ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:55 ರಿಂದ ಮಧ್ಯಾಹ್ನ 12:32ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:45 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ.
ಧನುಸ್ಸು: ಸ್ವತಂತ್ರವಾಗಿರುವ ನಿಮಗೆ ಏನನ್ನೋ ಕಳೆದುಕೊಂಡಿದ್ದೀರಿ ಎಂದು ಅನ್ನಿಸಬಹುದು. ಮಕ್ಕಳು ನಿಮ್ಮನ್ನು ಅನೇಕ ಪ್ರಕಾರವಾಗಿ ಪೀಡಿಸಿಯಾರು. ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಇದೆ. ಹೊಸತನ್ನು ಕಲಿಯುವ ಆಸೆಯಿದ್ದರೂ ಅವಕಾಶಗಳು ಕಡಿಮೆ ಇರಲಿದೆ. ಕುಲದಿಂದ ನಿಮಗೆ ಗೌರವ ಸಿಗಬಹುದು. ಕಛೇರಿಯಲ್ಲಿ ನಿಮ್ಮ ಕೆಳಗಿನವರು ನಿಮಗೆ ಆದೇಶ ಮಾಡಿಯಾರು. ಆರಂಭಿಸಿದ ಕೆಲಸಗಳು ಮಂದಗತಿಯಲ್ಲಿ ಸಾಗಬಹುದು. ಅಕ್ರಮ ಆಸ್ತಿಯಿಂದ ನಿಮಗೆ ಇಂದು ತೊಂದರೆಯಾಗಬಹುದು. ರಾಜಕಾರಣಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚು ಓಡಾಡುವರು.
ಮಕರ: ನಿಮಗೆ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳಲು ಕಷ್ಟವಾದೀತು. ಆರೋಗ್ಯವು ನಿಮ್ಮ ಕೈ ತಪ್ಪಿ ಹೋಗಬಹುದು. ದಾರಿ ತಪ್ಪಿಸಲು ನಿಮಗೆ ಯಾರಾದರೂ ಮಾರ್ಗದರ್ಶನ ಮಾಡಬಹುದು. ಭೂಮಿಯ ಖರೀದಿಗೆ ಅಧಿಕ ಖರ್ಚಾಗಬಹುದು. ನಿಮ್ಮ ಉದ್ಯೋಗವು ಅಭಿವೃದ್ಧಿಯ ಕಡೆಗೆ ಸಾಗಲಿದೆ. ಅಪರಿಚಿತ ಕರೆಗೆ ನೀವು ಮಾರುಹೋಗಬಹುದು, ಎಚ್ಚರವಾಗಿರಿ. ನಿಮಗೆ ಏಕಾಂತ ಬೇಕೆನಿಸಿ ಏಕಾಂಗಿಯಾಗಿ ಹೋಗಬಹುದು. ಸಜ್ಜನರ ಸಹವಾಸವು ನಿಮ್ಮ ಅಹಮ್ಮಿನಿಂದ ತಪ್ಪಿಹೋಗಬಹುದು. ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ.
ಕುಂಭ: ಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳಲು ಅನೇಕ ಮಾರ್ಗಗಳು ತೆರೆದುಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ನಿಮ್ಮ ನಿರ್ಧಾರಗಳನ್ನು ಯಾರಬಳಿಯಾದರೂ ಹಂಚಿಕೊಳ್ಳಿ. ನಿಮ್ಮ ಸಾಮರ್ಥ್ಯವು ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿರುವುದು. ನಿಮ್ಮ ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಸಕಾರಾತ್ಮಕವಾಗಿ ಇದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರಲಿ. ಮಕ್ಕಳ ವಿಚಾರಕ್ಕೆ ಕಲಹವಾಗಬಹುದು. ನ್ಯಾಯಾಲಯದಲ್ಲಿ ನಿಮಗೆ ಸೋಲಾಗಬಹುದು. ಅಪವಾದವನ್ನು ದೂರಮಾಡಿಕೊಳ್ಳಲು ಹಣವನ್ನು ಕಳೆದುಕೊಳ್ಳುವಿರಿ.
ಮೀನ: ನೀವು ಬಂದಿದ್ದನ್ನು ಎದುರಿಸುವ ಮನೋದಾರ್ಢ್ಯವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಉದ್ಯೋಗಕ್ಕೆ ಕೆಲವು ಅಡೆತಡೆಗಳು ಬಂದರೂ ಅದನ್ನು ಸರಿಮಾಡಿಕೊಳ್ಳುವ ಬಗ್ಗೆ ಅರಿವಿರಲಿದೆ. ಯುವಕರು ಬಲವಂತರಾಗಿದ್ದರೂ ಸರಿಯಾದ ಮಾರ್ಗವು ಸಿಗದೇ ಒದ್ದಾಡಬೇಕಾದೀತು. ವಾಹನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಕೃತಘ್ನತೆಯ ಆರೋಪವು ನಿಮ್ಮ ಮೇಲೆ ಬರಬಹುದು. ಸಹೋದರರ ಸಂಬಂಧವು ಇಂದು ಸ್ವಲ್ಪ ಸುಧಾರಿಸಬಹುದು. ಕೈತಪ್ಪಿ ಹೋದ ವಸ್ತುವನ್ನು ನೀವು ನಿಮ್ಮ ಸ್ವಾಧೀನಕ್ಕೆ ತಂದುಕೊಳ್ಳುವಿರಿ.
-ಲೋಹಿತಶರ್ಮಾ ಇಡುವಾಣಿ