Nithya Bhavishya: ಇಂದಿನ ರಾಶಿಭವಿಷ್ಯ, ಕಚೇರಿಯ ಕೆಲಸಗಳು ಈ ರಾಶಿಯವರ ಬೆನ್ನುಬಿಡದೆ ಕಾಡಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಕಚೇರಿಯ ಕೆಲಸಗಳು ಈ ರಾಶಿಯವರ ಬೆನ್ನುಬಿಡದೆ ಕಾಡಬಹುದು
ಇಂದಿನ ರಾಶಿಭವಿಷ್ಯImage Credit source: freepik
Follow us
Rakesh Nayak Manchi
|

Updated on: Jun 10, 2023 | 12:45 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ಗಂಟೆ 07:41ರ ವರೆಗೆ.

ಧನುಸ್ಸು: ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ. ಅದಕ್ಕೆ ನಿಮ್ಮರಿಂದ ಉತ್ತಮ‌ಸಲಹೆಯೂ ಇಂದು ಸಿಗಬಹುದು.‌ ಪ್ರಯಾಣವನ್ನು ನೀವು ಆನಂದಿಸುವಿರಿ. ನಿಮ್ಮ ಬಗ್ಗೆ ತಿಳಿದುಕೊಳ್ಳಲು ಯಾರನ್ನಾದರೂ ಬಿಡಬಹುದು. ಪುಣ್ಯನದಿಯ ಸ್ನಾನವನ್ನು ಮಾಡಲು ನೀವು ಉತ್ಸಾಹದಿಂದ ಇರುವಿರಿ. ಪುಣ್ಯಸ್ಥಳದಲ್ಲಿ ನಿಮಗೆ ಸಂಪತ್ತು ಸಿಗುವ ಸೂಚನೆ ಸಿಗಬಹುದು.‌ ಗಮನಿಸಿಕೊಳ್ಳುವುದು ಉತ್ತಮ. ಪ್ರತಿಕೂಲ ವಾತಾವರಣವನ್ನು ಅನುಕೂಲಕರವಾದ ವಾತಾವರಣವನ್ನು ಮಾಡಿಕೊಳ್ಳುವ ಕಲೆ ನಿಮಗೆ‌ ಸಿದ್ಧಿಸಲಿದೆ.

ಮಕರ: ನಿಮಗೆ ಸಾಹಸ ಕೆಲಸದಲ್ಲಿ ಉತ್ಸಾಹವು ಅಧಿವಾಗಿರಲಿದೆ. ಭವಿಷ್ಯವನ್ನು ಕಲ್ಪಿಸಿಕೊಂಡು ನೀವು ಆನಂದಿಸುವಿರಿ. ನಿಮ್ಮ ಮಾತುಗಳು ನಿಮಗೆ ಗೌರವವನ್ನು ಕೀರ್ತಿಯನ್ನು ತಂದುಕೊಡುವುದು. ನಿಮ್ಮ ಇಚ್ಛಾಶಕ್ತಿಯಿಂದ ಬೇಕಾದುದನ್ನು ನೀವು ಪಡೆದುಕೊಳ್ಳುವಿರಿ. ಒತ್ತಾಯಕ್ಕೆ ಮಣಿದು ನಿಮ್ಮ ಕೆಲಸವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯವು ನಿಮಗೆ ವರವಾಗಿರಲಿದೆ. ಅಧಿಕೃತವಾಗಿ ಬರುವ ವಿಚಾರಗಳನ್ನು ಮಾತ್ರ ನೀವು ನಂಬಿಕೆ. ಗಾಳಿ ಮಾತುಗಳಿಗೆ ಯಾವ ಬೆಲೆಯೂ ಇರದು. ಸಿಗಬೇಕಾದವರ ಭೇಟಿಯು ಬಹಳ ವಿಳಂಬವಾದೀತು.

ಕುಂಭ: ಕಚೇರಿಯ ಕೆಲಸಗಳು ನಿಮ್ಮನ್ನು ಬೆನ್ನುಬಿಡದೇ ಕಾಡಬಹುದು. ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ನಿಮಗೆ ಉಂಟಾದ ತೊಂದರೆಯನ್ನು ಮರೆತು ನೀವು ಮೊದಲಿನಂತೆ ಆಗುವಿರಿ. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ನೀವು ಖರೀದಿಸುವಿರಿ. ಧನನಷ್ಟವೆಂಬ ಭಾವವೂ ನಿಮ್ಮೊಳಗೆ ಅವ್ಯಕ್ತವಾಗಿ ಇರಲಿದೆ. ನಿಮಗೆ ಸಮ್ಮಾನಗಳು ಬರಬೇಕು ಎಂಬ ಬಯಕೆ ಇದ್ದರೂ ಸದ್ಯ ಅದು ಸಾಧ್ಯವಾಗದು. ನಂಬಿಕೆಯನ್ನು ನೀವು ಬಲಗೊಳಿಸಿಕೊಳ್ಳಬೇಕಾಗಬಹುದು. ಅನ್ಯರ ಮಾತುಗಳನ್ನು ಕೇಳುವ ವ್ಯವಧಾನವು ಕಡಿಮೆ ಇದ್ದೀತು.

ಮೀನ: ವಿದೇಶೀ ವಸ್ತುಗಳ ಮೇಲೆ ವ್ಯಾಮೋಹ ಬರಬಹುದು. ನ್ಯಾಯಾಲಯದಲ್ಲಿ ತೀರ್ಪಿಗಾಗಿ ನೀವು ಕಾಯಬೇಕಾಗಿಬರಬಹುದು. ನಿಮ್ಮ ಶಕ್ತಿ, ಸಾಮರ್ಥ್ಯಗಳ ಬಗ್ಗೆ ನಿಮಗೆ ಹಿಂಜರಿಕೆ ಕಾಣಿಸಬಹುದು. ಉದ್ಯೋಗವನ್ನು ಬದಲಿಸುವ ಯೋಚನೆಯನ್ನು ಮುಂದೆ ಹಾಕುವುದು ಒಳ್ಳೆಯದು. ಅಧ್ಯಾತ್ಮದ ಕಡೆ ನಿಮ್ಮ ಮನಸ್ಸು ಒಲಿಯಬಹುದು. ನಿಮ್ಮ ಜೀವನಕ್ಕೆ ಬೇಕಾದ ಅಂಶಗಳನ್ನು ನೀವು ಕಳೆದುಕೊಂಡು ಪುನಃ ಅನ್ವೇಷಣೆ ಮಾಡುವಿರಿ. ಹೊಸ ವ್ಯವಹಾರವನ್ನು ಮಾಡಲು ಉತ್ಸಾಹ ಕಡಿಮೆ‌ ಆಗಲಿದೆ.

-ಲೋಹಿತಶರ್ಮಾ ಇಡುವಾಣಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು