AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಇಂದಿನ ರಾಶಿಭವಿಷ್ಯ, ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನು ತರಲಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 7) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನು ತರಲಿದೆ
ಇಂದಿನ ರಾಶಿಭವಿಷ್ಯImage Credit source: istock
Rakesh Nayak Manchi
|

Updated on: Jun 07, 2023 | 12:15 AM

Share

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶುಕ್ಲ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:31 ರಿಂದ 02:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:31ರ ವರೆಗೆ.

ಮೇಷ: ನೀವು ಇಂದು ಸಂಪನ್ಮೂಲ‌ ವ್ಯಕ್ತಿಳಾಗಿ ನೀವು ಇರುವಿರಿ. ನಿಮ್ಮ ಗುಣಗಳನ್ನು ಇತರರು ಹೇಳಿಯಾರು. ಸಮಯಕ್ಕೆ ನೀವು ಹೆಚ್ಚು ಮಹತ್ತ್ವವನ್ನು ಕೊಡಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ನೀವೇ ನಿರ್ಮಿಸುವಿರಿ. ಅತಿಯಾದ ಕೋಪವು ಕಡಿಮೆಯಾದರೂ ನಷ್ಟವಾಗಬಹುದು. ನಿಮ್ಮನ್ನು ಕೆರಳಿಸಲಿ ಯಾರಾದರೂ ಬರಬಹುದು. ನಿಮ್ಮ ಅಹಂಕಾರಕ್ಕೆ ಕಡಿವಾಣ ಹಾಕಿಕೊಳ್ಳಿ. ಸುಖದುಃಖಗಳು ಎರಡೂ ನಿಮಗೆ ಸಮವಾಗಿ ಸಿಗಬಹುದು. ಹೆಚ್ಚು ಶ್ರವಹಿಸಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು.

ವೃಷಭ: ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನು ತರಲಿದೆ. ಮನೆಗೆ ಬಂದರನ್ನು ಬರಿ ಕೈಯಲ್ಲಿ ಏನನ್ನಾದರೂ ಕೊಡಿಸುವುದು ಉಚಿತ. ವಿವಾಹದ ಮಾತುಕತೆ ವಿಳಂಬವಾಗಿ‌ ನಿಮಗೆ ಬೇಸರ ತರಿಸಬಹುದು. ಲೆಕ್ಕಪತ್ರ ವಿಷಯದಲ್ಲಿ ನೀವು ಹಿಂದುಳಿಯುವಿರಿ. ಸಭೆಯಲ್ಲಿ ನಿಮ್ಮನ್ನು ಗೌರವಿಸಬಹುದು. ವಾಹನದಲ್ಲಿ ನೀವು ಪ್ರಯಾಣ ಮಾಡಲು ನಿಮಗೆ ಕಷ್ಟವಾದೀತು. ಸಿಗದುದರ ಬಗ್ಗೆ ಬಹಳ ಆಲೋಚನೆ ಬೇಡ. ಯೋಗ ಬಂದಾ ಸಿಗುವುದು ಎಂಬ ನಂಬಿಕೆಯನ್ನು ಇಟ್ಟುಕೊಂಡಿರಿ.

ಮಿಥುನ: ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ಸ್ವಂತ ಉದ್ಯೋಗವಿದ್ದರೆ ಜನರು ವಂಚಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಾರದು. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳವರೆಗೆ ಮನೆಯಿಂದ ದೂರವಿರಬೇಕಾಗುವುದು. ಕಚೇರಿಯಲ್ಲಿ ನಿಮ್ಮ ಸಾಧನೆಗೆ, ನಿಷ್ಠೆಗೆ ಮೆಚ್ಚುಗೆ ಸಿಗಲಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕರಾಗಿ ಇರುವಿರಿ. ಇದೇ ನಿಮಗೆ ಇಷ್ಟದ ವಿಚಾರವಾಗಿದೆ. ನೂತನ ವಸ್ತುಗಳ ಖರೀದಿಗೆ ಹಣವು ಖರ್ಚಾದೀತು.

ಕರ್ಕಾಟಕ: ಮಕ್ಕಳ‌‌ ಮೇಲೆ ನಿಮಗೆ ಬೇಸರ ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಾಗಬಹುದು. ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಪ್ರವೇಶಮಾಡಬಹುದಿ. ಮನೆಯ ವಾತಾವರಣವು ನಿಮಗೆ ಹಿತವಾಗಲಿದೆ. ಸುಳ್ಳಿನಿಂದ‌ ಇಂದು ನಿಮ್ಮ ವ್ಯಕ್ತಿತ್ವಕ್ಕೆ ತೊಂದರೆ ಆದೀತು. ವಿಶೇಷವಾದ ವಸ್ತುವನ್ನು ಕೊಳ್ಳುವ ವಿಚಾರದಲ್ಲಿ ಮೋಸ ಹೋಗುವಿರಿ. ದೇವರಲ್ಲಿ ಶುದ್ಧ ಮನಸ್ಸಿಂದ ಜಪಮಾಡಿ. ವಾಹನದಿಂದ ಲಾಭವನ್ನು ಪಡತುವಿರಿ. ಅತಿಯಾದ ವೇಗ ಬೇಡ.

-ಲೋಹಿತಶರ್ಮಾ ಇಡುವಾಣಿ

ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?