Horoscope: ಇಂದಿನ ರಾಶಿಭವಿಷ್ಯ, ಪ್ರೇಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ಈ ರಾಶಿಯವರಿಗೆ ಜಯ ಸಿಗಬಹುದು

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಪ್ರೇಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ಈ ರಾಶಿಯವರಿಗೆ ಜಯ ಸಿಗಬಹುದು
ಇಂದಿನ ರಾಶಿಭವಿಷ್ಯImage Credit source: istock
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jul 10, 2023 | 12:30 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ರಿಂದ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:48 ರಿಂದ 09:24ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:01 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ.

ತುಲಾ: ಪ್ರಾಮಾಣಿಕ ಕೆಲಸದಿಂದ ಇಂದು ಪ್ರಶಂಸೆ ಸಿಗಲಿದೆ. ನಿಮ್ಮ ಹಿತಶತ್ರುಗಳಿಂದ ತೊಂದರೆ ಬರುವ ಸಾಧ್ಯತೆ ಇದ್ದು, ಅದನ್ನು ಮೊದಲೇ ನೀವು ನಿವಾರಿಸಿಕೊಳ್ಳುವಿರಿ. ಉದ್ಯೋಗವನ್ನು ಕೊಡಿಸಲು ನಿಮ್ಮ ಬಳಿ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಒತ್ತಡದಿಂದಾಗಿ ಹೇಳುವುದಿಲ್ಲ. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆಯು ಹೆಚ್ಚಾಗಬಹುದು. ನಿಮ್ಮವರನ್ನು ನೀವು ದೂಷಿಸುವಿರಿ. ನಂಬಿಕೆಯನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೂ ಆದೀತು. ಮನೆಯಿಂದ ಹೊರಗಡೆ ಇರಲಿದ್ದೀರಿ. ಮಕ್ಕಳ ಪ್ರೀತಿಯು ನಿಮಗೆ ಸಿಗಲಿದೆ. ತಾಳ್ಮೆಯು ಇಂದು ಅಧಿಕವಾಗಿರಲಿದೆ.

ವೃಶ್ಚಿಕ: ನ್ಯಾಯಾಲಯದ ವ್ಯವಹಾರಗಳು ಒಂದು ಹಂತದವರೆಗೆ ನಿಲ್ಲಬಹುದು.‌ ನಿಮ್ಮ ಬಯಕೆಯನ್ನು ಇನ್ನೊಬ್ಬರ ಬಳಿ ಹೇಳುಕೊಳ್ಳುವಿರಿ. ಭೂಮಿಯ ವಿಚಾರದಲ್ಲಿ ಧನಾಗಮನವನ್ನು ನಿರೀಕ್ಷಿಸಬಹುದು. ಹಿರಿಯರ ಮಾತುಗಳು ನಿಮಗೆ ಸಹಾಯವನ್ನು ಮಾಡಬಹುದು. ವಿದ್ಯಾರ್ಥಿಗಳು ನಿರಂತರವಾಗಿ ಓದಿನ ಬಗ್ಗೆ ಗಮನ ಹರಿಸುವುದು ಮುಖ್ಯವಾಗಬಹುದು. ಯಾವುದನ್ನೇ ಆದರೂ ಪರೀಕ್ಷಿಸಿ ಮತ್ತೆ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಮುಂದೂಡುವಿರಿ. ಏಕಾಂತವು ನಿಮಗೆ ಸುಖವನ್ನು ಕೊಡಬಹುದು. ನಿಮ್ಮವರನ್ನು ಅಪಾರ್ಥಮಾಡಿಕೊಳ್ಳುವಿರಿ.

ಧನು: ಪಾಲುದಾರಿಕೆಯಲ್ಲಿ ನಿಮಗೆ ಮೋಸವಾದಂತೆ ಅನ್ನಿಸಬಹುದು. ಸ್ನೇಹಿತರಾಗಿದ್ದವರು ನಿಮ್ಮ‌ ಸಹಾಯಕ್ಕೆ ಬರದೇ ಇದ್ದುದು ನಿಮಗೆ ಅನುಮಾನವನ್ನು ಹುಟ್ಟಿಸುವುದು. ನಿಮ್ಮ‌ ಪ್ರೇಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಜಯ ಸಿಗಬಹುದು. ಅಂದುಕೊಂಡಂತೆ ಆಗಿದ್ದಕ್ಕೆ ಖುಷಿಪಡುವಿರಿ. ವಿದೇಶದಲ್ಲಿ ಉದ್ಯೋಗಕ್ಕೆ ಅವಕಾಶಗಳು ಸಿಗಬಹುದು. ಇಂದು ಕಛೇರಿಯ ಕೆಲಸಗಳು ಅಸ್ತವ್ಯಸ್ತವಾಗಬಹುದು. ಅನ್ಯರ ಗೌಪ್ಯವಾಗಿ ನಡೆಸುವಿರಿ. ಲೋಭದಿಂದ‌ ಇರುವ ಸಂಪತ್ತನ್ನೂ ಕಳೆದುಕೊಳ್ಳುವಿರಿ. ಸಹವಾಸದಿಂದ ನಿಮಗೆ ಲಾಭಗಳು ಆಗಲಿವೆ.

ಮಕರ: ಬಂಗಾರದ ಮೇಲೆ‌ ಹೂಡಿಕೆ ಮಾಡುವ ಪ್ರಯತ್ನವು ಇರಲಿದೆ. ತಾಯಿಯ ಕಡೆಯಿಂದ ನಿಮಗೆ ಅನುಕೂಲವನ್ನು ನಿರೀಕ್ಷಿಸಬಹುದು. ಆತುರದ ಪ್ರಯಾಣವನ್ನು ಮಾಡಬೇಕಾದೀತು. ವಾಹನ‌ವನ್ನು ಚಲಾಯಿಸುವಾಗ ನಿಯಂತ್ರಣವಿರಲಿ. ಯಂತ್ರೋಪಕರಣಗಳು ನಷ್ಡವಾಗಬಹುದು. ಅವಕಾಶಗಳನ್ನು ನೀವೇ ಕೈ ಚೆಲ್ಲಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವನ್ನು ತಂದೀತು. ಕೆಲಸದಲ್ಲಿನ ಶ್ರದ್ಧೆಯು ಕಡಿಮೆ ಆಗಬಹುದು. ಸತ್ಕಾರ್ಯಲ್ಲಿ ತೊಡಗಿಕೊಳ್ಳುವಿರಿ. ಹನುಮಾನ್ ಚಾಲೀಸ್ ಪಠಣ‌ ಮಾಡಿ.

ಕುಂಭ: ಇಂದು ಆಸ್ತಿ ಹಂಚಿಕೆಯಲ್ಲಿ ಬಿಡಿಸಲಾಗದ ಸಮಸ್ಯೆಗಳು ಬರಬಹುದು. ಮಕ್ಕಳಿಗೆ ಉತ್ತಮ‌ ಉದ್ಯೋಗವನ್ನು ಕೊಡಿಸಲು ತಿರುಗಾಟ ಮಾಡಬೇಕಾದೀತು. ಕಣ್ಣಿನ ತೊಂದರೆಯಿಂದ ಕಷ್ಟಪಡುವಿರಿ. ನಿರುದ್ಯೋಗದಿಂದ‌ ಮನೆಯಲ್ಲಿಯೇ ಕುಳಿತು ಬೇಸರವಾಗಬಹುದು. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಬರಬಹುದು. ಹಣದ ಹರಿವೂ ಸಾಮಾನ್ಯವಾಗಿ ಇರಲಿದೆ. ಸಣ್ಣ ವಾಗ್ವಾದವು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಜವಾಬ್ದಾರಿಯ ಸ್ಥಾನವು ಕೈ ತಪ್ಪಿ ಹೋಗಬಹುದು. ಹೊಸ ವೃತ್ತಿಯನ್ನು ಆನಂದಿಸುವಿರಿ. ಶಿವಕವಚದಿಂದ‌ ನಿಮ್ಮ‌ ದಿನದ ಕಾರ್ಯಗಳು ನಿರಾತಂಕವಾಗಿ ನಡೆಯುವುದು.

ಮೀನ: ರಾಜಕಾರಣಿಗಳಲ್ಲಿ ಬಿರುಸಿನ ಓಡಾಟ ಇರಲಿದೆ. ಗೌರವವನ್ನು ಪಡೆಯುವಿರಿ. ಸರ್ಕಾರದ ಕೆಲಸದಲ್ಲಿ ಮುನ್ನಡೆ ಸಿಗಲಿದೆ. ಸ್ವಾಸ್ಥ್ಯವು ಕೆಡಬಹುದು. ಆಸ್ತಿಯಲ್ಲಿ ಲಾಭವು ಇರಲಿದೆ. ಕೊಟ್ಟ ಮಾತಿನಿಂದ ನಿಮಗೆ ಕಷ್ಟವಾದೀತು. ಅನಾರೋಗ್ಯದಿಂದ ವಿಶ್ರಾಂತಿ ಪಡೆಯುವಿರಿ. ಖರ್ಚಿನ ವಿಚಾರದಲ್ಲಿ ಹೆಚ್ಚು ಸಂದಿಗ್ಧತೆ ಇರಲಿದೆ. ಅಧಿಕಾರಿ ವರ್ಗದಿಂದ ಒತ್ತಡವು ಬರಬಹುದು. ಎಲ್ಲರ ಮೇಲೂ ಕೋಪಗೊಳ್ಳುವಿರಿ. ಸಮಯಪಾಲನೆಗೆ ಹೆಚ್ಚು ಒತ್ತುಕೊಡುವಿರಿ. ಸಂಗಾತಿಯನ್ನು ಪ್ರೀತಿಯಿಂದ ನೋಡುವಿರಿ. ಗುರುದರ್ಶನವನ್ನು ಪಡೆದುಕೊಳ್ಳಿ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ