AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯ ಪ್ರೇಮಿಗಳು ಇಂದು ಸುಖವಾಗಿ ಸುತ್ತಾಡಲಿದ್ದಾರೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯ ಪ್ರೇಮಿಗಳು ಇಂದು ಸುಖವಾಗಿ ಸುತ್ತಾಡಲಿದ್ದಾರೆ
ಇಂದಿನ ರಾಶಿಭವಿಷ್ಯImage Credit source: freepik
Rakesh Nayak Manchi
|

Updated on: Jun 10, 2023 | 12:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 10 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ಗಂಟೆ 07:41ರ ವರೆಗೆ.

ಸಿಂಹ: ಹೊಸತನವನ್ನು ನೀವು ರೂಡಿಸಿಕೊಳ್ಳುವ ಹಂಬಲವನ್ನು ಆಪ್ತರ‌ ಜೊತೆ ಹಂಚಿಕೊಳ್ಳುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದೇ ಇರಬಹುದು. ನಿಮ್ಮವರ ಸ್ಥಳೀಯನ್ನು ಕಂಡು ನೀವು ಭಾವುಕರಾಗಬಹುದು. ಅಧಿಕಾರವನ್ನು ನೀವು ಕೆಲಸಗಳಿಗೆ ಬಳಸಿಕೊಳ್ಳುವುದು ಒಳ್ಳೆಯದು. ಸಂಪತ್ತಿನ ಹಿಂದೆ ನೀವು ಓಡಬೇಕಾಗಿಲ್ಲ.‌ ನಿಮ್ಮ ಕೆಲಸವೇ ಸಂಪತ್ತು ಬರುವಂತೆ ಮಾಡುವುದು. ಎಲ್ಲರನ್ನೂ ಆತ್ಮೀಯವಾಗಿ ಕಾಣುವಿರಿ. ನಿಮ್ಮನ್ನು ಕಂಡು ಸಂಕಟಪಡುವವರು ಇರುವರು. ಮಂದಗತಿಯಲ್ಲಿ ಕೆಲಸವು ಸಾಗಲಿದೆ.

ಕನ್ಯಾ: ನಿಮ್ಮನ್ನು ಇಂದು ಭೇಟಿಯಾಗುವ ವ್ಯಕ್ತಿಗಳು ಸಾಮಾನ್ಯದವರಾಗಿರುವಿದಿಲ್ಲ. ಅವರಿಗೆ ಗೌರವ ಕೊಡಿ. ನಿಮ್ಮ ಎಂದಿನ ಬಿಮ್ಮನ್ನು ಬಿಡಬೇಕಾಗಬಹುದು. ನೀವು ಇಂದು ಇಚ್ಛಿಸಿದವರಿಗೆ ದಾನವನ್ನು ಕೊಡುವಿರಿ. ನಿಮ್ಮ‌ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ದೇವರನ್ನೇ ಸಂಪೂರ್ಣವಾಗಿ ನಂಬಿ ನಿಮ್ಮ ಕೆಲಸವನ್ನು ಮಾಡಿ.‌ ಬಂಧುಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹಣ ಸಂಪಾದನೆಗೆ ಆರಿಸಿಕೊಂಡ‌ ಮಾರ್ಗವು ಸರಿಯೆನಿಸದೇ ಇರಬಹುದು. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು. ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ. ಮನೋರಂಜನೆಯ ನಿಮಿತ್ತ ನೀವು ಇಂದು ಕಾಲವನ್ನು ಕಳೆಯಬಹುದು.

ತುಲಾ: ಸ್ಫೂರ್ತಿದಾಯಕ ಸಂಗತಿಗಳು ನಿಮ್ಮನ್ನು ಇನ್ನಷ್ಟು ಬಲಗೊಳಿಸುವುವು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಸ್ಥಾನವೂ ನಿಮಗೆ ಸಿಗಲಿದೆ. ನಿಮಗೆ ವಿವಾಹವನ್ನು ಮಾಡುವ ಸುದ್ದಿಯು ಆಕಸ್ಮಿಕವಾಗಿ ಕುಟುಂಬದಿಂದ ಕೇಳಿಬರಬಹುದು. ಪ್ರೇಮಿಗಳು ಇಂದು ಸುಖವಾಗಿ ಸುತ್ತಾಡಲಿದ್ದಾರೆ. ವಿದ್ಯಾರ್ಥಿಗಳು ಬಲವಂತಾಗಿ ಓದಲು ಕುಳಿತುಕೊಳ್ಳುವರು. ತಂದೆಯ ಆಸ್ತಿಯನ್ನು ಪಡೆಯಲು ನೀವಿಂದು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ನೀವಿಂದು ಹೆಚ್ಚು ಗಮನಕೊಡುವಿರಿ.

ವೃಶ್ಚಿಕ: ಬೆಳಗ್ಗೆ ನಿಮಗೆ ಆತ್ಮವಿಶ್ವಾಸವೇ ಇಡೀ ದಿನದ ಕೆಲಸವನ್ನು ಸಲಲಿತವಾಗಿ ಮುಗಿಸಿಕೊಡುವುದು. ನಿಮ್ಮ ನಿರ್ಧಾರವನ್ನು ಸುಲಭಕ್ಕೆ ಬದಲಿಸುವುದು ಬೇಡ.‌ ಬಲವಾದ ಕಾರಣವನ್ನು ನೋಡಿಕೊಂಡು ಮುಂದುವರಿಯಿರಿ. ಬಹಳ ದಿನದ ಭೂಮಿಯ ವ್ಯವಹಾರದ ಕಲಹದಿಂದ ನಿಮಗೆ ಜಯವಾಗಬಹುದು. ಮಕ್ಕಳ ಮೇಲೆ ನಿಮಗೊಂದು ಕಣ್ಣಿರಲಿ. ಒಂಟಿತನ ಭಯವು ನಿಮ್ಮನ್ನು ಕಾಡಬಹುದು. ಅನಾಗರಿಕರಂತೆ ವರ್ತಿಸಲು ಹೋಗಬೇಡಿ. ನಿಮ್ಮ ಕಣ್ಣುಗಳಿಂದ ನಿಮ್ಮನ್ನು ಜನರು ಅಳೆಯುವರು. ನಿಮಗೆ ಕೊಟ್ಟ ಕೆಲಸವನ್ನು ನೀವಿಂದು ಮುಗಿಸಿ. ಅನಂತರ ಅನ್ಯ ಕಾರ್ಯದಲ್ಲಿ ತೊಡಗಿ.

-ಲೋಹಿತಶರ್ಮಾ ಇಡುವಾಣಿ

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ