ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 06 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:31 ರಿಂದ 14:03 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:59 ರಿಂದ 12:31ರ ವರೆಗೆ.
ಸಿಂಹ ರಾಶಿ : ವಿದ್ಯಾರ್ಥಿಗಳಿಗೆ ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳುವಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಸಣ್ಣ ವಿಚಾರವನ್ನು ನೀವೇ ದೊಡ್ಡ ಮಾಡಿಕೊಳ್ಳುವಿರಿ.
ಕನ್ಯಾ ರಾಶಿ : ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಬಹುದು. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಕುಟಂಬದವರು ಸೇರಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುವಿರು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಪೂರ್ಣ ಚಿತ್ರಣವು ಸಿಗದು. ಹಿರಿಯರ ಎದುರು ಸಭ್ಯತೆಯಿಂದ ನಡೆದುಕೊಳ್ಳಿ.
ತುಲಾ ರಾಶಿ : ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಡಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಆರ್ಥಿಕ ಒತ್ತಡದಿಂದ ಮನೆಯ ನೆಮ್ಮದಿಯು ಕದಡಬಹುದು. ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಬಗ್ಗೆ ಹೆಚ್ಚು ಕರುಣೆ ಬರಬಹುದು.
ವೃಶ್ಚಿಕ ರಾಶಿ : ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ಮನೆಗೆ ಸಹಕಾರವನ್ನು ನೀವು ನೀಡಲಿದ್ದು ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ಕಾರ್ತಿಕೇಯನು ನಿಮಗೆ ಬಲವನ್ನು ತುಂಬುವನು.