ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶುಕ್ಲ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:31 ರಿಂದ 02:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:31ರ ವರೆಗೆ.
ಧನುಸ್ಸು: ಇಂದು ನೀವು ಮಾಡುವ ಕೆಲಸಗಳು ಲಾಭದಾಯಕ ಆಗಿದ್ದರೂ ಪರಿಶ್ರಮವೂ ಹೆಚ್ಚಿರಲಿದೆ. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ಬೇಕಾದ ಕ್ರಮವನ್ನು ಅನುಸರಿಸಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ಕೊಟ್ಟರೂ ಕೊಡದಿದ್ದರೂ ಮನಸ್ತಾಪ ಏಳಬಹುದು. ಲೆಕ್ಕ ಪರಿಶೋಧಕರು ಬಹಳ ಒತ್ತಡದಲ್ಲಿ ಇರಬೇಕಾಗಿಬರಬಹುದು. ಏಳಿಗೆಗೆ ಬೇಕಾದ ಸಾಮರ್ಥ್ಯ ಕೊರತೆ ಇದ್ದು ಅದನ್ನು ಸರಿಮಾಡಿಲೊಳ್ಳಬೇಕಿದೆ. ಯೋಗ್ಯ ವಿವಾಹಸಂಬಂಧವು ಬರಬಹುದು. ನಿಮ್ಮ ಕ್ಷುಲ್ಲಕ ಕಾರಣದಿಂದ ಅದನ್ನು ಬಿಟ್ಟ ಬಿಡುವುದು ಬೇಡ. ಮನಸ್ಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ.
ಮಕರ: ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಪ್ರಭಾವವು ಹೆಚ್ಚಾಗಬಹುದು. ಉತ್ತಮ ಭೋಜನವನ್ನು ನೀವಿಂದು ಮಾಡಲಿದ್ದೀರಿ. ಅಪರೂಪದ ಭೇಟಿ ನಿಮಗೆ ನೆಮ್ಮದಿಯನ್ನು ಯಂದೀತು. ಆದಾಯವು ಚಿಂತಿಸಿದ ಮಟ್ಟದಲ್ಲಿದ್ದರೂ ಖರ್ಚು ಅದಕ್ಕಿಂತಲೂ ಹೆಚ್ಚಾಗಲಿದೆ. ಸಂಸಾರದಲ್ಲಿ ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ಯಾರಾದರೂ ತಟಸ್ಥರಾದರೆ ಕಲಹವು ಶಾಂತವಾಗಬಹುದು. ದೇಹದ ಕೆಲವು ಭಾಗಗಳಲ್ಲಿ ತಾತದ ಕಾರಣದಿಂದ ನೋವುಗಳು ಕಾಣಿಸಬಹುದು. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ಸೋಲಬಹುದು.
ಕುಂಭ: ಕುಟುಂಬದಲ್ಲಿ ಒಂದು ಮಟ್ಟಿನ ಸೌಖ್ಯವು ಇರಲಿದೆ. ಇಷ್ಟಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಕ್ಷೇಮಸಮಾಚಾರವನ್ನು ಹಂಚಿಕೊಳ್ಳುವರು. ಬರಬೇಕಾದ ಬಾಕಿಗಳಲ್ಲಿ ಇಂದು ಸ್ವಲ್ಪ ಬರಲಿದೆ. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಸಂತಾನದ ಸುಖವನ್ನು ನೀವುಬಪಡೆಯುವಿರಿ. ಸಾಹಸ ಮಾಡಲು ಹೋಗುವಾಗ ಎಚ್ಚರವಿರಲಿ. ಮುಖಭಂಗ ಮಾಡಿಕೊಂಡು ಬರಬೇಕಾದೀತು. ಆಪ್ತರಿಂದ ಧನವನ್ನು ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸವನ್ನು ನೀವು ಅನ್ಯರ ಒತ್ತಾಯಕ್ಕೆ ಮಾಡುವಿರಿ. ಸ್ವಂತಕೆ ಇದ್ದರೆ ಒಳ್ಳೆಯದು. ಜಾಣ್ಮೆಯಿಂದ ನೀವು ಬೇರೆಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಅತಿಯಾದ ಮರೆವು ಉಂಟಾಗಲಿದೆ ಇಂದು.
ಮೀನ: ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು ನೀವು ವಿಳಂಬ ಆಗಬಹುದು. ಸಮಾಜಮುಖೀ ಕಾರ್ಯಗಳ ಕಡೆ ಹೆಚ್ಚು ಗಮನಹರಿಸುವಿರಿ. ಇದು ನಿಮ್ಮ ಆಸಕ್ತಿಯ ಕ್ಷೇತ್ರವೂ ಹೌದು. ನೌಕರರಿಗೆ ಇಂದು ಬಡ್ತಿ ಸಿಗಲಿದೆ. ಸಂತೋಷವು ಇಂದು ಹೆಚ್ಚಾಗಬಹುದು. ಬಂಧುಗಳು ನಿಮ್ಮನ್ನು ಬೇಕೆಂದೇ ತಪ್ಪು ದಾರಿ ತೋರಿಸುವರು. ನಿಮ್ಮ ವಿವೇಚನಾ ಶಕ್ತಿಯು ಕೆಲಸ ಮಾಡಲಿ. ದಾರಿಯನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಗಳನ್ನು ಎದುರಿಸುವುದು ನಿಮಗೆ ಸಹಜ ಕೆಲಸವಾಗಿದೆ. ಜೀವನ ಪರೀಕ್ಷೆಯನ್ನೂ ಜೀವನಕ್ಕೆ ಬೇಕಾದ ಪರೀಕ್ಷೆಯನ್ನೂ ನೀವು ಎದುರಿಸುವಿರಿ.
-ಲೋಹಿತಶರ್ಮಾ ಇಡುವಾಣಿ