Horoscope: ದಿನಭವಿಷ್ಯ, ಈ ರಾಶಿಯವರು ಹಣಕಾಸಿನ ವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇಂದಿನ ನಿಮ್ಮ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:16 ರಿಂದ 07:52ರ ವರೆಗೆ.
ಸಿಂಹ: ರಾಜಕಾರಣಿಗಳಿಗೆ ಹೆಚ್ಚಿನ ಬೆಂಬಲವು ಸಿಗಲಿದ್ದು ಜನರ ಕಾರ್ಯವನ್ನು ಮಾಡಲು ಇಚ್ಛೆಪಡುವಿರಿ. ಮಾನಸಿಕ ಒತ್ತಡದಿಂದ ದೂರವಾಗಲು ಏಕಾಂತವನ್ನು ಬಯಸುವಿರಿ. ಹಣಕಾಸಿನ ವ್ಯವಹಾರವು ಸರಿಯಾಗಿ ಇಟ್ಟುಕೊಳ್ಳಿ. ಪೋಷಕರ ಜೊತೆ ನಿಮ್ಮ ಸಮಯವು ಆನಂದದಿಂದ ಇರಲಿದೆ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಮಗ್ನವಾಗುವುದು. ಸ್ನೇಹಿತರ ಸಲಹೆಗಳು ನಿಮ್ಮ ಉದ್ಯಮಕ್ಕೆ ಸಹಕಾರಿಯಲಿದೆ. ವಿದ್ಯಾಭ್ಯಾಸವನ್ನು ಹೆಚ್ಚು ಮಾಡಬೇಕಾಗಿ ಬರಬಹುದು. ಮಕ್ಕಳ ಸುಖವನ್ನು ಅನುಭವಿಸುವಿರಿ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವಿರಿ.
ಕನ್ಯಾ: ನಿಮ್ಮ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ನಿಮಗೆ ಒತ್ತಡವನ್ನು ನಿಭಾಯಿಸುವುದು ಕಷ್ಟವಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ತೋರಿಸುವಿರಿ. ಕೈಯಲ್ಲಿ ಆದ ಸಹಾಯವನ್ನು ಮಾಡುವಿರಿ. ನಿಮ್ಮ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇರಲಿದೆ. ಧಾರ್ಮಿಕ ಆಚರಣೆಗೆ ಮನಸ್ಸಿದ್ದರೂ ಸಮಯದ ಹಾಗೂ ಸನ್ನಿವೇಶಗಳು ಬಾರದೇ ಹೋಗಬಹುದು. ಅಧಿಕ ಮೌಲ್ಯವನ್ನು ಕೊಟ್ಟು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಅಸಭ್ಯ ವರ್ತನೆಯಿನಿಂದ ಬೈಗುಳವು ಸಿಗಬಹುದು. ಒಂದೇ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗುತ್ತಲೇ ಇರುವುದು.
ತುಲಾ: ಮಕ್ಕಳಿಂದ ತೊಂದರೆ ಬರಬಹುದು. ಭೂಮಿಯ ವಿಚಾರದಲ್ಲಿ ನಿಮಗೆ ನಷ್ಟವಾಗಬಹುದು. ಮನಸ್ಸಿನ ನಿಯಂತ್ರಣವನ್ನು ಸಾಧಿಸುವ ಅವಶ್ಯಕತೆ ಇದೆ. ಹಣದ ದುರ್ಬಳಕೆಯನ್ನು ಮಾಡುವ ಸಾಧ್ಯತೆ ಇದೆ. ಕುಟುಂಬದ ತೊಡಕುಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುವಿರಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಇಚ್ಛೆಯು ಇರಲಿದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಆತಂಕವನ್ನು ಸೃಷ್ಟಿಸಬಹುದು. ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹಿರಿಯರ ಭೇಟಿಯು ನಿಮಗೆ ಸಂತೋಷವನ್ನು ಜ್ಞಾನವನ್ನೂ ಕೊಡಬಹುದು.
ವೃಶ್ಚಿಕ: ಸಾಲ ಕೊಟ್ಟ ಹಣವು ನಿಮಗೆ ಮರಳಿಬರಬಹುದು. ನಿಮಗೆ ಖಾಸಗಿ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಮಗೆ ಆಗದು. ನೀವು ತೆಗೆದುಕೊಂಡ ತೀರ್ಮಾನವನ್ನು ಇತರರು ಬದಲಿಸಿದ್ದು ನಿಮ್ಮ ಕೋಪಕ್ಕೆ ಕಾರಣವಾಗಲಿದೆ. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವಿರುವುದು. ಆರ್ಥಿಕ ಸಹಾಯವನ್ನು ನೀವು ಸ್ನೇಹಿರಿಂದ ಪಡೆದುಕೊಳ್ಳುವಿರಿ. ವ್ಯಾಪಾರದಲ್ಲಿ ಸ್ವಲ್ಪ ಲಾಭವು ಇರಲಿದೆ. ಜನರ ಜೊತೆ ಬೆರೆಯುವಾಗ ಎಚ್ಚರಿಕೆ ಇರಲಿ. ನಿಮ್ಮ ಬಗ್ಗೆ ಅಧಿಕರ ದುರುಪಯೋಗದ ಆರೋಪವು ಬರಬಹುದು. ಅಧಿಕಾರಕ್ಕೆ ನೀವು ಮಾಡಿದ ಪ್ರಯತ್ನವು ಸಫಲವಾಗಬಹುದು.