ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯ ನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:25ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:26ರ ವರೆಗೆ.
ಸಿಂಹ ರಾಶಿ: ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಇಂದು ನಿಮ್ಮ ಕಲ್ಪನೆಯೇ ಸುಳ್ಳಾಗಬಹುದು. ಕುಟುಂಬದ ಕೆಲಸಕ್ಕೆ ಸಹಕಾರವನ್ನು ನೀಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಇರಲಿದೆ. ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವಿರಿ. ನಿಮ್ಮ ಗೆಲುವಿಗೆ ಬೀಗದೇ ಸಮಾಧಾನ ಚಿತ್ತದಿಂದ ಆಸ್ವಾದಿಸಿ. ಭವಿಷ್ಯದ ಹಣವನ್ನು ನೀವು ಗೌಪ್ಯವಾಗಿ ಕೂಡಿಡುವಿರಿ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವಿರಿ. ಸ್ಥಾನಮಾನವನ್ನು ಪಡೆಯಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಕಾಲವನ್ನು ವ್ಯರ್ಥ ಮಾಡಲು ಮನಸ್ಸು ಇಲ್ಲದಿದ್ದರೂ ಅನಿವಾರ್ಯವಾಗಿ ಕಳೆಯಬೇಕಾದೀತು. ಬಂಧುಗಳ ಮಾತಿಗೆ ಕೋಪಗೊಳ್ಳುವಿರಿ. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದೌರ್ಬಲ್ಯಗಳು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮನ್ನು ಪ್ರಶಂಸಿಸುವವರ ಜೊತೆ ಹೆಚ್ಚು ಸಮಯ ಇರುವಿರಿ.
ಕನ್ಯಾ ರಾಶಿ: ಚಾರಾಸ್ತಿಯ ಖರೀದಿಯ ಬಗ್ಗೆ ಆಪ್ತರಿಂದ ಒತ್ತಾಯವು ಬರಬಹುದು. ವೃತ್ತಿಯಲ್ಲಿ ಒತ್ತಡ ಇಲ್ಲದೇ ಇಂದು ನಿಶ್ಚಿಂತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಬಂಧುಗಳು ಆಡುವರು. ತೆಗೆದುಕೊಂಡ ಸಾಲದ ಬಗ್ಗೆ ನಿಮಗೆ ಲೆಕ್ಕಾಚಾರವಿರಲಿ. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ಹಿತವಚನಗಳನ್ನು ಅನುಭವಿಗಳು ಹೇಳುವರು. ಸರಳವಾಗಿರಲು ಇರುವುದು ಇಷ್ಟವಾಗಲಿದೆ. ನಂಬಿಕೆಯನ್ನು ಇಟ್ಟುಕೊಂಡು ವ್ಯವಹಾರವನ್ನು ಮುಂದುವರಿಸಿ. ನೆಮ್ಮದಿಯನ್ನು ಏಕಾಂತದಲ್ಲಿ ನೀವು ಕಾಣುವಿರಿ. ಮನೆಗೆ ಬೇಕಾದ ಧನವನ್ನು ನೀವು ಕೊಡುವಿರಿ. ಸಹಾಯವನ್ನು ಕೇಳಿದಾಗ ನೀರೀಕ್ಷಿಸಿದಂತೆ ನಿಮ್ಮವರಿಂದ ಉತ್ತರ ಬರಲಿದೆ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಅನಿವಾರ್ಯತೆ ಇರುವಲ್ಲಿ ಮಾತ್ರ ನಿಮ್ಮ ಪ್ರವೇಶವಿರುವುದು ಯೋಗ್ಯವಾಗುವುದು. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಂಡು ಯಾವುದರೊಂದು ಕಾರ್ಯದಲ್ಲಿ ತೊಡಗಿ.
ತುಲಾ ರಾಶಿ: ಉತ್ತಮ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಳ್ಳುವುದು ಕಷ್ಟ. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮಿತ್ರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಆಕಸ್ಮಿಕ ಧನಲಾಭವು ನಿಮಗೆ ನೆಮ್ಮದಿಯನ್ನು ತರಬಹುದು. ಉದ್ಯೋಗದಲ್ಲಿ ಅವಘಡವು ಸಂಭವಿಸಬಹುದು. ಯಾವುದಾದರೂ ಕಾರಣವನ್ನು ಹೇಳಿ ನಿಮಗೆ ಬಂದ ಕೆಲಸದಿಂದ ಜಾರಿಕೊಳ್ಳುವಿರಿ. ಅಸ್ಪಷ್ಟವಾದ ಆಲೋಚನೆಯು ನಿಮ್ಮ ನಿರ್ಧಾರವನ್ನು ಬದಲಿಸೀತು. ವಿದ್ಯಾರ್ಥಿಗಳಿಗೆ ಪಾಲಕರು ಭವಿಷ್ಯದ ಬಗ್ಗೆ ತಿಳಿಸುವರು. ಮಾತನ್ನು ಆಡುವಾಗ ಗಮನವಿರಲಿ. ನಿಮ್ಮ ಅನುಭವವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ. ಶ್ರದ್ಧೆಯು ಕಡಿಮೆ ಆಗಲಿದೆ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಇಷ್ಟಪಟ್ಟಿದ್ದು ನಿಮ್ಮದಾಗದೇ ಇರುವುದು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು.
ವೃಶ್ಚಿಕ ರಾಶಿ: ಯಾರಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ನೀವು ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ದುರ್ಬಲ್ಯವನ್ನು ಬಳಸಿಕೊಂಡು ಆಡಿಕೊಳ್ಳಬಹುದು. ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ. ನಿಮ್ಮೊಳಗಾದ ಬದಲಾವಣೆಯು ನಿಮಗೆ ಆಶ್ಚಯರ್ಯವನ್ನು ಕೊಟ್ಟೀತು. ಸಹನೆಯನ್ನು ನೀವು ಬೆಳೆಸಿಕೊಳ್ಳಬೇಕಾಗಿದೆ. ದೇಹಕ್ಕೆ ಬಲವಾದ ಹೊಡೆತ ಬೀಳಬಹುದು. ಅಪರಿಚಿತರ ಜೊತೆ ಮಾತನಾಡಲು ಮುಜುಗರಪಟ್ಟುಕೊಳ್ಳಬಹುದು. ಮನೆ ಕೆಲಸದಲ್ಲಿ ನೀವು ವ್ಯಸ್ತರಾಗುವಿರಿ. ಆರಾಮದಿಂದ ದಿನ ಕಳೆಯಬೇಕು ಎಂದು ಅನ್ನಿಸಬಹುದು. ಸಮೀಪದ ದೇವಾಲಯಕ್ಕೆ ಹೋಗಿ ಮನಸ್ಸಿಗೆ ಶಾಂತಿಯನ್ನು ಪಡೆದುಕೊಂಡು ಬರುವಿರಿ. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ. ತಪ್ಪಿಗೆ ಕ್ಷಮೆ ಕೇಳಿ ನಿಮ್ಮ ದಾರಿಯನ್ನು ಸರಿಯಾಗಿಸಿಕೊಳ್ಳುವಿರಿ. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳಬೇಕು.