Horoscope: ದಿನಭವಿಷ್ಯ; ಈ ರಾಶಿಯವರು ಆರ್ಥಿಕತೆಯಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು

| Updated By: Rakesh Nayak Manchi

Updated on: Jan 15, 2024 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 15 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ದಿನಭವಿಷ್ಯ; ಈ ರಾಶಿಯವರು ಆರ್ಥಿಕತೆಯಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು
ರಾಶಿಭವಿಷ್ಯ
Image Credit source: iStock Photo
Follow us on

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ಇಲ್ಲಿ ತಿಳಿಯಿರಿ. ನಿಮ್ಮ ಇಂದಿನ (ಜನವರಿ 15) ದಿನ ಭವಿಷ್ಯ (Horoscope) ಹೀಗಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ವರೀಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:27 ರಿಂದ 09:52ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:17 ರಿಂದ 12:42ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:07 ರಿಂದ 03:32ರ ವರೆಗೆ.

ಧನು ರಾಶಿ: ಪ್ರಸಿದ್ಧಿಯನ್ನು ಪಡೆಯುವ ಹಂಬಲವು ಅತಿಯಾಗಬಹುದು.‌ ಎಲ್ಲ ಕೆಲಸವನ್ನೂ ಅದೇ ದೃಷ್ಟಿಯಿಂದ ನೋಡುವಿರಿ. ಮಾನಸಿಕವಾದ ಅಸ್ಥಿರತೆಯಿಂದ ನಿಮಗೆ ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ನಿಮ್ಮವರ ಬಗ್ಗೆ ತಿಳಿದು ಸಂತೋಷ ಪಡುವಿರಿ. ಉತ್ಸಾಹವು ಅಧಿಕವಾಗಲಿದೆ.

ಮಕರ ರಾಶಿ: ನಿಮ್ಮ ಸಂಪತ್ತನ್ನು ಕಂಡು ಪ್ರೀತಿ ಹುಟ್ಟಿಕೊಳ್ಳಬಹುದು. ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ನಿನ್ನ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ನಿಮ್ಮ ಮೌನವನ್ನು ಅನ್ಯರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.

ಕುಂಭ ರಾಶಿ: ಇಂದು ತುರ್ತು ಸ್ಥಿತಿಯು ಬರಲಿದ್ದು ಅದನ್ನು ಎದುರಿಸುವುದು ಕಷ್ಟವಾದೀತು. ಬಂಧುಗಳ ಸಹಾಯದ ಅಪೇಕ್ಷೆ ಇದ್ದರೂ ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವು ಆಗಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು. ನಿಮ್ಮ ಕೆಲಸವನ್ನು ಪೂರ್ಣವಾಗಿ ಇನ್ನೊಬ್ಬರಿಗೆ ವಹಿಸುವುದು ಬೇಡ.

ಮೀನ ರಾಶಿ : ಇಂದು ಮಿತ್ರರ ಕುಟುಂಬದ ಜೊತೆ ಕಾಲ ಕಳೆಯುವಿರಿ. ಆಪ್ತರ ಜೊತೆ ಗೌಪ್ಯ ಮಾತುಕತೆಯನ್ನು ನಡೆಸುವಿರಿ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ತಾಯಿ ಮೇಲೆ ಪ್ರೀತಿ ಹೆಚ್ಚಾಗುವುದು. ಅವರಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಸದುಪಯೋಗ ಆಗಬಹುದು. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ