Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಶತ್ರುಗಳ ಕಾಟವು ಇರಲಿದೆ, ಕುಲದೇವರ ಅನುಗ್ರಹ ಪಡೆಯಿರಿ
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 9) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಸೌಭಾಗ್ಯ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ರಿಂದ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:04 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:14ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.
ತುಲಾ: ತಾಯಿಯ ಕಡೆಯಿಂದ ಲಾಭವನ್ನು ನೀವು ನಿರೀಕ್ಷಿಸುವಿರಿ. ಯಾರಾದರೂ ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಬಹುದು. ನೂತನ ವಸ್ತ್ರಗಳನ್ನು ಖರೀದಿ ಮಾಡುವಿರಿ. ನಿಮ್ಮ ಆದಾಯದ ಮೂಲವು ಅಧಿಕವಾಗಬಹುದು. ಕೆಲಸದಲ್ಲಿ ಎಂದಿನ ಪ್ರಾಮಾಣಿಕತೆ ಇರಲಿ. ಪಾಲುದಾರಿಕೆಯಿಂದ ಹೊರಬರಲು ಬಯಸುವಿರಿ. ಸ್ಪರ್ಧಾಮನೋಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ನಿಮ್ಮ ಕೆಲಸಗಳಿಗೆ ಸೂಚನೆಗಳು ಸಿಗಲಿದ್ದು ಅದರಂತೆ ನಡೆಯಿರಿ. ಸ್ನೇಹಿತರ ವಿಚಾರದಲ್ಲಿ ನೀವು ಮೃದುಮನಸ್ಸನ್ನು ಹೊಂದಿರುವಿರಿ.
ವೃಶ್ಚಿಕ: ಇಂದಿನ ಕೆಲಸದಲ್ಲಿ ಹೆಚ್ಚಿನ ಮುನ್ನಡೆಯಾಗಲಿದ್ದು ನಿಮ್ಮ ಪ್ರಯತ್ನದ ಬಗ್ಗೆ ವಿಶ್ವಾಸವು ಮೂಡುವುದು. ವಾಸಸ್ಥಳದ ಬದಲಾವಣೆಯಿಂದ ನಿಮಗೆ ಕಿರಿಕರಿಯಾಗಬಹುದು. ಆಕಸ್ಮಿಕವಾದ ವಿಷಯಗಳು ನಿಮಗೆ ಕ್ಲೇಶವನ್ನು ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಅಸಮಾಧನಾವನ್ನು ಕೊಡಬಹುದು. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆತ್ಮೀಯರ ಭೇಟಿಯಾಗಲಿದೆ. ನಿಮ್ಮ ತಪ್ಪನ್ನು ಬೇರೆಯವರು ಎತ್ತಿ ಹೇಳಬಹುದು. ಅಲ್ಪದರಲ್ಲಿ ತೃಪ್ತಿಪಡಬೇಕಾದೀತು. ನೀವು ಸಂತೋಷವಾಗಿರಲು ನಾನಾ ಕಾರಣಗಳನ್ನು ಹುಡುಕಬಹುದು.
ಧನು: ಭೂಮಿಯಿಂದ ಲಾಭ ಪಡೆಯುವ ತಂತ್ರವನ್ನು ಮಾಡುವಿರಿ. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಕಲಹವಾಗಬಹುದು. ಮಕ್ಕಳ ವಿವಾಹದ ಚಿಂತೆ ನಿಮಗಿರಲಿದೆ. ಪ್ರೀತಿಯಿಂದ ಕೊಟ್ಟಿದ್ದನ್ನು ಮರಳಿ ಕೇಳುವುದು ಬೇಡ. ಸಂಗಾತಿಯ ಜೊತೆ ಕಾಲು ಕೆರದುಕೊಂಡು ಜಗಳಕ್ಕೆ ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಸಂತೋಷವಾಗುವುದು. ನಿಮ್ಮವರ ಜೊತೆಯೇ ಎಲ್ಲ ವ್ಯವಹಾರವನ್ನು ಮಾಡಿ. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ತಮಾಷೆಯು ಅತಿರೇಕವಾದೀತು.
ಮಕರ: ಮನಸ್ಸಿನಲ್ಲಿ ನಾನಾತರಹದ ಆಲೋಚನೆಗಳು ಬರಬಹುದು. ದೂರ ಪ್ರಯಾಣ ಮಾಡಲಿದ್ದು ಇಷ್ಟದೇವರನ್ನು ಸ್ಮರಿಸಿಕೊಂಡು ಹೋಗುವುದು ಉತ್ತಮ. ವಾಹನವನ್ನು ಚಲಾಯಿಸಲು ಮನಸ್ಸು ಮಾಡುವಿರಿ. ಪರಸ್ಪರ ವಿರುದ್ಧ ಆಹಾರದಿಂದ ನಿಮ್ಮ ಆರೋಗ್ಯವು ಕೆಡಬಹುದು. ನಿಮಗೆ ಅನಾಥಪ್ರಜ್ಞೆಯು ಕಾಡಬಹುದು. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಅಸಹಜ ನಡೆಯಿಂದ ಬೇರೆಯವರಿಗೆ ಬೇಸರವಾದೀತು. ಉತ್ತಮ ಭೋಜನ ಸಿಗಲಿದೆ.
ಕುಂಭ: ನಿಮ್ಮ ಶರೀರವೇದನೆಯು ಸಹಿಸಿಕೊಳ್ಳಲಾರದಷ್ಟು ಇರಲಿದೆ. ಮಾತಿನ ಮೇಲೆ ನಿಮಗೆ ಹಿಡಿತವಿರಲಿ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಶತ್ರುಗಳ ಕಾಟವು ಇರಲಿದೆ. ಇಂದು ನಿಮಗೆ ಕಛೇರಿಯ ಘಟನೆಗಳೂ ನೆನಪಾಗಬಹುದು. ಅತಿಯಾದ ಕೆಲಸದಿಂದ ಆರೋಗ್ಯವು ಕೆಡಬಹುದು. ನಿಮ್ಮ ಮಾತನ್ನು ನಂಬಲು ಅಸಾಧ್ಯವಾಗಬಹುದು. ನಿಮ್ಮವರೇ ನಿಮ್ಮ ಬಗ್ಗೆ ಆಪಾದನೆಯನ್ನು ಮಾಡುವರು. ಕುಲದೇವರ ಅನುಗ್ರಹವನ್ನು ಪಡೆಯಿರಿ.
ಮೀನ: ಇಂದು ನೀವು ಅಂದುಕೊಂಡಂತೆ ಆಗಲಿದ್ದು ಅನುಕೂಲಕರವರನಿಸುವುದು. ವಾಹನ ಖರೀದಿಯನ್ನು ಮಾಡಲು ತೆರಳುವಿರಿ. ಸ್ತ್ರೀಯರಿಂದ ನಿಮಗೆ ಅನೇಕ ಸಹಾಯವು ಆಗಬಹುದು. ನಿಮಗೆ ಬರಬೇಕಾದ ಹಣವನ್ನು ಇಂದು ನೀವೇ ಖುದ್ದಾಗಿ ಹೋಗಿ ಪಡೆಯುವಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವುದು ಉತ್ತಮ. ಬಂಧುಗಳ ಮನೆಯಲ್ಲಿ ಉಳಿಯುವುದು ಅನಿವಾರ್ಯ ಆದೀತು. ಪತ್ನಿಯನ್ನು ದ್ವೇಷಿಸುವ ಮಾನಸಿಕತೆ ಉಂಟಾಗಲಿದೆ.
Published On - 12:30 am, Sun, 9 July 23