Astrology: ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿ ಪಡುವಿರಿ, ವಾಹನ ಚಲಾಯಿಸುವಾಗ ಆತುರ ಬೇಡ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.25 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Astrology: ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿ ಪಡುವಿರಿ, ವಾಹನ ಚಲಾಯಿಸುವಾಗ ಆತುರ ಬೇಡ
ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿ ಪಡುವಿರಿ, ವಾಹನ ಚಲಾಯಿಸುವಾಗ ಆತುರ ಬೇಡ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 25, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮಂಗಳವಾರ (ಜೂನ್. 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವೈಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ 15:50 ರಿಂದ 17:27ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:21 ರಿಂದ 10:58ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 14:13ರ ವರೆಗೆ.

ಸಿಂಹ ರಾಶಿ: ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅವಶ್ಯಕತೆ ಇರಲಿದೆ. ಬೇರೆಯವರ ಭಾವನೆಗಳಿಗೆ ತೊಂದರೆ ಕೊಡದೇ ವರ್ತಿಸಿ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಇರಲಿದೆ. ಆರಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಹುದ್ದೆಯು ಸಿಗಬಹುದು. ವಾಹನ ಚಾಲನೆ ವೇಳೆ ಆತುರ ಬೇಡ. ಖರ್ಚು ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಪ್ರಪಂಚದಲ್ಲಿ ಹೆಚ್ಚು ಪ್ರಗತಿ ಕಾಣುವಿರಿ. ಇಂದು ನಿಮ್ಮ ದೃಷ್ಟಿಯಲ್ಲಿ ಎಲ್ಲರೂ ತಪ್ಪಿತಸ್ಥರೇ. ನಿಮ್ಮ ವಿದ್ಯಾಭ್ಯಾಸ ಮಟ್ಟ ಬಹಳ ಕೆಳಗಿದೆ ಎಂದು ಮನವರಿಕೆ ಆಗುವುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ.

ಕನ್ಯಾ ರಾಶಿ: ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಬಂಗಾರದ ವ್ಯಾಪಾರಿಗಳಿಗೆ ಲಾಭವು ಚನ್ನಾಗಿರಲಿದ್ದು ಹಣವು ಮಾತ್ರ ಸಿಗದಾಗಿದೆ. ಸತತ ಪ್ರಯತ್ನದಿಂದ ನಿಮಗೆ ಸಫಲತೆಯು ಸಿಗಬಹುದು. ದ್ರವ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಸಿಗಲಿದೆ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದರೂ ಖರ್ಚು ಅದನ್ನು ಮೀರಿರುತ್ತದೆ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಇತರರು ಸೋಲಬಹುದು. ಕೃಷಿಯಲ್ಲಿ ಬದಲಾವಣೆಯನ್ನು ಮಾಡಲು ಆಲೋಚಿಸುವಿರಿ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಸಾಹಿತ್ಯಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು.

ತುಲಾ ರಾಶಿ: ನಿಮ್ಮ ನಡೆ ಹಾಗು ನುಡಿಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಮನಸ್ಸು ಶಕ್ತಿಯನ್ನು ಕಳೆದುಕೊಳ್ಳಬಹುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ಯಾರ ಮಾತನ್ನು ಕೇಳುವುದು ಬಿಡುವುದು ಎಂಬ ಗೊಂದಲಾಗುವುದು. ಮಿತ್ರರ ಸಹಾಯದಿಂದ ಕೆಲಸವನ್ನು ಗಿಟ್ಟಿಸಿಕೊಳ್ಳುವಿರಿ. ಸಾಲ ಮಾಡಿಯಾದರೂ ಏನನ್ನಾದರೂ ಸಾಧಿಸಬೇಕು ಎಂಬ ಆತುರವಿರುವುದು. ದುಷ್ಕೃತ್ಯಕ್ಕೆ ಹಣದ ಸಹಾಯವನ್ನು ಮಾಡಿದರೆ ನಿಮಗೆ ಮುಂಬರುವ ದಿನಗಳ ತೊಂದರೆಗಳು ಬರಬಹುದು. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ.

ವೃಶ್ಚಿಕ ರಾಶಿ: ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿ ಆಗುವುದು. ಆಸ್ತಿಯ ವಿಚಾರದಲ್ಲಿ ಕಾನೂನಿನ ತೊಂದರೆಗಳು ಇದ್ದು ಅದನ್ನು ಸರಿಪಡಿಸಿಕೊಳ್ಳಲು ಓಡಾಟಗಳಾಗಬಹುದು. ಕಾರ್ಯದಲ್ಲಿ ಅಶಿಸ್ತು ಬೇಡ. ವೃತ್ತಿಯಲ್ಲಿ ಬರುವ ಯಾವುದೇ ಹೊಸ ಜವಾಬ್ದಾರಿಗಳನ್ನು ಅಲ್ಲಗಳೆಯಬೇಡಿ. ಸಂಪೂರ್ಣವಾಗಿ ತಿಳಿದುಕೊಂಡು ಒಪ್ಪಿಕೊಳ್ಳಿ. ಭಾರವಾದ ವಸ್ತುಗಳನ್ನು ಎತ್ತಲು ಹೋಗುವುದು ಬೇಡ. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉನ್ನತ ವ್ಯಾಸಂಗಕ್ಕೆ ತೆರಳುವ ಮನಸ್ಸು ಮಾಡುವಿರಿ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಗೊಳಿಸುವಿರಿ. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ