ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 19 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಗಂಡ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:42 ರಿಂದ 09:20 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ.
ಧನುಸ್ಸು: ನಿಮ್ಮ ಪ್ರೇಮಪ್ರಕರಣವು ಗೊಂದಲದಲ್ಲಿ ಇರಬಹುದು. ಅನ್ಯರ ಮಾತು ಕೇಳಿ ಯಾವ ತೀರ್ಮಾನಕ್ಕೂ ಬರುವುದು ಬೇಡ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೆ ನೀವು ಕೋಪಗೊಳ್ಳಬಹುದು. ನಿಮ್ಮ ಉತ್ಸಾಹವು ಸಂಜೆಯ ಸಮಯಕ್ಕೆ ಅತಿಯಾಗಿ ಇರುವುದು. ಉದ್ಯೋಗದ ನಿಮಿತ್ತ ನೀವು ದೂರದ ಊರಿಗೆ ಪ್ರಯಾಣಮಾಡಬೇಕಾಗಿ ಬರಬಹುದು. ಅಲ್ಲಿನ ವಾತಾವರಣ ನಿಮಗೆ ಅನುಕೂಲವಾಗದೆ ಇರಬಹುದು. ನಿಮಗೆ ಆಸಕ್ತಿಯ ವಿಚಾರವು ಒಂದಿದ್ದರೂ ಮನೆಯವರ ಒತ್ತಾಯಕ್ಕೆ ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಸಮಯವನ್ನು ವ್ಯರ್ಥಮಾಡದೇ ಸದ್ವಿನಿಯೋಗ ಮಾಡಿಕೊಳ್ಳುವುದು ಉತ್ತಮ.
ಮಕರ: ಒಂದು ಗುಣದಿಂದ ಅವರ ಸ್ವಭಾವವನ್ನು ಅಳೆಯುವುದು ಸರಿಯಲ್ಲ. ಸ್ವಲ್ಪ ದಿನ ಕಾದುನೋಡುವುದು ಒಳ್ಳೆಯದು. ಆತುರದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪರೋಪಕಾರಕ್ಕೆ ಒಂದು ಮಿತಿ ಇರಲಿ. ನಿಮ್ಮ ಅಪಮಾನವನ್ನು ಯಾರ ಬಳಿಯೂ ಪ್ರಸ್ತಾಪಿಸುವುದು ಬೇಡ. ಕೆಲವರ ಬೆಂಬಲವನ್ನು ಇಟ್ಟುಕೊಂಡ ದೊಡ್ಡ ಕೆಲಸವನ್ನೂ ಮಾಡುವುದು ಅಸಾಧ್ಯ. ಆಪ್ತರನ್ನು ದೂರ ಮಾಡಿಕೊಳ್ಳಬೇಕಾದ ಸಂದರ್ಭವು ಬರಬಹುದು. ಮುಖಕ್ಕೆ ಸಂಬಂಧಿಸಿದ ರೋಗವು ಬರಬಹುದು. ಉತ್ತಮ ಚಿಕಿತ್ಸೆ ಪಡೆದು ಸರಿ ಮಾಡಿಕೊಳ್ಳಿ.
ಕುಂಭ: ನಿಮಗೆ ಬೇಕಾದುದನ್ನು ನೀವು ಪಡೆಯುವಿರಿ. ಅನ್ಯರು ನಿಮ್ಮನ್ನು ಗೇಲಿ ಮಾಡಿಯಾರು. ಕಛೇರಿಯ ಕಾರ್ಯಗಳು ಕೆಲವು ನಿಧಾನವಾಗಿ ಸಾಗುವುದು. ಬೇಗ ಮುಗಿಸಬೇಕಾದುದನ್ನು ಬಹಳ ವಿಳಂಬಮಾಡುವಿರಿ. ನಿಮಗೆ ಇಷ್ಟವಾಗದೆ ಕಡೆ ಹೋಗುವುದು ಬೇಡ. ಆತ್ಮೀಯರು ನಿಮ್ಮನ್ನು ಭೇಟಿ ಮಾಡುವರು. ಬಂದಿರುವ ಅವಕಾಶವನ್ನು ಬಿಟ್ಟು ದುಃಖಪಡುವ ಅವಶ್ಯಕತೆ ಇಲ್ಲ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವಿರಿ. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ನಿಮಗೇ ಸರಿ ಎನಿಸದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟವಾದೀತು. ಅವ್ಯವಹಾರದ ಬಗ್ಗೆ ಗಮನ ಬೇಡ.
ಮೀನ: ನಿಮ್ಮ ಕೆಲಸಗಳು ನಿಮ್ಮನ್ನು ಯಾರೆಂದು ಹೇಳುವುದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ನಿಮ್ಮ ಮನಸ್ಸು ತೆರೆದುಕೊಳ್ಳಬಹುದು. ದಾನದಲ್ಲಿ ಇಂದು ಹೆಚ್ಚಿನ ಖುಷಿಯನ್ನು ಕಾಣುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬೇರೆಯವರ ಮೇಲೆ ಒತ್ತಡ ತರುವುದು ಬೇಡ. ನಿಮಗೆ ಸಹೋದರನು ಸಹಾಕಾರ ನೀಡುವನು. ಧೈರ್ಯದಿಂದ ನೀವು ಮಾಡಬೇಕಾದ ಕೆಲಸವನ್ನು ಮಾಡಿ. ಅಧಿಕಾರಿಗಳ ವಿಚಾರದಲ್ಲಿ ನೀವು ಭಯ ಪಡುವುದು ಬೇಡ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಿ. ಮನೆಗೆ ಬಂದ ಬಂಧುಗಳನ್ನು ಸರಿಯಾಗಿ ಮಾತನಾಡಿಸಿ. ನಿಮ್ಮ ಲಘುವಾದ ಮಾತುಗಳು ಬೇಸರ ತರಿಸೀತು.
-ಲೋಹಿತಶರ್ಮಾ ಇಡುವಾಣಿ