Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 2ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 2ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 2ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2023 | 1:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ  ಅಕ್ಟೋಬರ್ 2ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ಮಾಡಬೇಕು ಅಂದುಕೊಂಡ ಕೆಲಸಕ್ಕೆ ಹೆಚ್ಚು ಸಮಯವನ್ನು ನೀಡುವುದಕ್ಕೆ ಈ ದಿನ ಸಾಧ್ಯವಾಗುವುದಿಲ್ಲ. ಇತರರ ನಿರೀಕ್ಷೆಗಳಿಗೆ ಮತ್ತು ಅಗತ್ಯಗಳಿಗೆ ಹೇಗೆ ಕೆಲಸ ಮಾಡುವುದು ಅನ್ನೋದಕ್ಕೆ ಹೆಚ್ಚಿನ ಸಮಯ ಹೋಗುತ್ತದೆ. ನಿಮ್ಮಲ್ಲಿ ಕೆಲವರು ಈಗಾಗಲೇ ಮಾಡಿರುವಂತಹ ಉಳಿತಾಯ ಅಥವಾ ಬೇರೆ ಎಲ್ಲಾದರೂ ಮಾಡಿರುವಂತಹ ಹೂಡಿಕೆಯನ್ನು ತೆಗೆದು, ಒಂದು ಕಡೆ ಶಾಶ್ವತವಾದ ಆದಾಯ ಬರುವಂಥಲ್ಲಿ ಹಣ ಹಾಕುವುದಕ್ಕೆ ಯೋಚನೆ ಮಾಡಲಿದ್ದೀರಿ. ಕುಟುಂಬ ಸದಸ್ಯರ ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈಗಾಗಲೇ ಪ್ರಯತ್ನಪಟ್ಟಿದ್ದೀರಿ ಎಂದಾದರೆ ಅದಕ್ಕೆ ಸಂಬಂಧಪಟ್ಟಂತೆ ಶುಭ ಸುದ್ದಿಯನ್ನು ಕೇಳುವ ಯೋಗ ಈ ದಿನ ನಿಮಗೆ ಇದೆ. ಯಾವುದೋ ಹಳೆ ವಿಚಾರದಲ್ಲಿ ನಿಮ್ಮ ಮನಸ್ಸು ಕಹಿಯಾಗಿದ್ದರೆ ಆ ವಿಚಾರವನ್ನು ಈ ದಿನ ಪದೇಪದೇ ಚರ್ಚಿಸಲು ಹೋಗಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ನಿಮ್ಮಲ್ಲೊಂದು ಆಕರ್ಷಣಾ ಶಕ್ತಿ ಇರುತ್ತದೆ. ತುಂಬಾ ಪ್ರಭಾವಿಗಳನ್ನು ಹಾಗೂ ಮಾನಸಿಕವಾಗಿ ಬಹಳ ಗಟ್ಟಿಯಾಗಿ ಇರುವವರನ್ನು ಸಹ ನಿಮ್ಮ ಮಾತಿನ ಮೂಲಕ ಸೆಳೆದಿಟ್ಟುಕೊಳ್ಳುವಂತಹ ಸಾಮರ್ಥ್ಯ ಈ ದಿನ ನಿಮಗಿರುತ್ತದೆ. ಕಾದಂಬರಿಗಳನ್ನು ಬರೆಯುವಂತಹವರು, ಕ್ರಿಯಾಶೀಲರಾದಂತಹ ವ್ಯಕ್ತಿಗಳು ಇಂಥವರಿಗೆ ಈ ದಿನ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿಯಾಗುವಂತಹ ಯೋಗ ಇದೆ. ಭವಿಷ್ಯದಲ್ಲಿ ನಿಮಗೆ ತುಂಬಾ ಉಪಯುಕ್ತ ಆಗುವಂತಹ ವಿಚಾರಗಳನ್ನು ಚರ್ಚೆ ಮಾಡಲಿದ್ದೀರಿ. ನಕ್ಕು ಸುಮ್ಮನಾಗುವಂತಹ ನಿಮ್ಮ ಬಗೆಗಿನ ಗಾಸಿಪ್ ಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುವುದಕ್ಕೆ ಹೋಗಬೇಡಿ ಮತ್ತು ಈ ವಿಚಾರವನ್ನು ಯಾರು ಹಬ್ಬಿಸುತ್ತಿದ್ದಾರೆ ಎಂದು ತಿಳಿದರು ಕೂಡ ಅವರೊಂದಿಗೆ ಜಗಳಕ್ಕೆ ನಿಲ್ಲಬೇಡಿ. ನಿಮ್ಮ ಮನೆಯ ಹತ್ತಿರ ಆಂಜನೇಯ ದೇವಸ್ಥಾನ ಇದ್ದರೆ ಸಂಜೆಯ ವೇಳೆಗೆ ದರ್ಶನವನ್ನು ಮಾಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಒಬ್ಬ ವ್ಯಕ್ತಿ ನಿಮಗೆ ತಗುಲಿಕೊಂಡು ಇಡೀ ದಿನ ವ್ಯರ್ಥವಾಗುವಂತೆ ಮಾಡಬಹುದು ಎಚ್ಚರಿಕೆ ಇರಲಿ. ಒಂದು ವೇಳೆ ಅಂತಹವರು ಯಾರಾದರೂ ನಿಮಗೆ ತಗುಲಿಕೊಂಡಲ್ಲಿ ಆರಂಭದಲ್ಲೇ ಅವರೊಂದಿಗೆ ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿ, ಅವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಸರಕಾರಿ ಕೆಲಸಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಈ ದಿನ ಒಂದಿಷ್ಟು ಒತ್ತಡದ ಅಥವಾ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ನೆಲದ ಮೇಲೆ ನೀರು ಅಥವಾ ಜಾರುವಂಥ ವಸ್ತುಗಳು ಬಿದ್ದಿವೆಯೇ ಎಂಬುದನ್ನು ಸರಿಯಾಗಿ ನೋಡಿಕೊಂಡು ಓಡಾಡುವುದು ಮುಖ್ಯವಾಗುತ್ತದೆ. ಏಕೆಂದರೆ ಇದೇ ಕಾರಣದಿಂದ ಸಣ್ಣ ಪ್ರಮಾಣದಲ್ಲಿ ಆದರೂ ಪೆಟ್ಟು ಮಾಡಿಕೊಳ್ಳುವಂತಹ ಸಾಧ್ಯತೆಗಳು ಇವೆ. ಈ ದಿನ ಕಪ್ಪು ಬಟ್ಟೆಯನ್ನು ಧರಿಸದಿರುವುದು ಉತ್ತಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕೆಲವು ವಿಚಾರವನ್ನು ಮುಂದು ಮಾಡಿಕೊಂಡು, ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆರೋಪಗಳನ್ನು ಮಾಡಲಿದ್ದಾರೆ. ಒಂದು, ಆ ವಿಚಾರದಲ್ಲಿ ನಿಮ್ಮ ಕಡೆಯ ವಾದ ಏನಿದೆ ಅದನ್ನು ಸ್ಪಷ್ಟವಾಗಿ ಮುಂದಿಡಿ, ಯಾವುದೇ ಕಾರಣಕ್ಕೂ ಸಂಕೋಚ ಮಾಡಿಕೊಳ್ಳಬೇಡಿ. ನಿಮ್ಮ ಕಡೆಯೇ ತಪ್ಪಾಗಿದ್ದಲ್ಲಿ ಕ್ಷಮೆಯನ್ನು ಕೇಳುವುದು ಉತ್ತಮ. ಯಾವುದೇ ಕಾರಣಕ್ಕೂ ಮನೆಯ ಹೊರಗಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡದಿರುವುದು ಕ್ಷೇಮ. ಒಂದು ವೇಳೆ ಅನಿವಾರ್ಯ ಪರಿಸ್ಥಿತಿ ಎಂದಾದಲ್ಲಿ ಸ್ವಚ್ಛತೆಯ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಿ. ಫುಡ್ ಪಾಯಿಸನ್ ನಂತಹ ಸಮಸ್ಯೆಗಳನ್ನು ಈ ದಿನ ಎದುರಿಸುವಂತಾಗುತ್ತದೆ. ಕಾಗದ, ಪತ್ರಗಳಿಗೆ ಏನಾದರೂ ಈ ದಿನ ಸಹಿ ಮಾಡುತ್ತಿದ್ದೀರಿ ಎಂದಾದರೆ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ಓದಿ, ತಿಳಿದುಕೊಳ್ಳಿ. ಏನಾದರೂ ಸಂಶಯಗಳಿದ್ದಲ್ಲಿ ಅನುಭವಿಗಳು, ಹಿರಿಯರನ್ನು ಕೇಳಿ ಆ ಸಂಶಯ ಪರಿಹರಿಸಿಕೊಂಡು ಆನಂತರ ಸಹಿ ಮಾಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಮನೆಯ ಒಳಗಿನ ಕೆಲಸವೇ ಇರಬಹುದು ಅಥವಾ ಹೊರಗಿನ ಕೆಲಸವೇ ಇರಬಹುದು ತುಂಬಾ ಅಚ್ಚುಕಟ್ಟಾಗಿ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈ ದಿನ ಸಾಕುಪ್ರಾಣಿಗಳನ್ನು ಮನೆಗೆ ತರುವಂತಹ ಯೋಗ ಇದೆ. ಹೊಸ ಬಟ್ಟೆಗಳನ್ನು, ಅದರಲ್ಲೂ ಬ್ರಾಂಡೆಡ್ ಬಟ್ಟೆಗಳನ್ನು ಖರೀದಿ ಮಾಡುವಂತಹ ಸಾಧ್ಯತೆಗಳು ಸಹ ಇವೆ. ನಿಮ್ಮ ಮನಸ್ಸಿಗೆ ತುಂಬಾ ಹತ್ತಿರವಾದವರು ಅಥವಾ ಆಪ್ತ ಸ್ನೇಹಿತರು ಎನಿಸಿಕೊಂಡವರ ಜೊತೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಪಬ್ ರೆಸ್ಟೋರೆಂಟ್ ಇಂತಹ ಕಡೆಗೆ ತೆರಳಿ ಒಟ್ಟಿಗೆ ಊಟ, ತಿಂಡಿಯನ್ನು ಮಾಡಲಿದ್ದೀರಿ. ಮನೆಗೆ ಗ್ಯಾಜೆಟ್ ಅಥವಾ ದೊಡ್ಡ ಅಳತೆಯ ಟಿವಿಯನ್ನು ಅಥವಾ ಹೋಮ್ ಥಿಯೇಟರ್ ಅನ್ನು ಖರೀದಿಸುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನೆಯಲ್ಲಿ ದೇವತಾರಾಧನೆಯನ್ನು ಆಯೋಜಿಸುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ತಂದೆ, ತಾಯಿಯ ಆಶೀರ್ವಾದ ಸಹ ದೊರೆಯಲಿದೆ. ಈ ಹಿಂದೆ ಪ್ರಯತ್ನವೇ ಪಟ್ಟಿರದಂತಹ ಒಂದು ಕೆಲಸವನ್ನು ಮಾಡಿ, ಅದರಲ್ಲಿ ಯಶಸ್ಸು ಪಡೆಯಲಿದ್ದೀರಿ, ಇದರಿಂದ ನಿಮ್ಮ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ತುಂಬಾ ದೊಡ್ಡ ಮಟ್ಟದಲ್ಲಿ ಜಾಸ್ತಿಯಾಗುತ್ತದೆ . ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ.ಅದರಲ್ಲಿಯೂ ಅಲ್ಪ ಸಮಯಕ್ಕಾದರೂ ವಿದೇಶಗಳಿಗೆ ಪ್ರಯಾಣ ಮಾಡಬೇಕಾದಂತಹ ಅವಕಾಶ ನಿಮಗೆ ದೊರೆಯಬಹುದು ಎಂಬ ಸುಳಿವು ಸಿಗಲಿದೆ . ಯಾವುದಾದರೂ ಒಂದು ವಿಚಾರದಲ್ಲಿ ಭವಿಷ್ಯದಲ್ಲಿ ಏನಾಗಬಹುದು ಎಂಬ ಚಿಂತೆ ಕಾಡುತ್ತಿರುವವರಿಗೆ ಅದರ ನಿವಾರಣೆ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ನಿಮ್ಮ ಆರೋಗ್ಯದ ವಿಚಾರ ಪ್ರಾಮುಖ್ಯ ಪಡೆಯಲಿದೆ. ದೇಹದ ತೂಕ ಇಳಿಸಿಕೊಳ್ಳಬೇಕು, ಚರ್ಮ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು ಇಂಥದ್ದಕ್ಕೆ ನೀವು ಈ ದಿನ ಹೆಚ್ಚಿನ ಲಕ್ಷ್ಯ ನೀಡಲಿದ್ದೀರಿ. ಸ್ವಂತ ಉದ್ಯಮ, ವ್ಯವಹಾರ ಅಥವಾ ವ್ಯಾಪಾರ ಮಾಡುತ್ತಿರುವವರಿಗೆ ಅಂದುಕೊಂಡ ಪ್ರಮಾಣದಲ್ಲಿ ಆದಾಯ ಬರಲಾರದು. ನೀವು ಯಾವ ವ್ಯಕ್ತಿಯನ್ನು ಭೇಟಿ ಆಗಬಾರದು ಅಂದುಕೊಂಡಿರುತ್ತೀರೋ ಅಂಥವರ ಜೊತೆಗೆ ಹೆಚ್ಚಿನ ಸಮಯ ಕಲಿಯಬೇಕಾದಂತಹ ಅನಿವಾರ್ಯ ಸೃಷ್ಟಿ ಆಗಬಹುದು. ದೂರ ಪ್ರಯಾಣ ಮಾಡುತ್ತಿರುವಂತಹವರು ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಿದ್ಧತೆಯನ್ನು ಮಾಡಿಕೊಳ್ಳುವುದು ಉತ್ತಮ. ಇತರರ ವೈಯಕ್ತಿಕ ವಿಚಾರಗಳಲ್ಲಿ ನೀವು ಮೂಗು ತೂರಿಸಲು ಹೋಗಬೇಡಿ. ನಿಮಗೆ ಗೊತ್ತಿಲ್ಲದ ವಿಚಾರವಾಗಲಿ ಅಥವಾ ಅರ್ಧಂಬರ್ಧ ತಿಳಿದಂತಹ ಸಂಗತಿಯನ್ನಾಗಲಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಕ್ಕೆ ಸಹ ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಯವಾಗಿ ಮಾಡಿ ಮುಗಿಸಿಕೊಂಡು ಬಿಡೋಣ ಅಂದುಕೊಂಡ ಕೆಲಸ ಈ ದಿನ ಎಲ್ಲರಿಗೂ ತಿಳಿದು ಸಮಸ್ಯೆ ಆಗುವ ಸಾಧ್ಯತೆ ಇದೆ. ಪದೇ ಪದೇ ಅನಿಶ್ಚಿತತೆಯನ್ನು ಕಾಣಲಿದ್ದೀರಿ. ಹೆಚ್ಚೇನು ಖರ್ಚಾಗಲಾರದು, ಸಲೀಸಾಗಿ ಮಾಡಿಕೊಂಡು ಬಿಡೋಣ ಅಂದುಕೊಂಡಿರುತ್ತೀರಿ. ಅಂಥದ್ದಕ್ಕಾಗಿ ತುಂಬಾ ದೊಡ್ಡ ಮೊತ್ತವನ್ನು ನೀಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೀರಿ ಎಂದಾದರೆ ಈ ದಿನ ಸಾಧ್ಯವಾದಷ್ಟು ಅಂಥದ್ದರಿಂದ ದೂರವಿದ್ದರೆ ಕ್ಷೇಮ. ನಿಮ್ಮಲ್ಲಿ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಹ ಯೋಗ ಇದೆ. ಸಣ್ಣಪುಟ್ಟ ವ್ಯಾಜ್ಯ ಅಥವಾ ಭಿನ್ನಾಭಿಪ್ರಾಯಗಳು ಕಂಡುಬಂದಲ್ಲಿ ಅದನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ನಿಮಗಿಂತ ಸಣ್ಣ ವಯಸ್ಸಿನವರ ಜೊತೆ ಮಾತನಾಡುತ್ತಿದ್ದೀರಿ ಅಂತಾದಲ್ಲಿ ಆಯ್ಕೆ ಮಾಡಿಕೊಳ್ಳುವ ಪದಗಳ ವಿಚಾರದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ಹರಿವು ಆಗಲಿದೆ. ನೀವು ಕೇಳದೆಯೇ ಕೆಲವರು ನಿಮಗೆ ನೆರವನ್ನು ನೀಡಬಹುದು. ಈ ಹಿಂದೆ ನೀವು ಮಾಡಿದ ಸಹಾಯದ ಉಪಕಾರ ಸ್ಮರಣೆಯನ್ನು ಮಾಡಿಕೊಂಡು ಕೆಲವರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ. ರುಚಿಕಟ್ಟಾದ ಊಟ ತಿಂಡಿ ಸವಿಯುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಬೇಕು ಎಂದಿರುವವರು ಯಾವುದನ್ನು ಖರೀದಿ ಮಾಡಬೇಕು ಎಂಬ ಬಗ್ಗೆ ಅಂತಿಮವಾದ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಬೆಳ್ಳಿ ಅಥವಾ ಬಂಗಾರದ ವಸ್ತುವನ್ನು ಕೊಳ್ಳುವಂತಹ ಸಾಧ್ಯತೆ ಇದೆ. ಮಕ್ಕಳ ಪ್ರತಿಭೆ ಹಾಗೂ ಅವರ ಸಾಮರ್ಥ್ಯವನ್ನು ಕಂಡು ಒಂದು ಬಗೆಯ ಸಮಾಧಾನ ಈ ದಿನ ನಿಮ್ಮಲ್ಲಿ ಮೂಡಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಆತಂಕಗಳು ದೂರವಾಗಲಿವೆ.

ಲೇಖನ- ಎನ್‌.ಕೆ.ಸ್ವಾತಿ

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ