ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 01) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ,ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹುಬ್ಬಾ, ಯೋಗ: ಆಯುಷ್ಮಾನ್, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:23 ರಿಂದ ಸಂಜೆ 09:47 ರವರೆಗೆ, ಯಮಘಂಡ ಕಾಲ ಬೆಳಗ್ಗೆ 11:12 ರಿಂದ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:00 ರಿಂದ 03:25ರ ವರೆಗೆ.
ಸಿಂಹ ರಾಶಿ : ಪೂರ್ವಾರ್ಜಿತ ಸಂಪತ್ತನ್ನೇ ನಂಬಿ ನಿಶ್ಚಿಂತರಾಗುವಿರಿ. ನಿಮ್ಮ ಶ್ರಮದ ಬಗ್ಗೆಯೂ ಗಮನವಿರಲಿ. ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ರಾಜಕೀಯದತ್ತ ಒಲವು ಉಂಟಾದೀತು. ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ನಿಮ್ಮನ್ನು ಅತಿಥಿಗಳಾಗಿ ಆಹ್ವಾನಿಸಬಹುದು. ನಿಮ್ಮ ಪ್ರೇಮಸಂಬಂಧವು ಸಡಿಲಾಗಬಹುದು. ನಿಮ್ಮ ಜವಾಬ್ದಾರಿಗೆ ಬೆನ್ನು ಹಾಕಿಹೋಗುವುದು ಬೇಡ. ಬರುವುದನ್ನು ಎದುರಿಸುವ ತಾಕತ್ತನ್ನು ಬೆಳೆಸಿಕೊಳ್ಳಿ.
ಕನ್ಯಾ ರಾಶಿ : ಸಣ್ಣ ಉದ್ಯೋಗವಿದ್ದರೂ ನಿರುದ್ಯೋಗದಂತೆ ಅನ್ನಿಸಬಹುದು. ಯಾರ ಜೊತೆಯೂ ಬೆರೆಯಬೇಕು ಎನ್ನುವ ಆಸೆಯೂ ಇರದು. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಇಂದು ಅಧಿಕ ಮಾತನ್ನು ಆಡುವುದು ಬೇಡ. ಕಲಾವಿದು ಕೆಲವು ಅವಕಾಶದಿಂದ ವಂಚಿತರಾಗಬಹುದು. ಹಣಕಾಸಿನ ಹೂಡಿಕೆಯು ಹೊಸ ತಿರುವನ್ನು ಪಡೆದೀತು. ಖರ್ಚಿನ ಬಗ್ಗೆ ಅಂದಾಜಿರಲಿ. ನಿಮ್ಮ ವಸ್ತುಗಳು ಕಣ್ಮರೆಯಾದೀತು.
ತುಲಾ ರಾಶಿ : ನಿಮ್ಮ ಪ್ರತಿಭೆಯ ಅನಾವರಣವಾಗುವುದು. ಪ್ರಾಮಾಣಿಕತೆಯನ್ನು ನೀವು ಬಿಡದೇ ಮುಂದುವರಿಸಿ. ಭೂಮಿಯ ವ್ಯವಹಾರಕ್ಕೆ ಯಾರನ್ನಾದರೂ ಸಹಾಯಕರನ್ನು ಪಡೆಯುವಿರಿ. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಕೆಲವು ಕೆಲಸಗಳಿಗೆ ತಾತ್ಕಾಲಿಕ ವಿರಾಮವನ್ನು ಕೊಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಲಿದ್ದು ಹಿರಿಯರಿಂದ ಕೇಳಿಪಡೆಯುವಿರಿ. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು. ಮನೆಯಲ್ಲಿ ಸಂಭ್ರಮಕ್ಕೆ ತಯಾರಿಯನ್ನು ನಡೆಸುವಿರಿ.
ವೃಶ್ಚಿಕ ರಾಶಿ : ಆತುರದ ತೀರ್ಮಾನದಿಂದ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಎಲ್ಲಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಲಿದ್ದೀರಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಅವಕಾಶಗಳು ಬಂದು ಬಾಗಿಲು ತಟ್ಟಿದರೂ ತೆರೆಯುವ ಕಲ್ಪನೆಯೂ ಬಾರದು. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು. ಸಂಗಾತಿಯ ಮಾತುಗಳು ನಿಮ್ಮ ಅಭಿಮಾನಕ್ಕೆ ತೊಂದರೆ ಕೊಡಬಹುದು. ನೀವು ಅಪಮಾನವನ್ನೂ ನುಂಗಿಕೊಂಡು ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ನಂಬಿಕೆಯನ್ನು ಬಲವಾಗಿಸಿಕೊಳ್ಳಬೇಕಾಗುವುದು. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು.