ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 22) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಬ್ರಹ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:19 ರಿಂದ ಮಧ್ಯಾಹ್ನ 12:44ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:35ರ ವರೆಗೆ.
ಧನು ರಾಶಿ: ಹೊಸ ಕೆಲಸದಲ್ಲಿ ತೊಡಗಿದವರಿಗೆ ಭಯವು ಕಾಡಬಹುದು. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವವರಿಗೆ ದಿನವು ಉತ್ತಮ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಸಿಕ್ಕ ಆದರದಿಂದ ಉತ್ಸಾಹವು ಬರಲಿದೆ. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಡವಸದೀತು. ನಿಮ್ಮ ಸೋಲನ್ನು ನೀವು ಸಹಜವಾಗಿ ಒಪ್ಪಿಕೊಳ್ಳಲಾರಿರಿ.
ಮಕರ ರಾಶಿ: ಇಂದು ಕೆಲವು ಚಿಂತೆಗಳಿಂದ ತೊಂದರೆಗಳು ನಿಮ್ಮನ್ನು ಬಿಟ್ಟುಹೋಗದು. ಹೊರಗಿನಿಂದ ಹಣವನ್ನು ಅನಿವಾರ್ಯವಾಗಿ ಪಡೆಯಬೇಕಾಗಬಹುದು. ನಿಮ್ಮ ಶಿಕ್ಷಣವನ್ನು ಸರಿಯಾಗಿ ಬಳಸಿಕೊಳ್ಳುವಿರಿ. ನಿಮ್ಮ ಮಾತು ಅಹಂಕಾರದಂತೆ ತೋರಬಹುದು. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನ ಇರದು. ವಾಹನ ಖರೀದಿಯಲ್ಲಿ ಮೋಸವಾಗುವುದು. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ದೂರದೃಷ್ಟಿಯು ನಿಮ್ಮ ಚಿಂತನೆಗೆ ಇರಲಿ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ.
ಕುಂಭ ರಾಶಿ: ಇಂದು ನಿಮಗೆ ಸ್ನೇಹಿತರ ಬೆಂಬಲವು ಸಿಗಲಿದ್ದು, ಉಳಿಸಿಕೊಂಡ ಕಾರ್ಯಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ವೈವಾಹಿಕ ಜೀವನದಿಂದ ಶತ್ರುಗಳು ಅಧಿಕವಾಗಿ ಆಗಬಹುದು. ಇಂದು ಕೇವಲ ಓಡಾಟವೇ ಆಗಲಿದೆ. ಎಣಿಸಿಕೊಂಡ ಕಾರ್ಯವು ಆಗದೇ ಇರಬಹುದು. ಪ್ರಾಮಾಣಿಕತೆಗೆ ಯೋಗ್ಯವಾದ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ನಿಮಗೆ ಸಾಕೆನಿಸಿ ಕೈ ಬಿಡಬಹುದು. ಮಕ್ಕಳ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾದೀತು.
ಮೀನ ರಾಶಿ: ಇಂದು ನಿಮ್ಮ ಕಾರ್ಯವು ನಿರ್ವಿಘ್ನವಾಗಿ ನಡೆದು, ಸಂತಸವಾಗಲಿದೆ. ವೈವಾಹಿಕ ಜೀವನವು ಉತ್ತಮವಾಗಿರಲಿದ್ದು, ಸಂಗಾತಿಯ ಜೊತೆ ಬಾಧವ್ಯವು ರಸವತ್ತಾಗಿ ಇರಲಿದೆ. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗಬಹುದು. ಯಾರ ಸಣ್ಣತನವನ್ನೂ ನೀವು ಸಹಿಸಿಕೊಳ್ಳಲಾರಿರಿ. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ಧಾರ್ಮಿಕ ಕಾರ್ಯದಿಂದ ನೆಮ್ಮದಿ ಸಿಗಲಿದೆ. ನಿಮ್ಮ ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು.