Horoscope: ದಿನಭವಿಷ್ಯ, ಈ ರಾಶಿಯವರ ಬಹು ದಿನಗಳ ಚಿಂತಿತ ಕಾರ್ಯವು ಇಂದು ಸಫಲವಾಗುವುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೂಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:53 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:48ರ ವರೆಗೆ.
ಸಿಂಹ ರಾಶಿ: ಅತಿಯಾದ ನಂಬಿಕೆಯಿಂದ ಕೆಲವು ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣವು ಇರಲಿದೆ. ನಿಮ್ಮ ವ್ಯವಹಾರಕ್ಕೆ ಯಾರಾದರೂ ಹಸ್ತಕ್ಷೇಪ ಮಾಡಲು ಬರಬಹುದು. ಸಿಟ್ಟು ಮಾಡಿಕೊಂಡರೂ ಕ್ಷಣ ಕಾಲದಲ್ಲಿ ಅದು ಸರಿಯಾಗುವುದು. ತಾಯಿಯಿಂದ ನಿಮಗೆ ಹಿತವಚನವು ಸಿಗಲಿದೆ. ಕೊರತೆಯಂತೆ ಕಾಣುವ ಆತ್ಮವಿಶ್ವಾಸವನ್ನು ಸ್ನೇಹಿತರು ತುಂಬುವರು. ವೃತ್ತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾದೀತು. ಬಾಲ್ಯದ ಸ್ನೇಹಿತರು ನಿಮ್ಮನ್ನು ಕಂಡು ಖುಷಿಪಡುವರು. ವೃತ್ತಿಜೀವನವು ಹೊಸ ದಿಕ್ಕಿನತ್ತ ಹೊರಳಬಹುದು.
ಕನ್ಯಾ ರಾಶಿ: ರಾಜಕೀಯವಾಗಿ ಇರುವವರು ಹಿನ್ನಡೆಯನ್ನು ಅನುಭವಿಸಬೇಕಾದೀತು. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳುವಿರಿ. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ತೆಗೆದುಕೊಳ್ಳದಿರುವುದು ಉತ್ತಮ. ಹಳೆಯ ನೋವುಗಳು ನಿಮ್ಮನ್ನು ಕಾಡಬಹುದು. ಶುಭ ಸುದ್ದಿ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರಲಿದೆ. ಉದ್ಯಮಿಗಳು ಲಾಭಕ್ಕಾಗಿ ಬಹಳ ಶ್ರಮಪಡಬೇಕಾಗುವುದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡಲಾಗದು. ದಾಂಪತ್ಯದಲ್ಲಿ ಸಣ್ಣ ವಿರಸವು ಇರಲಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾದುದು ಆಗಿರದು. ಅಧಿಕಾರಿಗಳನ್ನು ಮೆಚ್ಚಿಸಲು ನೀವು ಸಮಯವನ್ನು ಹಾಳುಮಾಡುವಿರಿ. ಸಮಾರಂಭದಲ್ಲಿ ನಿಮಗೆ ಉತ್ತಮ ಭೋಜನವು ಸಿಗಲಿದೆ.
ತುಲಾ ರಾಶಿ: ಭೂಮಿಯ ವ್ಯವಹಾರವನ್ನು ಸರಿಯಾದ ಕ್ರಮದಲ್ಲಿ ಮಾಡಿ. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುವಂತಹ ವಾತಾವರಣವು ಇರಲಿದೆ. ಅವುಗಳಿಗೆ ಕಿವಿಗೊಡದೇ ಕಾನೂನಾತ್ಮಕವಾದ ಪ್ರಕ್ರಿಯೆಯತ್ತ ಗಮನ ಕೊಡಿ. ಮಕ್ಕಳಿಗೆ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದೇ ಹೋಗಬಹುದು. ಮಹಿಳೆಯರು ಬಂಧುಗಳ ಮನೆಗೆ ಹೋಗುವ ಸಾಧ್ಯತೆ ಇದೆ. ಆಹಾರವನ್ನು ಸರಿಯಾಗಿ ಸಮಯಕ್ಕೆ ಸ್ವೀಕರಿಸಿ. ನಿಮ್ಮ ನಂಬಿಕೆಯನ್ನು ನೀವು ಸಮರ್ಥಿಸಿಕೊಳ್ಳುವಿರಿ. ಅಪರಿಚಿತರು ನಿಮ್ಮ ಎಲ್ಲ ವಿವರಗಳನ್ನು ಪಡೆಯಲು ಇಚ್ಛಿಸಬಹುದು.
ವೃಶ್ಚಿಕ ರಾಶಿ: ಇಂದು ಬಹು ದಿನಗಳ ಚಿಂತಿತ ಕಾರ್ಯವು ಸಫಲವಾಗುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರೂ ವಿರೋಧ ಬರುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ವಿವಾದ ಮಾಡಿಕೊಳ್ಳದೇ ಮಾಡಿಕೊಳ್ಳಿ. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅನುಭವಿಸುವಿರಿ. ನಿಮ್ಮ ಕಂಡು ಅಸೂಯೆ ಪಡುವವರಿಗೆ ನೀವು ಇನ್ನಷ್ಟು ತುಪ್ಪವನ್ನು ಹಾಕುವುದು ಬೇಡ. ಎಲ್ಲ ಸಮಯದಲ್ಲಿಯೂ ವಾತಾವರಣವು ನಿಮ್ಮ ಪರವಾಗಿಯೇ ಇರುತ್ತದೆ ಎಂಬುದನ್ನು ಮರೆತುಬಿಡಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಹೊಸತಾಗದು. ಇದಕ್ಕಾಗಿ ನೌಕರರು ತಿರುಗಿ ಬೀಳಬಹುದು. ಅವರ ವಿರೋಧವನ್ನು ಎದುರಿಸುವುದು ನಿಮಗೆ ಕಷ್ಟವಾದೀತು.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ