
ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 25) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪೌರ್ಣಿಮಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:36ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:03 ರಿಂದ 08:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:54 ರಿಂದ 11:19ರ ವರೆಗೆ.
ಧನು ರಾಶಿ : ಆಸ್ತಿ ಮತ್ತು ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಪಡೆಯುವ ಸಾಧ್ಯತೆಗಳಿವೆ. ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ಮಗುವಿನ ಜವಾಬ್ದಾರಿಯನ್ನು ಪೂರೈಸಬಹುದು. ಹೊಸ ಉದ್ಯಮಿಗಳು ಪ್ರಯೋಜನ ಪಡೆಯಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಾಯಕತ್ವದಲ್ಲಿ ನಡೆಯುತ್ತಿರುವ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಸಮಯವನ್ನು ಕಳೆಯಲಾಗುವುದು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ. ಲೌಕಿಕ ಆನಂದದ ವಿಧಾನಗಳು ಹೆಚ್ಚಾಗುತ್ತವೆ. ಇಂದು, ಸಹೋದರ ಸಹೋದರಿಯರೊಂದಿಗಿನ ನಿಮ್ಮ ವಾತ್ಸಲ್ಯವು ತೃಪ್ತಿಯನ್ನು ಕೊಡುವುದು.
ಮಕರ ರಾಶಿ : ಕುಟುಂಬದಲ್ಲಿ ಮಂಗಳ ಕಾರ್ಯವನ್ನು ನೆರವೇರಿಸಲಾಗುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಸ್ಪರ್ಧೆಯಲ್ಲಿ ಮಗುವಿನ ಯಶಸ್ಸಿನ ಸುದ್ದಿಯನ್ನು ಪಡೆಯುವುದು ಸಂತಸಗೊಳ್ಳುವಿರಿ. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಏರುಗತಿಯನ್ನು ಕಂಡು ಸಮಾಧಾನವಾಗಲಿದೆ. ಉದ್ಯೋಗಿಗಳು ಕ್ಷೇತ್ರದಲ್ಲಿ ಬಡ್ತಿ ಸುದ್ದಿಗಳನ್ನು ಕೇಳಬಹುದು. ಆದ್ದರಿಂದ ವ್ಯಾಪಾರಿಗಳು ಸಹ ಲಾಭ ಪಡೆಯಬಹುದು. ವ್ಯವಹಾರ ರೂಪಾಂತರವನ್ನು ಯೋಜಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಾಗುವುದು. ವಾಹನ ಬಳಕೆಯಲ್ಲಿ ಎಚ್ಚರಿಕೆಯಿಂದ ಬಳಸಿ, ಆಕಸ್ಮಿಕ ವಾಹನ ವೈಫಲ್ಯದಿಂದಾಗಿ ವೆಚ್ಚಗಳು ಹೆಚ್ಚಾಗಬಹುದು.
ಕುಂಭ ರಾಶಿ : ಇಂದು ಶಾಂತಿಯಿಂದ ನಿಮ್ಮ ದಿನವನ್ನು ಕಳೆಯುವಿರಿ. ರಾಜಕೀಯದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ಸಾರ್ವಜನಿಕ ಸಂಪರ್ಕಕ್ಕೂ ಅನುಕೂಲವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅರ್ಹತೆಯನ್ನು ಹೆಚ್ಚಿಸುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಹೊಸ ಒಪ್ಪಂದದ ಬಾಗಿಲು ಮತ್ತು ಸ್ಥಾನ ಹೆಚ್ಚಾಗುತ್ತದೆ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ನೆಮ್ಮದಿ ತರಲಿದೆ. ಆರೋಗ್ಯದ ಬಗ್ಗೆ ಚಿಂತೆ ಕಡಿಮೆಯಾಗಲಿದೆ. ಆಸ್ತಿಯ ವಿಚಾರದಲ್ಲಿ ಅಧಿಕ ಲಾಭ ಸಿಗಲಿದೆ. ಇಂದು ನಿಮಗೆ ಕೆಲವು ತೊಂದರೆಗಳಾಗುವ ಸಾಧ್ಯತೆಯಿದೆ. ಇಂದು ನೀವು ಆಸ್ಪತ್ರೆಯಲ್ಲಿ ಇರಬೇಕಾದ ಸ್ಥಿತಿ ಎದುರಾಗಬಹುದು. ಯಾವುದೇ ಕೆಲಸವನ್ನು ಪೂರ್ಣಗೊಳಿಸದ ಕಾರಣ ನಿಮ್ಮ ಮನಸ್ಸು ಕೂಡ ತೊಂದರೆಗೊಳಗಾಗಬಹುದು.
ಮೀನ ರಾಶಿ : ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಖ್ಯಾತಿಯನ್ನು ಶತ್ರು ಹಾನಿ ಮಾಡಬಹುದು. ಕುಟುಂಬ ಜೀವನವು ಒತ್ತಡವನ್ನುಂಟು ಮಾಡುತ್ತದೆ. ಆದರೆ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲಾಗುತ್ತದೆ. ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ. ಇದರೊಂದಿಗೆ, ನೀವು ಇಂದು ದಿನದ ಶುಭವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿನ ವಿಸ್ತರಣೆ ನಿಮಗೆ ಸಂತೋಷವನ್ನು ನೀಡುತ್ತದೆ.
-ಲೋಹಿತ ಹೆಬ್ಬಾರ್-8762924271 (what’s app only)