AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 4ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುವುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 4ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 4ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ|

Updated on: Sep 04, 2023 | 8:19 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 4ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ಈ ಕೆಳಗಿನಂತಿದೆ. ನೋಡಿ ತಿಳಿದುಕೊಳ್ಳಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹೊಸ ಅಪಾರ್ಟ್ ಮೆಂಟ್, ಮನೆಗಳು ಖರೀದಿಗಾಗಿ ಹುಡುಕಾಡುತ್ತಿದ್ದಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವಂಥ ಯೋಗ ಇದೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ಈ ದಿನ ನಿಮ್ಮ ಪಾಲಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಉದ್ಯೋಗ ಬದಲಾವಣೆ ಮಾಡುವಂಥ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಸ್ಥಾನ- ಮಾನ ಜಾಸ್ತಿ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾರದೋ ಕೆಲಸಕ್ಕಾಗಿ ಜತೆಗೆ ಹೋಗಿ, ನೀವು ಕೈಯಿಂದ ಹಣ ಕಳೆದುಕೊಳ್ಳುವಂಥ ಯೋಗ ಕಂಡುಬರುತ್ತಿದೆ. ಕಣ್ಣು, ಕಿವಿ ಅಥವಾ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಈಗಾಗಲೇ ಇದ್ದಲ್ಲಿ ಅದು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ದಿನ ಅದೆಷ್ಟೇ ಬಿಡುವಿದ್ದರೂ ಇನ್ನೊಬ್ಬರ ಕೆಲಸದ ಸಲುವಾಗಿ ಸುಮ್ಮನೆ ಹೋಗಿಬರುವಂಥ ನಿರ್ಧಾರ ಮಾಡಿದರೂ ತಪ್ಪು ಮಾಡಿದಂತೆಯೇ ಆಗಲಿದೆ. ಹೊಸ ಬಟ್ಟೆ ಖರೀದಿಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಳೇ ಪ್ರೀತಿ- ಪ್ರೇಮ ಪ್ರಕರಣಗಳು ನಿಮ್ಮನ್ನು ಈ ದಿನ ಕಾಡಲಿದೆ. ಜತೆಗೆ ನೀವು ತೆಗೆದುಕೊಂಡ ತೀರ್ಮಾನದಲ್ಲಿ ತಪ್ಪು ಮಾಡಿದಿರಿ ಎಂಬಂತೆ ಪರಿತಪಿಸುವಂತಾಗುತ್ತದೆ. ಹೀಗೆ ಅನ್ಯಮನಸ್ಕರಾಗಿ ಏನಾದರೂ ಕೆಲಸದಲ್ಲಿ ತೊಡಗಿಕೊಂಡಲ್ಲಿ ಹಾಗೂ ಅದು ಬಹಳ ಮುಖ್ಯ ಕೆಲಸವೇ ಆಗಿದ್ದಲ್ಲಿ ತಪ್ಪುಗಳಾಗಬಹುದು. ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿ ಆದೀತು. ಹೊಸ ವಿಷಯವೊಂದನ್ನು ಕಲಿಸುವುದಕ್ಕೆ ಒಳ್ಳೆ ಗುರುವೊಬ್ಬರನ್ನು ಭೇಟಿ ಆಗುವ ಯೋಗ ಇದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಆಪ್ತರು ಎನಿಸಿಕೊಂಡವರು ತಮ್ಮ ಪರವಾಗಿ ಯಾವುದಾದರೂ ಕೆಲಸ ಮಾಡಿಕೊಂಡು ಬರುವಂತೆ ನಿಮಗೇನಾದರೂ ಹೇಳಿದಲ್ಲಿ ಪೂರ್ವಾಪರ ಆಲೋಚಿಸದೆ ಹೂಂ ಅಂದು ಬಿಡಬೇಡಿ. ಏಕೆಂದರೆ ಇದನ್ನು ಏಕಾಏಕಿ ಒಪ್ಪಿಕೊಂಡು ಆ ನಂತರ ಪರಿತಪಿಸುವಂಥ ಸನ್ನಿವೇಶ ನಿರ್ಮಾಣ ಆಗಬಹುದು. ಮುಖ್ಯವಾದ ದಾಖಲೆಪತ್ರಗಳು, ಹಣ ಇರುವಂಥ ಬ್ಯಾಗ್ ಗಳನ್ನು ಒಯ್ಯುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಜಾಘ್ರತೆಯಿಂದ ಇರಬೇಕು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವಾಡುವ ಮಾತು, ನಡೆದುಕೊಳ್ಳುವ ರೀತಿ ಬಹಳ ಮುಖ್ಯವಾಗುತ್ತದೆ. ದೊಡ್ಡ ಸಂಸ್ಥೆಗಳಲ್ಲಿ ನಿಮ್ಮಲ್ಲಿ ಕೆಲವರಿಗೆ ಕೆಲಸದ ಅವಕಾಶಗಳು ಹುಡುಕಿಕೊಂಡು ಬರುವಂಥ ಸಾಧ್ಯತೆ ಇದೆ. ಆದ್ದರಿಂದ ಮುಕ್ತವಾಗಿ ಆಲೋಚನೆ ಮಾಡುವುದು ಒಳಿತು. ಸಂಬಂಧಿಕರು ನಿಮಗೆ ಕೊಡಬೇಕಾದ ಹಣವಿದ್ದಲ್ಲಿ ಈ ದಿನ ಒಂದಿಷ್ಟು ಶ್ರಮ ಹಾಕಿದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಕಾಣುವುದಕ್ಕೆ ಸಾಧ್ಯವಿದೆ. ಮನೆಯ ನಿರ್ಮಾಣ ಮಾಡುತ್ತಿರುವವರಿಗೆ ಹಣಕಾಸಿನ ವಿಚಾರಕ್ಕೆ ಒತ್ತಡ ತೀವ್ರವಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸ್ನೇಹಿತರು ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡು, ಅವರು ತಪ್ಪಿಸಿಕೊಳ್ಳುವುದಕ್ಕೆ ಅದರೊಳಗೆ ನಿಮ್ಮನ್ನು ಎಳೆದುಕೊಂಡು ಬಿಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಚಾರವನ್ನು ನೀವು ಒಪ್ಪಿಕೊಳ್ಳುವ ಮುನ್ನ ಪೂರ್ತಿ ವಿಚಾರಿಸಿ, ಮುಂದಕ್ಕೆ ಹೆಜ್ಜೆ ಇಡುವುದು ಉತ್ತಮ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿರುವವರು ವ್ಯವಹಾರ ಪೂರ್ತಿ ಆಗುವ ತನಕ ನಿಮ್ಮ ಕೈಯಿಂದ ತಪ್ಪಿ ಹೋಗದಂತೆ ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಅನಿಸಿಕೆಗಳನ್ನು ಹೇಳುವ ಮುಂಚೆ ಯಾವ ವೇದಿಕೆ ಅದು ಎಂಬ ಬಗ್ಗೆ ಗಮನ ಇರಲಿ. ಏಕೆಂದರೆ ನಿಮ್ಮೆದುರು ಎಲ್ಲಕ್ಕೂ ಒಪ್ಪುವಂತೆ ತಲೆಯಾಡಿಸಿ, ನಿಮ್ಮನ್ನೇ ಬಲಿಪಶುವನ್ನಾಗಿ ಮಾಡುವ ಸಾಧ್ಯತೆ ಇದೆ. ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುವಂಥವರು ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬ್ಯಾಂಕಿಂಗ್ ವ್ಯವಹಾರಗಳು ಇದ್ದಲ್ಲಿ ನೀವೇ ಮಾಡಿಕೊಳ್ಳುವುದು ಉತ್ತಮ. ಇತರರಿಗೆ ಒಪ್ಪಿಸಿದಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮನಸ್ಸಿನಲ್ಲಿ ಇರುವ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದುಕೊಳ್ಳುತ್ತಿರುವವರಿಗೆ ಅದಕ್ಕೆ ಅವಕಾಶ ದೊರೆಯಲಿದೆ. ಇನ್ನು ಕಾರು- ಬೈಕ್ ಗಳನ್ನು ಖರೀದಿಸಬೇಕು ಎಂದು ಹಣಕಾಸನ್ನು ಹೊಂದಿಸುವುದಕ್ಕೆ ಪ್ರಯತ್ನ ಪಡುವಂಥವರಿಗೆ ಅದರಲ್ಲಿ ಯಶಸ್ಸು ದೊರೆಯಲಿದೆ. ಇತರರು ನಿಮ್ಮ ಬಗ್ಗೆ ಬೆರಗಿನಿಂದ ನೋಡುವಂತೆ- ತಮ್ಮಿಂದ ಆಗದು ಎಂದು ಕೈ ಬಿಟ್ಟ ಕೆಲಸವೊಂದನ್ನು ನೀವು ಮಾಡಿಕೊಂಡು ಬರಲಿದ್ದೀರಿ. ಸಂಘ- ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದೋನ್ನತಿ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಗೌರವ- ಸಮ್ಮಾನಗಳು ಆಗುವ ಯೋಗ ಇದೆ. ವಿದೇಶ ಪ್ರಯಾಣಕ್ಕೆ ತೆರಳುವುದಕ್ಕೆ ಸಿದ್ಧತೆ ನಡೆಸುತ್ತಿರುವವರಿಗೆ ಪ್ರಯತ್ನಗಳಿಗೆ ವೇಗ ದೊರೆಯಲಿದೆ. ಹಣಕಾಸಿನ ಆದಾಯ ಮೂಲವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೂಡಿಕೆಗೆ ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಇದೆ. ಆಹಾರದ ವಿಚಾರದಲ್ಲಿ ನಾಲಗೆ ಮೇಲೆ ಹಿಡಿತ ಸಾಧಿಸುವುದು ಮುಖ್ಯ ಆಗುತ್ತದೆ. ಇಲ್ಲದಿದ್ದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.

ಇನ್ನಷ್ಟು ಜ್ಯೋತಿಷ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!