Daily Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯ ಪ್ರೇಮಿಗಳ‌ ನಡುವೆ ಸಣ್ಣ ಬಿರುಕು ಉಂಟಾಗಬಹುದು

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯ ಪ್ರೇಮಿಗಳ‌ ನಡುವೆ ಸಣ್ಣ ಬಿರುಕು ಉಂಟಾಗಬಹುದು
ಇಂದಿನ ರಾಶಿಭವಿಷ್ಯImage Credit source: freepik
Follow us
Rakesh Nayak Manchi
|

Updated on: Jun 10, 2023 | 12:15 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ಗಂಟೆ 07:41ರ ವರೆಗೆ.

ಮೇಷ: ನಿಮ್ಮ ಜವಾಬ್ದಾರಿಯು ಮುಕ್ತಾಯ ಆಗಬಹುದು. ತಂದೆಯಿಂದ ಸಂಪತ್ತನ್ನು ಅಪೇಕ್ಷಿಸುವಿರಿ. ನಿಮ್ಮ ವ್ಯವಹಾರವು ಲಾಭವನ್ನು ತಂದುಕೊಡಲಿದೆ. ಅತಿಯಾದ ನಿರೀಕ್ಷೆಯನ್ನು ಖಂಡಿತವಾಗಿ ಇಟ್ಟುಕೊಳ್ಳಬೇಡಿ. ಸಂದರ್ಭೋಚಿತ ನಿಮ್ಮ ವರ್ತನೆಯು ಅಪಾರ್ಥವನ್ನು ಕೊಡಬಹುದು. ಸ್ನೇಹಿತರಿಗೆ ಮಾಡಿದ ಸಹಾಯಕ್ಕೆ ಕೃತಜ್ಞತೆಯನ್ನು ಅರ್ಪಿಸುವಿರಿ. ದೇವರನ್ನು ನೀವು ಬಲವಾಗಿ ನಂಬಿ ಕೆಲಸದಲ್ಲಿ ಆಸಕ್ತಿಯನ್ನು ಇಟ್ಟುಕೊಳ್ಳಿ. ಉತ್ತಮ ಗತಿಯೂ ಸಿಕ್ಕೀತು. ನಿರ್ಧಾರಗಳು ಅಸ್ಪಷ್ಟವಾಗಿ ಇರುವುದು ಬೇಡ.

ವೃಷಭ: ಕಡಿಮೆ ಶ್ರಮದಿಂದ ಹೆಚ್ಚು ಗಳಿಸುವ ಬಗ್ಗೆ ಚಿಂತಿಸುವಿರಿ. ‌ಯಾರನ್ನೂ ದ್ವೇಷಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ.‌ ಕೆಲಸಗಾರರ ಜೊತೆ ನೀವು ಜಗಳ ಮಾಡಿಕೊಳ್ಳುವಿರಿ‌. ಉದ್ಯಮವು ನಿಮ್ಮ ಕೈಹಿಡಿಯದೇ ಇರುವುದು ಬೇಸರವಾದೀತು. ನಿಮ್ಮ ಕಾರ್ಯಗಳು ಇಂದು ಮುಕ್ತಾಯಗೊಳ್ಳಬಹುದು. ಆಪ್ತರು ನಿಮ್ಮನ್ನು ಮತ್ತಷು ಇಷ್ಟಪಡುವರು. ಓದಿನ ಬಗ್ಗೆ ಸ್ವಲ್ಪ ಗಮನವು ಕಡಿಮೆ ಆಗಲಿದೆ. ತಿಳಿವಳಿಕೆಯ ಕೊರತೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುವಿರಿ.

ಮಿಥುನ: ಸಹೋದರರಿಂದ‌ ನಿಮಗೆ ಬೇಕಾದ ಸಂಪತ್ತು ಸಿಗಲಿದೆ. ಸಮಯಕ್ಕೆ ಬೆಲೆ ಕೊಡಬೇಕಾದೀತು. ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ನೀವು ಇಂದು ಮಾಡಿಸುವಿರಿ. ಕಾಲಕ್ಕೆ ತಕ್ಕಂತೆ ಹೆಜ್ಜೆಹಾಕಬೇಕಾದ ಸ್ಥಿತಿ ಬರಲಿದೆ. ಆಯಾಸದಿಂದ ನಿಮಗೆ ಮುಕ್ತಿ ಸಿಗಬಹುದು. ಅನಧಿಕೃತ ವ್ಯವಹಾರವನ್ನು ನೀವು ಬೆಂಬಲಿಸುವುದು ಬೇಡ. ನೀವಿಂದು ಹೇಳುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಇದು ತೊಂದರೆ ಆದೀತು.

ಕರ್ಕಾಟಕ: ನಿಮ್ಮನ್ನು ದ್ವೇಷಿಸಲು ಕಾರಣವಿಲ್ಲದಿದ್ದರೂ ದ್ವೇಷಿಸುವರು. ಅದೃಷ್ಟವನ್ನು ನಂಬಿ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮ ಪ್ರಯತ್ನವೇ ಪೂರ್ಣವಾಗಿರಲಿ. ಸಂಗಾತಿಯು ನಿಮ್ಮನ್ನು ಬೆಂಬಲಿಸುವರು. ಹಳೆಯದನ್ನು ನೆನಪಿಸಿಕೊಳ್ಳುವುದು ನಿಮಗೆ ಖುಷಿಯ ವಿಷಯ. ಪ್ರೇಮಿಗಳ‌ ನಡುವೆ ಸಣ್ಣ ಬಿರುಕು ಉಂಟಾಗಬಹುದು.‌ ಮಕ್ಕಳ ಜೊತೆ ಕುಳಿತು ಹರಟೆ ಹೊಡೆಯುವುದು ನಿಮಗೆ ಖುಷಿ ಕೊಡಬಹುದು. ತಾಯಿಯ ಕಡೆಯಿಂದ ನಿಮಗೆ ಅಮೂಲ್ಯ ವಸ್ತುವು ಪ್ರಾಪ್ತವಾದೀತು. ಅಂಗಳದಲ್ಲಿ ನಿಂತು ಆಕಾಶವನ್ನು ಮುಟ್ಟಲಾಗದು.‌

-ಲೋಹಿತಶರ್ಮಾ ಇಡುವಾಣಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?