Astrology: ಯೋಜಿತ ಕಾರ್ಯವನ್ನು ಕಾರ್ಯಗತಗೊಳಿಸುವಿರಿ, ವೃತ್ತಿಯಲ್ಲಿ ನಿರಾಳ

ರಾಶಿ ಭವಿಷ್ಯ ಸೋಮವಾರ(ಸೆ.23): ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ. ಪ್ರಭಾವೀ ವ್ಯಕ್ತಿಗಳ ಮೆಚ್ಚುಗೆಯಿಂದ ನಿಮಗೆ ಅನುಕೂಲವೂ ಆಗಬಹುದು. ವೃತ್ತಿಯಲ್ಲಿ ನೀವು ಸರಳ ವಿಧಾನದಿಂದ ಕೆಲಸವನ್ನು ಮಾಡುವಿರಿ. ಹಾಗಾದರೆ ಸೆಪ್ಟೆಂಬರ್​ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಯೋಜಿತ ಕಾರ್ಯವನ್ನು ಕಾರ್ಯಗತಗೊಳಿಸುವಿರಿ, ವೃತ್ತಿಯಲ್ಲಿ ನಿರಾಳ
ಯೋಜಿತ ಕಾರ್ಯವನ್ನು ಕಾರ್ಯಗತಗೊಳಿಸುವಿರಿ, ವೃತ್ತಿಯಲ್ಲಿ ನಿರಳ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯ ನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:25ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:26ರ ವರೆಗೆ.

ಧನು ರಾಶಿ: ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಇಂದು ತುರ್ತು ಕಾರ್ಯಗಳು ಹೆಚ್ಚಾಗಬಹುದು. ನೀವು ಸ್ವಾರ್ಥಿಗಳಂತೆ ತೋರುವಿರಿ. ಎಲ್ಲವನ್ನೂ ನಿಮಗೆ ಬೇಕೆನ್ನುವ ಬಯಕೆ ಇರಲಿದೆ. ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ. ಪ್ರಭಾವೀ ವ್ಯಕ್ತಿಗಳ ಮೆಚ್ಚುಗೆಯಿಂದ ನಿಮಗೆ ಅನುಕೂಲವೂ ಆಗಬಹುದು. ವೃತ್ತಿಯಲ್ಲಿ ನೀವು ಸರಳ ವಿಧಾನದಿಂದ ಕೆಲಸವನ್ನು ಮಾಡುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳಲಿದ್ದೀರಿ. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಹಿಂದಿರುಗುವಿರಿ. ನಿಮ್ಮವರನ್ನು ನೀವು ರಕ್ಷಿಸಿಕೊಳ್ಳುವುದು ಕಷ್ಟವಾಗುವುದು. ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿವಾದಗಳು ನಿಮ್ಮ ಸಮಯವನ್ನು ಕೆಡಿಸುವುದು.

ಮಕರ ರಾಶಿ; ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ವಿವಾದಕ್ಕೆ ಅವಕಾಶ ಕೊಡದೇ ನಿರ್ವಹಿಸಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಲು ಹೋಗುವಿರಿ. ಯೋಜಿತ ಕಾರ್ಯವನ್ನು ಕಾರ್ಯಗತ ಮಾಡಿ ಸಂತೋಷಗೊಳ್ಳುವಿರಿ. ಯೋಜನೆಯನ್ನು ಬದಲಿಸಿದ್ದಕ್ಕೆ ಬೇಸರಗೊಳ್ಳುವಿರಿ. ಹೇಳಲಾಗದ ಭಯವು ನಿಮ್ಮನ್ನು ಕಾಡಬಹುದು. ಮಕ್ಕಳ‌ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಆಭರಣವನ್ನು ಖರೀದಿಸುವ ಮನಸ್ಸಾಗಲಿದೆ. ಹಳೆಯದನ್ನು ನೆನಪಿಸಿಕೊಂಡು ಬೇಸರಗೊಳ್ಳುವಿರಿ. ಕೋಪವನ್ನು ಮಾಡಬಾರದೆಂದು ತೀರ್ಮಾನಿಸಿದಾಗಲೇ ಕೋಪಕ್ಕೆ ಅವಕಾಶಗಳು ಸಿಗುವುದು. ಏಕಾಂತವು ಬೇಕು ಎನಿಸಬಹುದು. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ನಿಮ್ಮ ಮೌನವೂ ನಿಮ್ಮರಿಗೆ ಸಹ್ಯವಾಗದು.

ಕುಂಭ ರಾಶಿ: ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ನಿಮಗೆ ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಮಾನಸಿಕ ಒತ್ತಡವು ಕಡಿಮೆ ಇದ್ದರೂ ನೆಮ್ಮದಿಯ ಕೊರತೆ ಕಾಣಿಸಿಕೊಳ್ಳಲಿದೆ. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಡದ ಸಂಗತಿಗಳನ್ನು ಬೇಗನೆ ರೂಢಿಸಿಕೊಳ್ಳುವಿರಿ. ಕ್ಷಮಿಸುವ ಸ್ವಭಾವವು ಇಷ್ಟವಾದೀತು. ಮನೆಯಲ್ಲಿ ನೆಮ್ಮದಿ ಇದ್ದರೂ ಎಲ್ಲಿಗಾದರೂ ಹೋಗಬೇಕು ಎನಿಸುವುದು. ನೂತನ ವಸ್ತುಗಳ ಖರೀದಿಯಿಂದ ನಿಮಗೆ ಸ್ವಲ್ಪ ಸಂತೋಷವೂ ಆಗುವುದು. ಬಂಧುಗಳ ಭೇಟಿಯು ಖುಷಿಯನ್ನು ಕೊಡುವುದು. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ವ್ಯವಹಾರದಿಂದ ಏಕಾಂತ ಬೇಕೆನಿಸಬಹುದು. ಯಾರದ್ದಾರೂ ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಬದಲಿಸಬಹುದು.

ಮೀನ ರಾಶಿ: ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ನಿಮ್ಮ ಪ್ರಯತ್ನವು ಸಂಪೂರ್ವಾಗಿರಲಿ. ಯಶಸ್ಸನ್ನು ಪಡೆಯುವ ಹಂಬಲ ಬೇಡ. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಔದ್ಯೋಗಿಕ ವಲಯದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗದು. ಆದರೂ ಪ್ರಯತ್ನವಂತೂ ನಿರಂತರವಾಗಿ ಇರುವುದು. ದುರ್ಬಲರಿಗೆ ಸಹಾಯವನ್ನು ಮಾಡಿ. ನಕಾರಾತ್ಮಕ ಆಲೋಚನೆಗಳಿಗೆ ಆಸ್ಪದವನ್ನು ಕೊಡುವುದು ಬೇಡ. ಪ್ರಯಾಣವನ್ನು ಮಾಡುವ ಅನಿವಾರ್ಯವಿದ್ದರೆ ಮಾಡಿ. ಅನಗತ್ಯ ಖರ್ಚನ್ನು ನಿಲ್ಲಿಸಿ. ಕೆಲವು ಸಭೆಗಳಿಗೆ ಭೇಟಿ ನೀಡಬೇಕಾಗಬಹುದು. ಸಂಕಟಗಳು ನಿಮ್ಮನ್ನು ಪರೀಕ್ಷಿಸುತ್ತವೆ ಎನ್ನುವ ನಂಬಿಕೆ ಇರುಬುದು. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಬೇಡದ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?