Daily Horoscope 10 June: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಹಿತಶತ್ರುಗಳ ತೊಂದರೆ ಹೆಚ್ಚಿರಲಿದೆ
ಇಂದಿನ (2023 ಜೂನ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ಗಂಟೆ 07:41ರ ವರೆಗೆ.
ಮೇಷ: ನಿಮ್ಮ ಜವಾಬ್ದಾರಿಯು ಮುಕ್ತಾಯ ಆಗಬಹುದು. ತಂದೆಯಿಂದ ಸಂಪತ್ತನ್ನು ಅಪೇಕ್ಷಿಸುವಿರಿ. ನಿಮ್ಮ ವ್ಯವಹಾರವು ಲಾಭವನ್ನು ತಂದುಕೊಡಲಿದೆ. ಅತಿಯಾದ ನಿರೀಕ್ಷೆಯನ್ನು ಖಂಡಿತವಾಗಿ ಇಟ್ಟುಕೊಳ್ಳಬೇಡಿ. ಸಂದರ್ಭೋಚಿತ ನಿಮ್ಮ ವರ್ತನೆಯು ಅಪಾರ್ಥವನ್ನು ಕೊಡಬಹುದು. ಸ್ನೇಹಿತರಿಗೆ ಮಾಡಿದ ಸಹಾಯಕ್ಕೆ ಕೃತಜ್ಞತೆಯನ್ನು ಅರ್ಪಿಸುವಿರಿ. ದೇವರನ್ನು ನೀವು ಬಲವಾಗಿ ನಂಬಿ ಕೆಲಸದಲ್ಲಿ ಆಸಕ್ತಿಯನ್ನು ಇಟ್ಟುಕೊಳ್ಳಿ. ಉತ್ತಮ ಗತಿಯೂ ಸಿಕ್ಕೀತು. ನಿರ್ಧಾರಗಳು ಅಸ್ಪಷ್ಟವಾಗಿ ಇರುವುದು ಬೇಡ.
ವೃಷಭ: ಕಡಿಮೆ ಶ್ರಮದಿಂದ ಹೆಚ್ಚು ಗಳಿಸುವ ಬಗ್ಗೆ ಚಿಂತಿಸುವಿರಿ. ಯಾರನ್ನೂ ದ್ವೇಷಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ. ಕೆಲಸಗಾರರ ಜೊತೆ ನೀವು ಜಗಳ ಮಾಡಿಕೊಳ್ಳುವಿರಿ. ಉದ್ಯಮವು ನಿಮ್ಮ ಕೈಹಿಡಿಯದೇ ಇರುವುದು ಬೇಸರವಾದೀತು. ನಿಮ್ಮ ಕಾರ್ಯಗಳು ಇಂದು ಮುಕ್ತಾಯಗೊಳ್ಳಬಹುದು. ಆಪ್ತರು ನಿಮ್ಮನ್ನು ಮತ್ತಷು ಇಷ್ಟಪಡುವರು. ಓದಿನ ಬಗ್ಗೆ ಸ್ವಲ್ಪ ಗಮನವು ಕಡಿಮೆ ಆಗಲಿದೆ. ತಿಳಿವಳಿಕೆಯ ಕೊರತೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುವಿರಿ.
ಮಿಥುನ: ಸಹೋದರರಿಂದ ನಿಮಗೆ ಬೇಕಾದ ಸಂಪತ್ತು ಸಿಗಲಿದೆ. ಸಮಯಕ್ಕೆ ಬೆಲೆ ಕೊಡಬೇಕಾದೀತು. ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ನೀವು ಇಂದು ಮಾಡಿಸುವಿರಿ. ಕಾಲಕ್ಕೆ ತಕ್ಕಂತೆ ಹೆಜ್ಜೆಹಾಕಬೇಕಾದ ಸ್ಥಿತಿ ಬರಲಿದೆ. ಆಯಾಸದಿಂದ ನಿಮಗೆ ಮುಕ್ತಿ ಸಿಗಬಹುದು. ಅನಧಿಕೃತ ವ್ಯವಹಾರವನ್ನು ನೀವು ಬೆಂಬಲಿಸುವುದು ಬೇಡ. ನೀವಿಂದು ಹೇಳುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಇದು ತೊಂದರೆ ಆದೀತು.
ಕರ್ಕಾಟಕ: ನಿಮ್ಮನ್ನು ದ್ವೇಷಿಸಲು ಕಾರಣವಿಲ್ಲದಿದ್ದರೂ ದ್ವೇಷಿಸುವರು. ಅದೃಷ್ಟವನ್ನು ನಂಬಿ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮ ಪ್ರಯತ್ನವೇ ಪೂರ್ಣವಾಗಿರಲಿ. ಸಂಗಾತಿಯು ನಿಮ್ಮನ್ನು ಬೆಂಬಲಿಸುವರು. ಹಳೆಯದನ್ನು ನೆನಪಿಸಿಕೊಳ್ಳುವುದು ನಿಮಗೆ ಖುಷಿಯ ವಿಷಯ. ಪ್ರೇಮಿಗಳ ನಡುವೆ ಸಣ್ಣ ಬಿರುಕು ಉಂಟಾಗಬಹುದು. ಮಕ್ಕಳ ಜೊತೆ ಕುಳಿತು ಹರಟೆ ಹೊಡೆಯುವುದು ನಿಮಗೆ ಖುಷಿ ಕೊಡಬಹುದು. ತಾಯಿಯ ಕಡೆಯಿಂದ ನಿಮಗೆ ಅಮೂಲ್ಯ ವಸ್ತುವು ಪ್ರಾಪ್ತವಾದೀತು. ಅಂಗಳದಲ್ಲಿ ನಿಂತು ಆಕಾಶವನ್ನು ಮುಟ್ಟಲಾಗದು.
ಸಿಂಹ: ಹೊಸತನವನ್ನು ನೀವು ರೂಡಿಸಿಕೊಳ್ಳುವ ಹಂಬಲವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದೇ ಇರಬಹುದು. ನಿಮ್ಮವರ ಸ್ಥಳೀಯನ್ನು ಕಂಡು ನೀವು ಭಾವುಕರಾಗಬಹುದು. ಅಧಿಕಾರವನ್ನು ನೀವು ಕೆಲಸಗಳಿಗೆ ಬಳಸಿಕೊಳ್ಳುವುದು ಒಳ್ಳೆಯದು. ಸಂಪತ್ತಿನ ಹಿಂದೆ ನೀವು ಓಡಬೇಕಾಗಿಲ್ಲ. ನಿಮ್ಮ ಕೆಲಸವೇ ಸಂಪತ್ತು ಬರುವಂತೆ ಮಾಡುವುದು. ಎಲ್ಲರನ್ನೂ ಆತ್ಮೀಯವಾಗಿ ಕಾಣುವಿರಿ. ನಿಮ್ಮನ್ನು ಕಂಡು ಸಂಕಟಪಡುವವರು ಇರುವರು. ಮಂದಗತಿಯಲ್ಲಿ ಕೆಲಸವು ಸಾಗಲಿದೆ.
ಕನ್ಯಾ: ನಿಮ್ಮನ್ನು ಇಂದು ಭೇಟಿಯಾಗುವ ವ್ಯಕ್ತಿಗಳು ಸಾಮಾನ್ಯದವರಾಗಿರುವಿದಿಲ್ಲ. ಅವರಿಗೆ ಗೌರವ ಕೊಡಿ. ನಿಮ್ಮ ಎಂದಿನ ಬಿಮ್ಮನ್ನು ಬಿಡಬೇಕಾಗಬಹುದು. ನೀವು ಇಂದು ಇಚ್ಛಿಸಿದವರಿಗೆ ದಾನವನ್ನು ಕೊಡುವಿರಿ. ನಿಮ್ಮ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ದೇವರನ್ನೇ ಸಂಪೂರ್ಣವಾಗಿ ನಂಬಿ ನಿಮ್ಮ ಕೆಲಸವನ್ನು ಮಾಡಿ. ಬಂಧುಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹಣ ಸಂಪಾದನೆಗೆ ಆರಿಸಿಕೊಂಡ ಮಾರ್ಗವು ಸರಿಯೆನಿಸದೇ ಇರಬಹುದು. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು. ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ. ಮನೋರಂಜನೆಯ ನಿಮಿತ್ತ ನೀವು ಇಂದು ಕಾಲವನ್ನು ಕಳೆಯಬಹುದು.
ತುಲಾ: ಸ್ಫೂರ್ತಿದಾಯಕ ಸಂಗತಿಗಳು ನಿಮ್ಮನ್ನು ಇನ್ನಷ್ಟು ಬಲಗೊಳಿಸುವುವು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಸ್ಥಾನವೂ ನಿಮಗೆ ಸಿಗಲಿದೆ. ನಿಮಗೆ ವಿವಾಹವನ್ನು ಮಾಡುವ ಸುದ್ದಿಯು ಆಕಸ್ಮಿಕವಾಗಿ ಕುಟುಂಬದಿಂದ ಕೇಳಿಬರಬಹುದು. ಪ್ರೇಮಿಗಳು ಇಂದು ಸುಖವಾಗಿ ಸುತ್ತಾಡಲಿದ್ದಾರೆ. ವಿದ್ಯಾರ್ಥಿಗಳು ಬಲವಂತಾಗಿ ಓದಲು ಕುಳಿತುಕೊಳ್ಳುವರು. ತಂದೆಯ ಆಸ್ತಿಯನ್ನು ಪಡೆಯಲು ನೀವಿಂದು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ನೀವಿಂದು ಹೆಚ್ಚು ಗಮನಕೊಡುವಿರಿ.
ವೃಶ್ಚಿಕ: ಬೆಳಗ್ಗೆ ನಿಮಗೆ ಆತ್ಮವಿಶ್ವಾಸವೇ ಇಡೀ ದಿನದ ಕೆಲಸವನ್ನು ಸಲಲಿತವಾಗಿ ಮುಗಿಸಿಕೊಡುವುದು. ನಿಮ್ಮ ನಿರ್ಧಾರವನ್ನು ಸುಲಭಕ್ಕೆ ಬದಲಿಸುವುದು ಬೇಡ. ಬಲವಾದ ಕಾರಣವನ್ನು ನೋಡಿಕೊಂಡು ಮುಂದುವರಿಯಿರಿ. ಬಹಳ ದಿನದ ಭೂಮಿಯ ವ್ಯವಹಾರದ ಕಲಹದಿಂದ ನಿಮಗೆ ಜಯವಾಗಬಹುದು. ಮಕ್ಕಳ ಮೇಲೆ ನಿಮಗೊಂದು ಕಣ್ಣಿರಲಿ. ಒಂಟಿತನ ಭಯವು ನಿಮ್ಮನ್ನು ಕಾಡಬಹುದು. ಅನಾಗರಿಕರಂತೆ ವರ್ತಿಸಲು ಹೋಗಬೇಡಿ. ನಿಮ್ಮ ಕಣ್ಣುಗಳಿಂದ ನಿಮ್ಮನ್ನು ಜನರು ಅಳೆಯುವರು. ನಿಮಗೆ ಕೊಟ್ಟ ಕೆಲಸವನ್ನು ನೀವಿಂದು ಮುಗಿಸಿ. ಅನಂತರ ಅನ್ಯ ಕಾರ್ಯದಲ್ಲಿ ತೊಡಗಿ.
ಧನುಸ್ಸು: ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ. ಅದಕ್ಕೆ ನಿಮ್ಮರಿಂದ ಉತ್ತಮಸಲಹೆಯೂ ಇಂದು ಸಿಗಬಹುದು. ಪ್ರಯಾಣವನ್ನು ನೀವು ಆನಂದಿಸುವಿರಿ. ನಿಮ್ಮ ಬಗ್ಗೆ ತಿಳಿದುಕೊಳ್ಳಲು ಯಾರನ್ನಾದರೂ ಬಿಡಬಹುದು. ಪುಣ್ಯನದಿಯ ಸ್ನಾನವನ್ನು ಮಾಡಲು ನೀವು ಉತ್ಸಾಹದಿಂದ ಇರುವಿರಿ. ಪುಣ್ಯಸ್ಥಳದಲ್ಲಿ ನಿಮಗೆ ಸಂಪತ್ತು ಸಿಗುವ ಸೂಚನೆ ಸಿಗಬಹುದು. ಗಮನಿಸಿಕೊಳ್ಳುವುದು ಉತ್ತಮ. ಪ್ರತಿಕೂಲ ವಾತಾವರಣವನ್ನು ಅನುಕೂಲಕರವಾದ ವಾತಾವರಣವನ್ನು ಮಾಡಿಕೊಳ್ಳುವ ಕಲೆ ನಿಮಗೆ ಸಿದ್ಧಿಸಲಿದೆ.
ಮಕರ: ನಿಮಗೆ ಸಾಹಸ ಕೆಲಸದಲ್ಲಿ ಉತ್ಸಾಹವು ಅಧಿವಾಗಿರಲಿದೆ. ಭವಿಷ್ಯವನ್ನು ಕಲ್ಪಿಸಿಕೊಂಡು ನೀವು ಆನಂದಿಸುವಿರಿ. ನಿಮ್ಮ ಮಾತುಗಳು ನಿಮಗೆ ಗೌರವವನ್ನು ಕೀರ್ತಿಯನ್ನು ತಂದುಕೊಡುವುದು. ನಿಮ್ಮ ಇಚ್ಛಾಶಕ್ತಿಯಿಂದ ಬೇಕಾದುದನ್ನು ನೀವು ಪಡೆದುಕೊಳ್ಳುವಿರಿ. ಒತ್ತಾಯಕ್ಕೆ ಮಣಿದು ನಿಮ್ಮ ಕೆಲಸವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯವು ನಿಮಗೆ ವರವಾಗಿರಲಿದೆ. ಅಧಿಕೃತವಾಗಿ ಬರುವ ವಿಚಾರಗಳನ್ನು ಮಾತ್ರ ನೀವು ನಂಬಿಕೆ. ಗಾಳಿ ಮಾತುಗಳಿಗೆ ಯಾವ ಬೆಲೆಯೂ ಇರದು. ಸಿಗಬೇಕಾದವರ ಭೇಟಿಯು ಬಹಳ ವಿಳಂಬವಾದೀತು.
ಕುಂಭ: ಕಛೇರಿಯ ಕೆಲಸಗಳು ನಿಮ್ಮನ್ನು ಬೆನ್ನುಬಿಡದೇ ಕಾಡಬಹುದು. ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ನಿಮಗೆ ಉಂಟಾದ ತೊಂದರೆಯನ್ನು ಮರೆತು ನೀವು ಮೊದಲಿನಂತೆ ಆಗುವಿರಿ. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ನೀವು ಖರೀದಿಸುವಿರಿ. ಧನನಷ್ಟವೆಂಬ ಭಾವವೂ ನಿಮ್ಮೊಳಗೆ ಅವ್ಯಕ್ತವಾಗಿ ಇರಲಿದೆ. ನಿಮಗೆ ಸಮ್ಮಾನಗಳು ಬರಬೇಕು ಎಂಬ ಬಯಕೆ ಇದ್ದರೂ ಸದ್ಯ ಅದು ಸಾಧ್ಯವಾಗದು. ನಂಬಿಕೆಯನ್ನು ನೀವು ಬಲಗೊಳಿಸಿಕೊಳ್ಳಬೇಕಾಗಬಹುದು. ಅನ್ಯರ ಮಾತುಗಳನ್ನು ಕೇಳುವ ವ್ಯವಧಾನವು ಕಡಿಮೆ ಇದ್ದೀತು.
ಮೀನ: ವಿದೇಶೀ ವಸ್ತುಗಳ ಮೇಲೆ ವ್ಯಾಮೋಹ ಬರಬಹುದು. ನ್ಯಾಯಾಲಯದಲ್ಲಿ ತೀರ್ಪಿಗಾಗಿ ನೀವು ಕಾಯಬೇಕಾಗಿಬರಬಹುದು. ನಿಮ್ಮ ಶಕ್ತಿ, ಸಾಮರ್ಥ್ಯಗಳ ಬಗ್ಗೆ ನಿಮಗೆ ಹಿಂಜರಿಕೆ ಕಾಣಿಸಬಹುದು. ಉದ್ಯೋಗವನ್ನು ಬದಲಿಸುವ ಯೋಚನೆಯನ್ನು ಮುಂದೆ ಹಾಕುವುದು ಒಳ್ಳೆಯದು. ಅಧ್ಯಾತ್ಮದ ಕಡೆ ನಿಮ್ಮ ಮನಸ್ಸು ಒಲಿಯಬಹುದು. ನಿಮ್ಮ ಜೀವನಕ್ಕೆ ಬೇಕಾದ ಅಂಶಗಳನ್ನು ನೀವು ಕಳೆದುಕೊಂಡು ಪುನಃ ಅನ್ವೇಷಣೆ ಮಾಡುವಿರಿ. ಹೊಸ ವ್ಯವಹಾರವನ್ನು ಮಾಡಲು ಉತ್ಸಾಹ ಕಡಿಮೆ ಆಗಲಿದೆ.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್- 8762924271)