Horoscope: ಈ ರಾಶಿಯವರ ಅಹಂಕಾರದ ಮಾತುಗಳಿಂದ ಮಿತ್ರರೇ ನಿಮ್ಮ ವಿರುದ್ಧ ತಿರುಗಿ ನಿಲ್ಲಬಹುದು

| Updated By: ಆಯೇಷಾ ಬಾನು

Updated on: Sep 24, 2023 | 7:03 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರ ಅಹಂಕಾರದ ಮಾತುಗಳಿಂದ ಮಿತ್ರರೇ ನಿಮ್ಮ ವಿರುದ್ಧ ತಿರುಗಿ ನಿಲ್ಲಬಹುದು
ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 24 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ:ಪೂರ್ವಾಷಾಢ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 04:56 ರಿಂದ 6:27 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:25 ರಿಂದ 01:55 ರವರೆಗೆ, ಗುಳಿಕ ಕಾಲ ಸಂಜೆ 03:26 ರಿಂದ 04:56ರ ವರೆಗೆ.

ಸಿಂಹ ರಾಶಿ: ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ‌ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ವಾಹನ ಸಂಚಾರಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರದಲ್ಲಿ ಸಡಿಲಿಕೆ ಬೇಡ. ಭವಿಷ್ಯದ ಕನಸಿನಿಂದ ನೀವು ಹೊರಬನ್ನಿ. ಎಲ್ಲ ವಿಚಾರವನ್ನೂ ನೀವು ತಿಳಿಯಬೇಕು ಎಂಬ ಕುತೂಹಲವು ಇರುವುದು. ಮನೆಯಲ್ಲಿ ಅಧ್ಯಯನಕ್ಕೆ ತೊಂದರೆಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ತಾಯಿಯ ಸೇವೆಯನ್ನು ಶ್ರದ್ಧೆಯಿಂದ ಮಾಡಲಿದ್ದೀರಿ. ದುರಭ್ಯಾಸವನ್ನು ನೀವು ಬಿಡಬೇಕಾದೀತು.

ಕನ್ಯಾ ರಾಶಿ: ನಿಮ್ಮ‌ಅಹಂಕಾರದ ಮಾತುಗಳಿಂದ ಮಿತ್ರರೇ ನಿಮ್ಮ ವಿರುದ್ಧ ತಿರುಗಿ ನಿಲ್ಲಬಹುದು. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ನಿಮ್ಮ‌ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಮನೆಯಲ್ಲಿ ನಿಮ್ಮ ಕಾರ್ಯಗಳಿಗೆ ಹಿರಿಯರಿಂದ ವಿರೋಧ ಬರಲಿದೆ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗುವಿರಿ. ತಿಳಿವಳಿಕೆಯು ಇಂದು ನಿಮಗೆ ಮುಜುಗರವನ್ನು ತರಬಹುದು. ನಿಮ್ಮ ವೃತ್ತಿಯನ್ನು ಪ್ರೀತಿಸುವುದು ಅನಿವಾರ್ಯವೇ ಆಗಿರುತ್ತದೆ. ಅದು ನಿಮಗೆ ಅನುಕೂಲವನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಇನ್ನೊಬ್ಬರಿಗೆ ಕೊಡುವ ಮೊದಲು ಯೋಚಿಸಿ. ಸಾಧ್ಯವಾದಷ್ಟು ನಿಮ್ಮ ಸಮಯವು ವ್ಯರ್ಥವಾಗದಂತೆ ನೋಡಿಕೊಳ್ಳಿ.

ತುಲಾ ರಾಶಿ: ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಏಕಾಂತವು ನಿಮಗೆ ಬಹಳ ಪ್ರಿಯವಾಗಲಿದೆ. ‌ಆರ್ಥಿಕ ಅಭಿವೃದ್ಧಿಯಿಂದ ನೆಮ್ಮದಿ ಇರುವುದು. ದಾಂಪತ್ಯ ಜೀವನವನ್ನು ಬಹಳ ಆನಂದಿಸುವಿರಿ. ಸ್ನೇಹಿತರ ಜೊತೆ ಆಪ್ತವಾಗಿ ಕಾಲವನ್ನು ಕಳೆಯಲಿದ್ದೀರಿ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಯಾರು ಹೇಳಿದ್ದೂ ನಿಮಗೆ ಗೊತ್ತಾಗದು. ನಿಮ್ಮ ಬಗ್ಗೆ ನಿಮ್ಮನ್ನೇ ಕೇಳಿಕೊಳ್ಳಿ. ಇನ್ನೊಬ್ಬರ ಜೊತೆ ಸೇರಿ ಟೀಕೆಯನ್ನು ಮಾಡುವಿರಿ.

ವೃಶ್ಚಿಕ ರಾಶಿ: ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇಂದು ಸುದಿನ. ನಿಮ್ಮ ಜ್ಞಾನವನ್ನು ಇತರಿಗೆ ಹಂಚುವಿರಿ. ಭೂಮಿಯ ಲಾಭವು ಆಗಲಿದ್ದು ಅನೇಕ‌ ದಿನದ ಚಿಂತೆಗಳು ದೂರಾಗುವುದು. ಉದ್ಯೋಗದಲ್ಲಿ ಅಧಿಕ‌ ಆದಾಯು ಸಿಗುವುದು ಎಂಬ ನಿರೀಕ್ಷೆ ಇರಲಿದೆ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಸಿಗುವುದು. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡಬೇಕಾದೀತು. ಇಂದು ಪ್ರಯತ್ನಿಸಿದ ಕಾರ್ಯವು ಆಗದೇ ಇರುವುದಕ್ಕೆ ಬೇಸರಿಸುವಿರಿ. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಬೇಡ. ಹಿರಿಯರ ಕಿವಿಮಾತಿನ ಮೇಲೆ ನಿರ್ಲಕ್ಷ್ಯವಿರುವುದು. ವಸ್ತುಗಳ ಮೇಲೆ ಅಧಿಕ ಮೋಹವು ಬೇಡ. ಸಮಯಕ್ಕೆ ಆಗಬೇಕಾದುದು ಆಗುವುದು ಎಂಬ ತಟಸ್ಥ ಸ್ಥಿತಿ ಇರಲಿದೆ‌.

-ಲೋಹಿತಶರ್ಮಾ – 8762924271 (what’s app only)

Published On - 7:02 am, Sun, 24 September 23