ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ / ಶತಭಿಷಾ, ಯೋಗ: ಧೃತಿ / ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ 01:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:24ರ ವರೆಗೆ.
ಸಿಂಹ ರಾಶಿ: ಬಂಧುಗಳ ಎದುರು ಮಾತನ್ನು ಹರಿಬಿಡಬೇಡಿ. ಒಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು. ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಖರ್ಚು ಮಾಡುವ ಅನಿವಾರ್ಯತೆಯು ಬರಬಹುದು. ಸಂಗಾತಿಯ ಕಡೆಯಿಂದ ನಿಮಗೆ ಹೊಗಳಿಕೆ ಇರುವುದು. ನಿಮ್ಮ ಪ್ರಯತ್ನವು ಸಫಲತೆಯನ್ನು ಕಾಣುವುದು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಉತ್ತಮ ದಿನಗಳ ನಿರೀಕ್ಷೆಯಲ್ಲಿ ಇರುವಿರಿ.
ಕನ್ಯಾ ರಾಶಿ: ಇಂದಿನ ಸಮಯವನ್ನು ವ್ಯರ್ಥ ಮಾಡದೇ ನಿಮ್ಮದೇ ಸಮಯಸಾರಿಣಿಯನ್ನು ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇಲವ ಓಡಾಟವಾಗುವುದು. ಮಾತನಾಡವೇಕಾದ ಸಂಧರ್ಭದಲ್ಲಿ ಮೌನ ವಹಿಸಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಕಾಲ್ಪನಿಕ ಜಗತ್ತಿನಿಂದ ಹೊರಬನ್ನಿ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕುವಷ್ಟು ಮಾತ್ರ ಸಿಗುವುದು. ನಿರುಪಯುಕ್ತ ವಸ್ತುಗಳನ್ನು ಇಂದು ನೀವು ಬೇರೆಯವರಿಗೆ ಕೊಡುವಿರಿ. ಅಶುಭ ಸೂಚನೆ ಬಂದರೆ ಇಂದಿನ ಪ್ರಯಾಣವನ್ನು ಮುಂದೆ ಹಾಕಿ.
ತುಲಾ ರಾಶಿ: ಮಾನಸಿಕ ವಿಶ್ರಾಂತಿ ಇಲ್ಲ ಎಂದು ಅನ್ನಿಸಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ಇನ್ನೊಬ್ಬರ ಬಳಿ ಇರುವ ದಾಖಲೆಯನ್ನು ಜಾಣ್ಮೆಯಿಂದ ಪಡೆದುಕೊಳ್ಳುವಿರಿ. ಸಮಯವನ್ನು ಹಾಳುಮಾಡದೇ ಕೆಲಸದಲ್ಲೇ ಗಮನವಿರಲಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಇಂದು ನೀವು ಮಾಡುವಿರಿ. ತಪ್ಪನ್ನು ಸರಿ ಮಾಡಿಕೊಂಡು ಸಾಗಬೇಕಾದೀತು. ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕಾದೀತು.
ವೃಶ್ಚಿಕ ರಾಶಿ: ನಿಮ್ಮ ಗುರಿಯನ್ನು ತಲುಪಲು ಸಮಯ ಹಿಡಿಯುವುದು. ಎಂದುಕೊಂಡ ಕಾರ್ಯವು ಮುಗಿದು ಸಂಭ್ರಮದಲ್ಲಿ ಇರುವಿರಿ. ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸಫಲತೆಯನ್ನು ಕಾಣುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು. ಇಂದು ಸಿಕ್ಕ ಅವಕಾಶಗಳನ್ನು ಹಾಗೆಯೇ ಬಿಟ್ಟುಬಿಡುವಿರಿ. ಮಾನಸಿಕ ಒತ್ತಡದಿಂದ ಇಂದಿನ ಕೆಲಸವು ಬೇಗನೆ ಮುಗಿಸುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ