ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 8 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ : ಬ್ರಹ್ಮ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:45ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04 ರಿಂದ 07:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ ಮಧ್ಯಾಹ್ನ 10:55ರ ವರೆಗೆ.
ಧನುಸ್ಸು: ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಚಾಡಿಯಿಂದ ಯಾರನ್ನಾದರೂ ಹಾಳು ಮಾಡುವ ಕೆಲಸವು ನಿಮ್ಮಿಂದ ಆದೀತು. ಇಂದು ನೀವು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ಇಂದು ನಿಮ್ಮ ಮನಸ್ಸು ಬಹಳ ಸಂತೋಷದಿಂದ ಇರಲಿದೆ. ಸಹೋದರಿಯು ನಿಮಗೆ ಧನಸಹಾಯವನ್ನು ಮಾಡುವರು. ಆರೋಗ್ಯದ ಸಮಸ್ಯೆಗಳನ್ನು ಸರಿಯಾದ ವೈದ್ಯರ ಮೂಲಕ ಸರಿಮಾಡಿಕೊಳ್ಳುವುದು ಉತ್ತಮ. ಆದರೆ ದುಂದು ವೆಚ್ಚಗಳನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ವರ್ತನೆಯು ಬಹಳ ಅಚ್ಚರಿ ಎನಿಸೀತು.
ಮಕರ: ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಬೇಸರದಿಂದ ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾವಲಂಬನೆಯ ಕಡೆಯೇ ನಿಮ್ಮ ಆಲೋಚನೆಗಳು ಇರಲಿವೆ. ನಿಮ್ಮ ಗಮನಸೆಳೆದು ವಂಚಿಸುವ ಕೆಲಸವು ನಡೆಯಬಹುದು. ಜಾಗರೂಕತೆಯಿಂದ ಇರಿ. ಸಣ್ಣ ಆದಾಯವನ್ನು ನೀವು ಇಂದು ಪಡೆಯಬಹುದು. ಪ್ರವಾಸ ಮಾಡುವ ಮನಸ್ಸಾಗಲಿದೆ. ಲಾಭವಿದೆ ಎಂದು ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳುವಿರಿ. ಸಾವಧಾನತೆ ನಿಮಗೆ ವರದಾನವಾಗಿದೆ. ಉಪಕರಣವನ್ನು ನೀವು ಸದುಪಯೋಗ ಮಾಡಿಕೊಳ್ಳುವಿರಿ. ಮೃತ್ಯುಂಜಯನ ಸ್ತೋತ್ರವನ್ನು ಮಾಡಿ.
ಕುಂಭ: ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ತಂದೆಯಿಂದ ಬೈಗುಳ ಪಡೆಯಬಹುದು. ಹೆಚ್ಚು ಆಯಾಸವಾಗುವ ಕೆಲಸವನ್ನು ನೀವು ಮಾಡುವಿರಿ. ಹಿರಿಯರ ಆಸೆಗಳನ್ನು ಪೂರ್ಣ ಮಾಡುವ ಮನಸ್ಸು ಬರಬಹುದು. ತುಂಬ ದಿನದ ಆಸ್ತಿಯ ವಿವಾದವು ಇಂದು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯು ಮಧ್ಯಗತಿಯಲ್ಲಿ ಇರಲಿದೆ. ನಿಮ್ಮನ್ನು ಕಂಡು ಅವಮಾನಿಸುವವರಿಗೆ ತಕ್ಕ ಉತ್ತರವನ್ನು ಕೊಡುವಿರಿ. ಹನುಮಂತನ ಸ್ಮರಣೆಯನ್ನು ಮಾಡಿ. ಕಷ್ಟವನ್ನು ಹಿಮ್ಮೆಟ್ಟಬಹುದು.
ಮೀನ: ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯಿಸಬೇಕಾಗಬಹುದು. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯನ್ನು ಇಟ್ಟುಕೊಳ್ಳುವರಿದ್ದಾರೆ. ನಿಮಗೆ ಇಂದು ಬಹಳ ಕಾರ್ಯದ ಒತ್ತಡ ಇದ್ದರೂ ನೀವು ನಿಮ್ಮವರಿಗೆ ಸಮಯವನ್ನು ಕೊಡುವಿರಿ. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ. ತಾಯಿಯ ಕಡೆಯ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ಶಿವಕವಚವನ್ನು ಪಠಿಸಿ.