Daily Horoscope 23 September 2024: ಇಂದು ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ

ಸೆಪ್ಟೆಂಬರ್​ 23,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ನಿಮ್ಮ ಪ್ರಯತ್ನವು ಸಂಪೂರ್ವಾಗಿರಲಿ. ಯಶಸ್ಸನ್ನು ಪಡೆಯುವ ಹಂಬಲ ಬೇಡ. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಔದ್ಯೋಗಿಕ ವಲಯದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗದು. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 23 September 2024: ಇಂದು ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ
ರಾಶಿಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 23, 2024 | 12:01 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯ ನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24, ಯಮಘಂಡ ಕಾಲ ಬೆಳಿಗ್ಗೆ 10:54ರಿಂದ 12:25ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ  03:26ರ ವರೆಗೆ.

ಮೇಷ ರಾಶಿ : ಯಾರಮೇಲೂ ಸ್ವಾಮಿತ್ವವನ್ನು ಸ್ಥಾಪಿಸಲು ಹೋಗಬಹುದು. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ಆಸ್ತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಸರ್ಕಾರಿಯ ಕೆಲಸದ ವಿಳಂಬದಿಂದ ನಿಮಗೆ ಬೇಸರವಾಗಲಿದೆ. ರಾಜಕಾರಣಿಗಳ ಕಾರ್ಯಕ್ಕೆ ಪ್ರಶಂಸೆಯು ಸಿಗಲಿದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸುಲಭ. ಅದರ ನಿರ್ವಹಣೆ ಕಷ್ಟ. ವಿರೋಧಿಗಳನ್ನು ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಹನ ಖರೀದಿಯ ಆಲೋಚನೆಯನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಬಹುದು. ಸಂಪತ್ತಿನ ರಕ್ಷಣೆಯು ನಿಮಗೆ ಕಷ್ಟವಾದೀತು. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಕೊಟ್ಟು ಬಿಡುವಿರಿ. ನಿಮ್ಮ ಮಾತುಗಳು ಅನ್ಯಾರ್ಥವನ್ನು ಕೊಡಲಿದೆ. ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ತಂದೆಯ ಮಾತು ಹಿಡಿಸದೇಹೋಗಬಹುದು. ಯಾವ ಕರ್ಮವನ್ನಾದರೂ ಫಲ ಬರುವತನಕ ಕಾಯಬೇಕು.

ವೃಷಭ ರಾಶಿ : ನಿಮಗೆ ಇಂದು ಯಾವ ಭರವಸೆಯೂ ವಿಶ್ವಾಸಾರ್ಹವಾಗದು. ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ದೃಷ್ಟಿದೋಷದಿಂದ ನೀವು ಪೀಡಿತರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಳೆದುಕೊಂಡು ಕಳವಳಗೊಳ್ಳುವಿರಿ. ಸಹೋದ್ಯೋಗಿಗಳಿಂದ ನಿಮಗೆ ಧೈರ್ಯ ಬರುವುದು. ಆಸ್ತಿಯ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಇದೆ. ಅನಾರೋಗ್ಯವನ್ನು ಇಂದಿನ‌ ವಿಶ್ರಾಂತಿಯಿಂದ ಸರಿಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ಕಂಡು ಅಸೂಯೆಪಡುವುದನ್ನು ಬಿಟ್ಟರೆ ನೆಮ್ಮದಿಯು ಸಿಗಬಹುದು. ದಾಂಪತ್ಯವನ್ನು ಸರಿದೂಗಿಸಿಕೊಳ್ಳುವ ಕಲೆಯನ್ನು ನೀವು ಬಲ್ಲವರಾಗಿದ್ದೀರಿ. ಕಾರ್ಯಸ್ಥಾನದ ಬದಲಾವಣೆಯಾಗಲಿದೆ. ವಿವಾಹದ ಮಾತುಕತೆ ಗೊಂದಲದಲ್ಲಿ ಮುಕ್ತಾಯವಾಗಬಹುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ನಿಮ್ಮ ಅತಿಯಾದ ಉತ್ಸಾಹದಿಂದಲೇ ಇಂದಿನ ಕಾರ್ಯವು ಬೇಗ ಮುಗಿಯಬಹುದು.

ಮಿಥುನ ರಾಶಿ : ಇಂದು ನಿಮ್ಮ ಜವಾಬ್ದಾರಿಯವ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು. ನಿಮ್ಮ ಆಸ್ತಿಯ ಮೇಲೆ ಬೇರೆಯವರ ಕಣ್ಣು ಬೀಳಲಿದೆ. ಕೆಲವರು ನಿಮ್ಮಿಂದ ಉಪಕಾರವನ್ನು ಪಡೆದುಕೊಳ್ಳುವವರಿದ್ದಾರೆ. ಅನಂತರ ನಿರ್ಲಕ್ಷ್ಯಿಸಬಹುದು. ಸಂಗಾತಿಯನ್ನು ಹಲವು ದಿನಗಳ ಅನಂತರ ಭೇಟಿಯಾಗುವಿರಿ. ಸಂಗಾತಿಯ ಜೊತೆ ಖುಷಿಯ ಸಮಾಚಾರವನ್ನು ಹಂಚಿಕೊಳ್ಳುವಿರಿ. ಇನ್ನೊಬ್ಬರಿಂದ ಲಾಭವನ್ನು ಬಯಸುವುದು ಸರಿಯಾಗದು. ನಿಮ್ಮವರೇ ನಿಮಗ ಸಹಕಾರ ಕೊಡದಿರುವುದು ಬೇಸರ ತರಿಸಬಹುದು. ಮನೆಯ ವಸ್ತುಗಳ ಖರೀದಿಯು ಉತ್ಸಾಹದಿಂದ ಸಾಗಲಿದೆ. ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ನಿಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗುರಿಯು ಬದಲಾಗುವುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಬೇಡ ಆಲೋಚನೆಗಳನ್ನು ತಲೆಯಿಂದ ತೆಗದೆಹಾಕಿ.

ಕರ್ಕಾಟಕ ರಾಶಿ : ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಅನ್ನಿಸುವುದು. ಹಣಕಾಸಿನ ಸಹಾಯವನ್ನು ಮಿತ್ರರಿಂದ ಪಡೆಯುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಆತಂಕವಾಗಲಿದೆ. ಬಂಧುಗಳನ್ನು ಪ್ರೀತಿಸುವಿರಿ. ಸಾಲದಿಂದ ಮುಕ್ತರಾಗಲು ಎಷ್ಟೇ ಪರಿಶ್ರಮಿಸಿದರೂ ಸಾಧ್ಯವಾಗದು. ತಾಳ್ಮೆಯನ್ನು ಕಳೆದುಕೊಳ್ಳದೇ ವರ್ತಿಸುವುದು ಮುಖ್ಯವಾಗಲಿದೆ. ರಾಜಕೀಯವನ್ನು ಮನೆಗೆ ತರುವುದು ಬೇಡ. ನೀವು ದ್ವೇಷಿಸುವವರ ಬಳಿಯೇ ಸಹಾಯ ಕೇಳುವ ಸಂದರ್ಭವು ಬರಬಹುದು. ತೊಂದರೆಗಳನ್ನು ನೆನೆನೆದು ದುಃಖಿಸುವಿರಿ. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಇಂದು ಮನೆಯವರು ನಿಮ್ಮ ಯಾವ ಮಾತನ್ನೂ ಒಪ್ಪಿಕೊಳ್ಳಲಾರರು.

ಸಿಂಹ ರಾಶಿ : ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಇಂದು ನಿಮ್ಮ ಕಲ್ಪನೆಯೇ ಸುಳ್ಳಾಗಬಹುದು. ಕುಟುಂಬದ ಕೆಲಸಕ್ಕೆ ಸಹಕಾರವನ್ನು ನೀಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಇರಲಿದೆ. ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವಿರಿ‌. ನಿಮ್ಮ ಗೆಲುವಿಗೆ ಬೀಗದೇ ಸಮಾಧಾನ ಚಿತ್ತದಿಂದ ಆಸ್ವಾದಿಸಿ. ಭವಿಷ್ಯದ ಹಣವನ್ನು ನೀವು ಗೌಪ್ಯವಾಗಿ ಕೂಡಿಡುವಿರಿ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವಿರಿ. ಸ್ಥಾನಮಾನವನ್ನು ಪಡೆಯಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಕಾಲವನ್ನು ವ್ಯರ್ಥ ಮಾಡಲು ಮನಸ್ಸು ಇಲ್ಲದಿದ್ದರೂ ಅನಿವಾರ್ಯವಾಗಿ ಕಳೆಯಬೇಕಾದೀತು. ಬಂಧುಗಳ ಮಾತಿಗೆ ಕೋಪಗೊಳ್ಳುವಿರಿ. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದೌರ್ಬಲ್ಯಗಳು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮನ್ನು ಪ್ರಶಂಸಿಸುವವರ ಜೊತೆ ಹೆಚ್ಚು ಸಮಯ ಇರುವಿರಿ.

ಕನ್ಯಾ ರಾಶಿ : ಚಾರಾಸ್ತಿಯ ಖರೀದಿಯ ಬಗ್ಗೆ ಆಪ್ತರಿಂದ ಒತ್ತಾಯವು ಬರಬಹುದು. ವೃತ್ತಿಯಲ್ಲಿ ಒತ್ತಡ ಇಲ್ಲದೇ ಇಂದು ನಿಶ್ಚಿಂತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಬಂಧುಗಳು ಆಡುವರು. ತೆಗೆದುಕೊಂಡ ಸಾಲದ ಬಗ್ಗೆ ನಿಮಗೆ ಲೆಕ್ಕಾಚಾರವಿರಲಿ. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ಹಿತವಚನಗಳನ್ನು ಅನುಭವಿಗಳು ಹೇಳುವರು. ಸರಳವಾಗಿರಲು ಇರುವುದು ಇಷ್ಟವಾಗಲಿದೆ. ನಂಬಿಕೆಯನ್ನು ಇಟ್ಟುಕೊಂಡು ವ್ಯವಹಾರವನ್ನು ಮುಂದುವರಿಸಿ. ನೆಮ್ಮದಿಯನ್ನು ಏಕಾಂತದಲ್ಲಿ ನೀವು ಕಾಣುವಿರಿ. ಮನೆಗೆ ಬೇಕಾದ ಧನವನ್ನು ನೀವು ಕೊಡುವಿರಿ. ಸಹಾಯವನ್ನು ಕೇಳಿದಾಗ ನೀರೀಕ್ಷಿಸಿದಂತೆ ನಿಮ್ಮವರಿಂದ ಉತ್ತರ ಬರಲಿದೆ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಅನಿವಾರ್ಯತೆ ಇರುವಲ್ಲಿ ಮಾತ್ರ ನಿಮ್ಮ ಪ್ರವೇಶವಿರುವುದು ಯೋಗ್ಯವಾಗುವುದು. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಂಡು ಯಾವುದರೊಂದು ಕಾರ್ಯದಲ್ಲಿ ತೊಡಗಿ.

ತುಲಾ ರಾಶಿ : ಉತ್ತಮ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಳ್ಳುವುದು ಕಷ್ಟ. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮಿತ್ರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಆಕಸ್ಮಿಕ ಧನಲಾಭವು ನಿಮಗೆ ನೆಮ್ಮದಿಯನ್ನು ತರಬಹುದು. ಉದ್ಯೋಗದಲ್ಲಿ ಅವಘಡವು ಸಂಭವಿಸಬಹುದು. ಯಾವುದಾದರೂ ಕಾರಣವನ್ನು ಹೇಳಿ ನಿಮಗೆ ಬಂದ ಕೆಲಸದಿಂದ ಜಾರಿಕೊಳ್ಳುವಿರಿ. ಅಸ್ಪಷ್ಟವಾದ ಆಲೋಚನೆಯು ನಿಮ್ಮ ನಿರ್ಧಾರವನ್ನು ಬದಲಿಸೀತು. ವಿದ್ಯಾರ್ಥಿಗಳಿಗೆ ಪಾಲಕರು ಭವಿಷ್ಯದ ಬಗ್ಗೆ ತಿಳಿಸುವರು. ಮಾತನ್ನು ಆಡುವಾಗ ಗಮನವಿರಲಿ. ನಿಮ್ಮ‌ ಅನುಭವವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ. ಶ್ರದ್ಧೆಯು ಕಡಿಮೆ ಆಗಲಿದೆ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಇಷ್ಟಪಟ್ಟಿದ್ದು ನಿಮ್ಮದಾಗದೇ ಇರುವುದು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು.

ವೃಶ್ಚಿಕ ರಾಶಿ : ಯಾರಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ನೀವು ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ದುರ್ಬಲ್ಯವನ್ನು ಬಳಸಿಕೊಂಡು ಆಡಿಕೊಳ್ಳಬಹುದು. ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ. ನಿಮ್ಮೊಳಗಾದ ಬದಲಾವಣೆಯು ನಿಮಗೆ ಆಶ್ಚಯರ್ಯವನ್ನು ಕೊಟ್ಟೀತು.‌ ಸಹನೆಯನ್ನು ನೀವು ಬೆಳೆಸಿಕೊಳ್ಳಬೇಕಾಗಿದೆ. ದೇಹಕ್ಕೆ ಬಲವಾದ ಹೊಡೆತ ಬೀಳಬಹುದು. ಅಪರಿಚಿತರ ಜೊತೆ ಮಾತನಾಡಲು ಮುಜುಗರಪಟ್ಟುಕೊಳ್ಳಬಹುದು. ಮನೆ ಕೆಲಸದಲ್ಲಿ ನೀವು ವ್ಯಸ್ತರಾಗುವಿರಿ. ಆರಾಮದಿಂದ ದಿನ ಕಳೆಯಬೇಕು ಎಂದು ಅನ್ನಿಸಬಹುದು. ಸಮೀಪದ ದೇವಾಲಯಕ್ಕೆ ಹೋಗಿ ಮನಸ್ಸಿಗೆ ಶಾಂತಿಯನ್ನು ಪಡೆದುಕೊಂಡು ಬರುವಿರಿ. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ. ತಪ್ಪಿಗೆ ಕ್ಷಮೆ ಕೇಳಿ ನಿಮ್ಮ ದಾರಿಯನ್ನು ಸರಿಯಾಗಿಸಿಕೊಳ್ಳುವಿರಿ. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳಬೇಕು.

ಧನು ರಾಶಿ : ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಇಂದು ತುರ್ತು ಕಾರ್ಯಗಳು ಹೆಚ್ಚಾಗಬಹುದು. ನೀವು ಸ್ವಾರ್ಥಿಗಳಂತೆ ತೋರುವಿರಿ. ಎಲ್ಲವನ್ನೂ ನಿಮಗೆ ಬೇಕೆನ್ನುವ ಬಯಕೆ ಇರಲಿದೆ. ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ. ಪ್ರಭಾವೀ ವ್ಯಕ್ತಿಗಳ ಮೆಚ್ಚುಗೆಯಿಂದ ನಿಮಗೆ ಅನುಕೂಲವೂ ಆಗಬಹುದು. ವೃತ್ತಿಯಲ್ಲಿ ನೀವು ಸರಳ ವಿಧಾನದಿಂದ ಕೆಲಸವನ್ನು ಮಾಡುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳಲಿದ್ದೀರಿ. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಹಿಂದಿರುಗುವಿರಿ. ನಿಮ್ಮವರನ್ನು ನೀವು ರಕ್ಷಿಸಿಕೊಳ್ಳುವುದು ಕಷ್ಟವಾಗುವುದು. ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿವಾದಗಳು ನಿಮ್ಮ ಸಮಯವನ್ನು ಕೆಡಿಸುವುದು.

ಮಕರ ರಾಶಿ : ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ವಿವಾದಕ್ಕೆ ಅವಕಾಶ ಕೊಡದೇ ನಿರ್ವಹಿಸಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಲು ಹೋಗುವಿರಿ. ಯೋಜಿತ ಕಾರ್ಯವನ್ನು ಕಾರ್ಯಗತ ಮಾಡಿ ಸಂತೋಷಗೊಳ್ಳುವಿರಿ. ಯೋಜನೆಯನ್ನು ಬದಲಿಸಿದ್ದಕ್ಕೆ ಬೇಸರಗೊಳ್ಳುವಿರಿ. ಹೇಳಲಾಗದ ಭಯವು ನಿಮ್ಮನ್ನು ಕಾಡಬಹುದು. ಮಕ್ಕಳ‌ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಆಭರಣವನ್ನು ಖರೀದಿಸುವ ಮನಸ್ಸಾಗಲಿದೆ. ಹಳೆಯದನ್ನು ನೆನಪಿಸಿಕೊಂಡು ಬೇಸರಗೊಳ್ಳುವಿರಿ. ಕೋಪವನ್ನು ಮಾಡಬಾರದೆಂದು ತೀರ್ಮಾನಿಸಿದಾಗಲೇ ಕೋಪಕ್ಕೆ ಅವಕಾಶಗಳು ಸಿಗುವುದು. ಏಕಾಂತವು ಬೇಕು ಎನಿಸಬಹುದು. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ನಿಮ್ಮ ಮೌನವೂ ನಿಮ್ಮರಿಗೆ ಸಹ್ಯವಾಗದು.

ಕುಂಭ ರಾಶಿ : ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ನಿಮಗೆ ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಮಾನಸಿಕ ಒತ್ತಡವು ಕಡಿಮೆ ಇದ್ದರೂ ನೆಮ್ಮದಿಯ ಕೊರತೆ ಕಾಣಿಸಿಕೊಳ್ಳಲಿದೆ. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಡದ ಸಂಗತಿಗಳನ್ನು ಬೇಗನೆ ರೂಢಿಸಿಕೊಳ್ಳುವಿರಿ. ಕ್ಷಮಿಸುವ ಸ್ವಭಾವವು ಇಷ್ಟವಾದೀತು. ಮನೆಯಲ್ಲಿ ನೆಮ್ಮದಿ ಇದ್ದರೂ ಎಲ್ಲಿಗಾದರೂ ಹೋಗಬೇಕು ಎನಿಸುವುದು. ನೂತನ ವಸ್ತುಗಳ ಖರೀದಿಯಿಂದ ನಿಮಗೆ ಸ್ವಲ್ಪ ಸಂತೋಷವೂ ಆಗುವುದು. ಬಂಧುಗಳ ಭೇಟಿಯು ಖುಷಿಯನ್ನು ಕೊಡುವುದು. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ವ್ಯವಹಾರದಿಂದ ಏಕಾಂತ ಬೇಕೆನಿಸಬಹುದು. ಯಾರದ್ದಾರೂ ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಬದಲಿಸಬಹುದು.

ಮೀನ ರಾಶಿ : ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ನಿಮ್ಮ ಪ್ರಯತ್ನವು ಸಂಪೂರ್ವಾಗಿರಲಿ. ಯಶಸ್ಸನ್ನು ಪಡೆಯುವ ಹಂಬಲ ಬೇಡ. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಔದ್ಯೋಗಿಕ ವಲಯದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗದು. ಆದರೂ ಪ್ರಯತ್ನವಂತೂ ನಿರಂತರವಾಗಿ ಇರುವುದು. ದುರ್ಬಲರಿಗೆ ಸಹಾಯವನ್ನು ಮಾಡಿ. ನಕಾರಾತ್ಮಕ ಆಲೋಚನೆಗಳಿಗೆ ಆಸ್ಪದವನ್ನು ಕೊಡುವುದು ಬೇಡ. ಪ್ರಯಾಣವನ್ನು ಮಾಡುವ ಅನಿವಾರ್ಯವಿದ್ದರೆ ಮಾಡಿ. ಅನಗತ್ಯ ಖರ್ಚನ್ನು ನಿಲ್ಲಿಸಿ. ಕೆಲವು ಸಭೆಗಳಿಗೆ ಭೇಟಿ ನೀಡಬೇಕಾಗಬಹುದು. ಸಂಕಟಗಳು ನಿಮ್ಮನ್ನು ಪರೀಕ್ಷಿಸುತ್ತವೆ ಎನ್ನುವ ನಂಬಿಕೆ ಇರುಬುದು. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಬೇಡದ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು.

-ಲೋಹಿತ ಹೆಬ್ಬಾರ್-8762924271 (what’s app only)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ