Weekly Horoscope: ಜನವರಿ 14 ರಿಂದ ಜನವರಿ 20ರ ವರೆಗಿನ ವಾರ ಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜನವರಿ 14 ರಿಂದ​ ಜನವರಿ 20 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ಜನವರಿ 14 ರಿಂದ ಜನವರಿ 20ರ ವರೆಗಿನ ವಾರ ಭವಿಷ್ಯ
ಜನವರಿ 14 ರಿಂದ ಜನವರಿ 20 ರ ವರೆಗಿನ ವಾರ ಭವಿಷ್ಯImage Credit source: iStock Photo
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jan 14, 2024 | 10:03 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜನವರಿ 14 ರಿಂದ​ ಜನವರಿ 20 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಇದು ಜನವರಿ ತಿಂಗಳ ಮೂರನೇ ವಾರವು ಇದಾಗಿದ್ದು ಮಧ್ಯಮಫಲವನ್ನು ಈ ರಾಶಿಯವರು ಪಡೆದುಕೊಳ್ಳಬಹುದು. ಬುಧ ಹಾಗೂ ಕುಜ ಹಾಗೂ ವಾರದ ಆರಂಭದಲ್ಲಿ ನವಮಸ್ಥಾನದಲ್ಲಿದ್ದು ಹಿರಿಯರ ಕಡೆಯಿಂದ ಆಗಬೇಕಾದ ಕೆಲಸವು ಆಗುವುದು. ವಾರದ ಮಧ್ಯದಲ್ಲಿ ಶುಕ್ರನು ನವಮಕ್ಕೆ ಹೋಗುವುದರಿಂದ ಕಲಾವಿದರು ಉತ್ತಮ ಅವಕಾಶಗಳನ್ನು ಪಡೆಯಬಹುದು. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದು ದಶಮಸ್ಥಾನವಾಗಿದೆ. ಉದ್ಯೋಗದಲ್ಲಿ ಸಣ್ಣ ಸಣ್ಣ ಕಿರಿಕಿರಿಗಳು ಆಗಬಹುದು.‌

ವೃಷಭ ರಾಶಿ : ಇದು ತಿಂಗಳ ಮೂರನೇ ವಾರವು ನಿಮಗೆ ಅಶುಭಫಲವು ಆಧಿಕವಾಗಿ ಇರಲಿದ್ದು ಬಹಳ ಎಚ್ಚರಿಕೆಯ ಹೆಜ್ಜೆ ಇಡುವುದು ಅನಿವಾರ್ಯವಾದೀತು.‌ ದೇವತೋಪಾಸನೆಯನ್ನು ಹೆಚ್ಚು ಮಾಡುವುದು, ದೇವಸ್ಮರಣೆಯಲ್ಲಿ ಅಧಿಕ ಕಾಲವನ್ನು ಕಳೆಯುವುದು ಉತ್ತಮ. ಶುಕ್ರನು ಸಪ್ತಮದಿಂದ ಅಷ್ಟಮಕ್ಕೆ ಬರುವ ಕಾರಣ ದಾಂಪತ್ಯದಲ್ಲಿ ಪೂರ್ಣ ನೆಮ್ಮದಿ ಇರಲಾರದು. ಸೂರ್ಯನು ಮಕರವನ್ನು ರಾಶಿಯನ್ನು ಪ್ರವೇಶಿಸುವನು. ಸರ್ಕಾರದಿಂದ ಬರಬೇಕಾದ ಹಣವನ್ನು ಪಡೆದುಕೊಳ್ಳುವಿರಿ. ಬುಧ ಮತ್ತು ಕುಜರು ಅಷ್ಟಮದಲ್ಲಿ ಇರುವುದು ಮತ್ತು ಅಷ್ಟಮಾಧಿಪತಿಯು ದ್ವಾದಶದಲ್ಲಿ ಇರುವುದು ಸೂಕ್ತವಲ್ಲ. ಗುರು ಧ್ಯಾನ, ಗುರುವಿನ ಸ್ತೋತ್ರವನ್ನು ಮಾಡಬೇಕಾಗುವುದು.

ಮಿಥುನ ರಾಶಿ : ಮೂರನೇ ವಾರದಲ್ಲಿ ನಿಮಗೆ ಶುಭಫಲವು ಹೆಚ್ಚು ಸಿಗಲಿದೆ. ಸಪ್ತಮದಲ್ಲಿ ಬುಧ, ಕುಜ, ಶುಕ್ರರ ಸಂಯೋಗವಾಗಲಿದೆ. ವಿವಾಹ ಸಂಬಂಧಗಳು ಬಂಧುಗಳ ನಡುವೆಯೇ ನಡೆಯಬಹುದು. ಅಷ್ಟಮದಲ್ಲಿ ಸೂರ್ಯನು ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವಂತೆ ಮಾಡುವನು. ಏಕಾದಶದ ಗುರುವು ನಿಮಗೆ ಸದ್ಯ ಬಲವನ್ನು ನೀಡುವಂತಹವನು ಆಗಿದ್ದಾನೆ. ದಶಮದಲ್ಲಿ ರಾಹುವಿದ್ದು ಕಾರ್ಯದ ಒತ್ತಡವನ್ನು ಹೆಚ್ಚಿಸಬಹುದು. ಮನೆಯ ಬಗೆಗಿನ ನಿಮ್ಮ ನಿಲುವು ಬದಲಾಗುವ ಸಾಧ್ಯತೆ ಇದೆ. ದೈವವು ದುರ್ಬಲವಾಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ.

ಕಟಕ ರಾಶಿ : ಇದು ರಾಶಿಚಕ್ರದ ನಾಲ್ಕನೇ ರಾಶಿಯಾಗಿದ್ದು, ತಿಂಗಳ ಮೂರನೇ ವಾರವು ನಡೆಯುತ್ತಿದೆ. ಗ್ರಹಗತಿಗಳ ಬದಲಾವಣೆಯಿಂದ ನಿಮ್ಮ ಜೀವನದ ಕೆಲವು ಬದಲಾವಣೆಯೂ ಆಗುವುದು. ಸೂರ್ಯನು ಸಪ್ತಮಕ್ಕೆ ಬರುವನು. ಸಂಗಾತಿಯಿಂದ ಒತ್ತಡಗಳು ಬರಬಹುದು. ಮಾನಸಿಕ ಕಿರಿಕಿರಿಗಳು ಇರಲಿವೆ. ಷಷ್ಠದಲ್ಲಿ ಕುಜ, ಬುಧ, ಶುಕ್ರರ ಉಪಸ್ಥಿತಿ ಇರಲಿದ್ದು ಬಂಧುಗಳ ವಿಚಾರದಲ್ಲಿ ಪತ್ನಿಯ ವಿಚಾರದಲ್ಲಿ ನೀವು ದುಡುಕದೇ ಇರುವುದು ಮುಖ್ಯವಾಗಲಿದೆ. ತೃತೀಯದಲ್ಲಿ ಕೇತುವು ನಿಮ್ಮನ್ನು ಮುಗ್ಗರಿಸುವಂತೆ ಮಾಡುವನು. ನವಮದಲ್ಲಿ ರಾಹುವಿದ್ದು ಸಲ್ಲದ ಕೆಲಸಗಳಿಗೆ ಪ್ರೇರಣೆ ಕೊಡಬಹುದು. ಕುಲದೇವರ ಉಪಾಸನೆಯನ್ನು ಮಾಡಿ.

ಸಿಂಹ ರಾಶಿ : ತಿಂಗಳ ಮೂರನೇ ವಾರದಂದು ಗ್ರಹಗತಿಗಳ ಬದಲಾವಣೆಯಾಗಿದ್ದು ನಿಮಗೆ ಮಿಶ್ರಫಲವು ಇರಲಿದೆ. ನವಮದಲ್ಲಿ ಇರುವ ಗುರುವಿನ ಬಲವು ಇದ್ದರೂ ಉಳಿದ ಗ್ರಹಗಳಿಂದ ನಿಮಗೆ ಕೆಲವು ತೊಂದರೆಗಳು ಇರಲಿವೆ. ಅಷ್ಟಮದಲ್ಲಿ ರಾಹುವಿದ್ದು ಆರೋಗ್ಯವನ್ನು ಕೆಡಿಸಬಹುದು. ಸಣ್ಣ ಪುಟ್ಟ ರೋಗಗಳಿಂದ ಪೀಡೆ ಉಂಟಾದೀತು. ದ್ವಿತೀಯದಲ್ಲಿ ಕೇತುವು ಬಂಧುಗಳಿಂದ ಬರಬೇಕಾದ ಹಣಕ್ಕೆ ಅಡ್ಡಿ ಮಾಡುವನು. ಪಂಚಮದಲ್ಲಿ ಬುಧ, ಕುಜ, ಶುಕ್ರರಿರುವುದರಿಂದ ಮಕ್ಕಳಿಂದ ನೆಮ್ಮದಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು. ಷಷ್ಠದಲ್ಲಿ ಸೂರ್ಯನಿರುವ ಕಾರಣ ಸರ್ಕಾರದ ಕೆಲಸದಲ್ಲಿ ಹಿನ್ನಡೆಯಾದೀತು. ಸುಬ್ರಹ್ಮಣ್ಯನ ಉಪಾಸನೆಯನ್ನು ಮಾಡಿ.

ಕನ್ಯಾ ರಾಶಿ : ಈ ತಿಂಗಳ ಮೂರನೇ ವಾರವು ನಿಮಗೆ ಅಲ್ಪ ಶುಭವಿದೆ. ಚತುರ್ಥದಲ್ಲಿ ಶುಕ್ರ, ಕುಜ, ಬುಧರು ಕುಟುಂಬ ಸೌಖ್ಯ, ತಾಯಿಯ ಪ್ರೀತಿಯನ್ನು ಕೊಡುವರು. ವಾಹನದಿಂದ ಸುಖವೂ ಪ್ರಾಪ್ತವಾಗಲಿದೆ. ರವಿಯು ಮಕರ ರಾಶಿಯನ್ನು ಪ್ರವೇಶಿಸಿ ವಿದ್ಯಾಭ್ಯಾಸದಲ್ಲಿ ಪ್ರಗತಿ ಆಗುವಂತೆ ಮಾಡುವನು. ಷಷ್ಠದಲ್ಲಿ ಶನಿ ಶತ್ರುಗಳನ್ನು ಪರಾಜಯಗೊಳಿಸುವನು. ಸಪ್ತಮದಲ್ಲಿ ರಾಹುವು ನಿಮಗೆ ವಿವಾಹ ಪ್ರತಿಬಂಧಕವನ್ನು ಕೊಡಬಹುದು. ಸಂಗಾತಿಯ ಜೊತೆ ವೈಮನಸ್ಯ, ಕಲಹಗಳನ್ನು ಮಾಡಿಸುವನು. ಕೇತುವು ನಿಮ್ಮ ರಾಶಿಯಲ್ಲಿಯೇ ಇದ್ದುದರಿಂದ ಮನೋನಿಯಂತ್ರಣವು ಕಷ್ಟವಾದೀತು. ಗುರುಬಲವು ನಿಮಗೆ ಇಲ್ಲದ ಕಾರಣ, ಸಣ್ಣ ವಿಷವೂ ದೊಡ್ಡದಾಗಿ ಕಾಣಿಸುವುದು. ಲಕ್ಷ್ಮಿ ನಾರಾಯಣರಾ ಆರಾಧನೆ, ಸ್ತೋತ್ರಪಠಣವನ್ನು ಮಾಡಿ.

ತುಲಾ ರಾಶಿ : ಈ ತಿಂಗಳ ಮೂರನೇ ವಾರವು ಶುಭಪ್ರದವಾಗಿದೆ. ಗ್ರಹಗತಿಗಳ ಚಲನೆಯು ನಿಮ್ಮ ಕಷ್ಟಗಳನ್ನು ಪೂರೈಸುವವು. ಮುಖ್ಯವಾಗಿ ಗುರುಬಲವಿರುವುದು ನಿಮ್ಮ ಎಲ್ಲ ಕಾರ್ಯಗಳಿಗೂ ಪೂರಕವಾಗಲಿದೆ. ತೃತೀಯದಲ್ಲಿ ಬುಧ, ಕುಜ, ಶುಕ್ರರು ಇರವರು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ‌ ಕಾಲ. ಅಲ್ಪ ಶ್ರಮವೂ ಹೆಚ್ಚಿನ ಲಾಭವನ್ನು ಕೊಡುವುದು. ಚತುರ್ಥದಲ್ಲಿ ಸೂರ್ಯನು ತಂದೆಯ ಪ್ರೀತಿಯನ್ನು ಕೊಡವನು. ಪಂಚಮದಲ್ಲಿ ಶನಿಯು ನಿಮಗೆ ಕಿರಿಕಿರಿ, ಮಕ್ಕಳಿಂದ ಸರಿಯಾದ ಪ್ರತಿಕ್ರಿಯೆಗಳು ಸಿಗದೇ ಇರಬಹುದು. ಷಷ್ಠದಲ್ಲಿ ರಾಹುವಿದ್ದು ನಿಮ್ಮ ಆರೋಗ್ಯ, ಹಾಗೂ ಶತ್ರುಗಳನ್ನು ನಿಯಂತ್ರಣದಲ್ಲಿ ಇರಿಸುವನು. ಗುರುವು ಸಪ್ತಮದಲ್ಲಿ ಇರುವ ಕಾರಣ ಅವಿವಾಹಿತರಿಗೆ ವಿವಾಹ ಯೋಗ, ವೈವಾಹಿಕ ಜೀವನದ ಮನಸ್ತಾಪಗಳು ದೂರವಾಗುವುವು.

ವೃಶ್ಚಿಕ ರಾಶಿ : ಇದು ಈ ತಿಂಗಳ ಮೂರನೇ ವಾಸವಾಗಿದ್ದು ಸಾಧಾರಣ ಫಲವನ್ನು ನೀವು ನಿರೀಕ್ಷಿಸಬಹುದು. ಮೊದಲನೆಯದಾಗಿ ಗುರುಬಲವು ಸದ್ಯ ನಿಮ್ಮ ರಾಶಿಗೆ ಇರದು. ಅದು ನಿಮ್ಮ ಹಿನ್ನಡೆಗೆ ಮೂಲಕಾರಣ. ದ್ವಿತೀಯದಲ್ಲಿ ಬುಧ, ಕುಜ, ಶುಕ್ರರು ನಿಮ್ಮ ಆದಾಯವನ್ನು ಹೆಚ್ಚಿಸಬಹುದು. ಷಷ್ಠದ ಗುರುವು ಮಾನಸಿಕ ಕಿರುಕುಳ, ಸಾಮಾಜಿಕ ಸ್ಥಾನಮಾನದಲ್ಲಿ ಹಿನ್ನಡೆಯಾದೀತು. ಧೈರ್ಯವಾಗಿ ಇರಿ. ಯಾವುದೇ ಸಾಹಸಕ್ಕೆ ಮುಂದಾಗುವುದು ಬೇಡ. ನಿಮ್ಮ ಮೇಲಿಟ್ಟ ಪ್ರಾಮಾಣಿಕತೆಗೆ ಭಂಗವಾಗದಂತೆ ನಡೆದುಕೊಳ್ಳಿ. ಆದಾಯದ ಮೂಲವು ಬದಲಾದೀತು. ವಿದ್ಯಾರ್ಥಿಗಳ‌ ಉನ್ನತ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುವುದು.

ಧನು ರಾಶಿ : ಇದು ತಿಂಗಳ ಮೂರನೇ ವಾರವಾಗಿದ್ದು ಶುಭದ ನಿರೀಕ್ಷೆಯಲ್ಲಿ ನೀವು ಇರಬಹುದು. ನಿಮ್ಮ ರಾಶಿಯಲ್ಲಿಯೇ ಕುಜ, ಬುಧ, ಶುಕ್ರರು ಇರಲಿದ್ದು ಯಾವ ಕಾರ್ಯದಲ್ಲಿಯೂ ನಕಾರಾತ್ಮಕ ಆಲೋಚನೆ ಮಾಡದೇ ಮುನ್ನಡೆಯಬಹುದು. ಪಂಚಮದಲ್ಲಿ ಗುರವಿರುವುದರಿಂದ ಸಂತಾನದ ಸುಖವು ಲಾಭಿಸುವುದು. ಚತುರ್ಥದಲ್ಲಿ ರಾಹುವಿದ್ದು ನಿಮಗೆ ಕುಟುಂಬದ ಜೊತೆಗಿನ ಸಂಬಂಧವು ಅಷ್ಟಕ್ಕಷ್ಟೇ ಇರಲಿದೆ. ದ್ವಿತೀಯದಲ್ಲಿ ಸೂರ್ಯನು ತಂದೆಯಿಂದ ಧನ ಅಥವಾ ಆಸ್ತಿಯ ಲಾಭವನ್ನು ಮಾಡಿಸುವನು. ದಶಮದಲ್ಲಿ ಇರುವ ಕೇತುವು ವೃತ್ತಿಯಲ್ಲಿ ಆತಂಕವು ತಲೆದೋರಬಹುದು.

ಮಕರ ರಾಶಿ : ಈ ತಿಂಗಳ ಮೂರನೇ ವಾರವು ನಿಮಗೆ ಮಿಶ್ರಫಲವು ಇರಲಿದೆ‌. ದ್ವಿತೀಯದಲ್ಲಿ ಶನಿಯು ಇರುವುದರಿಂದ ಹೆಚ್ಚು ಶ್ರಮದಿಂದ ಸಂಪಾದನೆ ಮಾಡಬೇಕಾದೀತು. ನಿಮ್ಮ ರಾಶಿಗೆ ಸೂರ್ಯನ ಪ್ರವೇಶ ಆಗಲಿದೆ‌. ಒತ್ತಡಗಳನ್ನು ಅಧಿಕವಾಗಿ ಅನುಭವಿಸಬೇಕಾದೀತು. ತೃತೀಯದಲ್ಲಿ ರಾಹುವುದು ಆತ್ಮವಿಶ್ವಾಸವನ್ನು ಕಡಿಮೆ ಮಾಡಬಹುದು. ಚತುರ್ಥದಲ್ಲಿ ಗುರುವು ವಾಹನ‌ದಿಂದ ಲಾಭ, ಕುಟುಂಬದಲ್ಲಿ ನೆಮ್ಮದಿ ಇರಲಿದೆ. ನವಮದಲ್ಲಿ ನಿಮಗೆ ಕೇತುವು ಇರುವುದು ಸುಖವು ಸಿಗುವುದು ಕಷ್ಟವಾದೀತು. ಮಹಾಗಣಪತಿಯ ಆರಾಧನೆಯನ್ನು ಮಾಡಿ.

ಕುಂಭ ರಾಶಿ : ತಿಂಗಳ ಮೂರನೇ ವಾರದಲ್ಲಿ ನಿಮಗೆ ಮಿಶ್ರಫಲವು ಇರಲಿದೆ. ನಿಮ್ಮ ರಾಶಿಯಲ್ಲಿ ಶನಿಯು ಇರುವುದರಿಂದ ಕೆಲಸವು ನಿಧಾನವಾಗಲಿದೆ. ದ್ವಿತೀಯದಲ್ಲಿ ರಾಹುವು ನಿಮಗೆ ಬರಬೇಕಾದ ಹಣದಲ್ಲಿ ವ್ಯತ್ಯಾಸ ಆಗಬಹುದು. ತೃತೀಯದಲ್ಲಿ ಗುರುವು ಇರುವುದು ಕ್ಷೇಮವಲ್ಲ. ಅಷ್ಟಮದಲ್ಲಿ ಕೇತುವಿನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಏಕಾದಶದಲ್ಲಿ ಬುಧ, ಶುಕ್ರ, ಕುಜರು ಉದ್ಯಮದಲ್ಲಿ ಅಧಿಕ ಲಾಭವನ್ನು ನೀಡುವರು. ದ್ವಾದಶದಲ್ಲಿ ಸೂರ್ಯನು ತಂದೆಯ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮಾಡುವನು.

ಮೀನ ರಾಶಿ : ತಿಂಗಳ ಮೂರನೇ ವಾರವು ಗ್ರಹಗಳ ಬದಲಾಣೆಯಿಂದ ಹೆಚ್ಚಿನ ಶುಭವು ಇರಲಿದೆ. ನಿಮ್ಮ ರಾಶಿಯಲ್ಲಿ ರಾಹುವು ಇರುವುದು ಅಷ್ಟು ಶುಭವಲ್ಲ. ದೇಹ ಬಾಧೆ, ಮಾನಸಿಕ ಕಿರಿಕಿರಿಗಳು ಇರುವುದು. ದ್ವಿತೀಯದಲ್ಲಿ ಗುರುವಿರುವದರಿಂದ ಎಲ್ಲದಕ್ಕೂ ಪರಿಹಾರವನ್ನು ಸೂಚಿಸುವನು. ವಿವಾಹ ಕಾರ್ಯಗಳು ವಿಳಂಬವಾಗುವುದು. ದಶಮದಲ್ಲಿ ಕುಜ, ಬುಧ, ಶುಕ್ರರು ಇರುವುದರಿಂದ ವೃತ್ತಿಯಲ್ಲಿ ಉನ್ನತ ಸ್ಥಾನಗಳು ಸಿಗಲಿವೆ‌. ಏಕಾದಶದಲ್ಲಿ ಸೂರ್ಯನು ಸರ್ಕಾರದ ಕೆಲಸವು ಮುಂದುವರಿಯುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ