲನವನ್ನೂ ಉಂಟು ಮಾಡುತ್ತದೆ. ರವಿಯಿಂದ ಶಕ್ತಿ ಪಡೆಯುವ ಗ್ರಹರು ತಮ್ಮ ಕಿರಣಗಳನ್ನು ಇತರ ಗ್ರಹಗಳ ಮೇಲೆ ಬೀರುತ್ತಾರೆ. ರವಿಯೇ ಗ್ರಹಣ ಗ್ರಸ್ತನಾದಾಗ ಇದು ಭೂಮಿಯ ಮೇಲೆ ಪ್ರಭಾವ ಕಡಿಮೆಯಾಗಿ, ಇತರ ಗ್ರಹರ ಪ್ರಭಾವ ಜಾಸ್ತಿಯಾಗುವ ಸೂಚನೆ. ದೋಸೆ ಕಾವಲಿಗೆ ಹಾಕಿದ ಬೆಂಕಿ ಆರಿದರೆ ದೋಸೆ ಹೇಗಾದೀತೋ ಹಾಗೆ ಇದು. ಪರಿಣಾಮವಾಗಿ ಪ್ರಕೃತಿ ವಿಕೋಪ, ಮಾನಸಿಕ ವಿಕೃತಿಗಳು ಉಂಟಾಗುತ್ತದೆ.

ಇದನ್ನೂ ಓದಿ: ಖಗೋಳಶಾಸ್ತ್ರ ಪ್ರಿಯರಿಗೆ ಇದೇ ಅಕ್ಟೋಬರ್ ಎರಡು ರಸದೌತಣಗಳು: ಸಮಯ, ಸಂದರ್ಭಗಳು ಯಾವುವು? ವಿವರ ಇಲ್ಲಿದೆ

ಯಾವ ಮನೋ ವಿಕಾರಗಳು?

ಒಬ್ಬರ ಮೇಲೆ ಧ್ವೇಷ ಇದ್ದಾಗ ಅದುವೇ ವಿಪರೀತಕ್ಕೆ ಹೋದರೆ ಏನಾದೀತು? ಅದೇ ರೀತಿ ಭೂಮಿಯೊಳಗಿನ ದುರ್ಬಲತೆಯೂ ದುಷ್ಪರಿಣಾಮ ಬೀರಬಹುದು. ಒಂದು ಕಾಮಗಾರಿಯ ಕಾಂಕ್ರೀಟ್ ಕ್ಯೂರಿಂಗ್ ಆಗಲು ಏನೇನು ಪ್ರಮುಖವಾಗಿ ಬೇಕೋ ಅದೇ ಸಿಗದಿದ್ದಾಗ ಏನಾದೀತು? ಇಷ್ಟೇ ತತ್ವ.

ಕೆಲವರಿಗೆ ನನ್ನ ರಾಶಿಗೆ ಏನು ಫಲ ಎಂದು ತಿಳಿಯುವ ಕುತೂಹಲ. ಆದರೆ ನಾನು ದ್ವಾದಶ ರಾಶಿ ಫಲ ಹೇಳಲು ಇಚ್ಚಿಸುವುದಿಲ್ಲ. ಯಾಕೆ ಗೊತ್ತಾ? ಇದು ಇಡೀ ಭೂಮಿಗೆ ಸಂಬಂಧಿಸಿದ್ದಾಗಿದೆ. ಹೀಗಿರುವಾಗ ಒಂದು ರಾಶಿಯ ಜನರಿಗೆ ಒಳಿತಾಗಿದ್ದರೂ ಇನ್ನೊಂದು ರಾಶಿಗೆ ಕೆಡುಕಾದರೆ ಅದು ನಮಗೂ ಹಾನಿಯೆ. ನಿಮ್ಮಲ್ಲಿ ಹಲವಾರು ರಾಶಿಯ ಜನರಿದ್ದಾರೆ. ಅದರಲ್ಲಿ ಯಾರಿಗೆ ಹಾನಿಯಾದರೂ ಪರೋಕ್ಷವಾಗಿ ಹಾನಿ ಆಗದ ರಾಶಿಯವರಿಗೂ ಹಾನಿಯೇ ಅಲ್ಲವೇ? ನನ್ನ ಆಪ್ತರೊಬ್ಬರಿಗೆ ಹಾನಿಯಾಗಿ, ನನಗೆ ಒಳಿತಾಗಿದ್ದರೆ ಅದನ್ನು ಶುಭ ಎಂದು ಹೇಳಲಾಗುತ್ತದೆಯೇ?

ನಾವು ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವ ಸನಾತನ ಸಂಪ್ರದಾಯ ಪಾಲಿಸುವವರು. ಎಲ್ಲರಿಗೂ ಒಳಿತಾದರೆ ಸಂತೋಷ. ಒಬ್ಬರಿಗೆ ಕೆಟ್ಟದಾಗಿ, ನಮಗೆ ಒಳಿತಾದರೆ ಪರೋಕ್ಷವಾಗಿ ಅದು ಅಶುಭವೇ. ವಿದ್ಯುತ್ ತಂತಿ ತುಂಡಾದರೆ ಇಡೀ ಕೇರಿಗೇ ವಿದ್ಯುತ್ ಕಡಿತಗೊಳ್ಳುವಂತೆಯೇ ಇದು ಕೂಡಾ ಆಗಿರುತ್ತದೆ.

ಲೇಖಕ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ